Monday, 13th July 2020

ರಾಯುಡು ನಿವೃತ್ತಿ: ಆಯ್ಕೆ ಸಮಿತಿ ವಿರುದ್ಧ ಗಂಭೀರ ಗರಂ

ದೆಹಲಿ: ಅಂಬಟಿ ರಾಯುಡು ಎಲ್ಲ ಮಾದರಿಯ ಕ್ರಿಕೆಟ್ ಗೆ ಹಠಾತ್ ನಿವೃತ್ತಿ ಪ್ರಕಟಿಸದಕ್ಕೆ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ ಅವರು ಆಯ್ಕೆ ಸಮಿತಿಯನ್ನು ಟೀಕಿಸಿದ್ದಾರೆ.

ಗಂಭೀರ್ ಬುಧವಾರ ಈ ಬಗ್ಗೆ ಮಾತನಾಡಿ ‘ ರಾಯುಡು ದೇಶಿಯ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಮೂರು ಶತಕ ಹಾಗೂ 10 ಅರ್ಧಶತಕ ಬಾರಿಸಿರುವ ರಾಯುಡು ದಿಢೀರ ಸನ್ಯಾಸ ಘೋಷಿಸಿದ್ದು, ಕ್ರಿಕೆಟ್ ಗೆ ತುಂಬಲಾಗದ ನಷ್ಟ’ ಎಂದಿದ್ದಾರೆ.

‘ಆಯ್ಕೆ ಸಮಿತಿಯ ಐದು ಸದಸ್ಯರು ಒಟ್ಟುಗೂಡಿದರೂ, ರಾಯುಡು ದೇಶಿಯ ಟೂರ್ನಿಯಲ್ಲಿ ಬಾರಿಸಿದಷ್ಟು ರನ್ ಬಾರಿಸಿರಲಿಕ್ಕಿಲ್ಲ. ರಾಯುಡು ನಿವೃತ್ತಿ ಘೋಷಿಸಿದ್ದು ಬೇಸರದ ಸಂಗತಿ. ರಾಯುಡು ಬದಲಿಗೆ ಬೇರೆ ಆಟಗಾರರಿದ್ದರೂ, ಅವರಿಗೂ ಇಷ್ಟೇ ನೋವು ಆಗುತ್ತಿತ್ತು’ ಎಂದು ಗಂಭೀರ್ ತಿಳಿಸಿದ್ದಾರೆ.

‘ವಿಶ್ವಕಪ್ ವೇಳೆ ಇಬ್ಬರು ಆಟಗಾರರು ಗಾಯಗೊಂಡು ತಂಡದಿಂದ ಹೊರ ನಡೆದಿದ್ದಾರೆ. ಅವರ ಸ್ಥಾನದಲ್ಲಿ ರಿಷಭ್ ಪಂತ್ ಹಾಗೂ ಮಾಯಾಂಕ್ ಅಗರ್ ವಾಲ್ ಗೆ ಸ್ಥಾನ ನೀಡಲಾಗಿದೆ. ರಾಯುಡು ಅವರನ್ನು ನಿರ್ಲಕ್ಷಿಸಲಾಗಿದೆ. ರಾಯುಡು ಅವರ ನಿವೃತ್ತಿ ಘೋಷಣೆಗೆ ಆಯ್ಕೆ ಸಮಿತಿ ಕಾರಣ’ ಎಂದು ಗಂಭೀರ್ ಆರೋಪಿಸಿದ್ದಾರೆ.

 

Leave a Reply

Your email address will not be published. Required fields are marked *