Friday, 7th August 2020

ಆಧಾರ್, ಪಾಸ್‌ಪೋರ್ಟ್, ಪ್ಯಾನ್ ಒಂದರಲ್ಲೇ ಸಾಧ್ಯ :ಶಾ

ನವದೆಹಲಿ: ಮುಂಬರುವ ಅಂದರೆ 2021 ರ ಗಣತಿಯು ಡಿಜಿಟಲೀಕರಣಗೊಳ್ಳಲಿದ್ದು ಇದು ಹಲವು ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು.
ರಜಿಸ್ಟ್ರಾಾರ್ ಜನರಲ್ ಆಫ್ ಇಂಡಿಯಾ ಕಚೇರಿಯ ಹೊಸ ಕಟ್ಟಡದ ಶಿಲಾನ್ಯಾಾಸ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದ ಅವರು, ಈ ನೂತನ ವಿಧಾನವು ಮುಂದಿನ 25 ವರ್ಷಗಳಲ್ಲಿ ದೇಶದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ ಎಂದರು.

2011 ಜನಗಣತಿಯ ಆಧಾರದ ಮೆಲೆ 22 ಕಲ್ಯಾಾಣ ಯೋಜನೆಗಳನ್ನು ರೂಪಿಸಲಾಗಿದೆ.ಆದರೆ ಜನಸಂಖ್ಯಾಾ ಅಂಕಿ ಅಂಶಗಳನ್ನು ಇದು ಇನ್ನಷ್ಟು ಸರಳಗೊಳ್ಳಲಿದೆ.

ಉದಾಹರಣೆಗೆ ಈಗ ಗುರುತಿನ ಚೀಟಿಯಾಗಿ ಆಧಾರ್ , ಪಾಸ್‌ಪೋರ್ಟ್, ಪ್ಯಾಾನ್‌ಕಾರ್ಡ್ ಇತ್ಯಾಾದಿಗಳಿವೆ.ಆದರೆ ಏಕೈಕ, ಬಹೂಪಯೋಗಿ ಗುರುತಿನ ಚೀಟಿಯನ್ನು ರೂಪಿಸಲು ಇದರಿಂದ ಸಾಧ್ಯ ಎಂದು ಅವರು ವಿವರಿಸಿದರು.
ಅದೇ ರೀತಿ ಡಿಜಿಟಲೀಕೃತ ಜನಸಂಖ್ಯಾಾ ಮಾಹಿತಿಯ ಮತ್ತೊೊಂದು ಚಮತ್ಕಾಾರ ನೋಡಿ.ಒಂದೊಮ್ಮೆೆ ವ್ಯಕ್ತಿಿಯೊಬ್ಬನ ಜನನ ವಿವರಗಳನ್ನು ಡಿಜಟಲೀಕರಣಗೊಳಿಸಿದರೆ, ಆತ ಅಥವಾ ಆಕೆ 18 ವರ್ಷದವರಾಗುತ್ತಲೇ ತಾನೇ ತಾನಾಗಿ ಮತದಾರರ ಪಟ್ಟಿಿಗೆ ಹೆಸರು ಸೇರ್ಪಡೆ ಮಾಡಬಹುದು.ಹಾಗೆಯೇ, ಮರಣ ವಾರ್ತೆಯನ್ನು ಅಪ್‌ಡೇಟ್ ನಾನಾ ಸೌಲಭ್ಯಗಳ ಪಟ್ಟಿಿಯಿಂದ ಹೆಸರನ್ನು ತೆಗೆದುಹಾಕಬಹುದು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *