Monday, 13th July 2020

ಅಜ್ಜ ನೆಟ್ಟ ಆಲದ ಮರ ಎಂದು..

ಕಾಂಗ್ರೆಸ್ ಈಗ ಐಸಿಯುನಲ್ಲಿ ಇದೆ. ಇದು ಮತ್ತೆ ಕಾಯಕಲ್ಪಗೊಂಡು ಮೈಕೊಡವಿ ನಿಲ್ಲಬೇಕು ಎನ್ನುವುದೇ ಭಾರತೀಯರ ಆಶಯ. ಒಂದು ಪಕ್ಷದಲ್ಲಿ ಏಳು-ಬೀಳುಗಳು ಸಮಾನ್ಯ. ಒಂದು ಕಾಲದಲ್ಲಿ ಕೇವಲ ಎರಡು ಸಂಸದರನ್ನು ಹೊಂದಿದ ಬಿಜೆಪಿ ಪಕ್ಷ ಇಂದು 303 ಕ್ಕೆೆ ಏರಿರುವುದು ಕಾರ್ಯಕರ್ತರ ಸತತ ಪ್ರಯತ್ನ ಮತ್ತು ನೇತಾರರ ಪಕ್ಷ ನಿಷ್ಠೆೆಯಿಂದ. ಇಂದು ಅಲ್ಲಿ ಒಂದು ಸ್ಥಾಾನವೂ ಮೊದಲೇ ನಿಶ್ಚಿಿತವಲ್ಲ. ಮುಂಚೂಣಿಯ ಅಗ್ರನಾಯಕ ನಿವೃತ್ತನಾದರೆ ಅಥವಾ ಕಾರಣಾಂತರದಿಂದ ಸ್ಥಾಾನ ತ್ಯಜಿಸಿದರೆ, ಆ ಸ್ಥಾಾನ ತುಂಬಲು ಹಲವರು ಕ್ಯೂನಲ್ಲಿ ಇದ್ದಾರೆ. ನಾಳೆ ನಮ್ಮ ನಾಯಕರು ಯಾರು ಎನ್ನುವ ಚಿಂತೆಗೆ ಕಾರಣವಿಲ್ಲ. ಸುಷ್ಮಾಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಿ ಅಂತಹ ಮಹಾನಾಯಕರು ಚುನಾವಣೆಗೆ ನಿಲ್ಲದೆ ಇದ್ದರೂ, ಅವರ ಸ್ಥಾಾನವನ್ನು ಬೇರೆಯವರು ಅಷ್ಟೇ ಸಮರ್ಥವಾಗಿ ತುಂಬಿದ್ದಾರೆ. ಅಷ್ಟೇಕೆ ವಾಜಪೇಯಿ ನಂತರ ಪ್ರಧಾನಿ ಆದ ಮೋದಿ ರಾಷ್ಟ್ರಮಟ್ಟದಲ್ಲಿ ಮಿಂಚಿರಲಿಲ್ಲ. ದಿಢೀರ್ ಪ್ರಧಾನಿಯಾದರು. ಉತ್ತರ ಪ್ರದೇಶದ ಚುನಾವಣೆಯ ಅಭೂತ ಪೂರ್ವ ಯಶಸ್ಸಿಿನ ನಂತರವೇ ಅಮಿತ್ ಶಾ ಹೆಸರು ದೇಶ ಕೇಳಿದ್ದು. ಇಂತಹ ಸಮರ್ಥ ನಾಯಕರ ತಂಡ ಹೊಂದುವುದು ಬಹುಮುಖ್ಯ. ಆದರೆ ಕಾಂಗ್ರೆೆಸ್‌ನಲ್ಲಿ ಒಂದು ಕುಟುಂಬ ಬಿಟ್ಟು ಅನ್ಯನಾಯಕರು ಬೆಳೆಯಲು ಆಸ್ಪದವಿಲ್ಲ. ತಮ್ಮ ಸಾಮರ್ಥ್ಯದಿಂದ ಬೆಳೆದ ದೇವರಾಜ ಅರಸು, ವೀರೇಂದ್ರ ಪಟೇಲ್‌ರನ್ನು ದೆಹಲಿ ಸಹಿಸಲಿಲ್ಲ. ರಾಹುಲ್‌ಗಾಂಧಿ ಸೋಲಿನಿಂದ ಧೃತಿಗೆಟ್ಟು ರಾಜೀನಾಮ ನೀಡಿ ಕೆಲವು ತಿಂಗಳು ಕಳೆದರೂ, ಆ ಸ್ಥಾಾನ ತುಂಬಲು ಸಾಧ್ಯವಾಗದಿರುವುದು ಆರೋಗ್ಯಕರ ಲಕ್ಷಣವಲ್ಲ. ಪಕ್ಷದ ಕೆಲವು ಹಿತಾಸಕ್ತಿಿಗಳು ತಮ್ಮದೇ ಕಾರಣಕ್ಕಾಾಗಿ ಕುಟುಂಬ ರಾಜಕಾರಣದಿಂದ ಹೊರಬರಲು ಸಿದ್ಧರಿಲ್ಲ. ಆಡಳಿತ ಪಕ್ಷದ ನಾಯಕರು ತಡವರಿಸುವಂತೆ ಲೋಕಸಭೆಯಲ್ಲಿ ಘರ್ಜಿಸುವ ಮಲ್ಲಿಕಾರ್ಜುನ ಖರ್ಗೆ ಅಂತಹ ಸಮರ್ಥರಿಗೆ ಅಧ್ಯಕ್ಷ ಪಟ್ಟ ಕಟ್ಟಬೇಕಿತ್ತು. ಆದರೆ ಪಕ್ಷಕ್ಕೆೆ ಸೋಲು ಮುಖ್ಯವಾಗದೆ ಹೋಗಿರುವುದು ವಿಷಾದಕರ. ಇದು ದೇಶದ ದೃಷ್ಟಿಿಯಿಂದ ಆರೋಗ್ಯಕರ ಬೆಳವಣಿಗೆ ಅಲ್ಲ. ಆಡಳಿತ ಪಕ್ಷ ಅದಕ್ಷತೆಯಿಂದ ಆಡಳಿತ ನೆಡೆಸಿದಾಗ ಮತ್ತೊೊಂದು ರಾಷ್ಟ್ರೀಯ ಪಕ್ಷ ಪರ್ಯಾಯವಾಗಿ ಇರಬೇಕು. ಈಗ ಕಾಂಗ್ರೆೆಸ್ ಬಿಟ್ಟರೆ ಮತ್ತೊೊಂದು ಪರ್ಯಾಯ ಪಕ್ಷವಿಲ್ಲ. ಈಗಲಾದರೂ ಕಾಂಗ್ರೆೆಸ್ ಪ್ರಬುದ್ಧ ನಾಯಕರು ಮೈ ಕೊಡವಿ ಎದ್ದು ನಿಲ್ಲಬೇಕು. ಪಕ್ಷಕ್ಕೆೆ ಹೊಸ ಚೈತನ್ಯ ತುಂಬಿ ಮತ್ತೆೆ ಅಧಿಕಾರ ಹಿಡಿಯುವ ಪ್ರಯತ್ನ ಮಾಡಬೇಕು. ಇದು ಪ್ರಜಾಪ್ರಭುತ್ವದ ದೃಷ್ತಿಿಯಿಂದ ಅತಿ ಅಗತ್ಯ. ತಾತ ನೆಟ್ಟ ಮರ ಎಂದು ಒಂದು ಕುಟುಂಬಕ್ಕೆೆ ಜೋತು ಬಿದ್ದರೆ, ಪಕ್ಷಕ್ಕೆೆ ಮಾತ್ರವಲ್ಲ ದೇಶಕ್ಕೇ ಮಾರಕ.
ಸತ್ಯಬೋಧ, ಬೆಂಗಳೂರು 85

ರಾಜ್ಯದಲ್ಲಿ ಜಲ ಪ್ರಳಯ
ಉತ್ತರ ಕರ್ನಾಟಕದ ಮಳೆಯಿಂದಾಗಿ ಎಲ್ಲಿ ನೋಡಿದರೂ ನೀರಿನಿಂದ ತುಂಬಿಹೋಗಿದೆ. ಎಲ್ಲಿ ನೋಡಿದರೂ ಮುರಿದು ಬೀಳುತ್ತಿಿರುವ ಮರಗಳು, ವಿದ್ಯುತ್ ಪೂರೈಕೆ ಕಂಬಗಳು, ಕಟ್ಟಡಗಳು ಮತ್ತು ಕುಸಿಯುತ್ತಿಿರುವ ರಸ್ತೆೆಗಳು, ಡ್ಯಾಾಮ್‌ಗಳು ಇದರಿಂದ ಉತ್ತರ ಕರ್ನಾಟಕದಲ್ಲಿ ಅನೇಕ ಜನರು ತಮ್ಮ ಮನೆ-ಮಠ ಕಳೆದುಕೊಂಡು ಅನಾಥ ಭಾವದ ನಡುವೆಯೂ ತಾವು ಸಾಕಿ ಸಲುಹಿದ ಮೂಕ ಪ್ರಾಾಣಿಗಳನ್ನು ರಕ್ಷಿಿಸಿಕೊಂಡಿದ್ದಾಾರೆ. ಕೆಲವು ಪ್ರಾಾಣಿಗಳು ಪ್ರವಾಹಕ್ಕೆೆ ಕೊಚ್ಚಿಿ ಹೋಗಿದ್ದು ನೆನೆದು ಕಣ್ಣೀರು ಹಾಕುತ್ತಿಿದ್ದಾಾರೆ. ದನ-ಕರುಗಳಿಗೆ ಮೇವಿನ ಕೊರತೆಯಿಂದಾಗಿ ನರಳುತ್ತಿಿವೆ. ಮೂಕ ಪ್ರಾಾಣಿಗಳ ಸಂಕಷ್ಟ ನೋಡಲಾಗುತ್ತಿಿಲ್ಲ. ಕೆಲವು ಸಂಘ-ಸಂಸ್ಥೆೆಗಳು ಆಹಾರ ಧಾನ್ಯ, ಜೀವನಾವಶ್ಯಕ, ದಿನಬಳಕೆಯ ವಸ್ತುಗಳನ್ನು ಖರೀದಿಸಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡುತ್ತಿಿರುವುದು ಶ್ಲಾಾಘನೀಯ. ಅದರಲ್ಲಿ ಪ್ರವಾಹದಲ್ಲಿ ಸಿಲುಕಿರುವವರನ್ನು ತಮ್ಮ ಜೀವದ ಹಂಗು ತೊರೆದು ಕಾಪಾಡುತ್ತಿಿರುವ ಸೈನಿಕರು, ಪೊಲೀಸರು ಕಾರ್ಯವನ್ನು ಎಂದೂ ಮರೆಯುವಂತಿಲ್ಲ. ಇವರು ಒಂದು ರೀತಿ ಸಂತ್ರಸ್ತರಿಗೆ ಪುನರ್ಜನ್ಮ ನೀಡಿದ್ದಾಾರೆ.
ನಂದನ್.ಟಿ.ಎಮ್., ದೇವನಹಳ್ಳಿಿ.

Leave a Reply

Your email address will not be published. Required fields are marked *