ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟಕ್ಕೆ ನೂತನ ಸಾರಥಿಗಳಾಗಿ ಬುಧವಾರ 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಅರಮನೆಯಲ್ಲಿ ನಡೆಯುತ್ತಿರುವಂತ ಸರಳ ಸಮಾರಂಭದಲ್ಲಿ, 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದಿನ ಸಚಿವ ಸಂಪುಟ ರಚನೆಯಲ್ಲಿ 8 ಲಿಂಗಾ ಯಿತ ಸಮುದಾಯದವರು, 7 ಒಕ್ಕಲಿಗ ಸಮುದಾಯದವರಿ, 7 OBC ಸಮುದಾಯದವರು, 3 SC, 1 ST, 1 ರೆಡ್ಡಿ, 1 ಮಹಿಳಾ ಮತ್ತು 1 ಬ್ರಾಹ್ಮಣ ಸಮುದಾಯದವರು ಸೇರಿದಂತೆ ಒಟ್ಟು 29 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದರು.
ಒಂದು ಬಾರಿಗೆ ಐವರು ಶಾಸಕರಿಗೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸುವ ಮೂಲಕ, ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ 29 ಸಾರಥಿಗಳು ಸೇರ್ಪಡೆಗೊಂಡಿ ದ್ದಾರೆ.
ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಂತ ಸಚಿವರ ಪಟ್ಟಿ ಇಂತಿದೆ.
ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ , ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್.ಅಂಗಾರ, ಜೆಸಿ ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ಡಾ.ಸಿಎನ್.ಅಶ್ವತ್ಥನಾರಾಯಣ, ಸಿಸಿ ಪಾಟೀಲ್ , ಆನಂದ್ ಸಿಂಗ್ , ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚೌಹಾಣ್, ಮರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬಿ.ಸಿ ಪಾಟೀಲ್, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಕೆಸಿ ನಾರಾಯಣ್ ಗೌಡ, ಸುನೀಲ್ ಕುಮಾರ್, ಮುನಿರತ್ನ, ಎಂ.ಟಿ.ಬಿ ನಾಗರಾಜ್, ಗೋಪಾಲಯ್ಯ, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ, ಬಿ.ಸಿ.ನಾಗೇಶ್ – ತಿಪಟೂರು.