Wednesday, 27th January 2021

15 ನಿಮಿಷಗಳಲ್ಲಿ ನಾಲ್ಕು ಗೋಲು !

ರಾಬರ್ಟ್ ಲೆವನ್‌ಡೊವಸ್ಕಿಿ ಕೇವಲ 15 ನಿಮಿಷಗಳಲ್ಲಿ ನಾಲ್ಕು ಗೋಲು ಗಳಿಸಿ ಚಾಂಪಿಯನ್‌ಸ್‌ ಲೀಗ್ ಫುಟ್ಬಾಾಲ್ ಟೂರ್ನಿಯಲ್ಲಿ ಹೊಸ ಮೈಲುಗಲ್ಲು ಸ್ಥಾಾಪಿಸಿದರು. ಇವರ ದಾಖಲೆಯ ಗೋಲುಗಳ ನೆರವಿನಿಂದ ಬಹ್ರೈನ್ ಮುನಿಚ್ ತಂಡ 6-0 ಅಂತರದಲ್ಲಿ ಕ್ರವೆನಾ ಝ್ವೆೆಡ್ಝಾಾ ವಿರುದ್ಧ ಗೆಲುವು ಸಾಧಿಸಿತು.
ಇಲ್ಲಿನ ರೆಡ್ ಸ್ಟಾಾರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರಾಬರ್ಟ್ ಲೆವನ್‌ಡೊವಸ್ಕಿಿ ಆಟ ಅದ್ಭುತವಾಗಿತ್ತು. ಚಾಂಪಿಯನ್‌ಸ ಲೀಗ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ದಾಖಲಾದ ಗೋಲುಗಳು ಇವು. ಕಳೆದ ಐದು ಪಂದ್ಯಗಳಿಂದ ಲೆವನ್‌ಡೊವಸ್ಕಿಿ ಒಟ್ಟು 10 ಗೋಲುಗಳನ್ನು ಗಳಿಸುವ ಮೂಲಕ ಪ್ರಸ್ತುತ ಆವೃತ್ತಿಿ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲುಗಳಿಸಿದವರ ಪಟ್ಟಿಿಯಲ್ಲಿ ಅಗ್ರ ಸ್ಥಾಾನದಲ್ಲಿದ್ದಾರೆ.
ಬಹ್ರೈನ್ ಮುನಿಚ್ ಪರ 14ನೇ ನಿಮಿಷದಲ್ಲಿ ಲಿಯೊನ್ ಗೊರೆಟ್ಜಾಾ ಹಾಗೂ 89ನೇ ನಿಮಿಷದಲ್ಲಿ ಕೊರೆಂಟಿನ್ ಗೋಲು ಗಳಿಸಿದ್ದರು. ಇದರ ನಡುವೆ ಲೆವನ್‌ಡೊವಸ್ಕಿಿ ಅವರು 53(ಪಿ), 60, 64 ಹಾಗೂ 67ನೇ ನಿಮಿಷಗಳಲ್ಲಿ ವೇಗವಾಗಿ ನಾಲ್ಕು ಗೋಲು ಸಿಡಿಸಿದರು. ಇದು ಪಂದ್ಯದಲ್ಲಿ ಪ್ರಮುಖ ಆಕರ್ಷಣೆಯಿಂದ ಕೂಡಿತ್ತು.

‘‘ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿಯಾಗಿ ತಂಡ ಅತ್ಯುತ್ತಮ ಪ್ರದರ್ಶನ ತೋರಿತು. ಯಾರು ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದರು ಎನ್ನುವುದಕ್ಕಿಿಂತ ತಂಡ ಒಳ್ಳೆೆಯ ಪ್ರದರ್ಶನ ತೋರಿದೆ. ಕಳೆದ ಶನಿವಾರದ ಪಂದ್ಯದಲ್ಲಿ ನಾನು ಗೋಲು ಗಳಿಸಿರಲಿಲ್ಲ. ಆದರೂ, ಪಂದ್ಯವನ್ನು 4-0 ಅಂತರದಲ್ಲಿ ಫಾರ್ಚುನ ವಿರುದ್ಧ ಜಯ ಸಾಧಿಸಿದ್ದೆವು.
-ರಾಬರ್ಟ್ ಲೆವನ್‌ಡೊವಸ್ಕಿಿ , ಬಹ್ರೈನ್ ಮುನಿಚ್

Leave a Reply

Your email address will not be published. Required fields are marked *