Sunday, 29th November 2020

ಜೂ.ಚಿರು ಸರ್ಜಾ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾರಾಜ್ ಸರ್ಜಾ

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟ ದಿ.ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಜೂನ್ ನಲ್ಲಿ ಮೇಘನಾ ಪತಿ, ಸ್ಯಾಂಡಲ್ ವುಡ್ ಸ್ಟಾರ್ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದರು. ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿಯಾಗಿದ್ದರು. ಸರ್ಜಾ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಗರ್ಭಿಣಿಯಾಗಿದ್ದ ವಿಚಾರ ಹಂಚಿ ಕೊಂಡಿದ್ದು, ಚಿರು ಮತ್ತೆ ಹುಟ್ಟಿ ಬರಲಿದ್ದಾರೆ ಎಂದು ತಿಳಿಸಿದ್ದರು.

 

Leave a Reply

Your email address will not be published. Required fields are marked *