Thursday, 3rd December 2020

ಹುಬ್ಬಳ್ಳಿ ತಿರುಪತಿ ವಿಮಾನ ಸಂಚಾರ ಪುನಾರಂಭ

ಹುಬ್ಬಳ್ಳಿ: ಬರುವ ಜನವರಿ 1 ರಿಂದ ಹುಬ್ಬಳ್ಳಿ ತಿರುಪತಿ ವಿಮಾನ ಸಂಚಾರ ಆರಂಭವಾಗಲಿದೆ. ಸ್ಟಾರ್ ಏರ್ ವಿಮಾನ ಸಂಚಾರ ವನ್ನು ಪುನಾರಂಭ ಮಾಡಲಿದೆ.

ಗುರುವಾರ ಹೊರತುಪಡಿಸಿ ಆರು ದಿನ ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ ಸಂಚಾರ ಇರಲಿದೆ. ಬೆಳಿಗ್ಗೆ 11.55 ಕ್ಕೆ ತಿರುಪತಿ ಯಿಂದ ಹೊರಡುವ ವಿಮಾನ ಮಧ್ಯಾಹ್ನ 1 ಕ್ಕೆ ಹುಬ್ಬಳ್ಳಿಗೆ ಬರಲಿದೆ. ಮಧ್ಯಾಹ್ನ 1.25 ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ ಮಧ್ಯಾಹ್ನ 2.30 ಕ್ಕೆ ತಿರುಪತಿ ತಲುಪಲಿದೆ.

ಕೊರೊನಾ ವೈರಸ್ ಲಾಕಡೌನ್ ನಂತರ ಸ್ಟಾರ್ ಏರ್ ಸಂಸ್ಥೆ ಹುಬ್ಬಳ್ಳಿಯಿಂದ ತಿರುಪತಿ ವಿಮಾನ ಸಂಚಾರ ಪುನಾರಂಭಿಸಿರುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *