Sunday, 3rd July 2022

ಕಾರು-ಲಾರಿ ನಡುವೆ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು

ಚಿಕ್ಕೋಡಿ: ನಿಪ್ಪಾಣಿಯ ಸ್ಥವನಿಧಿ ಘಾಟ್ ಬಳಿ ಶುಕ್ರವಾರ ಬೆಳಗ್ಗೆ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ನಿಪ್ಪಾಣಿ ನಗರದವರು.

ಅದಗೊಂಡ ಪಾಟೀಲ್​ ಮತ್ತು ಛಾಯಾ ಪಾಟೀಲ್ ದಂಪತಿ, ಇವರ ಮಗ ಮಹೇಶ್ ಪಾಟೀಲ್, ಅದಗೊಂಡ ಪಾಟೀಲ್​ರ ತಾಯಿ ಚಾಪ್ಪಾತಾಯಿ ಮೃತ ದುರ್ದೈವಿಗಳು. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸಪಟ್ಟರು.

5 ದಿನದ ಹಿಂದೆ ಧಾರವಾಡದಲ್ಲಿ ಮದುವೆ ದಿಬ್ಬಣದ ವಾಹನ ಅಪಘಾತಕ್ಕೀಡಾಗಿ ಒಂದೇ ದಿನ 8 ಮಂದಿ ಮೃತಪಟ್ಟಿದ್ದರು. ಇದೇ ಪ್ರಕರಣದಲ್ಲಿ ಸಾವಿನ ಸಂಖ್ಯೆ 12ಕ್ಕೇರಿದೆ. ಈ ಘಟನೆ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.