Saturday, 4th July 2020

ಮೃತ ಕುಟುಂಬಸ್ಥರಿಗೆ ₹.5 ಲಕ್ಷ ಪರಿಹಾರ ನೀಡಿದ ಸಿ.ಸಿ.ಪಾಟೀಲ

ಗದಗ ಜಿಲ್ಲೆ ನರಗುಂದ ವಿಧಾನಸಭಾ ವ್ಯಾಪ್ತಿಯ ಗದಗ ತಾಲೂಕಿನ ಕಿರಟಗೇರಿ ಗ್ರಾಮಕ್ಕಿಂದು ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ ಹಾಗೂ ಜೀವಿ ಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿದರು. ಅಕ್ಟೋಬರ್ 3 ರಂದು ತೋಟಗೇರ ಶಿವಪುತ್ರಪ್ಪ ಅವರ ಪತ್ನಿ ವಿಜಯ ಲಕ್ಮೀ ಹಾಗೂ ತೋಟಗೇರ ಕಲ್ಲಪ್ಪ ಅವರ ಪತ್ನಿ ದ್ರಾಕ್ಷಾಯಿಣಿ ಅವರುಗಳು ಹೊಲದಲ್ಲಿ ಸಿಡಿಲಿನಿಂದ ಮರಣ ಹೊಂದಿದ್ದರು. ಅವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಗಳ ಚೆಕ್ಕುಗಳನ್ನು ವಿತರಿಸಿದ ಸಚಿವ ಸಿ.ಸಿ.ಪಾಟೀಲರು ಸಾಂತ್ವನ ಹೇಳಿ ಮಕ್ಕಳಿಗೆ ಧೈರ್ಯ ತುಂಬಿದರು. ಪರಿಹಾರ ಹಣವನ್ನು ಠೇವಣಿ ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ತಿಳಿಸಿದರು. ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡ್ರ, ಗದಗ ತಹಶಿಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ, ತಾ.ಪಂ. ಕಾರ್ಯನಿವಾಹಕ ಅಧಿಕಾರಿ ಡಾ.ಜನಗಿ, ಪೊಲೀಸ್ ಅಧಿಕಾರಿಗಳು, ಕಿರಟಗೇರಿ ಗುರು ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *