Tuesday, 15th October 2019

ಅ.13ರಂದು ದತ್ತಮಾಲಾ ಅಭಿಯಾನ

ಚಿಕ್ಕಮಗಳೂರು ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಿಸಲು ಆಗ್ರಹಿಸಿ ಪ್ರತಿಭಟನೆ ಹಿಂದೂಗಳ ತಾಳ್ಮೆೆ ಪರೀಕ್ಷಿಿಸಬೇಡಿ: ಮುತಾಲಿಕ್

ಚಿಕ್ಕಮಗಳೂರು ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಿಸಲು ಆಗ್ರಹಿಸಿ ಅ.13ರಂದು ಚಿಕ್ಕಮಗಳೂರಿನ ಶಂಕರಮಠದ ದೇವಸ್ಥಾಾನದ ಆವರಣದಲ್ಲಿ ಶೋಭಯಾತ್ರೆೆ ನಡೆಯಲಿದೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಚಂದ್ರದ್ರೋಣ ಪರ್ವತ ಶ್ರೀ ಗುರು ದತ್ತಾಾತ್ರೇಯರ, ತಾಯಿ ಅರುಂಧತಿ, ಅತ್ರಿಿ ಋಷಿಗಳ ಪವಿತ್ರ ತಪೋಭೂಮಿ. ಆದರೆ, ಕೆಲ ಆಕ್ರಮಣಕಾರರು ಈ ಪವಿತ್ರ ಸ್ಥಳ ಆಕ್ರಮಿಸಿಕೊಂಡು ಬಾಬಾಬುಡನ್ ಗಿರಿ ಎಂದು ಹೇಳುತ್ತಿಿರುವುದು ಅತ್ಯಂತ ಖಂಡನಿಯ. ಇತಿಹಾಸಕ್ಕೆೆ, ಸತ್ಯಕ್ಕೆೆ ಬಗೆಯುವ ದ್ರೋಹವಾಗಿದೆ. ಬಾಬಾಬುಡನ್ ದರ್ಗಾ ನಾಗೇನಹಳ್ಳಿಿಯಲ್ಲಿದೆ. ಇದಕ್ಕೆೆ ಸರಕಾರದ ದಾಖಲೆಗಳೇ ಸಾಕ್ಷಿಯಾಗಿದೆ. ಇನಾಂ ದತ್ತಾಾತ್ರೇಯ ಪೀಠ ಎನ್ನುವ ಸರಕಾರಿ ದಾಖಲೆಯಲ್ಲಿ ಇಂದಿಗೂ ಇದೆ. ಜತೆಗೆ ನ್ಯಾಾಯಾಲಯದ 7 ತೀರ್ಪುಗಳು ಇದಕ್ಕೆೆ ಪುಷ್ಠಿಿ ನೀಡಿದೆ. ಇಷ್ಟೆೆಲ್ಲ ದಾಖಲೆ, ತೀರ್ಪು, ಇತಿಹಾಸ ಇದ್ದರೂ ಹಿಂದೂ ಭಕ್ತರಿಗೆ ದ್ರೋಹ ಬಗೆದು, ಹಿಂದೂಗಳಿಗೆ ಈ ಪೀಠ ಒಪ್ಪಿಿಸದಿರುವುದು ಅತ್ಯಂತ ಖಂಡನಾರ್ಹ ಎಂದು ತಿಳಿಸಿದರು.

ದತ್ತಪೀಠ ಸಂಪೂರ್ಣ ಹಿಂದುಗಳಿಗೆ ಒಪ್ಪಿಿಸಬೇಕು. ಅಲ್ಲಿರುವ ಅನಧಿಕೃತ ಘೋರಿಗಳನ್ನು ನಾಗೇನಹಳ್ಳಿಿಗೆ ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ನೇಮಿಸಬೇಕು. ಮುಜಾವರನನ್ನು ತಗೆಯಬೇಕು. ತ್ರಿಿಕಾಲ ಪೂಜೆ ನಡೆಯಬೇಕು ಹಾಗೂ ಉರೂಸು ನಿಲ್ಲಬೇಕು. ಪೀಠದ ನೂರಾರು ಎಕರೆ ಅತಿಕ್ರಮಣ ತೆರವುಗೊಳಿಸಬೇಕು ಹಾಗೂ ಅಮೂಲ್ಯ ವಸ್ತುಗಳು ಕಣ್ಮರೆಯಾದ ಬಗ್ಗೆೆ ತನಿಖೆ ನಡೆಸಬೇಕು. ಭಕ್ತರಿಗೆ,ಪೂಜ್ಯ ಸ್ವಾಾಮಿಜಿಗಳಿಗೆ ಅಡೆತಡೆ ಇಲ್ಲದೇ ದರ್ಶನ, ಪೂಜೆಗೆ ಮುಕ್ತ ಅವಕಾಶ ನೀಡಬೇಕು, ಭಕ್ತರಿಗೆ ಉಚಿತ ಅನ್ನದಾನ ವ್ಯವಸ್ಥೆೆ ಮಾಡಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದರು.

ಜಿಲ್ಲಾ ಕೇಂದ್ರಗಳಲ್ಲಿ ಡಿಸಿಗಳಿಗೆ ಮನವಿ ಸಲ್ಲಿಸಲಾಗುತ್ತಿಿದೆ. 370ನೆ ವಿಧಿ ರದ್ದುಪಡಿಸಿದ್ದಕ್ಕೆೆ ಕೇಂದ್ರ ಸರಕಾರಕ್ಕೆೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಮ್ಮುವಿನ ರಾಹುಲ್ ಎಂಬ ಯುವ ನಾಯಕ ಉದ್ಘಾಾಟಿಸಲಿದ್ದಾರೆ. ಬೆಂಗಳೂರು ನಗರದಿಂದ 12 ರಂದು 500 ಮಂದಿ ದತ್ತಮಾಲಾಧಾರಿಗಳು ಚಿಕ್ಕಮಗಳೂರಿಗೆ ಹೊರಡಲಿದ್ದಾರೆ. ಯಡಿಯೂರಪ್ಪ ಅವರಿಗೆ ದತ್ತಪೀಠದ ಬಗ್ಗೆೆ ಸಂಪೂರ್ಣ ಮಾಹಿತಿ ಇದ್ದು, ಅವರ ಅವಧಿಯಲ್ಲೇ ಇದನ್ನು ಹಿಂದೂಗಳಿಗೆ ಒಪ್ಪಿಿಸುವ ಕಾರ್ಯ ನಡೆಯಬೇಕು ಎಂದು ಒತ್ತಾಾಯಿಸಿದರು.

ಬಿಎಸ್‌ವೈಗೆ ಆಗ್ರಹ
ಹಿಂದೂಗಳ ತಾಳ್ಮೆೆ ಪರೀಕ್ಷಿಸದೇ ತಕ್ಷಣ ಈ ಪೀಠ ಹಿಂದೂಗಳಿಗೆ ಹಸ್ತಾಾಂತರಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ. ತಾವೂ ಸಹ ಹಿಂದೆ ಈ ಹೋರಾಟದಲ್ಲಿ ಭಾಗವಹಿಸಿ ದತ್ತಪೀಠದಲ್ಲಿ ಹಿಂದೂಗಳಿಗೆ ಆದ ಅನ್ಯಾಾಯದ ವಿರುದ್ಧ ಧ್ವನಿ ಎತ್ತಿಿದ್ದು ಸರ್ವವಿಧಿತವಾಗಿದೆ. ಈಗ ತಮಗೆ ಅನ್ಯಾಾಯ ಸರಿಪಡಿಸುವ ಸುವರ್ಣ ಅವಕಾಶವಿದ್ದು, ತಾವು ಹಿಂದೂಗಳ ಹೋರಾಟಕ್ಕೆೆ ನ್ಯಾಾಯ ನೀಡುತ್ತೀರಿ ಎನ್ನುವ ವಿಶ್ವಾಾಸ ಹೊಂದಿದ್ದೇವೆ. ಜತೆಗೆ ತಾವು ಶ್ರೀಗುರು ದತ್ತಾಾತ್ರೇಯ ಅವರ ಪರಮ ಭಕ್ತರಿದ್ದು, ತಮ್ಮ ಆದೇಶದಿಂದ ದತ್ತಪೀಠಕ್ಕೆೆ ನ್ಯಾಾಯ ಒದಗಿಸಿ ಗುರು ಕೃಪೆಗೆ ಪಾತ್ರರಾಗುತ್ತೀರಿ ಎಂದು ನಂಬಿದ್ದೇವೆ ಎಂದು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

Leave a Reply

Your email address will not be published. Required fields are marked *