Friday, 12th August 2022

ಚಳ್ಳಕೆರೆ ತಾಲೂಕಿನಲ್ಲಿ 7 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಚಿತ್ರದುರ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶ ಚಳ್ಳಕೆರೆ ತಾಲೂಕಿನಲ್ಲಿ ಒಂದೇ ದಿನ 7 ಬ್ಲ್ಯಾಕ್ ಫಂಗಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಪತ್ತೆ ಯಾದ ಒಟ್ಟು ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ 49.

ತಾಲೂಕಿನ ರಾಮಜೋಗಿಹಳ್ಳಿ, ದೇವರ ಮರಿಕುಂಟೆ, ಕುದಾಪುರ, ಟಿ. ಎನ್. ಕೋಟೆ, ಗೋನಬಾವಿ ಗ್ರಾಮಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ನೋಡಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗ ತಾಲೂಕಿನಲ್ಲಿ 312, ಚಳ್ಳಕೆರೆ 157, ಹಿರಿಯೂರು 62, ಹೊಳಲ್ಕೆರೆ 68, ಹೊಸದುರ್ಗ 123, ಮೊಳಕಾಲ್ಮೂರಿನಲ್ಲಿ 41 ಪ್ರಕರಣಗಳು ಪತ್ತೆಯಾಗಿವೆ.