Monday, 13th July 2020

ಆಕಾಶವಾಣಿ ಆಲಿಸುವಿಕೆ ಆರೋಗ್ಯಕ್ಕೆ ಒಳ್ಳೆಯದು

* ಶ್ರೀವತ್ಸ ಜೋಶಿ

srivathsajoshi@vishwavani.news

ಅಭ್ಯಾಾಸ ಒಳ್ಳೆೆಯದಿರಲಿ ಕೆಟ್ಟದಿರಲಿ ಇನ್ನೊೊಬ್ಬರಿಗೆ ಹತ್ತಿಿಸುವುದು (ಹಿಡಿಸುವುದು) ಸುಲಭವಾ, ಅವರಿಂದ ಬಿಡಿಸುವುದು ಸುಲಭ? ನನಗನಿಸುತ್ತದೆ ಎರಡೂ ಕಷ್ಟವೇ. ಹೆಚ್ಚೆೆಂದರೆ ನಾವು ಪ್ರೇರಣೆ ನೀಡಬಹುದು, ಸ್ಫೂರ್ತಿ ತುಂಬಬಹುದು, ಪೂರಕ ಮಾಹಿತಿ ಒದಗಿಸಬಹುದು, ಪರಂತು ಒಂದು ನಿರ್ದಿಷ್ಟ ಅಭ್ಯಾಾಸವನ್ನು ಹಿಡಿಯುವುದು ಅಥವಾ ಬಿಡುವುದು ಅವರವರೇ ಮಾಡಬೇಕಾದ ಕೆಲಸ. ಒತ್ತಾಾಯದಿಂದ ಅಲ್ಲ, ಅಂತರಾಳದಿಂದ ಆಗಬೇಕಾದ್ದು. ‘ಕುದುರೆಯನ್ನು ನೀರಿದ್ದಲ್ಲಿಗೆ ಕರೆದುಕೊಂಡು ಹೋಗಬಲ್ಲೆೆವೇ ಹೊರತು ಅದು ನೀರನ್ನು ಕುಡಿಯುವಂತೆ ಮಾಡುವುದು ನಮ್ಮಿಿಂದ ಸಾಧ್ಯವಿಲ್ಲ’ ಅಂತೀವಲ್ವಾಾ ಹಾಗೆಯೇ ಈ ವಿಚಾರ ಕೂಡ.
ಯಾಕೆ ಈಗ ಇದರ ಪ್ರಸ್ತಾಾವ ಬಂತೆಂದರೆ ನಿಮಗೊಂದು ಒಳ್ಳೆೆಯ ಅಭ್ಯಾಾಸವನ್ನು ಹತ್ತಿಿಸುವ ಪ್ರಯತ್ನ ಮಾಡುತ್ತಿಿದ್ದೇನೆ. ಅದೇ, ಈ ಲೇಖನದ ಶೀರ್ಷಿಕೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಆಗಲೇ ನೀವು ಓದಿಕೊಂಡಿರುವಂತೆ, ಆಕಾಶವಾಣಿಯನ್ನು ಆಲಿಸುವ ಅಭ್ಯಾಾಸ.

ಆಕಾಶವಾಣಿ ಅಂದರೆ ಒಟ್ಟಾಾರೆಯಾಗಿ ರೇಡಿಯೊ ಕೇಳುವುದು ಅಂತಲ್ಲ, ಖಾಸಗಿ ಎಫ್‌ಎಂ ವಾಹಿನಿಗಳನ್ನಂತೂ ಅಲ್ಲವೇಅಲ್ಲ. ನಾನು ಹೇಳುತ್ತಿಿರುವುದು ಆಕಾಶವಾಣಿಯ ಅರ್ಥಾತ್ ‘ಆಲ್ ಇಂಡಿಯಾ ರೇಡಿಯೊ’ದ ಸ್ವಾಾಮ್ಯದಲ್ಲಿರುವ, ಕರ್ನಾಟಕದ ಕನ್ನಡ ಬಾನುಲಿ ಕೇಂದ್ರಗಳ ಬಗ್ಗೆೆ ಮಾತ್ರ. ಇದನ್ನು ಪರದೇಶದಲ್ಲಿ ಕುಳಿತುಕೊಂಡು ನಮಗೆ ಉಪದೇಶಿಸಲಿಕ್ಕೆೆ ನೀವ್ಯಾಾರು ಎಂಬ ಏಳಬಹುದು. ಸಹಜವೇ, ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಈಗ ಆಕಾಶವಾಣಿಯ ಕನ್ನಡ ನಿಲಯಗಳೂ ಹೇಗೆ ಜಗತ್ತಿಿನೆಲ್ಲೆೆಡೆ ಕೇಳಲಿಕ್ಕೆೆ ಸಿಗುತ್ತಿಿವೆ ಎಂಬ ಮಾಹಿತಿ ಹಂಚಿಕೊಳ್ಳುವುದು ಈ ಲೇಖನದ ಮುಖ್ಯ ಉದ್ದೇಶ.
ಜತೆಗೇ ಆಕಾಶವಾಣಿಯ ಕಾರ್ಯಕ್ರಮಗಳು ಈಗಲೂ ಎಷ್ಟು ಸತ್ತ್ವಯುತ, ಮೌಲ್ಯಯುತ, ಜ್ಞಾಾನದಾಯಕ, ಮತ್ತು ಉಪಯುಕ್ತವಾಗಿ ಇವೆ ಎಂಬುದನ್ನು ಸೋದಾಹರಣ ತಿಳಿಸುವುದು ಇನ್ನೊೊಂದು ಉದ್ದೇಶ. ರೇಡಿಯೊ ಕೇಳುವುದು, ಅದರಲ್ಲೂ ಆಕಾಶವಾಣಿಯ ಕಾರ್ಯಕ್ರಮಗಳನ್ನು ಟ್ಯೂನ್‌ಇನ್ ಮಾಡುವುದು ಮರೆತೇಹೋಗಿದೆ, ದಶಕಗಳೇ ಸಂದವೇನೋ ರೇಡಿಯೊ ಕೇಳದೆ ಆಕಾಶವಾಣಿಯ ‘ರುಚಿ’ಯನ್ನು ಮತ್ತೊೊಮ್ಮೆೆ ಪರಿಚಯಿಸಬೇಕು ಎನ್ನುವುದು ನನ್ನ ಮಹದಾಸೆ. ಹಾಗಂತ ಉಪದೇಶ ಮಾಡುವುದಾಗಲೀ, ಉಪದೇಶದ ಧಾಟಿಯಲ್ಲಿ ಬರೆಯುವುದಾಗಲೀ ನನ್ನ ಜಾಯಮಾನವಲ್ಲ. ನೋಡ್ರಪ್ಪಾಾ ಇಂಥದೊಂದು ಸೌಕರ್ಯ ಈಗ ಶುರುವಾಗಿದೆ, ಇದರ ಪ್ರಯೋಜನ ಪಡೆದುಕೊಳ್ಳಿಿ ಎಂದು ಫಲಾನುಭವದಿಂದ ತಿಳಿಸುವುದನ್ನಷ್ಟೇ ಮಾಡಬಲ್ಲೆೆ. ‘ನೀವು ಕುದುರೆಯಾಗಿ. ನಾನು ನಿಮಗೆ ನೀರು ಕುಡಿಸುತ್ತೇನೆ’ ಎನ್ನಲಾರೆ.

ಪೀಠಿಕೆ ಇಷ್ಟು ಸಾಕು. ಈಗಿನ್ನು ವಿಷಯಕ್ಕೆೆ ಬರೋಣ. ಆಕಾಶವಾಣಿಯ ಬೆಂಗಳೂರು ಕೇಂದ್ರದ ಮುಖ್ಯ ವಾಹಿನಿ, ವಿವಿಧ ಭಾರತಿ, ಎಫ್‌ಎಂ ರೈನ್‌ಬೋ ಕಾಮನಬಿಲ್ಲು- ಇವಿಷ್ಟು ಮಾತ್ರವಲ್ಲದೆ ‘ಅಮೃತವರ್ಷಿಣಿ’ ಎಂಬ ವಾಹಿನಿ, ಸಂಪೂರ್ಣವಾಗಿ ಶಾಸ್ತ್ರೀಯ ಸಂಗೀತ ಪ್ರಸಾರಕ್ಕೆೆ ಮುಡಿಪಾದದ್ದು, ಅಂತರಜಾಲದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ಪ್ರಪಂಚದಲ್ಲಿ ಎಲ್ಲಿದ್ದರೂ ಕೇಳಬಹುದು ಎಂದು ಮೂರು ವರ್ಷಗಳ ಹಿಂದೆ ಇದೇ ಅಂಕಣದ ಒಂದು ಲೇಖನದಲ್ಲಿ ಬರೆದಿದ್ದೆೆ. ಆಗಿನ್ನೂ ಆಕಾಶವಾಣಿಯ ಆನ್‌ಲೈನ್ ಸ್ಟ್ರೀಮಿಂಗ್ ಒಂಥರದಲ್ಲಿ ಪ್ರಯೋಗ ಹಂತದಲ್ಲಷ್ಟೇ ಇತ್ತು. ತುಂಬ ಆಸೆಯಿಂದ ಹುಡುಕಿಕೊಂಡು ವೆಬ್ ಬ್ರೌೌಸರ್‌ನಲ್ಲಿ ಆ ಲಿಂಕ್ ಕ್ಲಿಿಕ್ ಮಾಡಿದರೆ ‘ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ’ ಎಂಬಂತೆ ಕೆಲವೊಮ್ಮೆೆ ವಾರಗಟ್ಟಲೆ ಯಾವ ಶಬ್ದವೂ ಮೂಡಿಬರದಿದ್ದಾಾಗ ಬಹುಶಃ ವೆಬ್ ಸ್ಟ್ರೀಮಿಂಗ್ ನಿಲ್ಲಿಸಿಬಿಟ್ಟರೇನೋ ಅಂದುಕೊಂಡದ್ದೂ ಇದೆ. ಈ ಮೌನವ ತಾಳೆನು… ಎಂದು ಗೊಣಗಿದ್ದೂ ಇದೆ. ಬೇರೆ ಕೆಲವು ಖಾಸಗಿ ವೆಬ್‌ಸೈಟುಗಳು ಮತ್ತು ಆ್ಯಪ್‌ಗಳು ಕನ್ನಡದ ಕೆಲವು ಖಾಸಗಿ ರೇಡಿಯೊ ಕೇಂದ್ರಗಳ ಲೈವ್ ಸ್ಟ್ರೀಮಿಂಗ್ ಮಾಡುತ್ತಿಿದ್ದವಾದರೂ ಅವುಗಳಿಗೆ ಆಕಾಶವಾಣಿಯ ಖದರಿಲ್ಲ, ಆಕಾಶವಾಣಿಗಷ್ಟೇ ಇರುವ ವಿಶಿಷ್ಟ ಸಾಂಸ್ಕೃತಿಕ ಸಹಿಯಿಲ್ಲ ಸಿಹಿಯಿಲ್ಲ, ಗತ್ತಿಿಲ್ಲ ಗಾಂಭೀರ್ಯವಿಲ್ಲ. ಆಸ್ಥೆೆಯಿಂದ ದಿನಾ ಕೇಳಬೇಕು ಎಂದೆನಿಸುವ ಸರಕು ಅದಲ್ಲ.
ಆದರೆ ಹಾಗಲ್ಲ. ಕೆಲ ತಿಂಗಳುಗಳಿಂದೀಚೆಗೆ ಪ್ರಸಾರಭಾರತಿಯು ಆಕಾಶವಾಣಿ ಕಾರ್ಯಕ್ರಮಗಳ ಆನ್‌ಲೈನ್ ಸ್ಟ್ರೀಮಿಂಗ್‌ಅನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಿಕೊಂಡಿದೆ. ಭಾರತದ ಮೆಟ್ರೊೊ ನಗರಗಳ ಆಕಾಶವಾಣಿ ಕೇಂದ್ರಗಳು, ಪ್ರಾಾಂತೀಯ ಭಾಷೆಗಳಲ್ಲಿ ದಿನದ 24 ಗಂಟೆಗಳೂ ಪ್ರಸಾರವಿರುವ ಕೇಂದ್ರಗಳು, ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ಇರುವ ನೂರಾರು ಆಕಾಶವಾಣಿ ಕೇಂದ್ರಗಳ ಪ್ರಸಾರವನ್ನು ಲೈವ್ ಸ್ಟ್ರೀಮ್‌ನಲ್ಲಿ ಕೇಳುವ ಸೌಲಭ್ಯ ಒದಗಿಸಿಕೊಟ್ಟಿಿದೆ. ಪ್ರತಿದಿನವೂ ಎಂಬಂತೆ ಇನ್ನಷ್ಟು ನಿಲಯಗಳನ್ನು ಪಟ್ಟಿಿಗೆ ಸೇರಿಸುತ್ತಲೇ ಇದೆ. ಈ ಲೇಖನವನ್ನು ನಾನು ಬರೆಯುವ ಹೊತ್ತಿಿಗೆ ಕರ್ನಾಟಕದ ಕೇಂದ್ರದ ಮುಖ್ಯ ವಾಹಿನಿ, ವಿವಿಧ ಭಾರತಿ, ಕಾಮನಬಿಲ್ಲು, ಅಮೃತವರ್ಷಿಣಿ ಇವಿಷ್ಟೇ ಅಲ್ಲದೆ ಮೈಸೂರು, ಹಾಸನ, ಚಿತ್ರದುರ್ಗ, ಮತ್ತು ಧಾರವಾಡ ನಿಲಯಗಳು ಪಟ್ಟಿಿಯಲ್ಲಿ ರಾರಾಜಿಸುತ್ತಿಿವೆ. ಮಂಗಳೂರು, ಮಡಿಕೇರಿ, ಭದ್ರಾಾವತಿ, ವಿಜಯಪುರ, ಹೊಸಪೇಟೆ ಮುಂತಾದುವೂ ಸದ್ಯದಲ್ಲೇ ಸೇರಿಕೊಳ್ಳುವ ನಿರೀಕ್ಷೆಯಿದೆ. ಕರ್ನಾಟಕದಲ್ಲೇ ಇರುವವರಿಗೆ ಇದರ ಮಹತ್ತ್ವ ಅಷ್ಟೇನೂ ಭಾಸವಾಗಲಿಕ್ಕಿಿಲ್ಲ, ಆದರೆ ಕನ್ನಡ ನಾಡಿನಿಂದ ಸಾವಿರಾರು ಮೈಲುಗಳ ದೂರದಲ್ಲಿರುತ್ತ, ಕರ್ನಾಟಕದಿಂದ ಮೂಡಿ ಬರುವ ಕನ್ನಡ ಬಾನುಲಿ ನಿಲಯಗಳ ಕಾರ್ಯಕ್ರಮಗಳನ್ನು ಲೈವ್ ಆಗಿ ಕೇಳುವ ಹಿಗ್ಗು ಸಂಭ್ರಮವನ್ನು ಬಲ್ಲವನೇ ಬಲ್ಲ.

ಈ ಸಂಭ್ರಮವನ್ನು ನಿಮ್ಮದಾಗಿಸುವುದು ಹೇಗೆ? ತಿಳಿಸುತ್ತೇನೆ. ಎರಡು ಬೇರೆಬೇರೆ ಆಯ್ಕೆೆಗಳಿವೆ. ಒಂದು, ನಿಮ್ಮ ಸ್ಮಾಾರ್ಟ್‌ಫೋನ್‌ನಲ್ಲಿ ನೀವು ಪ್ರಸಾರ ಭಾರತಿಯ ಉಚಿತ ಆ್ಯಪ್ ಸ್ಥಾಾಪಿಸಿಕೊಳ್ಳಬೇಕು. ನಿಮ್ಮದು ಆ್ಯಂಡ್ರಾಾಯ್‌ಡ್‌ ಫೋನ್ ಆದರೆ ಗೂಗಲ್ ಪ್ಲೇಸ್ಟೋೋರ್‌ನಲ್ಲಿ, ಐಫೋನ್ ಅಂತಾದರೆ ಆ್ಯಪಲ್ ಆ್ಯಪ್ ಸ್ಟೋೋರ್‌ನಲ್ಲಿ *ಘೆಛಿಡಿ ್ಞ ಅಐ್ಕ ಎಂದು ಹುಡುಕಿದಾಗ ಸಿಗುವ, ನಾಲ್ಕು ಸಿಂಹಗಳ ರಾಷ್ಟ್ರಲಾಂಛನ ಐಕಾನ್ ಇರುವ ಆ್ಯಪ್ ಅದು. ಇನ್ಸ್ಟಾಾಲ್ ಮಾಡಿಕೊಂಡ ಮೇಲೆ ಅದರಲ್ಲಿ ರೇಡಿಯೊ ಸ್ಕ್ರೀನ್‌ನ ಈಶಾನ್ಯ ಮೂಲೆಯಲ್ಲಿರುವ ಹಸುರು ಬಣ್ಣದ ರೇಡಿಯೊ ಚಿತ್ರವನ್ನು ಕ್ಲಿಿಕ್ಕಿಿಸಬೇಕು. ಆಗ ಸುಮಾರು 80ಕ್ಕಿಿಂತಲೂ ಹೆಚ್ಚು ಬೇರೆಬೇರೆ ನಿಲಯಗಳ ಪಟ್ಟಿಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನಿಮಗೆ ಬೇಕಾದ ನಿಲಯವನ್ನು ಆಯ್ದುಕೊಂಡರಾಯಿತು. ದಿನದ 24 ಗಂಟೆಗಳೂ ಪ್ರಸಾರವಿರುವವು ಕೆಲವು ಮಾತ್ರ. ಮಿಕ್ಕವೆಲ್ಲ ಸರಿಸುಮಾರಾಗಿ 18 ಗಂಟೆ ನಿರಂತರ ಪ್ರಸಾರದವು. ಭಾರತೀಯ ಸಮಯ ಬೆಳಗ್ಗೆೆ 6 ಗಂಟೆಯಿಂದ ಮಧ್ಯರಾತ್ರಿಿಯವರೆಗೆ. ನೀವಿರುವ ದೇಶ/ಪ್ರದೇಶದ ಸ್ಥಳೀಯ ಸಮಯಕ್ಕೆೆ ಅದು ಹೇಗೆ ತಾಳೆಯಾಗುತ್ತದೆಂದು ಗಮನದಲ್ಲಿಟ್ಟರಾಯ್ತು. ಭಾರತೀಯ ಕಾಲಮಾನಕ್ಕಿಿಂತ ಗಂಟೆಗಳಷ್ಟು ಹಿಂದಿರುವ, ಅಮೆರಿಕದ ಪೂರ್ವ ಕರಾವಳಿಯಲ್ಲಿ ನಾನು ಶುಕ್ರವಾರ ರಾತ್ರಿಿ ಎಂಟೂವರೆಗೆ ಆ್ಯಪ್‌ನಲ್ಲಿ ಧಾರವಾಡ ಆಕಾಶವಾಣಿ ಕ್ಲಿಿಕ್ ಮಾಡಿದರೆ ಅಲ್ಲಿ ಶನಿವಾರ ಮುಂಜಾನೆ ಆರಕ್ಕೆೆ ಆರಂಭವಾಗುವ ಪ್ರಸಾರ- ‘ಕೂ…’ದಿಂದ ಹಿಡಿದು, ವಂದೇ ಮಾತರಂ, ಶಹನಾಯ್ ಸಂಗೀತದ ಮಂಗಲ ಧ್ವನಿ, ಕಾರ್ಯಕ್ರಮ ವಿವರಣೆ, ಇಂಗ್ಲಿಿಷ್ ವಾರ್ತೆ, ವಂದನ, ಚಿಂತನ… ಒಂದಾದ ಮೇಲೊಂದು ಕೇಳಿಬರುತ್ತವೆ. ಬಾಲ್ಯದಲ್ಲಿ ಟ್ರಾಾನ್ಸಿಿಸ್ಟರ್ ಬಳಸಿ ನಮ್ಮೂರಿಂದ ಬಲು ದೂರದ ಧಾರವಾಡ ಮೀಡಿಯಂ ವೇವ್ ಸ್ಟೇಷನ್ ಕೇಳುತ್ತಿಿದ್ದಾಾಗಿನ ಗೊರಗೊರ ಸದ್ದು, ಕ್ಷೀಣ ಧ್ವನಿ ಇತ್ಯಾಾದಿ ಇಲ್ಲ. ಡಿಜಿಟಲ್ ಸ್ಟೀರಿಯೋ ಕೇಳಿದಂತೆ ಎಲ್ಲವೂ ಸ್ಪಷ್ಟಾಾತಿಸ್ಪಷ್ಟ.

ಒಂದು ವೇಳೆ ನಿಮ್ಮ ಸ್ಮಾಾರ್ಟ್‌ಫೋನ್‌ನಲ್ಲಿ ಆ್ಯಪ್‌ಗಳು ತುಂಬಿಹೋಗಿವೆ, ಜಾಗ ಉಳಿದಿಲ್ಲ ಅಂತಾದ್ರೆೆ ಇನ್ನೊೊಂದು ಆಯ್ಕೆೆಯೂ ಇದೆ. ಕಂಪ್ಯೂೂಟರ್‌ನಲ್ಲಿ, ಲ್ಯಾಾಪ್‌ಟಾಪ್‌ನಲ್ಲಿ, ಟ್ಯಾಾಬ್ಲೆೆಟ್‌ನಲ್ಲಿ, ಅಥವಾ ಸ್ಮಾಾರ್ಟ್‌ಫೋನ್‌ನದೇ ಬ್ರೌೌಸರ್‌ನಲ್ಲಿ *್ಟ್ಟಚ್ಟಿಠಿಜಿ.ಜಟ.ಜ್ಞಿಿ/್ಝಛ್ಟಿಿಟ್ಠ್ಟ್ಚಛಿ.?್ಚ್ಞ್ಞಛ್ಝಿಿ=1ವಿಳಾಸಕ್ಕೆೆ ಹೋಗಿ. 80ಕ್ಕಿಿಂತಲೂ ಹೆಚ್ಚು ಬೇರೆಬೇರೆ ನಿಲಯಗಳ ಅದೇ ಪಟ್ಟಿಿ ಕಾಣಿಸಿಕೊಳ್ಳುತ್ತದೆ, ನಿಮಗೆ ಬೇಕಾದ ನಿಲಯವನ್ನು ಆಯ್ದುಕೊಂಡರಾಯ್ತು. ಮನೆಯಲ್ಲಿ ಬ್ರಾಾಡ್‌ಬ್ಯಾಾಂಡ್ ಹೈಸ್ಪೀಡ್ ಇಂಟರ್‌ನೆಟ್, ವೈ-ಫೈ, ಮೊಬೈಲ್ ಫೋನ್‌ನಲ್ಲೂ ಅಗ್ಗದ ಅನ್‌ಲಿಮಿಟೆಡ್ ಡೇಟಾ ಪ್ಲಾಾನ್‌ಗಳೆಲ್ಲ ಈಗ ತೀರಾ ಸಾಮಾನ್ಯ ಸಂಗತಿಯಾದ್ದರಿಂದ, ವಿಡಿಯೊಗಿಂತ ಆಡಿಯೊಗೆ ಬೇಕಾಗುವ ಬ್ಯಾಾಂಡ್‌ವಿಡ್‌ತ್‌ ಮತ್ತು ಡೇಟಾ ಕಡಿಮೆಯಾದ್ದರಿಂದ, ಇದು ಹೊರೆ ಎನಿಸುವ ಬಾಬತ್ತಲ್ಲ. ಸಿಗುವ ಸಂತೋಷಕ್ಕೆೆ ಹೋಲಿಸಿದರೆ ಖಂಡಿತ ಅಲ್ಲ. ನಾನಂತೂ ಕೆಲವೊಮ್ಮೆೆ ಸ್ಮಾಾರ್ಟ್‌ಫೋನ್ ಮತ್ತು ಬ್ಲೂಟೂತ್ ಬಳಸಿ ನನ್ನ ಕಾರ್ ಸ್ಟೀರಿಯೋವನ್ನೇ ಕನ್ನಡ ಬಾನುಲಿ ಕೇಂದ್ರವಾಗಿಸುತ್ತೇನೆ. ಸಂಜೆ ಆಫೀಸ್‌ನಿಂದ ಮನೆಗೆ ಬರುವಾಗ ಟ್ರಾಾಫಿಕ್‌ನಿಂದಾಗುವ ಹತಾಶೆಯನ್ನು ಆಕಾಶವಾಣಿಯ ಮನೋರಂಜನೆಯಿಂದ ಹತ್ತಿಿಕ್ಕುತ್ತೇನೆ.
ಇಲ್ಲಿ *ಅಐ್ಕ ಓ್ಞ್ಞ ಎಂಬ ಆಯ್ಕೆೆಯ ಸ್ವಲ್ಪ ವಿವರಿಸಬೇಕು. ಇದು ಕೂಡ 80+ ನಿಲಯಗಳ ಪಟ್ಟಿಿಯಲ್ಲೊೊಂದು. ದಿನದ 24 ಗಂಟೆಗಳೂ ಪ್ರಸಾರವಿರುತ್ತದೆ. ಭಾರತೀಯ ಸಮಯ ಬೆಳಗ್ಗೆೆ 6ರಿಂದ ಮಧ್ಯರಾತ್ರಿಿಯವರೆಗೆ ಬೆಂಗಳೂರು ಮುಖ್ಯವಾಹಿನಿಯ ಕಾರ್ಯಕ್ರಮಗಳನ್ನು, ಉಳಿದ ಆರು ಗಂಟೆಗಳಲ್ಲಿ ಡಿಟಿಎಚ್ ಕನ್ನಡ ವಾಹಿನಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಕರ್ನಾಟಕದ ಬೇರೆ ಬೇರೆ ನಿಲಯಗಳಿಂದ ಈಗಾಗಲೇ ಪ್ರಸಾರವಾದ, ಅತ್ಯುತ್ತಮ ಕಾರ್ಯಕ್ರಮಗಳ ವಿಶೇಷ ಸಂಕಲನ ಇದರಲ್ಲಿ ಬರುತ್ತದೆ. ಮಂಗಳೂರಿನಿಂದ ಯಕ್ಷಗಾನ ತಾಳಮದ್ದಳೆ, ಭದ್ರಾಾವತಿಯಿಂದ ಕಥಾಕಾಲಕ್ಷೇಪ, ಮಡಿಕೇರಿಯಿಂದ ಕೊಡಗಿನ ಪಕ್ಷಿಸಂಕುಲದ ಬಗ್ಗೆೆ ಸರಣಿ, ಮೈಸೂರಿನಿಂದ ಕೆಲವು ಅತ್ಯುತ್ತಮ ಮತ್ತು ಅಪರೂಪದ ಸಂದರ್ಶನಗಳು ಇವೆನ್ನಲ್ಲ ನಾನು ಆನಂದಿಸಿದ್ದು ಈ ವಾಹಿನಿಯಿಂದಲೇ. ಕೆಲ ವಾರಗಳ ಹಿಂದೆ ಈ ಅಂಕಣದಲ್ಲಿ ಮೈಸೂರಿನ ಇಂದ್ರಮ್ಮ ನಟರಾಜ್ ಎಂಬುವವರ ಬಗ್ಗೆೆ ಬರೆದಿದ್ದೆೆ, ನೆನಪಿರಬಹುದು. ಮೈಸೂರು ಆಕಾಶವಾಣಿಯಿಂದ ಪ್ರಸಾರವಾದ ಸಂದರ್ಶನವನ್ನು ಕೇಳಿ ನಾನದನ್ನು ಬರೆದುದಾಗಿತ್ತು.

ಆಮೇಲೆ ನನಗೆ ಓದುಗಮಿತ್ರರೊಬ್ಬರು ಇಂದ್ರಮ್ಮನವರ ದೂರವಾಣಿ ಸಂಖ್ಯೆೆ ಕೊಟ್ಟು, ನಾನು ಇಂದ್ರಮ್ಮನಿಗೆ ಕರೆಮಾಡಿ, ಆ ಲೇಖನಕ್ಕೆೆ ಬಂದಿದ್ದ ಮೆಚ್ಚುಗೆಯ ಪ್ರತಿಕ್ರಿಿಯೆಗಳೆಲ್ಲವನ್ನೂ ಅವರಿಗೆ ಒಪ್ಪಿಿಸಿದ್ದೂ ಆಯ್ತು. ಸಂದರ್ಶನ ನನ್ನ ಮನಸ್ಸನ್ನು ಅಪಾರವಾಗಿ ತಟ್ಟಿಿದ್ದು ಮೈಸೂರಿನಲ್ಲಿ ದಿವ್ಯಾಾಂಗರಿಗೆ ತರಬೇತಿ ಕೊಡುವ ಜೆಎಸ್‌ಎಸ್ ಪಾಲಿಟೆಕ್ನಿಿಕ್‌ನ ಕಂಪ್ಯೂೂಟರ್ ವಿಭಾಗದಲ್ಲಿ ಬೋಧಕಿಯಾಗಿರುವ ಕೆ.ಲೀಲಾವತಿ ಎಂಬುವರೊಂದಿಗಿನದು. ಕಣ್ಣು ಕಾಣದ, ಕಿವಿ ಕೇಳಿಸದ, ಅಥವಾ ಇನ್ನಾಾವುದೋ ವೈಕಲ್ಯವುಳ್ಳ ಮಕ್ಕಳಿಗೆ ಆ ಸಂಸ್ಥೆೆಯಲ್ಲಿ ನೀಡುವ ತರಬೇತಿಯ ಬಗ್ಗೆೆ, ಪ್ರಪಂಚವನ್ನು ಸಮರ್ಥವಾಗಿ ಎದುರಿಸಲಿಕ್ಕೆೆ ಆ ಮಕ್ಕಳಿಗಿರುವ ವಿವಿಧ ಅವಕಾಶಗಳ ಬಗ್ಗೆೆ ತಿಳಿದಾಗ ಅವರೆಲ್ಲರ ಮೇಲೆ ವಿಶೇಷ ಅಭಿಮಾನ ಮೂಡಿತು. ನನ್ನೊೊಬ್ಬ ಓದುಗಮಿತ್ರರಾಗಿ ಈಗಾಗಲೇ ಸಂಪರ್ಕದಲ್ಲಿದ್ದ ಲೀಲಾವತಿ ಮೇಡಂ ವಾಟ್ಸಪ್‌ನಲ್ಲಿ ನನಗೊಂದು ವಿಡಿಯೊ ಕ್ಲಿಿಪ್ ಕಳಿಸಿದರು. ಅವರ ತರಗತಿಯ ದೃಶ್ಯವದು. ಅದನ್ನು ನೋಡಿಯಂತೂ ಅಬ್ಬಾಾ! ಕಲಿಯುವವರ ಛಲ, ಕಲಿಸುವವರ ತಾಳ್ಮೆೆ ಇವುಗಳ ಮುಂದೆ ನಾವೆಲ್ಲ ಎಷ್ಟು ಕುಬ್ಜರು ಎಂದೆನಿಸಿತು. ಮುಂದಿನ ಸರ್ತಿ ಭಾರತಕ್ಕೆೆ ಹೋದಾಗ ಮೈಸೂರಿನಲ್ಲಿ ಅವರ ಸಂಸ್ಥೆೆಗೆ ಭೇಟಿಯಿತ್ತು ಅಲ್ಲಿನ ಚಟುವಟಿಕೆಗಳನ್ನು ಕಣ್ಣಾಾರೆ ನೋಡಬೇಕೆಂದು ಅವರು ನನಗೆ ಪ್ರೀತಿಯ ಆಹ್ವಾಾನವಿತ್ತಿಿದ್ದಾಾರೆ.
ಇದಿಷ್ಟೇ ಅಲ್ಲ. ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಇನ್ನೊೊಂದು ಒಳ್ಳೆೆಯ ಬೆಳವಣಿಗೆ ನನ್ನ ಗಮನಕ್ಕೆೆ ಬಂದದ್ದು ದಿನದ ಪ್ರಸಾರದಲ್ಲಿ ಕಾರ್ಯಕ್ರಮಗಳು ಕರ್ನಾಟಕದ ಬೇರೆಬೇರೆ ನಿಲಯಗಳಲ್ಲಿ ಸಿದ್ಧಗೊಂಡು ಅವುಗಳ ರಾಜ್ಯವ್ಯಾಾಪಿ ಪ್ರಸಾರ. ಬೆಳಗಿನ ‘ಚಿಂತನ’ ಕಾರ್ಯಕ್ರಮ ಒಂದು ದಿನ ಮಂಗಳೂರು ಆಕಾಶವಾಣಿಯ ಕೊಡುಗೆಯಾದರೆ ಇನ್ನೊೊಂದು ದಿನ ವಿಜಯಪುರ ಕೇಂದ್ರದಿಂದ. ಮತ್ತೊೊಂದು ದಿನ ಹೊಸಪೇಟೆ ಕೇಂದ್ರದಿಂದ. ಹೀಗೆ ಆಯಾ ಪ್ರದೇಶಗಳ ವಿದ್ವಾಾಂಸರ ಹಿತಚಿಂತನೆಯ ನುಡಿಗಳು ಇಡೀ ರಾಜ್ಯದ ಜನತೆಗೆ ಲಭ್ಯ. ಮಹಿಳೆಯರಿಗಾಗಿ ಪ್ರಸಾರವಾಗುವ ‘ವನಿತಾ ವಿಹಾರ’ದಲ್ಲೂ ಹಾಗೆಯೇ. ಒಂದೊಂದು ದಿನ ಒಂದೊಂದು ಕೇಂದ್ರದಿಂದ ಕಾರ್ಯಕ್ರಮ, ರಾಜ್ಯವ್ಯಾಾಪಿ ಪ್ರಸಾರ. ಉದಾಹರಣೆಗೆ ಶಿವಮೊಗ್ಗದ ಒಬ್ಬ ತಜ್ಞೆಯೊಂದಿಗಿನ ಸಂದರ್ಶನ ಭದ್ರಾಾವತಿ ನಿಲಯ ಸಿದ್ಧಪಡಿಸಿದ್ದು ಅಲ್ಲಿನ ಶ್ರೋೋತೃಗಳಿಗಷ್ಟೇ ಅಲ್ಲ, ಇಡೀ ರಾಜ್ಯದ ಜನತೆಗೆ ಪ್ರಯೋಜನ. ವಿಕೇಂದ್ರೀಕರಣ ಅಷ್ಟೇಅಲ್ಲ ಸ್ಥಳೀಯ ಸಂಪನ್ಮೂಲ ವ್ಯಕ್ತಿಿಗಳ ಸಮರ್ಥ ಸದ್ಬಳಕೆ. ಬಹುಶಃ ಕಾರ್ಯಕ್ರಮಗಳ ನಿರ್ಮಾಣದಲ್ಲೂ ಉತ್ಸಾಾಹ ಹುರುಪು ಹೆಚ್ಚಲಿಕ್ಕೆೆ ಕಾರಣವಾಗುತ್ತದೆ. ‘ಇದು ಬರೀ ನಮ್ಮ ನಿಲಯದಿಂದಲ್ಲ ರಾಜ್ಯವ್ಯಾಾಪಿ ಪ್ರಸಾರವಾಗುವ ಕಾರ್ಯಕ್ರಮ ಆದ್ದರಿಂದ ಉತ್ಕೃಷ್ಟವಾಗಿ ಇರಬೇಕು’ ಎಂದು ಸಹಜವಾಗಿಯೇ ಗುಣಮಟ್ಟ ಹೆಚ್ಚಳದತ್ತ ಗಮನ ಹರಿಯುತ್ತದೆ. ದಿನದ ಕಾರ್ಯಕ್ರಮಗಳ ವಿವರಣೆಯಲ್ಲಿ ಒಂದೊಂದು ಕಾರ್ಯಕ್ರಮದ ಹೆಸರಿನ ಮುಂದೆ ಇಂಥಿಂಥ ನಿಲಯದ ಕೊಡುಗೆ’ ಎಂದು ಕೇಳುವುದೇ ಒಂದು ವಿಶೇಷ ಹೆಮ್ಮೆೆ. ನಾನೇನೂ ಇಡೀ ದಿನ ಎಲ್ಲ ಕಾರ್ಯಕ್ರಮಗಳನ್ನು ಕೇಳುತ್ತೇನೆಂದಲ್ಲ, ಆದರೆ ಕೇಳಿಸಿಕೊಂಡಷ್ಟೂ ಅವಧಿಯಲ್ಲಿ ಯಾವುದೇ ಕಾರ್ಯಕ್ರಮ ಕಳಪೆ ಮಟ್ಟದ್ದು, ಕಾಲಹರಣದ್ದು ಅಂತನಿಸುವ ಉದಾಹರಣೆಯೇ ಇಲ್ಲ.

ಮೈಸೂರು ಆಕಾಶವಾಣಿಯಿಂದ ಪ್ರತಿದಿನ ಮೂಡಿ ಬರುವ ‘ಪದಸಂಸ್ಕೃತಿ’- ಕನ್ನಡ ಭಾಷೆ ಮತ್ತು ಪದಬಳಕೆ ಬಗ್ಗೆೆ, ತಪ್ಪುು-ಒಪ್ಪುುಗಳ ಬಗ್ಗೆೆ, ಭಾಷಾತಜ್ಞರಿಂದ ಆಸಕ್ತಿಿಕರ ಪ್ರಸ್ತುತಿ- ಇದನ್ನಂತೂ ನಾನು ಒಂದು ದಿನವೂ ತಪ್ಪಿಿಸಿಕೊಳ್ಳುವುದಿಲ್ಲ. ಅಂತೆಯೇ, ವಾರದಲ್ಲೊೊಂದು ದಿನ ಶತಮಾನದ ಕನ್ನಡ ಶ್ರೇಷ್ಠ ಸಣ್ಣಕತೆಗಳ ಬಾನುಲಿ ಅವತರಣಿಕೆ, ಕುವೆಂಪುರವರ ರಾಮಾಯಣ ದರ್ಶನಂ ಕಾವ್ಯದಿಂದ ಆಯ್ದ ಭಾಗಗಳ ವಾಚನದ ಸರಣಿ ಕಾರ್ಯಕ್ರಮ- ಹೀಗೆ ಸಾಹಿತ್ಯಿಿಕವಾಗಿ ಶ್ರೀಮಂತ ಕಾರ್ಯಕ್ರಮಗಳು, ಇನ್ನು ಕೆಲವು ವ್ಯಕ್ತಿಿತ್ವ ವಿಕಸನಕ್ಕೆೆ ನೆರವಾಗುವಂಥವು, ಆರೋಗ್ಯವಿಜ್ಞಾಾನವನ್ನು ಬೋಧಿಸುವಂಥವು, ಅಡುಗೆ-ಹೊಸರುಚಿಗಳನ್ನು ಹೇಳಿಕೊಡುವಂಥವು, ಕರ್ನಾಟಕದ ಸಮೃದ್ಧ ಜನಪದ ಭಂಡಾರದಿಂದ ಮೊಗೆದು ಕೊಟ್ಟಂಥವು, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಗಳು, ಮತ್ತೆೆ ಅಪ್ಪಟ ಮನೋರಂಜನೆಯ ಕಾರ್ಯಕ್ರಮಗಳು. ಇದೆಲ್ಲದರಲ್ಲೂ ಸ್ವಚ್ಛ, ಶುದ್ಧ, ಸೌಮ್ಯ ಕನ್ನಡ ಭಾಷೆ ಆಕಾಶವಾಣಿಯದು. ಕಿರುಚಾಟವಿಲ್ಲ, ಕರಾಳ ಸ್ವರಗಳಿಲ್ಲ.
ಆರೋಗ್ಯಕ್ಕೆೆ ಒಳ್ಳೆೆಯದು ಎಂದದ್ದು ಅದಕ್ಕೇನೇ. ನೀವು ಪ್ರತಿದಿನವೂ ಗಂಟೆಗಟ್ಟಲೆ ಟಿವಿಯಲ್ಲಿ ಕನ್ನಡದ ಕೆಟ್ಟ ಸುದ್ದಿವಾಹಿನಿಗಳನ್ನೇ ನೋಡುವವರಾದರೆ, ಸಂಸಾರಗಳನ್ನು ಮುರಿಯುವ ಕಥೆಯುಳ್ಳ ಧಾರಾವಾಹಿಗಳಿಗೆ ಅಡಿಕ್‌ಟ್‌ ಆಗಿದ್ದೀರಾದರೆ, ಬ್ರಹ್ಮಾಾಂಡ ಬುರುಡೆ ಜ್ಯೋೋತಿಷಿಗಳ ಮಾತುಗಳಿಗೆ ದಾಸಾನುದಾಸ ಅಂತಾದರೆ, ಕೆಲಸಕ್ಕೆೆ ಬಾರದ ಪ್ಯಾಾನೆಲ್ ಡಿಸ್ಕಷನ್‌ಗಳಲ್ಲಿ ಆಸಕ್ತಿಿಯುಳ್ಳವರಾದರೆ…ನಿಮಗೆ ಅರಿವಿಲ್ಲದಂತೆಯೇ ನಿಮ್ಮ ಬೌದ್ಧಿಿಕ ಆರೋಗ್ಯವನ್ನು, ಭಾಷೆ-ಸಂಸ್ಕೃತಿ-ಸಂಸ್ಕಾಾರ-ಸಂಪ್ರದಾಯಗಳ ಬಗೆಗಿನ ಗೌರವಾಭಿಮಾನಗಳನ್ನು, ಬದುಕಿನಲ್ಲಿ ಸಣ್ಣ ಸಣ್ಣ ಸಂಗತಿಗಳಲ್ಲಿ ಸ್ವಾಾರಸ್ಯ ಸಂತೋಷಗಳನ್ನು ಕಂಡುಕೊಳ್ಳುವ ಆಸಕ್ತಿಿಯನ್ನು, ಶಾಂತಚಿತ್ತದಿಂದ ಜೀವನವನ್ನೆೆದುರಿಸುವ ತಾಳ್ಮೆೆಯನ್ನು ಮಟ್ಟದಲ್ಲಿ ಕಳೆದುಕೊಂಡಿದ್ದೀರಿ ಎಂದು ಅರ್ಥ. ಇದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲ. ನೀವು ತತ್‌ಕ್ಷಣಕ್ಕೆೆ ಒಪ್ಪಿಿಕೊಳ್ಳಲಿಕ್ಕಿಿಲ್ಲ ಅಷ್ಟೇ. ನನ್ನೊೊಬ್ಬ ಸ್ನೇಹಿತ, ಬೆಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲೇ ಇರುವ ನವೀನ್ ಸಾಗರ್ ಒಮ್ಮೆೆ ಒಂದು ಲೇಖನದಲ್ಲಿ ಬರೆದಿದ್ದ ಹೋಲಿಕೆಯನ್ನು ಬಳಸಿದರೆ ಬಹುಶಃ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಬಹುದು. ಏನೆಂದರೆ, ಕನ್ನಡದ ಟಿವಿ ವಾಹಿನಿಗಳು ಗಟಾರದ ನೀರನ್ನೇ ನಿಮಗೆ ಕುಡಿಸಿ ಕುಡಿಸಿ ಇದೇ ಶರಬತ್ತು ಎಂಬ ಭ್ರಮೆಯನ್ನು ನಿಮ್ಮಲ್ಲಿ ತಂದಿಟ್ಟಿಿವೆ. ನಿಮಗೀಗ ನಿಜವಾದ ಶರಬತ್ತಿಿನ ರುಚಿಯೇ ಆದರೆ ಆ ಕೊಳಕು ನೀರು ಒಂದಲ್ಲ ಒಂದು ಸಂದರ್ಭದಲ್ಲಿ ನಿಮ್ಮ ವ್ಯಕ್ತಿಿತ್ವವನ್ನು ಆಪೋಶನ ತೆಗೆದುಕೊಳ್ಳುತ್ತದೆ.

ದೇಹಕ್ಕೆೆ ಹೇಗೆ ಜಂಕ್ ಫುಡ್ ಒಳ್ಳೆೆಯದಲ್ಲವೋ, ಬೌದ್ಧಿಿಕತೆಗೆ ಆ ಗಟಾರದ ನೀರು ಸ್ವಲ್ಪವೂ ಒಳ್ಳೆೆಯದಲ್ಲ. ಇವತ್ತಿಿನ ದಿನದಿಂದಲೇ ಅದರ ಸೇವನೆಯನ್ನು ಕಡಿಮೆ ಮಾಡುತ್ತ ಬನ್ನಿಿ. ಕ್ರಮೇಣ ನಿಲ್ಲಿಸಿಬಿಡಿ. ಆ ಹೊತ್ತನ್ನೆೆಲ್ಲ ಆಕಾಶವಾಣಿಯಿಂದ ಅಮೃತದ ಹನಿಗಳನ್ನು ಸವಿಯಲಿಕ್ಕೆೆ ಬಳಸಿ ಸದುಪಯೋಗ ಮಾಡಿಕೊಳ್ಳಿಿ. ಅದೂ ಹೇಗೆ, ನಿಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತಿಿರುವಾಗಲೇ! ನೋಡನೋಡುತ್ತಿಿದ್ದಂತೆಯೇ ನಿಮ್ಮಲ್ಲಿ ಸಮಯ ಸಾಮರ್ಥ್ಯ ಹೆಚ್ಚುತ್ತದೆ, ಸಹನೆ ಸಂಯಮ ವೃದ್ಧಿಿಯಾಗುತ್ತದೆ, ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ, ಸಂಸ್ಕೃತಿಯ ಹೂವುಗಳು ನಿಮ್ಮ ಹೃದಯವೆಂಬ ಉದ್ಯಾಾನದಲ್ಲಿ ಸಮೃದ್ಧವಾಗಿ ನಳನಳಿಸುತ್ತವೆ. ‘ಬಹುಜನ ಹಿತಾಯ ಬಹುಜನ ಸುಖಾಯ’ – ಇದೇ ತಾನೆ ಆಕಾಶವಾಣಿಯ ಧ್ಯೇಯವಾಕ್ಯ? ಆ ಬಹುಜನರಲ್ಲಿ ನಾನೂ ಇದ್ದೇನೆ, ನೀವೂ ಇರಬೇಕು!

Leave a Reply

Your email address will not be published. Required fields are marked *