Wednesday, 30th September 2020

4 ಸಾವಿರ ಕೋಟಿ ರು. ಪರಿಹಾರ ನೀಡುವಂತೆ ರಾಜ್ಯ ಸರಕಾರ ಮನವಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ 4 ಸಾವಿರ ಕೋಟಿ ರು ಮೊತ್ತದ ಬೆಳೆ, ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರಮೋದಿ ಅವರಿಗೆ ರಾಜ್ಯ ಸರಕಾರ ಮನವಿ ಮಾಡಿದೆ.

ಪ್ರಧಾನಿ ಮೋದಿ ಅವರ ಜತೆ ವಿಡಿಯೋ ಸಂವಾದ ನಡೆಸಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಅವರು ಮಾತನಾಡಿ, ಸೂಕ್ತ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ತಕ್ಷಣವೇ ಕೇಂದ್ರ ತಂಡ ಕಳುಹಿಸುವಂತೆ ಮನವಿ ಮಾಡಲಾಗಿದೆ. ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ಅವರು ಸಹ ಭರವಸೆ ನೀಡಿದರು.

ಪ್ರವಾಹದಲ್ಲಿ ಮೃತಪಟ್ಟವರಿಗೆ ತೀವ್ರಸಂತಾಪ ವ್ಯಕ್ತಪಡಿಸಿ, ಜನಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಸಮಗ್ರ ಪ್ರವಾಹ ನಿಯಂತ್ರಣ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದು, ಪಶ್ಚಿಮಘಟ್ಟದಲ್ಲಿ ಭೂ ಕುಸಿತ ಆಗುವುದನ್ನು ಮುಂದಾಗಿಯೇ ತಡೆಯಲು ಭೂ ಕುಸಿತ ತಡೆಯುವ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಇದಕ್ಕಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಬೇಕು ಎಂದು ಕೋರಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 3 ಸಾವಿರ ಮನೆಗಳು ಹಾನಿಗೀಡಾಗಿದ್ದು, 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, 3500 ಕಿ.ಮೀ ರಸ್ತೆ, ಮೂಲಸೌಕರ್ಯಕ್ಕೆ ಹಾನಿಯಾಗಿದೆ. 393 ಕಟ್ಟಡಗಳು, 250 ಸೇತುವೆಗಳು, 104 ಸಣ್ಣ ನೀರಾವರಿ ಪ್ರದೇಶ ಹಾನಿಗೊಳಗಾಗಿವೆ ಎಂದು ತಿಳಿಸಿದರು.

ಪ್ರಧಾನಿ ಅವರು, 5 ರಾಜ್ಯಗಳ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜೂನ್ ಮತ್ತು ಜುಲೈ ತಿಂಗಳ ಮಳೆ ಬಗ್ಗೆ ಮಾಹಿತಿ ಕೇಳಿದರು. ಕಳೆದ ವರ್ಷ ಸಂಭವಿಸಿದ ಪ್ರವಾಹ , ಅತಿವೃಷ್ಠಿ ಹಿನ್ನೆಲೆಯಲ್ಲಿ ವಿಶೇಷ ಅನುದಾನ ಕೇಳಿದ್ದೇವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ಎರಡನೇ ಕಂತಿನ ಮೊತ್ತವಾದ 365 ಕೋಟಿ ರು ಹಣವನ್ನು ಮುಂಗಡವಾಗಿ ನೀಡುವಂತೆ ಮನವಿ ಮಾಡಿದ್ದೇವೆ. ತಕ್ಷಣದ ಪರಿಹಾರ ಮತ್ತು ದೂರದೃಷ್ಟಿ ಯೋಜನೆಗಳಿಗೆ ನೆರವಾಗುವಂತೆ ಕೋರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ತಿಂಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶದಲ್ಲಿ ಭಾರೀ ಅನಾಹುತ ಸಂಭವಿಸಿದೆ. ಮಳೆ, ಅತಿವೃಷ್ಟಿ, ಹಾಗೂ ಭಾರೀ ಗಾಳಿಯಿಂದ ನದಿಗಳು ಉಕ್ಕಿಹರಿದು ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ.  ರಾಜ್ಯದ 13 ಜಿಲ್ಲೆಯ 876 ಗ್ರಾಮ ಪಂಚಾಯತ್ ಗಳಲ್ಲಿ 1744 ಪರಿಹಾರ ಕೇಂದ್ರಗಳನ್ನು  ತೆರೆಯಲಾಗಿದೆ. ಮಳೆಯಿಂದ ಮೃತಪಟ್ಟವರಿಗೆ 5 ಲಕ್ಷ ರು,  ಸಂಪೂರ್ಣ ಮನೆ ಬಿದ್ದರೆ 5 ಲಕ್ಷ ರು, ಭಾಗಶಃ 3 ಲಕ್ಷ ರು ,ಅಲ್ಪಪ್ರಮಾಣದ ಹಾನಿಗೆ 1 ಲಕ್ಷ ರು ಪರಿಹಾರ ಬಿಡುಗಡೆ ಮಾಡಲಾಗುವುದು. ಈ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರವಾಹ ಪರಿಸ್ಥಿತಿ ಕುರಿತು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ರಾಜ್ಯದಲ್ಲಿ 4 ಎನ್‌ಡಿಆರ್‌ಎಫ್ ತಂಡ, 8 ತರಬೇತಿ ಪಡೆದ ಎಸ್‌ಡಿಆರ್‌ಎಫ್ ಮತ್ತು 4 ಹೆಲಿಕಾಪ್ಟರ್‌ಗಳನ್ನು ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿಡಲಾಗಿದೆ.

ಸೇನೆಯನ್ನು ಬಳಸಿಕೊಳ್ಳುತ್ತಿದ್ದು, ಕೊಡಗಿನಲ್ಲಿ ಸೇನಾ ಯೋಧರು ಈಗಾಗಲೇ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷ್ಣಾ ಮತ್ತು ಕಾವೇರಿ ಕೊಳ್ಳದಲ್ಲಿ ಹೆಚ್ಚು ಪ್ರವಾಹ ಹಾಗೂ ಹಾನಿ ಬಗ್ಗೆೆ ಮಾಹಿತಿ ಇದೆ. ಈ ಕುರಿತು ಮಹಾರಾಷ್ಟ್ರದ ನೀರಾವರಿ ಸಚಿವರ ಜತೆ ಚೆರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ದೀರ್ಘಾವಧಿ ಪರಿಹಾರವಾಗಿ ಕಾವೇರಿ ಹಾಗೂ ಕೃಷ್ಣಾಾ ನದಿ ಪಾತ್ರಗಳಲ್ಲಿ  ಹಾಗೂ ಪಶ್ಚಿಿಮ ಘಟ್ಟಗಳು ವ್ಯಾಾಪಿಸಿರುವ ನೆರೆ ರಾಜ್ಯಗಳಲ್ಲಿ ಭೂ ಕುಸಿತಕ್ಕೆೆ ಸಂಬಂಧಿಸಿದಂತೆ  ಮ್ಯಾಾಪಿಂಗ್ ಹಾಗೂ ಮುನ್ಸೂಚನಾ ವ್ಯವಸ್ಥೆೆಯನ್ನು ಸ್ಥಾಾಪಿಸುವ ಕುರಿತು ಕೇಂದ್ರ ಭೂ ವಿಜ್ಞಾನ  ಸರ್ವೇಕ್ಷಣಾ ಇಲಾಖೆಯಿಂದ  ಅಧ್ಯಯನ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಕೇಂದ್ರ ಜಲ ಆಯೋಗದಿಂದ ಕೃಷಾ ನದಿ ಪಾತ್ರದಲ್ಲಿ ಸಮಗ್ರ ಪ್ರವಾಹ ಪರಿಸ್ಥಿಿತಿ ಮುನ್ಸೂಚನೆ ವ್ಯವಸ್ಥೆೆಯನ್ನು ಸ್ಥಾಾಪಿಸಲು ಕೋರಲಾಯಿತು.
ಕಡಲು ಕೊರೆತ ನಿಯಂತ್ರಣಕ್ಕೆೆ ನ್ಯಾಾಷನಲ್ ಸೈಕ್ಲೋೋನ್ ಮಿಟಿಗೇಷನ್ ರಿಲಿಪ್ ಯೋಜನೆಯಡಿ  ಕಡಲು ಕೊರೆತವನ್ನು ಸೇರ್ಪಡೆ ಗೊಳಿಸಲು ಹಾಗೂ ಅದಕ್ಕೆೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಯಿತು.
ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಕಾಳಜಿ ಕೇಂದ್ರಗಳಲ್ಲಿ ಅನ್ನ ಸಾಂಬಾರ್ ಕೊಡುತ್ತಿಿದ್ದರು. ಇದೀಗ ಪ್ರತಿ ದಿನ ಮೊಟ್ಟೆೆ, ಹಪ್ಪಳ, ಉಪ್ಪಿಿನ ಕಾಯಿ, ಮೊಸರು ನೀಡಲಾಗುವುದು. ಕಳೆದ ವರ್ಷ ಮನೆ ಬಿದ್ದವರಿಗೆ ಹಣ ಕೊಟ್ಟಿಿಲ್ಲ ಎಂಬ ಆರೋಪ ಇತ್ತು. ಈಗ 334 ಕೋಟಿ ರು ಮೂರನೇ ಮತ್ತು ನಾಲ್ಕನೇ ಕಂತು  ಹಣ ಬಿಡುಗಡೆ ಮಾಡಲಾಗಿದೆ ಎಂದು ವಿವರಣೆಯನ್ನು ನೀಡಿದ್ದಾಾರೆ.

Leave a Reply

Your email address will not be published. Required fields are marked *