Friday, 24th March 2023

ಮಂಗಳೂರಿಗೆ ಬಂತು 272.820 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಹಡಗು

ಪಣಂಬೂರು: 272.820 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ ಹಡಗು ಕುವೈಟ್ ಮತ್ತು ಯುಎಇ ರಾಷ್ಟ್ರಗಳಿಂದ ನವಮಂಗಳೂರು ಬಂದರಿಗೆ ಮಂಗಳವಾರ ಬಂದಿದೆ.

ನೌಕಾಪಡೆಯ ಹಡಗು ಐಎನ್‌ಎಸ್ ‘ಶಾರ್ದೂಲ್’ ನವಮಂಗಳೂರು ಬಂದರಿಗೆ 11 ಕಂಟೈನರ್ ಗಳಲ್ಲಿ ದ್ರವೀಕೃತ ಆಮ್ಲಜನಕ ಮತ್ತು 60 ಪ್ಯಾಲೇಟ್ ಗಳಲ್ಲಿ ಆಮ್ಲಜನಕ ಸಿಲಿಂಡರ್ ಗಳನ್ನು ಹೊತ್ತು ಬಂದಿದೆ. ಹಡಗಿನಿಂದ ಈ ಸರಕನ್ನು ಇಳಿಸಲು ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿ ಮುತುವರ್ಜಿ ವಹಿಸಿದರು.

ಈ ಸರಕು ನಿರ್ವಹಣೆಯ ಯಶಸ್ಸಿನಲ್ಲಿ ಬಂದರು ಅಧಿಕಾರಿಗಳು, ಸೀಮಾ ಶುಲ್ಕ ಅಧಿಕಾರಿಗಳು,ಇಂಡಿಯನ್ ಆಯಿಲ್ ಸಂಸ್ಥೆ ಮತ್ತು ರೆಡ್ ಕ್ರಾಸ್ ಸಂಸ್ಥೆಯೂ ಭಾಗಿಯಾಗಿದೆ.

error: Content is protected !!