Sunday, 31st May 2020

ವಾಯು ಮಾಲಿನ್ಯ ಅಳೆಯುವ ಆ್ಯಪ್‌ಗಳು

* ಅದಿತಿ ಅಂಚೆಪಾಳ್ಯ

ಇಂದಿನ ದಿನಮಾನಗಳ ಒಂದು ಪ್ರಮುಖ ಆವಶ್ಯಕತೆ ಎಂದರೆ ಪರಿಶುದ್ಧ ಗಾಳಿ. ನಾವು ಉಸಿರಾಡುವ ಗಾಳಿಯು ಮಾಲಿನ್ಯದಿಂದ ತುಂಬಿದ್ದರೆ, ಸಹಜವಾಗಿ, ಶ್ವಾಾಸಕೋಶವು ಕೆಡುತ್ತದೆ, ನಾನಾ ರೀತಿಯ ಸೊಂಕುಗಳು ತೊಂದರೆ ಕೊಡುತ್ತವೆ. ದೂಳು, ಹೊಗೆ, ಮಾಲಿನ್ಯವನ್ನು ನಿರಂತರವಾಗಿ ಸೇವಿಸಿದ ಶ್ವಾಾಸಕೋಶಗಳು ಕ್ರಮೇಣ ತಮ್ಮ ಕಾರ್ಯಕ್ಷಮತೆಯನ್ನೇ ಕಳೆದುಕೊಂಡಾವು. ದುಡಿಯುವ ಅವಕಾಶ ಹೇರಳವಾಗಿದ್ದರೂ, ಸಂಬಳವು ಸಾಕಷ್ಟಿಿದ್ದರೂ, ಸೇವಿಸುವ ಗಾಳಿಯೇ ವಿಷಭರಿತ ಎನಿಸಿದರೆ, ಜೀವನಕ್ಕೆೆ ಅರ್ಥವೆಲ್ಲಿ?

ಇಂತಹದೊಂದು ಸ್ಥಿಿತಿ ಈ ವಾರ ದೆಹಲಿಯಲ್ಲಿ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ಸ್ಮಾಾಗ್, ದೂಳು, ಹೊಗೆ. ಮುಂಜಾನೆ ಮತ್ತು ಸಂಜೆ ಜನರು ಮನೆಯಿಂದ ಹೊರಕ್ಕೆೆ ಬರಬಾರದು ಎಂದು ಸರಕಾರವೇ ಎಚ್ಚರಿಕೆ ನೀಡಿದ್ದು, ಸ್ವಂತ ವಾಹನವಿದ್ದರೂ, ದಿನಬಿಟ್ಟು ದಿನ ಮಾತ್ರ ಉಪಯೋಗಿಸುವ ಅನಿವಾರ್ಯತೆ. ಮನುಷ್ಯನೇ ಮಾಡುತ್ತಿಿರುವ ಕೆಲವು ಚಟುವಟಿಕೆಗಳಿಂದಾಗಿ ಈ ರೀತಿಯ ವಾಯುಮಾಲಿನ್ಯ ದೆಹಲಿಯನ್ನು ತುಂಬಿದ್ದು, ಈ ವಾರ ವಿಶ್ವದ ಅತಿ ಮಾಲಿನ್ಯಭರಿತ ನಗರವಾಗಿ ರೂಪುಗೊಂಡಿದೆ.

ಇಂದು ದೆಹಲಿಯಲ್ಲಾಾಗಿದು, ನಾಳೆ ಇತರ ನಗರಗಳಲ್ಲೂ ಆಗಬಹುದು. ಉತ್ತರ ಭಾರತದಷ್ಟು ವಾಯು ಮಾಲಿನ್ಯ, ನಮ್ಮ ರಾಜ್ಯದಲ್ಲಿ ಇಲ್ಲವಾದರೂ, ಕೆಲವು ನಗರಗಳಲ್ಲಿ ಸಾಕಷ್ಟು ಮಾಲಿನ್ಯ ತುಂಬಿಕೊಂಡಿದೆ. ಕಾರ್ಖಾನೆಗಳು ಹೆಚ್ಚಾಾಗಿರುವ ಭದ್ರಾಾವತಿ, ದಾಂಡೇಲಿ, ರಾಯಚೂರು (ಶಕ್ತಿಿನಗರ) ಮೊದಲಾದ ಊರುಗಳಲ್ಲಿ ವಿಷಗಾಳಿಯ ಪ್ರಮಾಣ ಸಾಕಷ್ಟಿಿದೆ. ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ, ವಾಹನಗಳಿಂದ ಉಂಟಾಗುವ ಮಾಲಿನ್ಯ ಸಾಕಷ್ಟು ಪ್ರಮಾಣದಲ್ಲಿದೆ.

ನಮ್ಮ ಸುತ್ತಲಿನ ವಾತಾವರಣದ ಮಾಲಿನ್ಯವನ್ನು ಅಳೆಯಲು ಕೆಲವು ಆ್ಯಪ್‌ಗಳು ಲಭ್ಯ.


1. ಏರ್ ಕ್ವಾಾಲಿಟಿ – ಏರ್ ವಿಶುವಲ್ : ಈ ಆ್ಯಪ್‌ನ್ನು ಬಳಸಿ, ರಿಯಲ್ ಟೈಮ್ ಮಾಹಿತಿ, ಹಿಂದಿನ ಮತ್ತು ಮುಂದಿನ ದಿನಗಳ ಮಾಹಿತಿಯನ್ನು ಪಡೆಯಬಹುದು. ಒಂದು ವಾರದ ವಾತಾವರಣ ಮಾಲಿನ್ಯದ ಮುನ್ಸೂಚನೆಯನ್ನು ಸಹ ಈ ಆ್ಯಪ್ ನೀಡುತ್ತದೆ.
2. ಏರ್ ಕ್ವಾಾಲಿಟಿ ಇಂಡೆಕ್‌ಸ್‌ ಬ್ರೀಜೋಮೀಟರ್ : ಪ್ರತಿ ಬೀದಿ, ಬಡಾವಣೆ ಮತ್ತು ನಗರಗಳ ವಾಯುಮಾಲಿನ್ಯದ ಮಟ್ಟವನ್ನು ಈ ಆ್ಯಪ್ ನೀಡುತ್ತದೆ. ವಿವಿಧ ಬಡಾವಣೆಗಳ ಮಾಲಿನ್ಯದ ಮಟ್ಟವನ್ನು ನೀಡುವುದು ಇದರ ವಿಶೇಷ. ಅಗ್ನಿಿ ಪ್ರಕೋಪ ಮತ್ತು ದಿನನಿತ್ಯದ ವಾತಾವರಣದ ಮುನ್ಸೂಚನೆಯನ್ನು ಸಹ ಈ ಆ್ಯಪ್ ನೀಡುತ್ತದೆ.
3. ಏರ್ ಕ್ವಾಾಲಿಟಿ ಬೈ ಪ್ಲೂೂಮ್ ಲ್ಯಾಾಬ್‌ಸ್‌: ಪ್ರತಿಯೊಂದು ನಗರದ ವಾಯುಮಾಲಿನ್ಯದ ಮಟ್ಟವನ್ನು ಈ ಆ್ಯಪ್ ನೀಡುತ್ತದೆ. 24 ಗಂಟೆಗಳ ವಾಯುಮಾಲಿನ್ಯದ ವಿವರದ ಜತೆಯಲ್ಲೇ, ಪ್ರತಿ ಗಂಟೆಯ ವಾಯುಮಾಲಿನ್ಯದ ಪ್ರಮಾಣದ ಮುನ್ಸೂಚನೆ ನೀಡುತ್ತದೆ.
4. ಏರ್ ಕ್ವಾಾಲಿಟಿ : ರಿಯಲ್ ಟೈಮ್ ಎಕ್ಯುಐ : ವಾತಾವರಣದಲ್ಲಿರುವ ಕಲ್ಮಶದ ಮಟ್ಟವನ್ನು, ಗಂಟೆಗೊಮ್ಮೆೆ ಈ ಆ್ಯಪ್ ನೀಡಬಲ್ಲದು. ಜತೆಗೆ ಜಗತ್ತಿಿನ ಸುಮಾರು 60 ದೇಶಗಳ ವಿವಿಧ ನಗರಗಳ ವಾಯುಮಾಲಿನ್ಯದ ವಿವರಗಳನ್ನು ನೀಡುತ್ತದೆ.

Leave a Reply

Your email address will not be published. Required fields are marked *