Friday, 9th December 2022

ನೈಸ್ ರಸ್ತೆಯಲ್ಲಿ ಸರಣಿ ಅಪಘಾತ: ನಾಲ್ವರು ಸ್ಥಳದಲ್ಲಿಯೇ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಬೆಂಗಳೂರು ಹೊರವಯ ದಲ್ಲಿರುವ ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ.

ಸರಣಿ ಅಪಘಾತದಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ಫಾದಿಲ್(25), ಅಭಿಲಾಷ್(25) ಮತ್ತು ಶಿಲ್ಪಾ(30) ಸೇರಿ ಒಟ್ಟು ನಾಲ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.

ಕ್ವಾಲಿಸ್ ಕಾರಲ್ಲಿದ್ದ ಆರು ಜನರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಎಸ್. ಲೇಔಟ್ ಸಂಚಾರಿ ಪೊಲೀಸರಿಂದ ಜಖಂಗೊಂಡು ನಿಂತಿದ್ದ ವಾಹನಗಳ ತೆರವು ಕಾರ್ಯ ನಡೆದಿದೆ.

ಶುಕ್ರವಾರ ರಾತ್ರಿ ತಮಿಳುನಾಡು ನೋಂದಣಿ ಟ್ರಕ್ ಕೇರಳ ನೋಂದಣಿ ಹೊಂದಿರುವ ವ್ಯಾಗನ್ R ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ಟ್ರಕ್, ಕಾರುಗಳು ಮತ್ತು ಕಂಟೈನರ್‌ಗಳ ಸರಣಿ ಅಪಘಾತ ಸಂಭವಿಸಿದೆ. ಅತಿಯಾದ ವೇಗದಿಂದಾಗಿ ಸರಣಿ ಅಪಘಾತಗಳು ಸಂಭವಿಸಿ 2 ಕ್ವಾಲಿಸ್ ಮತ್ತು ಸ್ವಿಫ್ಟ್ ಕಾರುಗಳು ಹಾನಿಗೊಳಗಾಗಿವೆ ಮತ್ತು 3-4 ಕಂಟೈನರ್ ವಾಹನಗಳು ಹಾನಿಗೊಳಗಾಗಿವೆ.

ವ್ಯಾಗನ್ ಆರ್ ವಾಹನದಲ್ಲಿದ್ದ ಎಲ್ಲಾ ನಾಲ್ವರು (2 ಪುರುಷರು ಮತ್ತು 2 ಮಹಿಳೆಯರು) ಮೃತಪಟ್ಟಿದ್ದು, 4 ಕ್ವಾಲಿಸ್ ವಾಹನದಲ್ಲಿದ್ದವರಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.