Friday, 19th August 2022

ನಟ ಸಾಯಿ ಧರಮ್’ಗೆ ಮುಂದುವರಿದ ಚಿಕಿತ್ಸೆ

ಹೈದರಾಬಾದ್:ತೆಲುಗು ನಟ ಸಾಯಿ ಧರ್ಮ ತೇಜ್ ಬೈಕ್ ಸವಾರಿ ಮಾಡುವಾಗ ಅಪಘಾತಕ್ಕೀಡಾಗಿದ್ದು, ಅವರನ್ನು ಹೈದರಾಬಾದ್ ನ ಅಪೊಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾಯಿ ಧರಮ್ ಗೆ ಚಿಕಿತ್ಸೆ ಮುಂದುವರೆದಿದ್ದು, ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸಾಯಿ ಧರಮ್ ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಟಾಲಿವುಡ್ ನಟ ಸಾಯಿಧರ್ಮ ತೇಜ್ ಅವರ ಸ್ಪೋರ್ಟ್ಸ್ ಬೈಕ್ ಹೈದರಾಬಾದ್ ನ ಕೇಬಲ್ ಬ್ರಿಡ್ಜ್ ನ ಬಳಿ ಅಪಘಾತಕ್ಕೀಡಾಗಿದ್ದು, ಅಪಘಾತದ ಬಳಿಕ ಪ್ರಜ್ಞಾಹೀನರಾದ ಸಾಯಿ ಧರ್ಮತೇಜ್ ರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಆಸ್ಪತ್ರೆಗೆ ನಟ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿದಂತೆ ಹಲವು ನಟರು ಭೇಟಿ ನೀಡಿ ಸಾಯಿಧರ್ಮ ತೇಜ್ ಆರೋಗ್ಯ ವಿಚಾರಿಸಿ ದ್ದಾರೆ.