Wednesday, 26th February 2020

ಅಧಿವೇಶನ ವೇಳೆ ರೈತ ಸಂಘದ ಪ್ರತಿಭಟನೆ

ಬೆಂಗಳೂರು‘: ರಾಜ್ಯ ಸರಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ರೈತ ಸಂಘ ಹಾಗೂ ಸೇನೆ ತೀರ್ಮಾನಿಸಿದೆ.

ಈ ಕುರಿತು ಪತ್ರಿಿಕಾ ಪ್ರಕಟಣೆ ಹೊರಡಿಸಿರುವ ಸಂಘ ರಾಜ್ಯದಲ್ಲಿ ನಿರಂತರವಾಗಿ ಬರಗಾಲ ಮತ್ತು ಉತ್ತರ ಕರ್ನಾಟಕದಲ್ಲಿ ನೆರೆ ಹಾಗೂ ಪ್ರವಾಹದಿಂದ ಹಲವು ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ. ಸಾಕಷ್ಟು ರೈತರು ಮನೆ, ಮಠ ಕಳೆದುಕೊಂಡು ನಿರಾಶ್ರಿಿತರಾಗಿದ್ದಾರೆ. ಆದರೂ ರಾಜ್ಯ ಮತ್ತು ಕೇಂದ್ರ ಸರಕಾರ ಅವರ ನೆರವಿಗೆ ಧಾವಿಸದೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿ ರೈತ ಸಂಘ ಪ್ರತಿಭಟನೆ ಹಮ್ಮಿಿಕೊಂಡಿದೆ.

ಗುರುವಾರ ಬೆಳಗ್ಗೆೆ 11 ಗಂಟೆಗೆ ಸಂಗೊಳ್ಳಿಿರಾಯಣ್ಣ ರೈಲು ಹೊರಡುವ ಸಾವಿರಾರು ರೈತರಿಂದ ರಾಜ್ಯ ಸರಕಾರ, ಕೇಂದ್ರ ಸರಕಾರದ ವಿರುದ್ದ ಬೃಹತ್ ಪ್ರತಿಭಟನೆ ಹಾಗೂ ವಿಧಾನ ಸೌಧ ಮುತ್ತಿಿಗೆ ಹಾಕಲು ತೀರ್ಮಾನಿಸಿದ್ದಾಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಾಧ್ಯಕ್ಷ ಕೋಡಿಹಳ್ಳಿಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

Leave a Reply

Your email address will not be published. Required fields are marked *