Sunday, 14th August 2022

2,541 ಹೊಸ ಪ್ರಕರಣಗಳು ಪತ್ತೆ

#corona

ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,541 ಹೊಸ ಪ್ರಕರಣಗಳು ದಾಖಲೆಯಾಗುವ ಮೂಲಕ ಕೊಂಚ ಇಳಿಕೆ ಕಂಡಿದೆ.

ನಿನ್ನೆಗೆ ಹೋಲಿಸಿದರೆ ದೇಶದಲ್ಲಿ ಇಂದು ಒಟ್ಟು 52 ಕೋವಿಡ್ ಪ್ರಕರಣ ಕಡಮೆಯಾಗಿವೆ. ಭಾನುವಾರ 2,593 ಕೋವಿಡ್ ಪ್ರಕರಣ ಪತ್ತೆಯಾಗಿದ್ದವು. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 16,522 ರಷ್ಟಿವೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 1,862 ಕೋವಿಡ್ ರೋಗಿಗಳು ರೋಗದಿಂದ ಚೇತರಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭ ದಿಂದ ಒಟ್ಟು ಚೇತರಿಕೆಯ ಸಂಖ್ಯೆ 4,25,21,314ಕ್ಕೆ ತಲುಪಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,22,223ಕ್ಕೆ ತಲುಪಿದೆ. ಒಟ್ಟು ಲಸಿಕೆ ಡೋಸ್​ಗಳ ಸಂಖ್ಯೆ 1,87,71,95,781ಕ್ಕೆ ಆಗಿದೆ.