Monday, 13th July 2020

17 ಶಾಸಕರು ಅನರ್ಹರು ಆದರೆ ಚುನಾವಣೆಗೆ ಸ್ಪರ್ಧಿಸಲು ಅರ್ಹರು

 ಸುಪ್ರೀಂಕೋರ್ಟ್ 50:50 ತೀರ್ಪು ಅರ್ಹರು  ಅನಿಶ್ಚಿತತೆಗೆ ತೆರೆ

ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಅನರ್ಹರ ತೀರ್ಪುನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ಪಕ್ಷಾಾಂತರ ಕಾಯಿದೆಯಲ್ಲಿ 15 ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ತೀರ್ಪನ್ನು ಎತ್ತಿಿಹಿಡಿಯುವುದರೊಂದಿಗೆ, ಅನರ್ಹರು ಉಪಚುನಾವಣೆಗೆ ಸ್ಪರ್ಧಿಸಲು ಅರ್ಹರು ಎನ್ನುವ ಮಹತ್ವದ ಆದೇಶ ನೀಡಿದೆ.

ನ್ಯಾಾ.ರಮಣ ನೇತೃತ್ವದ ತ್ರಿಿಸದಸ್ಯ ಪೀಠ ಅನರ್ಹ ಶಾಸಕರು ತೀರ್ಪನ್ನು ಪ್ರಕಟಿಸಿದ್ದು, ಅನರ್ಹ ಶಾಸಕರ ನಡೆ ಸರಿಯಲ್ಲ ಎನ್ನುವುದರೊಂದಿಗೆ ಸಭಾಧ್ಯಕ್ಷರಿಗೆ ಅನರ್ಹತೆಯ ಅವಧಿಯನ್ನು ನಿರ್ಧರಿಸುವ ಹಕ್ಕಿಿಲ್ಲ ಎನ್ನುವ ಮೂಲಕ, ಇಬ್ಬರಿಗೂ ಸಮಾನ ತೀರ್ಪು ನೀಡಿದೆ. ಸುಪ್ರಿಿಂ ಕೋರ್ಟ್‌ನಿಂದ ಈ ತೀರ್ಪು ಹೊರಬೀಳುತ್ತಿಿದ್ದಂತೆ, ಉಪಚುನಾವಣೆ ಘೋಷಣೆಯಾದರೂ ಯಾವುದೇ ರಾಜಕೀಯ ಚಟುವಟಿಕೆಯಿಲ್ಲದೇ ಇದ್ದ ರಾಜ್ಯ ರಾಜಕೀಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ಆರಂಭಗೊಂಡಿದೆ. ಬಿಜೆಪಿಯಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದರೂ, ಬಂಡಾಯದ ಆತಂಕದಲ್ಲಿ ನಾಯಕರಿದ್ದಾಾರೆ.

ತೀರ್ಪಿನಲ್ಲಿ 193ಎ ಉಲ್ಲೇಖ ಪ್ರಕಾರ ಪ್ರಜಾಪ್ರಭುತ್ವದಲ್ಲಿ ನೈತಿಕತೆ ಮುಖ್ಯವಾಗುತ್ತದೆ. ಶಾಸಕರ ರಾಜೀನಾಮೆ ಸಮಗ್ರವಾಗಿ ಅವಲೋಕಿಸಲಾಗಿದೆ. ಸ್ಪೀಕರ್‌ಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವಿದೆ ಹೊರೆತು, ಸಮಯ ನಿಗದಿಪಡಿಸಿದ್ದು ಸರಿಯಲ್ಲ. ಶೆಡ್ಯೂಲ್ 2ಎ ಅಡಿಯಲ್ಲಿ ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ವೇಳೆ ಚುನಾವಣೆಗೆ ಆಯ್ಕೆೆಯಾಗದ ಹೊರತು ಸರಕಾರದಲ್ಲಿ ಯಾವುದೇ ಅಧಿಕಾರ ಹೊಂದುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಿಜೆಪಿಗೆ ಇಂದು ಅನರ್ಹರು ಸೇರ್ಪಡೆ

ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹರ ಅರ್ಜಿ ಇತ್ಯರ್ಥವಾಗಿ, ಉಪಚುನಾವಣೆಗೆ ಸ್ಪರ್ಧಿಸಲು ಅರ್ಹರು ಎನ್ನುವ ತೀರ್ಪು ಹೊರಬೀಳುತ್ತಿಿದ್ದಂತೆ, ಬಿಜೆಪಿ ಸೇರಲು ಅಗತ್ಯವಿರುವ ಹಾಗೂ ಉಪಚುನಾವಣೆಗೆ ಸ್ಪರ್ಧಿಸಲು ಅಗತ್ಯ ಸಿದ್ಧತೆಯನ್ನು 15 ಶಾಸಕರು ಶುರು ಮಾಡಿದರು. ತೀರ್ಪಿನ ಬೆನ್ನಲ್ಲೇ ದೆಹಲಿಯಲ್ಲಿದ್ದ ಅನರ್ಹರು, ಡಿಸಿಎಂ ಅಶ್ವತ್‌ಥ್‌ ನಾರಾಯಣ ಅವರೊಂದಿಗೆ ಗುಪ್ತ ಸಭೆ ನಡೆಸಿ, ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಅವರೊಂದಿಗೆ ಸಭೆ ನಡೆಸಿದರು. ಇದಾದ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ, ಗುರುವಾರವೇ ಅನರ್ಹರನ್ನು ಬಿಜೆಪಿಗೆ ಬರಮಾಡಿಕೊಳ್ಳುವ ಹಾಗೂ 15 ಕ್ಷೇತ್ರಗಳ ಉಸ್ತುವಾರಿಯನ್ನು ನಾಯಕರಿಗೆ ಹೊರಿಸಲಾಯಿತು. ಗುರುವಾರ ಬೆಳಗ್ಗೆೆ 10 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆೆ ಸೇರಿಸಿಕೊಂಡು ಬಳಿಕ ಟಿಕೆಟ್ ಘೋಷಣೆ ಮಾಡುವ ಲೆಕ್ಕಾಾಚಾರದಲ್ಲಿ ಬಿಜೆಪಿಯಿದೆ ಎಂದು ತಿಳಿದುಬಂದಿದೆ.

ಇಂದೇನು?
ಬೆ. 10.00ಕ್ಕೆೆ: ಅನರ್ಹ ಶಾಸಕ ವಿಶ್ವನಾಥ, ರೊಹಟಗಿ, ಕಪಿಲ್ ಸಿಬಾಲ್, ರಾಜೀವ್ ಧವನ್‌ಗೆ ಕೋರ್ಟ್‌ಗೆ ಹಾಜರ್
ಬೆ.10.35: ನ್ಯಾಾ. ರಮಣ ಸೇರಿ, ತ್ರಿಿಸದಸ್ಯ ಪೀಠದ ನ್ಯಾಾಯಾಧೀಶರು ಆಗಮನ
ಬೆ.10.45: ತ್ರಿಿಸದಸ್ಯ ಪೀಠದಿಂದ ತೀರ್ಪು ಪ್ರಕಟ. ಅನರ್ಹರಾಗಿದ್ದರೂ ಉಪಚುನಾವಣೆ ಸ್ಪರ್ಧಿಸಲು ಅರ್ಹ
ಬೆ. 11.00: ಡಿಸಿಎಂ ಅಶ್ವತ್‌ಥ್‌ ನಾರಾಯಣ ಜತೆ ಗುಪ್ತ ಸಭೆ
ಬೆ. 11.15: ಬಿಜೆಪಿ ಕಾರ್ಯಧ್ಯಕ್ಷ ಜೆ.ಪಿ.ನಡ್ಡಾಾ ಜತೆ ಸಿಎಂ ಯಡಿಯೂರಪ್ಪ ದೂರವಾಣಿ ಮೂಲಕ ಚರ್ಚೆ
ಮ. 12.00: ಅಶ್ವತ್‌ಥ್‌ ನಾರಾಯಣ ನೇತೃತ್ವದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಭೇಟಿ, ಚರ್ಚೆ
ಸಂ. 4.00: ದೆಹಲಿಯಿಂದ ಬೆಂಗಳೂರಿಗೆ ಅನರ್ಹ ಶಾಸಕರ ಪ್ರಯಾಣ
ಸಂ. 4.30: ರಾಜ್ಯ ಬಿಜೆಪಿಯಿಂದ ಕೋರ್ ಕಮಿಟಿ ಸಭೆ
ಸಂ. 7.30ಕ್ಕೆೆ: ಅನರ್ಹ ಶಾಸಕರು ಬೆಂಗಳೂರಿಗೆ ಆಗಮನ

ಮುಂದೇನು?
* ಬುಧವಾರ ಅನರ್ಹ 17 ಶಾಸಕರು 10 ಗಂಟೆಗೆ ಬಿಜೆಪಿಗೆ ಸೇರ್ಪಡೆ
* ಪ್ರಾಾಥಮಿಕ ಸ್ಥಾಾನ ಸಿಕ್ಕ ಬಳಿಕ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ
* ಬಿಜೆಪಿಯಲ್ಲಿ ಟಿಕೆಟ್ ಘೋಷಣೆಯಾಗುತ್ತಿಿದ್ದಂತೆ ಬಂಡಾಯ ಸ್ಫೋೋಟ ಸಾಧ್ಯತೆ
* ಅನರ್ಹರ ಪಕ್ಷ ಸೇರ್ಪಡೆ ಬೆನ್ನಲ್ಲೇ ಏಳಬಹುದಾದ ಬಂಡಾಯ ಶಮನಕ್ಕೆೆ ರಣತಂತ್ರ
* ಅನರ್ಹರ ಪ್ರತಿಸ್ಪರ್ಧಿಯಾಗಿ ಕಾಂಗ್ರೆೆಸ್‌ನಿಂದ ಅಭ್ಯರ್ಥಿ ಆಯ್ಕೆೆ ಕಸರತ್ತು
* ಹಳೇ ಮೈಸೂರು ಭಾಗದಲ್ಲಿ ಹೊರೆತುಪಡಿಸಿ, ಇನ್ನುಳಿದ ಭಾಗದಲ್ಲಿ ಜೆಡಿಎಸ್ ತಟಸ್ಥ ಸಾಧ್ಯತೆ

ಸುಪ್ರೀಂ ತೀರ್ಪಿನ 17 ಅಂಶಗಳು
1 . ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮುಖ್ಯವಾದದ್ದು.
2. ಹೈಕೋರ್ಟ್‌ಗೆ ಹೋಗುವ ಮೊದಲೇ ಸುಪ್ರೀಂ ಮೆಟ್ಟಿಿಲೇರಿದ ಶಾಸಕರ ನಡೆ ಸರಿಯಲ್ಲ.
3. ಶಾಸಕರು ನೀಡಿರುವ ರಾಜೀನಾಮೆ ಅಲವೋಕಿಸಲಾಗಿದ್ದು, ಸ್ಪೀಕರ್ ಆದೇಶ ಸರಿಯಾಗಿದೆ.
4. ಆದರೆ ಸ್ಪೀಕರ್ ಅವರಿಗೆ ಅನರ್ಹತೆಯ ಅವಧಿ ನಿರ್ಧರಿಸುವ ಹಕ್ಕಿಿಲ್ಲ
5. ರಾಜೀನಾಮೆ ಸ್ವಯಂಪ್ರೇರಿತ ಆಗಿದ್ದರೆ ಸ್ಪೀಕರ್ ಒಪ್ಪಲೇಬೇಕು.
6. ಉಪಚುನಾವಣೆಗೆ ಅನರ್ಹ ಶಾಸಕರು ಸ್ಪರ್ಧೆ ಮಾಡಬಹುದು
7. ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆೆ ಕಳುಹಿಸುವ ಅಗತ್ಯವಿಲ್ಲ.
8. ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎನ್ನುವ ಸ್ಪೀಕರ್ ಆದೇಶ ಸರಿಯಲ್ಲ.
9. ಚುನಾವಣೆ ಗೆದ್ದ ಬಳಿಕವಷ್ಟೇ ಅನರ್ಹ ಶಾಸಕರಿಗೆ ಅಧಿಕಾರ
10. ಷೆಡ್ಯೂಲ್ 2ಎ ಅಡಿಯಲ್ಲಿ ಶಾಸಕರ ಅನರ್ಹತೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್
11. ಸಂವಿಧಾನದ ಆಶಯಗಳಿಗೆ ವಿರುದ್ಧ ನಡೆ ಸ್ಪೀಕರ್‌ಗಳಿಂದ ಕಾಣಬರುತ್ತಿಿದೆ
12. ಆದರೆ ಪಕ್ಷಾಂತರಕ್ಕೆೆ ಕಡಿವಾಣ ಹಾಕಲೇಬೇಕಿದೆ
13. ಉಪಚುನಾವಣೆಯಲ್ಲಿ ಗೆದ್ದರೆ ಮಾತ್ರ ಅನರ್ಹರಿಗೆ ಮಂತ್ರಿಿ ಅಥವಾ ಇತರ ಅಧಿಕಾರ ಸ್ಥಾಾನ
14. ರಾಜೀನಾಮೆ ಅಂಗೀಕರಿಸುವಾಗ ರಾಜಕೀಯ ಪರಿಸ್ಥಿಿತಿಗಳನ್ನು ಗಣನೆಗೆ ತೆಗೆದುಕೊಳ್ಳುವಂತಿಲ್ಲ
15. ಇತ್ತೀಚಿನ ದಿನದಲ್ಲಿ ಸ್ಥಿಿರ ಸರಕಾರಕ್ಕೆೆ ಗಂಡಾಂತರ ತಂದೊಡ್ಡುವ ಪರಿಸ್ಥಿಿತಿ ನಿರ್ಮಾಣವಾಗುತ್ತಿಿದೆ
16. ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ಆಡಳಿತ, ಪ್ರತಿಪಕ್ಷಗಳೆರೆಡು ಪ್ರಮುಖ
17. ಇತ್ತೀಚಿಗೆ ನಡೆಯುತ್ತಿಿರುವ ಕುದುರೆ ವ್ಯಾಾಪಾರ, ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಮಾರಕ.

ನ್ಯಾಾಯಾಲಯದಲ್ಲಿ ಅನರ್ಹರಿಗೆ ನ್ಯಾಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಾಸವಿತ್ತು. ಇದೀಗ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಸಿದ್ದರಾಮಯ್ಯ ಮತ್ತು ರಮೇಶ್‌ಕುಮಾರ್‌ಗೆ ಹಿನ್ನಡೆಯಾಗಿದೆ. ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, 17 ಕ್ಷೇತ್ರಗಳಲ್ಲೂ ಗೆಲುವಿಗೆ ಶ್ರಮಿಸುತ್ತೇವೆ. ಪ್ರತಿ ಕ್ಷೇತ್ರಕ್ಕೂ ಸಚಿವರು ಹಾಗೂ ಪಕ್ಷದ ಮುಖಂಡರನ್ನು ಉಸ್ತುವಾರಿಗಳನ್ನಾಾಗಿ ನೇಮಕ ಮಾಡಲಾಗುವುದು.
ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಿ

ಸುಪ್ರಿಿಂ ಕೋರ್ಟ್ ನೀಡಿರುವ ತೀರ್ಪಿಗೆ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ. ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಸುಪ್ರೀಂ ಕೋರ್ಟ್ ಭಾಗಶಃ ಎತ್ತಿಿಹಿಡಿದಿದೆ. ಪ್ರಜಾಪ್ರಭುತ್ವದಲ್ಲಿ ಪಕ್ಷಾಂತರ ಸರಿಯಾದ ಕ್ರಮ ಅಲ್ಲ ಎಂದು ಹೇಳಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದು ರೀತಿ, ಪ್ರತಿಪಕ್ಷದಲ್ಲಿದ್ದಾಗ ಮತ್ತೊೊಂದು ರೀತಿಯಲ್ಲಿ ವರ್ತಿಸುವುದನ್ನು ನ್ಯಾಾಯಾಲಯ ಆಕ್ಷೇಪಿಸಿದೆ.
ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಅನರ್ಹರ ವಿಚಾರದಲ್ಲಿ ಸುಪ್ರೀಂ ತೀರ್ಪಿನಿಂದಾಗಿ ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ. ತೀರ್ಪಿನಿಂದ ರಾಜಕೀಯವಾಗಿ ಎರಡು ಮುಖ್ಯ ಅಂಶ ಪರಿಗಣಿಸಬಹುದು. 15 ಕ್ಷೇತ್ರಗಳಲ್ಲಿ ಅನರ್ಹರು ಸ್ಪರ್ಧಿಸಿ ಗೆದ್ದರೂ ಅವರು ರಾಜಕೀಯವಾಗಿ ಯಾವುದೇ ಸ್ಥಾಾನಮಾನ ಪಡೆಯಲು ಸಾಧ್ಯವಿಲ್ಲ. ಸುಪ್ರಿಿಂ ಕೋರ್ಟ್ ತೀರ್ಪು ಬಗ್ಗೆೆ ಕಾನೂನು ತಜ್ಞರಷ್ಟೇ ವಿಶ್ಲೇಷಿಸಬಹುದು.
ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

ಉಪಚುನಾವಣೆಯಲ್ಲಿ ಮತ್ತೆೆ ಸ್ಪರ್ಧಿಸಬೇಕು ಎಂದು ರಾಜೀನಾಮೆ ಮಾಡಿದ ದಿನವೇ ನಿರ್ಧರಿಸಿದ್ದೇವು. ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸ್ವಾಾಗತಿಸುತ್ತೇವೆ. ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಸ್ಪೀಕರ್ ನಮ್ಮನ್ನು ಮೂರೂವರೆ ವರ್ಷ ರಾಜ್ಯ ರಾಜಕೀಯದಿಂದ ದೂರವಿಡುವ ಹುನ್ನಾಾರವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
– ಎಚ್.ವಿಶ್ವನಾಥ, ಅನರ್ಹ ಶಾಸಕ

ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಿತು.

ಅನರ್ಹ ಶಾಸಕರ ಗುರುವಾರ ಬಿಜೆಪಿ ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪು ಬಳಿಕ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಮಾಡಿ ಅನರ್ಹ ಶಾಸಕರು ಮಾತುಕತೆ ನಡೆಸಿದ್ದಾರೆ. ಗುರುವಾರ ಅವರೆಲ್ಲರೂ ಬಿಜೆಪಿ ಕಚೇರಿಗೆ ಆಗಮಿಸಿ ಪಕ್ಷಕ್ಕೆೆ ಸೇರ್ಪಡೆ ಆಗಲಿದ್ದಾರೆ ಎಂದರು.
ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲು ಜತೆ ಅನರ್ಹರ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಿದ್ದು 10 ಗಂಟೆಗೆ ಅನರ್ಹರನ್ನು ಕಟೀಲು ಬಿಜೆಪಿ ಸದಸ್ಯತ್ವ ನೀಡಿ ಪಕ್ಷಕ್ಕೆೆ ಸ್ವಾಾಗತ ಮಾಡಲಿದ್ದಾರೆ ಎಂದರು. ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಕುರಿತು ಇನ್ನೂ ನಿರ್ಧಾರ ಆಗಿಲ್ಲ, ಸದ್ಯ ಪಕ್ಷ ಸೇರ್ಪಡೆ ನಡೆಯಲಿದ್ದು ನಂತರ ಈ ಬಗ್ಗೆೆ ಮತ್ತೊೊಮ್ಮೆೆ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.

17 ಕ್ಷೇತ್ರದ ಗೆಲುವಿಗೆ ಶ್ರಮ
ಗುರುವಾರದಿಂದಲೇ ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ಸಚಿವರನ್ನು ಮತ್ತು ಮುಖಂಡರನ್ನು ಉಸ್ತುವಾರಿಗಳನ್ನು ನೇಮಿಸಿ 17 ಕ್ಷೇತ್ರಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತೇವೆ ಎಂದು ಹೇಳಿದರು.
ಅನರ್ಹ ಶಾಸಕರ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆೆ ಪ್ರತಿಕ್ರಿಿಯಿಸಿದ ಅವರು, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅಂದಿನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರ ಕುತಂತ್ರದಿಂದ ಶಾಸಕರನ್ನು ಅನರ್ಹ ಮಾಡಲಾಗಿತ್ತು ಎಂದು ಆಕ್ರೋೋಶ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಾಗತಿಸಿದ ಅವರು, ನ್ಯಾಾಯಾಲಯದಲ್ಲಿ ಅನರ್ಹರಿಗೆ ನ್ಯಾಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಾಸವಿತ್ತು. ಇದೀಗ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್‌ಗೆ ಹಿನ್ನಡೆಯಾಗಿದೆ ಎಂದು ಟೀಕಿಸಿದರು.
ಉಪಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, 17 ಕ್ಷೇತ್ರಗಳಲ್ಲೂ ಗೆಲುವಿಗೆ ಎಲ್ಲರೂ ಒಗ್ಗಟ್ಟಿಿನಿಂದ ಶ್ರಮಿಸುತ್ತೇವೆ. ಒಂದೊಂದು ಕ್ಷೇತ್ರಗಳಿಗೂ ಸಚಿವರು ಹಾಗೂ ಪಕ್ಷದ ಮುಖಂಡರನ್ನು ನಾಳೆಯಿಂದಲೇ ಉಸ್ತುವಾರಿಗಳನ್ನಾಾಗಿ ನೇಮಕ ಮಾಡಲಾಗುವುದು. 100ಕ್ಕೆೆ ನೂರು ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಾಸ ವ್ಯಕ್ತಪಡಿಸಿದರು.
ಈಗಾಗಲೇ ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿಿದ್ದಾರೆ. ಎಲ್ಲರನ್ನು ವಿಶ್ವಾಾಸಕ್ಕೆೆ ತೆಗೆದುಕೊಂಡು ಮುನ್ನಡೆಯುತ್ತೇವೆ. ಯಾರಿಗೂ ಅಸಮಾಧಾನಕ್ಕೆೆ ಅವಕಾಶವಿಲ್ಲದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಯಡಿಯೂರಪ್ಪ:
17 ಶಾಸಕರ ರಾಜೀನಾಮೆಯಿಂದ ಅಧಿಕಾರದ ಗದ್ದುಗೆ ಏರಿದ್ದ ಯಡಿಯೂರಪ್ಪ ಅವರಿಗೆ, ಈ ತೀರ್ಪು ಕೊಂಚ ನಿರಾಳ ತಂದಿದ್ದು ಅತಂತ್ರರಾಗಿದ್ದ ಅನರ್ಹರನ್ನು ಪಕ್ಷದಿಂದ ಗೆಲ್ಲಿಸಿಕೊಂಡು ಬರುವ ಲೆಕ್ಕಾಾಚಾರದಲ್ಲಿದ್ದಾಾರೆ. 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ, ಅನರ್ಹರನ್ನು ಗೆಲ್ಲಿಸಿಕೊಂಡು ಬಂದರೆ ಪಕ್ಷದಲ್ಲಿ ತಮ್ಮ ವರ್ಚಸ್ಸು ಮತ್ತಷ್ಟು ಹೆಚ್ಚಿಿಸಿಕೊಳ್ಳುವ ಲೆಕ್ಕಾಾಚಾರದಲ್ಲಿ ಬಿಎಸ್‌ವೈ ಇದ್ದಾಾರೆ. ಆದರೆ ಈಗಾಗಲೇ ಸಚಿವ ಸ್ಥಾಾನ ಹಂಚಿಕೆ ವಿಚಾರದಲ್ಲಿ ಪಕ್ಷದಲ್ಲಿ ಎದ್ದಿರುವ ಗೊಂದಲ ಮತ್ತಷ್ಟು ಹೆಚ್ಚಾಾಗುವ ಸಾಧ್ಯತೆಯಿದೆ. ಉಪಚುನಾವಣೆ ಬಳಿಕ ಅನರ್ಹರನ್ನು ಸಂಪುಟಕ್ಕೆೆ ಸೇರಿಸಿಕೊಂಡರೆ ಬಿಜೆಪಿ ಏಳಬಹುದಾದ ಬಂಡಾಯವನ್ನು ತಣಿಸುವುದೇ ಯಡಿಯೂರಪ್ಪ ಅವರ ಮುಂದಿರುವ ಸವಾಲು.

ಸಿದ್ದರಾಮಯ್ಯ:
ಪಕ್ಷಕ್ಕೆೆ ದ್ರೋಹ ಬಗೆದು ಬಿಜೆಪಿ ಸರಕಾರ ಬರುವಂತೆ ಮಾಡಿದ ಹಾಗೂ ತಮ್ಮ ಅಪ್ಯಾಾಪ್ತ ವಲಯದಲ್ಲಿದ್ದರೂ ತಮಗೆ ದ್ರೋಹ ಬಗೆದ ಶಾಸಕರ ರಾಜಕೀಯ ಭವಿಷ್ಯವನ್ನು ಬುಡಮೇಲು ಮಾಡುವ ಲೆಕ್ಕಾಾಚಾರದಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಸುಪ್ರಿಿಂ ತೀರ್ಪು ಸಂಪೂರ್ಣ ಸಂತಸ ತಂದಿಲ್ಲ. ಮುಂದಿನ ಮೂರೂವರೆ ವರ್ಷ ಸಕ್ರಿಿಯ ರಾಜಕಾರಣದಿಂದ ಎಲ್ಲ ಅನರ್ಹರನ್ನು ದೂರವಿಡುವ ಲೆಕ್ಕಚಾರ ಉಲ್ಟಾಾ ಆಗಿದ್ದರೂ, ಈ ಎಲ್ಲ ಶಾಸಕರಿಗೂ ಅನರ್ಹರ ಪಟ್ಟ ಕಟ್ಟಿಿದ ಸಮಾಧಾನವಿದೆ. ಮುಂದಿನ ಉಪಚುನಾವಣೆಯಲ್ಲಿ ಅನರ್ಹ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನೇ ಸ್ಪರ್ಧಿಸಿ, ಕಾಂಗ್ರೆೆಸ್ ಸೀಟು ಹೆಚ್ಚಿಿಸಿಕೊಳ್ಳುವ ಮೂಲಕ ಕಾಂಗ್ರೆೆಸ್‌ನಲ್ಲಿ ಈಗಲೂ ನಾನೇ ಪ್ರಶ್ನಾಾತೀತ ನಾಯಕ ಎಂದು ಸಾಬೀತುಪಡಿಸುವ ಹುರುಪಿನಲ್ಲಿ ಸಿದ್ದರಾಮಯ್ಯ ಅವರಿದ್ದಾಾರೆ.

ಎಚ್.ಡಿ.ಕುಮಾರಸ್ವಾಾಮಿ:
ಮೈತ್ರಿಿ ಸರಕಾರ ಪತನವಾಗುವ ತನಕ ಬಿಜೆಪಿ ವಿರುದ್ಧ ಕಿಡಿಕಾರುತ್ತಿಿದ್ದ ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ ಅವರು, ಇದೀಗ ಬಿಜೆಪಿ ಜತೆ ಸಖ್ಯ ಬೆಳೆಸಿ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವ ಲೆಕ್ಕಾಾಚಾರದಲ್ಲಿದ್ದಾಾರೆ. ಇದೀಗ ಅನರ್ಹರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿಗೆ ನಿರೀಕ್ಷಿಿತ ಯಶಸ್ಸು ಸಿಗದಿದ್ದರೆ, ‘ಬಾಹ್ಯ’ ಬೆಂಬಲ ನೀಡುವ ಮೂಲಕ ಸರಕಾರವನ್ನು ಉಳಿಸುವ ಲೆಕ್ಕಾಾಚಾರದಲ್ಲಿದ್ದಾಾರೆ. ಈ ರೀತಿ ಸರಕಾರ ಉಳಿಸಿದಕ್ಕೆೆ ಪ್ರತಿಯಾಗಿ, ಡಿಸಿಎಂ ಹುದ್ದೆೆ ಅಥವಾ ತಮ್ಮ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿಿನ ಅನುದಾನ ಸಿಗುವಂತೆ ಮಾಡುವ ಮೂಲಕ ಮತ್ತೊೊಮ್ಮೆೆ ಸರಕಾರದ ಭಾಗವಾಗುವುದಕ್ಕೆೆ ಸಿದ್ಧತೆ ನಡೆಸಿಕೊಂಡಿದ್ದಾಾರೆ. ಇದರೊಂದಿಗೆ ತಮ್ಮ ಪಕ್ಷದ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳೊಂದಿಗೆ ಒಂದೆರೆಡು ಸೀಟುಗಳನ್ನು ಹೆಚ್ಚು ಗೆಲ್ಲುವ ಬಗ್ಗೆೆಯೂ ತಂತ್ರಗಾರಿಕೆ ಮಾಡಿದ್ದಾಾರೆ.

Leave a Reply

Your email address will not be published. Required fields are marked *