Thursday, 11th August 2022

ಒಟ್ಟು 29 ಸಚಿವರ ಪ್ರಮಾಣ ವಚನ ಇಂದು, ಡಿಸಿಎಂ ಹುದ್ದೆ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಒಟ್ಟು 29 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿಸಿಎಂ ಹುದ್ದೆಯನ್ನು ಈ ಬಾರಿ ಸೃಜಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜನಪರ ಆಡಳಿತ ಹಾಗೂ ಮುಂದಿನ ಚುನಾವಣೆ ಹಿನ್ನಲೆಯಲ್ಲಿ ಈ ಸಂಪುಟ ರಚನೆಯಾಗಿದೆ. ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ, ವಿಶ್ವಾಸ ಗಳಿಸಿ, ನೂತನವಾದಂತ ಒಳ್ಳೆಯ ಆಡಳಿತ ಕೊಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಇವತ್ತು ಪ್ರಮಾಣವಚನವನ್ನು 2.15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

8 ಲಿಂಗಾಯತ ಸಮುದಾಯದವರಿಗೆ, 7 ಒಬಿಸಿ ಸಮುದಾಯದವರಿಗೆ, 7 ಒಕ್ಕಲಿಗ ಸಮುದಾಯದವರಿಗೆ, 3 ಎಸ್ಸಿ, 1 ಎಸ್ಟಿ ಹಾಗೂ ಒಬ್ಬ ಮಹಿಳೆಯರು ಇಂದಿನ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ಘೋಷಣೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಕುರಿತಂತೆ ಬಿಜೆಪಿ ರಾಷ್ಟ್ರೀಯ ನಾಯಕರು ನೇರವಾಗಿಯೇ ಹೇಳಿದ್ದಾರೆ.