Friday, 19th August 2022

ಬಸ್ ಕಂದಕಕ್ಕೆ ಉರುಳಿ: 19 ಪ್ರಯಾಣಿಕರ ಸಾವು

ಬಲೂಚಿಸ್ತಾನ (ಪಾಕಿಸ್ತಾನ): ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರಯಾಣಿಕರಿದ್ದ ಬಸ್ ಕಂದಕಕ್ಕೆ ಉರುಳಿ ಸುಮಾರು 19 ಮಂದಿ  ಪ್ರಯಾಣಿಕರು ಮೃತಪಟ್ಟು, 12 ಜನ ಗಾಯಗೊಂಡಿದ್ದಾರೆ.

ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಗಡಿಯುದ್ದಕ್ಕೂ ಜಿಲ್ಲೆಯ ದಾನಾ ಸಾರ್ ಪ್ರದೇಶದ ಬಳಿ ಮಳೆಯ ನಡುವೆ ಬಸ್‌ ಅತಿ ವೇಗವಾಗಿ ಚಲಿಸಿದೆ. ಚಾಲಕನ ನಿಯಂತ್ರಣ ತಪ್ಪಿ, ಬಸ್ ಆಳವಾದ ಕಂದಕಕ್ಕೆ ಬಿದ್ದು ಹಲವು ಬಾರಿ ಪಲ್ಟಿಯಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ಲಾಮಾಬಾದ್‌ನಿಂದ ಬಲೂಚಿಸ್ತಾನದ ಪ್ರಾಂತೀಯ ರಾಜಧಾನಿ ಕ್ವೆಟ್ಟಾಗೆ ತೆರಳುತ್ತಿದ್ದ ಈ ಬಸ್‌ನಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ.