ತುಮಕೂರು: ಕಲ್ಪತರು ಅಭಿನಯ ತರಬೇತಿ ಶಾಲೆ ಸುಮಾರು ಐದು ವರ್ಷಗಳಿಂದ ರಂಗಾಸಕ್ತರಿಗೆ ಸಿನಿಮಾಸಕ್ತರಿಗೆ ಅಭಿನಯ ಹೇಳಿಕೊಡುವುದರೊಂದಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ.
ಇದೇ ಬರುವ 22 ರಿಂದ 28ರವರೆಗೆ ಅಭಿನಯ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ವ್ಯವಸ್ಥಾಪಕರಾದ ಆನಂದ್ ರವರು ತಿಳಿಸಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ರಂಗಕರ್ಮಿ ಮೈಸೂರು ರಾಮಾನಂದ್ ಹಾಗೂ ಚಲನಚಿತ್ರ ಹಾಸ್ಯನಟಿ ರೇಖಾದಾಸ್, ನೀನಾಸಂ ಪದವೀಧರರಾದ ಕೆ,ಪಿ,ಎಂ ಗಣೇಶಯ್ಯ ರವರು ಅಭಿನಯವನ್ನು ಹೇಳಿಕೊಡುವುದರೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ದೂರದ ಊರುಗಳಿಂದ ಬರುವ ಆಸಕ್ತರಿಗೆ ಊಟ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9108870091