Sunday, 31st May 2020

ಕಾರು ಗಾಜುಗಳ ಜಖಂ ಪ್ರಕರಣ: 7 ಮಂದಿ ಆರೋಪಿಗಳ ಬಂಧನ

ಸಿಸಿ ಕ್ಯಾಮಾರ ದೃಶ್ಯ 

ವಿಜಯನಗರ ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ ಪೊಲೀಸ್ ವಾಹನ ಸೇರಿದಂತೆ 20ಕ್ಕೂ ಹೆಚ್ಚು ಕಾರುಗಳು ಜಖಂ ಮಾಡಿದ ಪ್ರಕರಣಕ್ಕೆೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಪಂಚಶೀಲನಗರದ ಯಶವಂತ್(20), ದರ್ಶನ್(19), ನಿತೀನ್(18), ಕನಕನಗರದ ಕಿರಣ್‌ರೆಡ್ಡಿಿ(26), ಮುತ್ತು(22), ಚರಣ್‌ರಾಜ್(20) ಮತ್ತು ಬಾಲಾಜಿ(45) ಬಂಧಿತರು.

ಬುಧವಾರ ಬೆಳಗಿನ ಜಾವ 1.30ರ ಸುಮಾರಿನಲ್ಲಿ ವಿಜಯನಗರ ಠಾಣೆ ವ್ಯಾಾಪ್ತಿಿಯ ಪಟ್ಟೆೆಗಾರಪಾಳ್ಯ, ಸಂಪಿಗೆ ಬಡಾವಣೆ ರಸ್ತೆೆಗಳ ಬದಿಯಲ್ಲಿ ಹಾಗೂ ಮನೆಗಳ ಮುಂದೆ ನಿಲ್ಲಿಸಿದ್ದ ಸುಮಾರು 17 ಕಾರುಗಳಿಗೆ ಕಲ್ಲು ತೂರಿ ಗಾಜುಗಳನ್ನು ಜಖಂಗೊಳಿಸಿ ಕಿಡಿಗೇಡಿಗಳು ಪರಾರಿಯಾಗಿದ್ದರು. ಈ ಸಂಬಂಧ ಕಾರು ಮಾಲೀಕರು ವಿಜಯನಗರ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಬ್ಯಾಾಟರಾಯನಪುರ ಪೊಲೀಸ್ ಠಾಣೆ ವ್ಯಾಾಪ್ತಿಿಯಲ್ಲೂ ನಾಲ್ಕು ಕಾರಿನ ಗಾಜುಗಳನ್ನು ಕಿಡಿಗೇಡಿಗಳು ಜಖಂಗೊಳಿಸಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ವಿಜಯನಗರ ಠಾಣೆ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಾಮೆರಾ ದೃಶ್ಯಾಾವಳಿ ಪಡೆದುಕೊಂಡು ಪರಿಶೀಲಿಸಿ ಆರೋಪಿಗಳಾದ ಯಶವಂತ್, ದರ್ಶನ್ ಮತ್ತು ನಿತಿನ್‌ನನ್ನು ಬಂಧಿಸಿದ್ದಾಾರೆ. ಈ ಮೂವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ನೀಡಿದ ಹೇಳಿಕೆ ಮೇರೆಗೆ ಇನ್ನುಳಿದ ಆರೋಪಿಗಳನ್ನು ಬಂಧಿಸಿದ್ದಾಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಹಲವರ ಪತ್ತೆೆಗೆ ತನಿಖೆ ಮುಂದುವರೆದಿದೆ.

ಬಂಧಿತರ ಪೈಕಿ ಕಿರಣ್ ರೆಡ್ಡಿಿ ವಿಜಯನಗರ ರೌಡಿಶೀಟರ್ ಆಗಿದ್ದಾನೆ. ಹೀಗಾಗಿ ಏರಿಯಾದಲ್ಲಿ ಹೆಸರು ಮಾಡಲು ಇವನು ತನ್ನ ಸಹಚರರ ಜತೆ ಗೂಡಿ 20ಕ್ಕೂ ಹೆಚ್ಚಿಿನ ಕಾರಿನ ಗ್ಲಾಾಸ್ ಪುಡಿ ಪುಡಿ ಮಾಡಿದ್ದಾನೆ ಎನ್ನಲಾಗಿದೆ. ಇದಲ್ಲದೆ, ಈತ ಒಮ್ಮೆೆ ಜೈಲಿಗೆ ಹೋಗಿ ಬಂದರೆ ಹೆಸರು ಮಾಡಬಹುದು ಎನ್ನುವ ಭ್ರಮೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರಿಗೆ ಎಚ್ಚರಿಕೆ ನೀಡಿದ ಸಚಿವ ವಿ.ಸೋಮಣ್ಣ

ವಿಜಯನಗರ ಸುತ್ತ ಮುತ್ತ ಪುಂಡರ ಅಟ್ಟಹಾಸ ಪ್ರಕರಣಗಳು ದಿನೇ ದಿನೇ ಹೆಚ್ಚಾಾಗುತ್ತಿಿದೆ. ಈ ಬಗ್ಗೆೆ ಕ್ರಮಕೈಗೊಳ್ಳುವಂತೆ ವಿಜಯನಗರ ಹಾಗೂ ಕಾಮಾಕ್ಷಿಿಪಾಳ್ಯ ಪೊಲೀಸ್ ಇನ್‌ಸ್‌‌ಪೆಕ್ಟರ್‌ಗಳಿಗೆ ವಸತಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ಕೊಟ್ಟಿಿದ್ದಾಾರೆ.

Leave a Reply

Your email address will not be published. Required fields are marked *