Friday, 7th August 2020

ಹಿಂಪಡೆಯದ ಬಂಡಾಯ; ಮೂರು ಕ್ಷೇತ್ರಗಳಲ್ಲಿ ಹೆಚ್ಚಿದ ಆತಂಕ

ಉಚ್ಚಾಟನೆಗೂ ಬಗ್ಗದ ಶರತ್ ಬಚ್ಚೇಗೌಡ, ಕವಿರಾಜ್ ಅರಸ್
ಬಂಡಾಯ ಅಭ್ಯರ್ಥಿಗಳ ಬೆಂಬಲಿಸದಂತೆ ಹೈಕಮಾಂಡ್ ಖಡಕ್ ಸೂಚನೆ

* ಬಿಜೆಪಿ ಪ್ರಾಾಥಮಿಕ ಸದಸ್ಯತ್ವದಿಂದ ಶರತ್, ಕವಿರಾಜ್ ಉಚ್ಚಾಾಟನೆ
* ಮನವೊಲಿಸುವಲ್ಲಿ ನಾಯಕರು ವಿಫಲ
* ತಲೆನೋವಾದ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ರಾಜ್ಯದಲ್ಲಿ ಡಿ.5ರಂದು ನಡೆಯಲಿರುವ ಉಪಸಮರದಲ್ಲಿ ನಾಮಪತ್ರ ಹಿಂಪಡೆಯುವ ದಿನಾಂಕ ಅಂತಿಮವಾಗಿದ್ದು, ಬಿಜೆಪಿಯಲ್ಲಿ ಮಾತ್ರ ಬಂಡಾಯದ ಬಿಸಿ ತಣಿದಿಲ್ಲ.
ಬಂಡಾಯ ಅಭ್ಯರ್ಥಿಗಳಾದ ಶರತ್ ಬಚ್ಚೇಗೌಡ ಮತ್ತು ಕವಿರಾಜ್ ಅರಸ್ ಅವರು ನಾಮಪತ್ರ ವಾಪಸ್ ಪಡೆಯದ ಹಿನ್ನೆೆಲೆಯಲ್ಲಿ ‘ಪಕ್ಷ ವಿರೋಧಿ ಚಟುವಟಿಕೆ’ ಎಂದು ಪರಿಗಣಿಸಿ ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ಇಬ್ಬರಿಗೂ ಉಚ್ಚಾಾಟನೆ ಆದೇಶ ಹೊರಡಿಸಿದ್ದಾರೆ.

15 ಕ್ಷೇತ್ರಗಳಲ್ಲಿ ಕನಿಷ್ಠ ಎಂಟು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸರಕಾರವನ್ನು ಸುಭದ್ರಗೊಳಿಸುವ ನಿಟ್ಟಿಿನಲ್ಲಿ ಬಿಜೆಪಿ ನಾಯಕರು ಶತಪ್ರಯತ್ನ ಪಡುತ್ತಿಿದ್ದರೆ, ಇತ್ತ ಮೂರು ಕ್ಷೇತ್ರಗಳು ಮಾತ್ರ ಬಿಜೆಪಿಗೆ ನುಂಗಲಾರದ ತುತ್ತಾಾಗಿದೆ. ಬೆಂಗಳೂರು ಗ್ರಾಾಮಾಂತರ ಜಿಲ್ಲೆಯ ಹೊಸಕೋಟೆ, ಬಳ್ಳಾಾರಿ ಜಿಲ್ಲೆಯ ವಿಜಯನಗರ ಹಾಗೂ ಬೆಳಗಾವಿಯ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಭಿನ್ನಮತೀಯರು ಕಣದಲ್ಲಿರುವುದು ಬಿಜೆಪಿ ನಾಯಕರಿಗೆ ಸಮಸ್ಯೆೆಯಾಗಿದೆ.

ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಗುರುವಾರವೂ ಬಂಡಾಯ ಅಭ್ಯರ್ಥಿಗಳನ್ನು ಮನವೊಲಿಸುವ ಕಸರತ್ತು ಕೊನೆ ಕ್ಷಣದವರೆಗೂ ನಡೆಯಿತು. ಆದರೆ ಮುಖ್ಯಮಂತ್ರಿಿ ಯಡಿಯೂರಪ್ಪ ಸೇರಿದಂತೆ ಯಾವುದೇ ಬಿಜೆಪಿ ನಾಯಕರ ಸಂಧಾನಕ್ಕೂ ಜಗ್ಗದೆ ಕಣದಲ್ಲಿ ಮುಂದುವರಿಯಲು ಅಭ್ಯರ್ಥಿಗಳು ನಿರ್ಧರಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಾಗಿದೆ.
ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶರತ್ ಬಚ್ಚೇಗೌಡ, ವಿಜಯನಗರದಲ್ಲಿ ಕವಿರಾಜ್ ಅರಸು ಹಾಗೂ ಗೋಕಾಕ್‌ನಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಅಶೋಕ್ ಪೂಜಾರಿ ನಾಮಪತ್ರ ಹಿಂಪಡೆಯಲು ನಿರಾಕರಿಸಿದ್ದಾರೆ. ಉಪಚುನಾವಣೆ ಕಳೆಯುತ್ತಿಿದ್ದಂತೆ, ಪಕ್ಷದಲ್ಲಿ ಸೂಕ್ತ ಸ್ಥಾಾನಮಾನ ನೀಡುವ ಭರವಸೆಯನ್ನು ನೀಡಿದರೂ ಈ ಬಂಡಾಯ ಅಭ್ಯರ್ಥಿಗಳು ಒಪ್ಪಿಿಕೊಂಡಿಲ್ಲ ಎಂದು ತಿಳಿದುಬಂದಿದೆ.

ಸ್ಥಳೀಯ ಕಾರ್ಯಕರ್ತರ ಒತ್ತಾಾಸೆಯಂತೆ ಸ್ಪರ್ಧೆ ಮಾಡಿದ್ದೇವೆ. ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಪಕ್ಷ ನನ್ನ ವಿರುದ್ದ ಏನೇ ಶಿಸ್ತು ಕ್ರಮ ಜರುಗಿಸಿದರೂ ಅದನ್ನು ಎದುರಿಸಲು ಸಿದ್ಧ ಎನ್ನುವ ಮಾತನ್ನು ಬಂಡಾಯ ಅಭ್ಯರ್ಥಿಗಳು ಹೇಳಿದ್ದರು. ವಿಜಯನಗರದಲ್ಲಿ ಕವಿರಾಜ್ ಅರಸ್ ಅವರನ್ನು ಸಚಿವ ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸಂಸದ ದೇವೇಂದ್ರಪ್ಪ ಸೇರಿದಂತೆ ಅನೇಕ ನಾಯಕರು ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ಧ ನಾನು ಸ್ಪರ್ಧೆ ಮಾಡಲು ಸಿದ್ಧ ಎಂದು ಪಕ್ಷದ ಮುಖಂಡರಿಗೆ ಕವಿರಾಜ್ ಸ್ಪಷ್ಟಪಡಿಸಿದ್ದಾಾರೆ.
ಇನ್ನು ಉತ್ತರ ಕರ್ನಾಟಕದಲ್ಲಿ ಭಾರಿ ಸಮಸ್ಯೆೆಯಾಗಿರುವ ಗೋಕಾಕ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಅಶೋಕ್ ಪೂಜಾರಿ ಅವರ ಮನವೊಲಿಕೆಯೂ ವಿಫಲವಾಗಿದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕೇಂದ್ರ ರೈಲ್ವೆೆ ಸಚಿವ ಸುರೇಶ್ ಅಂಗಡಿ ಸೇರಿದಂತೆ ಬೆಳಗಾವಿ ಜಿಲ್ಲಾ ಮುಖಂಡರು ಮನವೊಲಿಸಿದರೂ ಯಾವುದಕ್ಕೂ ಜಗ್ಗದೆ, ಕಣದಲ್ಲಿ ಉಳಿಯುತ್ತೇನೆಂದು ಹೇಳಿರುವುದು ಬಿಜೆಪಿಗೆ ನುಂಗಲಾರದ ತುತ್ತಾಾಗಿ ಪರಿಣಮಿಸಿದೆ.

ಭಿನ್ನಮತಕ್ಕಿಿಲ್ಲ ಅವಕಾಶ
ಕೆಲ ಭಾಗದಲ್ಲಿ ಬಿಜೆಪಿ ನಾಯಕರು ತಮ್ಮ ಅಸಮಾಧಾನ ಹೊರಹಾಕಿದ್ದರೆ, ಇನ್ನೂ ಕೆಲವರು ಬಹಿರಂಗವಾಗಿ ಅಲ್ಲದಿದ್ದರೂ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬಾರದು ಎನ್ನುವ ಮನಸ್ಥಿಿತಿಯಲ್ಲಿದ್ದರು. ಆದರೆ ಇದಕ್ಕೆೆ ಬಿಜೆಪಿ ವರಿಷ್ಠರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ವಿರುದ್ಧ ಅಥವಾ ಬಂಡಾಯ ಪ್ರಚಾರ ಪರ ಮಾಡುವಂತಿಲ್ಲ. ಇಲ್ಲಿಯವರೆಗೆ ಪ್ರಚಾರದಲ್ಲಿ ಭಾಗವಹಿಸದವರು ಕೂಡಲೇ ಕ್ಷೇತ್ರಗಳಿಗೆ ತೆರಳಿ ಪ್ರಚಾರದಲ್ಲಿ ಭಾಗವಹಿಸಬೇಕು. ಇಲ್ಲವೇ ಕಠಿಣ ಕ್ರಮ ಜರುಗಿಸಲಾಗುವುದು ಎನ್ನುವ ಎಚ್ಚರಿಕೆ ನೀಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ನಾನು ಸ್ಥಳೀಯ ನಾಯಕರ ಹಾಗೂ ಕಾರ್ಯಕರ್ತರ ಒತ್ತಾಾಸೆಯಂತೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಿದ್ದೇನೆ. ಕಣದಿಂದ ಹಿಂದೆ ಸರಿಯುವ ಪ್ರಶ್ನೆೆಯೇ ಇಲ್ಲ. ಬಿಜೆಪಿ ಯಾವುದೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧ.
– ಶರತ ಬಚ್ಚೇಗೌಡ, ಹೊಸಕೋಟೆ ಬಂಡಾಯ ಅಭ್ಯರ್ಥಿ

ನನ್ನ ಜತೆ ಸಂಧಾನ ನಡೆಸುವ ಅಗತ್ಯವಿಲ್ಲ. ನನ್ನ ನಿರ್ಧಾರಕ್ಕೆೆ ಈಗಲೂ ಬದ್ಧನಾಗಿದ್ದೇನೆ. ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆೆಯೇ ಇಲ್ಲ.
-ಕವಿರಾಜ್ ಅರಸ್, ವಿಜಯನಗರ ಬಂಡಾಯ ಅಭ್ಯರ್ಥಿ

Leave a Reply

Your email address will not be published. Required fields are marked *