Monday, 3rd October 2022

ಕೋಟಿಗಟ್ಟಲೆ ಸಂಭಾವನೆಯ ಜಾಹೀರಾತನ್ನು ತಿರಸ್ಕರಿಸಿದ ’ಪುಷ್ಪ’

ಹೈದಾರಾಬಾದ್‌: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ʼಪುಷ್ಪʼ ಚಿತ್ರದ ಸ್ವೀಕ್ವೆಲ್‌ ನಲ್ಲಿ ಬ್ಯುಸಿಯಾಗಿದ್ದಾರೆ.

ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗ ವಿದೆ. ಅಲ್ಲು ಅರ್ಜುನ್‌ ಅವರಿಗೆ ಸಿನಿಮಾ ರಂಗದಲ್ಲಿ ಎಷ್ಟು ಬೇಡಿಕೆ ಇದೆಯೋ, ಅಷ್ಟೇ ಬೇಡಿಕೆ ಜಾಹೀರಾತು ವಲಯದಲ್ಲಿಯೂ ಇದೆ.

ಇದೀಗ ಅಲ್ಲು ಅರ್ಜುನ್‌ ದೊಡ್ಡ ಸಂಭಾವನೆ ನೀಡುವ ಜಾಹೀರಾತನ್ನು ತಿರಸ್ಕರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಂಬಾಕು ಹಾಗೂ ಮದ್ಯದ ಕಂಪೆನಿ ಜಾಹೀರಾತಿಗಾಗಿ ಅವರನ್ನು ಸಂಪರ್ಕಿಸಿತ್ತು. 10 ಕೋಟಿ ಕೊಡುತ್ತೇವೆ ನಮ್ಮ ಕಂಪೆನಿಯ ಜಾಹೀರಾತು ಮಾಡಿ ಕೊಡಿ ಎಂದು ಹೇಳಿತ್ತು. ಆದರೆ ಸ್ಟೈಲಿಸ್ಟ್‌ ಸ್ಟಾರ್‌ ಆಫರ್‌ ನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ ಬಾಲಿವುಡ್‌ ನ ಅಕ್ಷಯ್‌ ಕುಮಾರ್‌ ಸೇರಿದಂತೆ ಇತರ ಸೆಲೆಬ್ರಿಟಿಗಳು ತಂಬಾಕು, ಪಾನ್‌ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.