Thursday, 5th August 2021

ಅಂಬೇಡ್ಕರ್ ವಿವಾದ: ಸಲ್ಲದ ಎಡವಟ್ಟು!

ಎಲ್ಲಾ ಇಲಾಖೆಯ ಉನ್ನತ ಹಾಗೂ ಕೆಳವರ್ಗದ ಅಧಿಕಾರಿಗಳೂ ಸಹ ಮೊದಲು ನಮ್ಮ ದೇಶದ ಸಂವಿಧಾನವನ್ನು ಸಂಪೂರ್ಣ ಅಧ್ಯಯನ ಮಾಡಿ ಅದರಲ್ಲಿ ಪರಿಣತಿ ಹೊಂದುವುದು ಬಹಳ ಮುಖ್ಯ.

ರಾಜ್ಯದ ಎಲ್ಲ ಶಾಲೆಗಳಲ್ಲಿ ನವಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಈಗಾಗಲೇ ಸುತ್ತೋೋಲೆಯೊಂದನ್ನು ಹೊರಡಿಸಿದೆ. ಈ ಸುತ್ತೋೋಲೆ ಕೈಪಿಡಿಯಲ್ಲಿ ನಮ್ಮ ಸಂವಿಧಾನವನ್ನು ಬರೆದವರು ಯಾರು? ಎಂಬ ಶೀರ್ಷಿಕೆ ನೀಡಿ ವಿವರಣೆ ಕೊಡಲಾಗಿದೆ. ಸರಕಾರದ ಅಂರ್ತಜಾಲದಲ್ಲಿ ಸಂವಿಧಾನದ ಈ ವಿಚಾರವನ್ನು ಅಪ್‌ಲೋಡ್‌ಗೆ ಸಂಬಂಧಿಸಿದಂತೆ ಪ್ರೌೌಢ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಎಸ್.ಮಣಿ ಅವರನ್ನು ಅಮಾನತು ಮಾಡಲಾಗಿದೆ.

ಸಿಎಂಸಿಎ ಕೋರಮಂಗಲ ಕಂಪನಿಯು ಸಂವಿಧಾನ ಕೈಪಿಡಿ ಬರೆದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಿತ್ತು. ಅಕ್ಟೋೋಬರ್ 3ರಂದು ಟಿಪ್ಪಣಿ ಮೂಲಕ ಪ್ರಾಾಥಮಿಕ ಶಿಕ್ಷಣ ನಿರ್ದೇಶಕರಿಗೆ ಆದೇಶ ನೀಡಿದೆ. ಸಂವಿಧಾನದ ಪುಟ 1 ರಿಂದ 25 ರವರೆಗೆ ಅಂತರ್ಜಾಲದಲ್ಲಿ ಪ್ರಕಟಿಸಲು ಹೇಳಿತ್ತು. ತಜ್ಞರ ಸಮಿತಿಯ ರಚನೆ ಮಾಡಿ, ಆಯುಕ್ತರ ಗಮನಕ್ಕೆೆ ತಂದು ಬಳಿಕ ಅಂತರ್ಜಾಲದಲ್ಲಿ ಪ್ರಕಟ ಮಾಡಲು ಹೇಳಲಾಗಿತ್ತು. ಆದರೆ, ಕೆಳಹಂತದ ಅಧಿಕಾರಿಗಳು ಇದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದರು. ಇದರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆೆ ತಪ್ಪಾಾಗಿ ಗ್ರಹಿಸುವಂತಾಗಿದೆ.

ದೇಶಕ್ಕೆೆ ಭದ್ರ ಬುನಾದಿಯನ್ನು ಹಾಕಿ, ದೇಶದ ಪ್ರತಿಯೊಬ್ಬ ಪ್ರಜೆಯನ್ನು ಪ್ರಜ್ಞಾವಂತ ನಾಗರಿಕನನ್ನಾಾಗಿ ಮಾಡುವ ಗುರುತರ ಜವಾಬ್ದಾಾರಿ ಶಿಕ್ಷಣ ಇಲಾಖೆಗಿದೆ. ಆದ್ದರಿಂದ ಹಿರಿಯರು ಶಿಕ್ಷಣ ಇಲಾಖೆಯನ್ನು ಎಲ್ಲ ಇಲಾಖೆಗಳ ತಾಯಿ ಎಂದು ಕರೆದಿದ್ದಾರೆ. ಅಂತಹ ಪರಮೋಚ್ಚ ಇಲಾಖೆ ಎನಿಸಿಕೊಂಡ ಈ ಶಿಕ್ಷಣ ಇಲಾಖೆ, ಸದ್ಯ ಮಾಡುತ್ತಿಿರುವ ಇಂತಹ ಎಡವಟ್ಟುನಿಂದ ಎಲ್ಲರ ಮನದಲ್ಲಿ ಸದಾ ಧನಾತ್ಮಕವಾಗಿ ಉಳಿದಿದೆ. ದೇಶದ ಸಂವಿಧಾನ ಹಾಗೂ ಅದರ ಶಿಲ್ಪಿಿಯೆಂದೇ ಕರೆಸಿಕೊಳ್ಳುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆೆ ಇಲ್ಲಸಲ್ಲದ ಅಪಪ್ರಚಾರ ನಿಜವಾಗಿಯೂ ಖಂಡನೀಯ. ಈ ವಿಷಯ ಮತ್ತೆೆಲ್ಲಿ ತಾರಕಕ್ಕೇರಿ ಹೋಗುತ್ತದೋ ಎಂದು ಹೆದರಿ, ಸದ್ಯ, ಶಿಕ್ಷಣ ಇಲಾಖೆಯ ಅಧಿಕಾರಿ ಕೆ.ಎಸ್.ಮಣಿ ಅವರನ್ನೆೆನೋ ಶಿಕ್ಷಣ ಸಚಿವರು ಅಮಾನತು ಮಾಡಿದ್ದಾರೆ. ಆದರೆ, ಇಂತಹ ಎಡವಟ್ಟುಗಳು ಆಗದಂತೆ ನಿಗಾವಹಿಸುವುದು ಬಹಳ ಮುಖ್ಯವೆನಿಸುತ್ತದೆ.

ಕೇವಲ ಕಾನೂನು ವಿದ್ಯಾಾರ್ಥಿಗಳು ಮಾತ್ರ ದೇಶದ ಸಂವಿಧಾನವನ್ನು ತಿಳಿದುಕೊಳ್ಳಬೇಕೆಂದೇನಿಲ್ಲ. ಅದರ ಜತೆಗೆ ಎಲ್ಲಾಾ ಇಲಾಖೆಯ ಉನ್ನತ ಹಾಗೂ ಕೆಳವರ್ಗದ ಅಧಿಕಾರಿಗಳೂ ಸಹ ಮೊದಲು ನಮ್ಮ ದೇಶದ ಸಂವಿಧಾನವನ್ನು ಸಂಪೂರ್ಣ ಅಧ್ಯಯನ ಮಾಡಿ ಅದರಲ್ಲಿ ಪರಿಣತಿ ಹೊಂದುವುದು ಬಹಳ ಮುಖ್ಯ. ಇಲ್ಲವಾದರೆ ‘ಹಾಫ್ ನಾಲೇಜ್ ಈಸ್ ಮೋಸ್‌ಟ್‌ ಡೇಂಜರಸ್’ ಎನ್ನುವ ಆಂಗ್ಲ ಗಾದೆಯಂತಾಗುತ್ತದೆ. ಇಂತಹ ಅರೆ ಜ್ಞಾನ ಹೊಂದಿರುವ ಅಧಿಕಾರಿಗಳಿಂದ ಇಲಾಖೆಗೆ ಕೆಟ್ಟ ಹೆಸರಷ್ಟೇ ಅಲ್ಲ ದೇಶದ ಪ್ರಗತಿಗೆ ಮಾರಕೂ ಆಗಿರುತ್ತದೆ.

ಉತ್ತಮ ಆಡಳಿತಗಾರರು, ಪ್ರಗತಿಪರ ಚಿಂತಕರೂ ಎಂದೆನಿಸಿಕೊಂಡ ಶಿಕ್ಷಣ ಸಚಿವರ ಮೇಲೆ ಇಲಾಖೆ ಅಷ್ಟೇ ಅಲ್ಲ, ರಾಜ್ಯದ ಎಲ್ಲ ಶಿಕ್ಷಕರು, ಹಾಗೂ ಪ್ರಜೆಗಳು ಉತ್ತಮ ಅಭಿಪ್ರಾಾಯ ಹೊಂದಿದ್ದಾರೆ. ಜತೆಗೆ ಇವರಿಂದ ಹಲವಾರು ಗೊಂದಲಮಯದಿಂದ ಕೂಡಿರುವ ಇಲಾಖೆಯ ಕೆಲವು ಸಮಸ್ಯೆೆಗಳಿಗೆ ಪರಿಹಾರ ಸಿಕ್ಕೀತು ಎಂಬ ನಿರೀಕ್ಷೆಯಲ್ಲಿರುವ ಸಿಬ್ಬಂದಿ ಹಾಗೂ ಸಾಮಾನ್ಯ ಜನರಿಗೆ, ಸಂವಿಧಾನ ಶಿಲ್ಪಿಿ ಅಂಬೇಡ್ಕರ್ ಅವರ ಬಗ್ಗೆೆ ಆಗಿರುವ ಪ್ರಮಾದ ಒಪ್ಪಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಸುರೇಶ್ ಕುಮಾರ್ ಅವರು ಇನ್ನು ಮೇಲಾದರೂ ಜಾಗ್ರತೆ ವಹಿಸಿ ಮುಂದೆಂದೂ ಈ ರೀತಿಯ ಗೊಂದಲಗಳು, ಜನರನ್ನು ದಾರಿ ತಪ್ಪಿಿಸುವ ಕೆಲಸಗಳು ಆಗದಂತೆ ನೋಡಿಕೊಳ್ಳುತ್ತಾರೋ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *