Tuesday, 27th October 2020

”ಬೆಲ್‌ ಬಾಟಂ” ಚಿತ್ರಕ್ಕಾಗಿ ರೂಲ್ಸ್‌ ಬ್ರೇಕ್ ಮಾಡಿದ ಅಕ್ಕಿ

ಮುಂಬೈ: ತಮ್ಮ ನಿಜ ಜೀವನ ಹಾಗೂ ಸಿನೆಮಾ ವೃತ್ತಿಯಲ್ಲಿ ಸಮಯ ಪಾಲನೆ ಹಾಗೂ ಶಿಸ್ತನ್ನು ಪಾಲಿಸಿಕೊಂಡು ಬರುತ್ತಿರುವ ಬಾಲಿವುಡ್‌ನ ಅಕ್ಷಯ್‌ ಕುಮಾರ್‌ ಮುಂದಿನ ಚಿತ್ರದ ಶೂಟಿಂಗಿಗಾಗಿ ೧೮ ವರ್ಷದಿಂದಲೂ ಪಾಲಿಸಿಕೊಂಡು ಬರುತ್ತಿರುವ
ನಿಯಮವನ್ನು ಮುರಿಸಿದ್ದಾರೆ.

ಅಂದರೆ, ಪ್ರತಿನಿತ್ಯ ಶೂಟಿಂಗಿಗಾಗಿ ಎಂಟು ಗಂಟೆ ಮಾತ್ರ ಮೀಸಲಿಡುತ್ತಿದ್ದ ಹೇರಾಫೇರಿ ನಟ, ಬೆಲ್‌ ಬಾಟಂ ಚಿತ್ರಕ್ಕಾಗಿ ಎರಡು ಶಿಫ್ಟ್ ನಲ್ಲಿ ಕೆಲಸ ಮಾಡಲು ಸಿದ್ದತೆ ನಡೆಸಿದ್ದಾರೆ. ಉದ್ದೇಶವೂ ಮೆಚ್ಚತಕ್ಕದ್ದೇ. ಚಿತ್ರದ ಬಂಡವಾಳ ಹೂಡುವ ನಿರ್ಮಾಪಕರಿಗೆ ಆರ್ಥಿಕ ಹೊರೆಯಾಗದಂತೆ ಕೆಲವೇ ದಿನಗಳಲ್ಲಿ ನಿಗದಿತ ಸ್ಥಳಗಳಲ್ಲಿ ಶೂಟಿಂಗನ್ನು ಮುಗಿಸಲು ಅಕ್ಕಿ ಈ ಪ್ಲಾನ್ ಮಾಡಿದ್ದಾರೆ.

ಲಾಕ್‌ ಡೌನ್ ಬಳಿಕ ಅಕ್ಕಿಯ ಇದು ಮೊದಲ ಸಿನೆಮಾ ಶೂಟಿಂಗ್ ಆಗಿದೆ. ಹೀಗಾಗಿ, ಡಬಲ್ ಶಿಫ್ಟ್ ಕೆಲಸ. ನಿರ್ಮಾಪಕ ಜಕ್ಕಿ ಭಗ್ನಾನಿ ಅವರ ಪ್ರಕಾರ, ಅಕ್ಷಯ್ ನಿರ್ಮಾಪಕರ ನಟ. ಇದು ನಮಗೆ ಹೆಮ್ಮೆಯ ವಿಚಾರ. ಪ್ರತಿಯೊಬ್ಬರ ಬಗ್ಗೆಯೂ ಯೋಚನೆ ಮಾಡುವ ನಟ ಇವರು.  ಹೀಗಾಗಿ, ೧೮ ವರ್ಷಗಳಲ್ಲಿ ಮೊದಲ ಬಾರಿ ಡಬಲ್ ಶಿಫ್ಟ್‌ ಮಾಡುತ್ತಿದ್ದಾರೆ.  ಅಕ್ಷಯ್ ಜತೆ ವಾಣಿ ಕಪೂರ್‌, ಲಾರಾ ದತ್ತ ಮತ್ತು ಹುಮಾ ಖುರೇಶಿ ಪ್ರಮುಖ ಪಾತ್ರದಲ್ಲಿದ್ದಾರೆ.  ಅಕ್ಕಿದು ರಾ ಏಜೆಂಟ್‌ ಪಾತ್ರವಾಗಿದೆ.

Leave a Reply

Your email address will not be published. Required fields are marked *