Thursday, 5th August 2021

ಆಕೆಗೆ 78 ವರ್ಷ, ಕಣ್ಣುಗಳಲ್ಲಿ ಉತ್ಸಾಹದ ಮಿಂಚು!

ಅದು ಕಾಲೇಜಿನ ಮೊದಲ ದಿನ. ಅಲ್ಲಿ ಎಲ್ಲರೂ ಅಪರಿಚಿತರು. ಮೊದಲ ದಿನದ ಮೊದಲ ತರಗತಿ ತೆಗೆದುಕೊಂಡ ಪ್ರೊೊಫೆಸರ್ ಎಲ್ಲರಿಗೂ ತಮ್ಮ ತಮ್ಮ ಪರಿಚಯ ಮಾಡಿಕೊಡಿ ಎಂದು ಹೇಳಿದರು. ಎಲ್ಲರೂ ಎದ್ದು ನಿಂತು ತಮ್ಮ ಹೆಸರು ಹೇಳತೊಡಗಿದರು. ಒಬ್ಬಾಾಕೆ ಎದ್ದು ನಿಂತು ತನ್ನ ಹೆಸರು ಹೇಳಿದಾಗ ಇಡೀ ತರಗತಿ ಒಂದು ಕ್ಷಣ ಆಕೆಯತ್ತ ತಿರುಗಿ ನೋಡಿತು. ಎಲ್ಲರ ಮುಖದಲ್ಲೂ ಅಚ್ಚರಿ, ಕುತೂಹಲ! ಯಾಕೆಂದರೆ ಆಕೆ ಹಣ್ಣು ಹಣ್ಣು ಮುದುಕಿ. ತನಗೆ 78 ವರ್ಷ ಎಂದು ಆಕೆಯೇ ಹೇಳಿದಳು. ಆಕೆಯ ಮುಖದಲ್ಲಿ ವೃದ್ಧಾಾಪ್ಯದ ಕುರುಹಾಗಲಿ, ಸುಸ್ತಾಾಗಲಿ ಕಾಣುತ್ತಿಿರಲಿಲ್ಲ. ಕಣ್ಣುಗಳಲ್ಲಿ ಉತ್ಸಾಾಹದ ಮಿಂಚಿತ್ತು.

ಪ್ರೊೊಫೆಸರ್ ಕೂಡ ಕುತೂಹಲದಿಂದ ಆಕೆಯ ಬಗ್ಗೆೆ ವಿಚಾರಿಸಿದರು. ‘ನಿಮ್ಮ ಈ ಉತ್ಸಾಾಹ ನೋಡಿ ನನಗೆ ಬಹಳ ಖುಷಿಯಾಗುತ್ತಿಿದೆ. ಈ ವಯಸ್ಸಿಿನಲ್ಲಿ ಕಾಲೇಜಿಗೆ ಯಾಕೆ ಬರಬೇಕೆನಿಸಿತು?’ ಎಂದು ಕೇಳಿದರು.

‘ಯಾಕೆ ಬರಬಾರದು ಅಂತ ಹೇಳಿ?! ನನಗೆ ವಯಸ್ಸಾಾಯಿತು ಎಂದೇ? ನನಗೆ ಮೊದಲಿನಿಂದಲೂ ಕಾಲೇಜು ಶಿಕ್ಷಣ ಪಡೆಯಬೇಕೆಂಬ ಕನಸಿತ್ತು. ಆದರೆ ಆಗಿರಲಿಲ್ಲ. ಆ ಕನಸನ್ನು ನಾನು ಸಾಯಲು ಬಿಡಲಿಲ್ಲ. ಒಂದು ವೇಳೆ ಆ ಕನಸೊಂದು ಸತ್ತು ಹೋಗಿದ್ದರೆ ಅದರ ಜತೆಗೆ ನಾನೂ ಸತ್ತು ಹೋಗುತ್ತಿಿದ್ದೆೆನೇನೋ. ನನ್ನಂತೆ ನಿಮಗೂ, ಇಲ್ಲಿರುವ ಪ್ರತಿ ವಿದ್ಯಾಾರ್ಥಿಗೂ ಏನಾದರೊಂದು ಕನಸು, ಗುರಿ ಇರುತ್ತದೆ. ಯಾವತ್ತು ಅದು ಸತ್ತು ಹೋಗುತ್ತದೋ, ಅವತ್ತು ಬದುಕು ಅಂತ್ಯವಾದಂತೆ. ಸತ್ತ ಶವದಂತೆ ಬದುಕುತ್ತಿಿರುವ ಹಲವಾರು ಜನರನ್ನು ನೋಡಿದ್ದೇನೆ. ಅವರಿಗೆ ಬದುಕಿನಲ್ಲಿ ಕನಸುಗಳೇ ಇರುವುದಿಲ್ಲ. ನಾವು ಸತ್ತಂತೆ ಬದುಕುತ್ತಿಿದ್ದೇವೆ ಎಂದು ಅವರಿಗೆ ತಿಳಿದಿರುವುದೂ ಇಲ್ಲ. ಅಂಥವರನ್ನು ನೋಡಿದಾಗ ನನಗೆ ಬೇಸರವಾಗುತ್ತದೆ’ ಎಂದಳು ಆ ವೃದ್ಧೆೆ.

ಇಡೀ ತರಗತಿ ಆಕೆಯ ಮಾತುಗಳನ್ನು ಕುತೂಹಲದಿಂದ ಕೇಳುತ್ತಿಿತ್ತು.
‘ವಯಸ್ಸಾಾಗುವುದಕ್ಕೂ ಮತ್ತು ಬೆಳವಣಿಗೆ ಹೊಂದುವುದಕ್ಕೂ ಬಹಳ ವ್ಯತ್ಯಾಾಸವಿದೆ. ನಿಮಗೀಗ 19 ವರ್ಷ, ನೀವು ಒಂದಿಡೀ ವರ್ಷ ಏನೂ ಮಾಡದೆ ಮಲಗಿದ್ದರೂ ಒಂದು ವರ್ಷದ ನಂತರ ನಿಮಗೆ 20 ವರ್ಷವಾಗುತ್ತದೆ. ನನಗೀಗ 78, ನಾನು ಏನೂ ಮಾಡದಿದ್ದರೂ ಮುಂದಿನ ವರ್ಷ ನನಗೆ 79 ವರ್ಷವಾಗುತ್ತದೆ. ಅದಕ್ಕೆೆ ಯಾವುದೇ ರೀತಿಯಲ್ಲೂ ನಾನು ಕಷ್ಟ ಪಡುವುದು ಬೇಡ. ಇದನ್ನು ವಯಸ್ಸಾಾಗುವುದು ಎನ್ನುತ್ತೇವೆಯೇ ಹೊರತು ಬೆಳವಣಿಗೆ ಎನ್ನುವುದಿಲ್ಲ. ಯಾರಿಗೆ ಬೇಕಾದರೂ ವಯಸ್ಸಾಾಗುತ್ತದೆ. ಆದರೆ ಎಲ್ಲರೂ ಬೆಳೆಯುವುದಿಲ್ಲ ಎಂಬುದು ಮಾತ್ರ ನಿಜ.* ್ಕಛಿಞಛಿಞಚಿಛ್ಟಿಿ, ಜ್ಟಟಡಿಜ್ಞಿಿಜ ಟ್ಝಛ್ಟಿಿ ಜಿ ಞ್ಞಠಿಟ್ಟ ಚ್ಠಿಿಠಿ ಜ್ಟಟಡಿಜ್ಞಿಿಜ ್ಠ ಜಿ ಟಠಿಜಿಟ್ಞ್ಝ. ನನಗೆ ಬೆಳವಣಿಗೆ ಹೊಂದಬೇಕು ಎಂಬ ಆಸೆಯಿದೆ. ಹಾಗಾಗಿ ನಾನು ಸಿಕ್ಕಿಿ ದ ಎಲ್ಲ ಅವಕಾಶಗಳನ್ನೂ ಬೆಳವಣಿಗೆಗಾಗಿ ಉಪಯೋಗಿಸಿಕೊಳ್ಳುತ್ತಿಿದ್ದೇನೆ’.

ತರಗತಿಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ!
‘ನನಗೆ ಚೆನ್ನಾಾಗಿ ಗೊತ್ತು, ನನ್ನ ವಯಸ್ಸಿಿನ ಹಲವರಿಗೆ ಇಲ್ಲಿಯವರೆಗೆ ತಾವು ಮಾಡಿರುವ ಕೆಲಸಗಳ ಬಗ್ಗೆೆ ಪಶ್ಚಾಾತ್ತಾಾಪ ಇಲ್ಲದೇ ಇರಬಹುದು. ಆದರೆ ತಾವು ಮಾಡದೇ ಇರುವ, ತಾವು ಉಪಯೋಗಿಸಿಕೊಳ್ಳದ ಅವಕಾಶಗಳ ಬಗ್ಗೆೆ ಪಶ್ಚತ್ತಾಾಪವಂತೂ ಇದೆ. ನಾನು ಅವರಂತೆ ಬದುಕಲು ಇಷ್ಟ ಪಡುವುದಿಲ್ಲ. ಇವತ್ತೋೋ, ನಾಳೆಯೋ ನಾನು ಸಾಯುತ್ತೇನೆ. ಆದರೆ ಸಾಯುವ ದಿನ ಬಂದಾಗ ನನ್ನಲ್ಲಿ ಸಾವಿನ ಬಗ್ಗೆೆ ಭಯವಾಗಲೀ, ಬದುಕಿನಲ್ಲಿ ಮಾಡದಿರುವ ಕೆಲಸಗಳ ಬಗ್ಗೆೆ ಬೇಸರವಾಗಲಿ ಇರಬಾರದು. ಪಶ್ಚಾಾತ್ತಾಾಪ ಪಡುವವರು ಮಾತ್ರ ಸಾವಿಗೆ ಭಯ ಪಡುತ್ತಾಾರೆ. ಇಷ್ಟು ದಿನ ಮದುವೆ, ಮಕ್ಕಳು, ಅವರ ವಿದ್ಯಾಾಭ್ಯಾಾಸ ಮುಂತಾದ ಜವಾಬ್ದಾಾರಿಗಳನ್ನು ಖುಷಿಯಿಂದ ನಿಭಾಯಿಸಿದ್ದೇನೆ. ಈಗ ಮತ್ತೆೆ ಓದುವ ಅವಕಾಶ ಸಿಕ್ಕಿಿದೆ. ಇದನ್ನೇಕೆ ಕೈ ಬಿಡಲಿ’ ಎಂದಳು ಆ ಎಪ್ಪತ್ತೆೆಂಟರ ‘ಯುವತಿ’.
ಅಲ್ಲಿದ್ದವರಿಗೆ ನಿಜಕ್ಕೂ ಜ್ಞಾಾನೋದಯವಾಗಿತ್ತು.

ಯಶಸ್ಸು ಎಂದರೇನು?
ಈ ಪ್ರಶ್ನೆೆಗೆ ಒಂದು ಮಾತಿನಲ್ಲಿ, ವಾಕ್ಯದಲ್ಲಿ ಸರಿಯಾದ ಉತ್ತರ ನೀಡಲು ಸಾಧ್ಯವೇ? ಹೆಚ್ಚು ಅಂಕ ಪಡೆಯುವುದು, ಹಣ ಗಳಿಸುವುದು, ಇಷ್ಟಪಟ್ಟ ಉದ್ಯೋೋಗ ಗಿಟ್ಟಿಿಸಿಕೊಳ್ಳುವುದು, ಪ್ರಶಸ್ತಿಿ-ಪುರಸ್ಕಾಾರಗಳನ್ನು ಪಡೆಯುವುದು, ಎಲ್ಲರಿಂದ ಹೊಗಳಿಸಿಕೊಳ್ಳುವುದಷ್ಟನ್ನೇ ಯಶಸ್ಸು ಎಂದು ಕರೆಯುವುದೇ? ಹಾಗೆ ನೋಡಿದರೆ ಕೆಲವೇ ಕೆಲವು ಮಂದಿ ಮಾತ್ರ ಯಶಸ್ವಿಿ ವ್ಯಕ್ತಿಿಗಳ ಪಟ್ಟಿಿಯಲ್ಲಿ ಸ್ಥಾಾನ ಗಿಟ್ಟಿಿಸಿಕೊಳ್ಳುತ್ತಾಾರೆ.

ಯಾಕೆಂದರೆ ನಮ್ಮಲ್ಲಿ ಹಲವರು ಪರೀಕ್ಷೆೆಯಲ್ಲಿ ಡಿಸ್ಟಿಿಂಕ್ಷನ್ ಪಡೆದುಕೊಂಡಿಲ್ಲ, ಸಾಲ ಮಾಡಿಕೊಂಡಿದ್ದೇವೆ, ಬಿರುದು ಸಮ್ಮಾಾನಗಳು ನಮ್ಮನ್ನು ಹುಡುಕಿಕೊಂಡು ಬಂದಿಲ್ಲ.. ಹಾಗಾದರೆ ನಾವೆಲ್ಲ ಸೋಲಿನ ಸರದಾರರೆ?

ಖಂಡಿತವಾಗಿಯೂ ಅಲ್ಲ. ಯಶಸ್ಸು ಎಂಬುದನ್ನು ಅಂಕಗಳಿಂದ, ಹಣ-ಕೀರ್ತಿ-ಪ್ರಶಸ್ತಿಿಯಿಂದ ಅಳೆಯಲು ಸಾಧ್ಯವಿಲ್ಲ. ಎಲ್ಲರೂ ಒಂದಲ್ಲ ಒಂದು ಬಾರಿ ಸೋಲನ್ನು ಕಂಡವರೇ. ಆದರೆ ಯಾರು ಆ ಸೋಲನ್ನು ಮೆಟ್ಟಿಿ ನಿಲ್ಲಲು ಪ್ರಯತ್ನಿಿಸುತ್ತಾಾರೋ ಅವರು ಮಾತ್ರ ಯಶಸ್ಸಿಿನತ್ತ ಮುನ್ನುಗ್ಗಲು ಸಾಧ್ಯ. ಅಂಥ ಧೀರನೊಬ್ಬನ ಕಥೆ ಇಲ್ಲಿದೆ ಓದಿ.

ಒಮ್ಮೆೆ ಶಾಲೆಯೊಂದರಲ್ಲಿ ಇದ್ದಕ್ಕಿಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಕೆನ್ನಾಾಲಿಗೆ ಇಡೀ ಕಟ್ಟಡವನ್ನು ವ್ಯಾಾಪಿಸಿ, ಶಾಲೆಯೊಳಗಿದ್ದ ಪೀಠೋಪಕರಣಗಳು ಭಸ್ಮವಾಗಿ, ಹಲವರು ತೀವ್ರವಾಗಿ ಗಾಯಗೊಂಡರು. ಅವರಲ್ಲಿ 8 ವರ್ಷದ ಚಿಕ್ಕ ಹುಡುಗನೊಬ್ಬ ಸಂಪೂರ್ಣವಾಗಿ ಸುಟ್ಟು ಹೋದ. ಈತನನ್ನು ಬದುಕಿಸಲು ಸಾಧ್ಯವೇ ಇಲ್ಲ, ಒಂದು ವೇಳೆ ದೇವರ ದಯೆಯಿಂದ ಹುಡುಗ ಬದುಕಿದರೂ ಆತ ಜೀವನಪರ್ಯಂತ ಹಾಸಿಗೆಯಲ್ಲೇ ಇರಬೇಕಾಗುತ್ತದೆ ಎಂದು ವೈದ್ಯರು ಆ ಹುಡುಗನ ತಾಯಿಗೆ ಹೇಳಿದರು. ಪಾಪ, ಆಕೆಯ 13 ವರ್ಷದ ಇನ್ನೊೊಬ್ಬ ಮಗ ಕೂಡ ಅದೇ ಬೆಂಕಿ ಆಕಸ್ಮಿಿಕದಲ್ಲಿ ಮರಣ ಹೊಂದಿದ!

ಅದೇನು ಚಮಾತ್ಕಾಾರವೋ ಏನೋ ಈ ಹುಡುಗ ಬದುಕುಳಿದ. ಆದರೆ ಸುಟ್ಟ ಗಾಯಗಳ ಪರಿಣಾಮದಿಂದ ಆತ ನಡೆಯಲಾರದ ಸ್ಥಿಿತಿ ತಲುಪಿದ್ದ. ತೊಡೆಯಿಂದ ಬೆರಳಿನವರೆಗೆ ಚರ್ಮ, ಮಾಂಸವೆಲ್ಲಾಾ ಸುಟ್ಟುಹೋಗಿತ್ತು. ಎಡಗಾಲಂತೂ ಸಂಪೂರ್ಣವಾಗಿ ನಿಷ್ಕ್ರಿಿಯವಾಗಿತ್ತು. ಅದೆಷ್ಟೋೋ ದಿನಗಳ ಆಸ್ಪತ್ರೆೆವಾಸದ ನಂತರ ಅವನು ಮನೆಗೆ ಬಂದ. ಇನ್ನುಮುಂದೆ ಮಲಗಿದರೆ ಹಾಸಿಗೆ, ಎದ್ದರೆ ವೀಲ್‌ಚೇರ್ ಎಂಬಂಥ ಸ್ಥಿಿತಿ.

ಆದರೂ ಆ ಹುಡುಗನಿಗೆ ನಡೆಯಬೇಕು, ಓಡಬೇಕು ಎಂಬ ಕನಸು. ಒಂದು ದಿನ ವೀಲ್‌ಚೇರ್‌ನಲ್ಲಿ ಕೂತಿದ್ದವನು ಏನನ್ನೋೋ ನಿರ್ಧರಿಸಿದವನಂತೆ ಚೇರ್ ಬಿಟ್ಟು ನೆಲಕ್ಕೆೆ ಹಾರಿದ. ಹುಲ್ಲುಹಾಸಿನ ಮೇಲೆ ಕಾಲುಗಳನ್ನು ಹಿಂದಕ್ಕೆೆ ಬಿಟ್ಟು ತೆವಳಿದ. ಕಾಲಿನಲ್ಲಿ ಅಸಾಧ್ಯವಾದ ನೋವುಂಟಾಯಿತು. ಆದರೂ ಬಿಡಲಿಲ್ಲ. ಹೀಗೆ ದಿನವೂ ಸ್ವಲ್ಪ ಸ್ವಲ್ಪವಾಗಿ ತೆವಳುತ್ತಾಾ ನಿಲ್ಲಲು ಪ್ರಯತ್ನಿಿಸತೊಡಗಿದ. ನಂತರ ಆಧಾರಕ್ಕೆೆ ಯಾವುದಾದರೊಂದು ವಸ್ತುವನ್ನು ಹಿಡಿದುಕೊಂಡು ನಿಧಾನವಾಗಿ ನಡೆಯಲು ಕಲಿತ.

ಈ ಪ್ರಯತ್ನ, ನೋವು ಫಲ ಕೊಡದೇ ಇರಲಿಲ್ಲ. ಅಪಘಾತ ನಡೆದು ಎರಡು ವರ್ಷಗಳೊಳಗೆ ಆ ಹುಡುಗ ತನ್ನ ಕಾಲ ಮೇಲೆ ನಿಲ್ಲುವುದಷ್ಟೇ ಅಲ್ಲದೆ, ನಿಧಾನವಾಗಿ ನಡೆಯತೊಡಗಿದ. ಆತ ಮೊದಲಿನಂತೆ ಶಾಲೆಗೆ ಹೋಗಲು ಪ್ರಾಾರಂಭಿಸಿದ. ನಡೆಯುವುದು, ಓಡುವುದು ಅವನಿಗೆ ಖುಷಿ ಕೊಡತೊಡಗಿದವು. ಯಾವ ಹುಡುಗ ಬದುಕಲಾರ, ಬದುಕಿದರೂ ನಡೆಯಲಾರ ಎಂದು ಎಲ್ಲರೂ ಭಾವಿಸಿದ್ದರೋ ಆತ ಕಾಲೇಜಿನ ಓಟದ ಸ್ಪರ್ಧೆಗೆ ಭಾಗವಹಿಸುವಷ್ಟರ ಮಟ್ಟಿಿಗೆ ಬೆಳೆದ!

ಫೆಬ್ರವರಿ 1934ರಲ್ಲಿ ನ್ಯೂಯಾರ್ಕ್‌ನ ಮ್ಯಾಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ಜಗತ್ತಿಿನ ಅತಿ ವೇಗದ ಓಟದ ಸ್ಪರ್ಧೆಯಲ್ಲಿ ಗ್ಲೆೆನ್ ಕನ್ನಿಿಂಗ್‌ಹ್ಯಾಾಮ್ ಎಂಬ ‘ನಡೆಯಲಾರದ ಹುಡುಗ’ ಭಾಗವಹಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ.

ಆಮೇಲೆ ಆತ ಓಡುವುದನ್ನು ನಿಲ್ಲಿಸಲೇ ಇಲ್ಲ. ಕನ್ನಿಿಂಗ್‌ಹ್ಯಾಾಮ್‌ಗೆ ಒಲಿದ ಪ್ರಶಸ್ತಿಿಗಳಿಗೆ ಲೆಕ್ಕವೇ ಇಲ್ಲ. 1932 ಮತ್ತು 1936ರ ಒಲಿಂಪಿಕ್‌ನಲ್ಲೂ ಆತ ಪದಕಗಳನ್ನು ಗೆದ್ದ. 1934ರಲ್ಲಿ ವಿಶ್ವ ದಾಖಲೆ ನಿರ್ಮಿಸಿದ. ‘ಮೋಸ್‌ಟ್‌ ಪಾಪ್ಯುುಲರ್ ಅಥ್ಲೀಟ್’, ‘ಕಾನ್ಸಾಾಸ್ ಫ್ಲೈಯರ್’, ‘ಎಲ್ಖಾಾರ್ಟ್ ಎಕ್‌ಸ್‌‌ಪ್ರೆೆಸ್’, ‘ಐರನ್ ಹಾರ್ಸ್ ಆಫ್ ಕಾನ್ಸಾಾಸ್’ ಮುಂತಾದ ಹೆಸರಿನಿಂದ ಕರೆಯಲ್ಪಟ್ಟ!

ಹಾಗಾದರೆ ಗ್ಲೆೆನ್ ಕನ್ನಿಿಂಗ್‌ಹ್ಯಾಾಮ್‌ನ ಅತಿಶ್ರೇಷ್ಠ ಸಾಧನೆ ಯಾವುದು? ವಿಶ್ವದಾಖಲೆಯೋ, ಒಲಿಂಪಿಕ್ ಪದಕವೋ ಅಥವಾ ಆತನಿಗೆ ಸಿಕ್ಕಿಿದ ಬಿರುದುಗಳೋ?
ಯಾವುದೂ ಅಲ್ಲ…..ವೀಲ್‌ಚೇರ್‌ನಿಂದ ನೆಲಕ್ಕೆೆ ಜಿಗಿದು ನಡೆಯುತ್ತೇನೆಂದು ತೆಗೆದುಕೊಂಡ ಆ ಒಂದು ನಿರ್ಧಾರವೇ ಆತನ ಜೀವನದ ಅತ್ಯುತ್ತಮ ಸಾಧನೆ!
***
ಆ ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನು ಪ್ರತಿದಿನ ಅಂಗಡಿಯೊಂದಕ್ಕೆೆ ಹೋಗುತ್ತಿಿದ್ದ. ಮನೆ ಪಕ್ಕದಲ್ಲಿಯೇ ಇದ್ದ ಅಂಗಡಿಯವನ ಪರಿಚಯವಾಯಿತು. ಪರಿಚಯ ಸ್ನೇಹವೂ ಆಯಿತು. ಒಂದು ದಿನ ಶ್ರೀಮಂತ ಊರಿಗೆ ಹೋಗಬೇಕಾದ ತುರ್ತು ಪರಿಸ್ಥಿಿತಿ ಬಂತು. ಹೋದರೆ 15 ದಿನ ಬರಲಾಗುವುದಿಲ್ಲ. ಒಡವೆ, ಹಣವನ್ನು ಒಯ್ಯಲೂ ಆಗುವುದಿಲ್ಲ ಹಾಗಾಗಿ ಮನೆಯಲ್ಲಿ ನಂಬಿಕಸ್ಥನೊಬ್ಬನನ್ನು ಬಿಟ್ಟು ಹೋದರೆ ಒಳಿತೆಂದು ಯೋಚಿಸಿದ. ಅಂಥವರು ಯಾರು ಎಂದು ಯೋಚಿಸುವಾಗ ಅಂಗಡಿ ಮಾಲೀಕ ನೆನಪಿಗೆ ಬಂದ. ಇದೇ ನೆಪದಲ್ಲಿ ಅವನ ಸ್ನೇಹವನ್ನೂ ಪರೀಕ್ಷಿಿಸಿದಂತಾಗುತ್ತದೆ ಎಂದು ತನ್ನ ಪರಿಸ್ಥಿಿತಿ ವಿವರಿಸಿದ.
ಸ್ನೇಹಿತ ಒಪ್ಪಿಿಕೊಂಡ. 15 ದಿನಗಳೂ ಕಳೆದವು. ಮತ್ತೆೆ ಆತ ಮರಳಿ ಬಂದಾಗ ಅಂಗಡಿ ಮಾಲೀಕನಿಗೆ ತುಂಬಾ ಕೋಪ ಬಂದಿತ್ತು.

ಜೋರು ಧ್ವನಿಯಲ್ಲಿ ‘ಲಾಕರ್ ತುಂಬಾ ಕಲ್ಲು ತುಂಬಿಸಿ ಅದನ್ನು ಕಾಯಲು ಹೇಳಿ ಹೋದೆಯಾ?’ ಎಂದ. ಅದಕ್ಕೆೆ ಆತ ಸುಮ್ಮನಿದ್ದ. ಮಾಲೀಕ ಮುಂದುವರಿದು, ‘ಇಷ್ಟೇ ಸ್ನೇಹ.ನನ್ನ ಮೇಲೆ ನಂಬಿಕೆಯೇ ಇಲ್ಲ’ ಎಂದು ಕೂಗಿದ.
ಶ್ರೀಮಂತ ‘ನಂಬಿಕೆ ಬಗ್ಗೆೆ ನೀನು ಮಾತನಾಡಲೇಬೇಡ’ ಲಾಕರ್‌ನಲ್ಲಿ ಕಲ್ಲಿದೆ ಎಂದು ನಿನಗೆ ಹೇಗೆ ಗೊತ್ತು? ಎಂದ.
ನಂಬಿಕೆ! ಜೀವನದ ಬಹು ಮುಖ್ಯ ಅಂಶ. ಇಬ್ಬರು ಸ್ನೇಹಿತರ ನಡುವೆ ಸ್ನೇಹ ಬಂಧವಿದೆ ಎಂದರೆ ಅವರಿಬ್ಬರ ನಡುವೆ ನಂಬಿಕೆ ಇದೆ ಎಂದರ್ಥ. ಎಲ್ಲಿ ನಂಬಿಕೆಯಿಲ್ಲವೋ ಅಲ್ಲಿ ನಿಲ್ಲಬೇಡಿ. ಸ್ನೇಹ ಎಂದಂಥೂ ಖಂಡಿತ ಅಂದುಕೊಳ್ಳಬೇಡಿ.

Leave a Reply

Your email address will not be published. Required fields are marked *