Friday, 17th January 2020

ಒಂಬತ್ತು ಸಾವಿರ ರಕ್ತ ಮಾದರಿಗಳ ಪರೀಕ್ಷೆ ಬಾಕಿ!

ಮತದಾರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆೆ 28 ಲ್ಯಾಬ್ ಟೆಕ್ನಿಷಿಯನ್‌ಸ್‌ ನಿಯೋಜನೆಯೇ ಪರೀಕ್ಷೆೆಗಳ ಸ್ಥಗಿತಕ್ಕೆೆ ಕಾರಣ

ರಾಜ್ಯದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದಿಂದ ಸಾಂಕ್ರಾಾಮಿಕ ರೋಗಗಳು ನಿಯಂತ್ರಣಕ್ಕೆೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿಿವೇಶದಲ್ಲಿ ಆರೋಗ್ಯ ಇಲಾಖೆಯ ಮಲೇರಿಯಾ ಹಾಗೂ ಪೈಲೇರಿಯಾ ವಿಭಾಗದಲ್ಲಿ 9 ಸಾವಿರ ರೋಗಿಗಳು ಚಿಕಿತ್ಸೆೆಗೆ ನೀಡಿರುವ ರಕ್ತ ಮಾದರಿ ಪರೀಕ್ಷೆೆ ಮಾಡಿಲ್ಲ.

ಪ್ರಸ್ತಕ ವರ್ಷ ರಾಜ್ಯದ ವಿವಿಧೆಡೆ 10 ಲಕ್ಷಕ್ಕೂ ಅಧಿಕ ಮಲೇರಿಯಾ ಶಂಕಿತರ ರಕ್ತ ಮಾದರಿಗಳನ್ನು ಪರೀಕ್ಷೆೆ ಮಾಡಲಾಗಿದೆ. 200ಕ್ಕೂ ಹೆಚ್ಚು ಮಂದಿಯಲ್ಲಿ ಮಲೇರಿಯಾ ದೃಢಪಟ್ಟಿಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯಲ್ಲಿರುವ ಸೆಂಟ್ರಲ್ ಮಲೇರಿಯಾ ಲ್ಯಾಾಬ್‌ನಲ್ಲಿ ವೈದ್ಯರು ಇಲ್ಲದ ಕಾರಣ ರಕ್ತ ಮಾದರಿಗಳು ಪರೀಕ್ಷೆೆಗೆ ಒಳಪಡಿಸಲು ಸಾಧ್ಯವಾಗುತ್ತಿಿಲ್ಲ.
ಬಿಬಿಎಂಪಿ ನಗರದಲ್ಲಿ ಮತದಾರಪಟ್ಟಿಿ ಪರಿಷ್ಕರಣೆ ಅಭಿಯಾನ ಹಮ್ಮಿಿಕೊಂಡಿದೆ. ಈ ಕೆಲಸಕ್ಕೆೆ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯಲ್ಲಿರುವ ಸೆಂಟ್ರಲ್ ಮಲೇರಿಯಾ ಲ್ಯಾಾಬ್‌ನ 32 ಸಿಬ್ಬಂದಿ ಪೈಕಿ 28 ಮಂದಿಯನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಲ್ಯಾಾಬ್‌ನ ಭಾಗಶಃ ಪರೀಕ್ಷೆೆಗಳು ಸ್ಥಗಿತಗೊಂಡಿದ್ದು, ರೋಗಿಗಳಿಗೆ ದ್ವಿಿತೀಯ ಹಂತದ ಪರೀಕ್ಷೆೆ ವರದಿಗಳು ಲಭ್ಯವಾಗದಂತಾಗಿದೆ.

ಮರು ಪರೀಕ್ಷೆೆಯಾಗದೇ ಉಳಿದ ರಕ್ತ ಮಾದರಿಗಳು:
ಲ್ಯಾಾಬ್‌ಗೆ ರಾಜ್ಯ ವಿವಿಧ ಭಾಗಗಳಿಂದ ಮಲೇರಿಯಾ, ಪೈಲೇರಿಯಾ ಸೋಂಕಿನ ಮರು ಪರೀಕ್ಷೆೆಗೆ ನಿತ್ಯ 1,000ಕ್ಕೂ ಹೆಚ್ಚು ರಕ್ತ ಮಾದರಿಗಳು ಬರುತ್ತವೆ. ಇಲ್ಲಿನ ಪ್ರಯೋಗಾಲಯದ ಹಿರಿಯ ತಂತ್ರಜ್ಞರು ಅವುಗಳನ್ನು ಮತ್ತೊೊಮ್ಮೆೆ ಪರೀಕ್ಷೆೆ ಮಾಡಿ ಸೋಂಕನ್ನು ದೃಢಪಡಿಸುವ ಕಾರ್ಯ ಮಾಡುತ್ತಿಿದ್ದರು. ಸೆ.1 ರಿಂದ ಲ್ಯಾಾಬ್ ಸಿಬ್ಬಂದಿ ಚುನಾವಣೆ ಕಾರ್ಯಕ್ಕೆೆ ತೆರಳಿರುವುದರಿಂದ ಒಂಭತ್ತು ಸಾವಿರಕ್ಕೂ ಹೆಚ್ಚು ಮಲೇರಿಯಾ ಹಾಗೂ ಫೈಲೇರಿಯಾ ರೋಗಿಗಳ ರಕ್ತ ಮಾದರಿಗಳು ಮರು ಪರೀಕ್ಷೆೆಯಾಗದೇ ಉಳಿದಿರುವುದು ದುರಂತ.

ಚುನಾವಣಾ ಆಯೋಗವು ಸೂಚಿಸಿದ ಸರಕಾರಿ ಇಲಾಖೆಗಳ ಸಿಬ್ಬಂದಿ ಕಡ್ಡಾಾಯವಾಗಿ ಚುನಾವಣಾ ಕಾರ್ಯಕ್ಕೆೆ ತೆರಳಬೇಕು. ಸದ್ಯ ನಡೆಯುತ್ತಿಿರುವ ಮತದಾರಪಟ್ಟಿಿ ಪರಿಷ್ಕರಣೆ ಅಭಿಯಾನದಲ್ಲಿ ನಿತ್ಯ ಮನೆಮನೆಗೆ ತೆರಳಿ ಮತದಾರ ನೋಂದಣಿ, ಹೆಸರು, ಸ್ಥಳ, ಜನ್ಮದಿನ ತಿದ್ದುಪಡಿಯಂಥ ಕಾರ್ಯ ಮಾಡಬೇಕಾಗಿರುತ್ತದೆ. ರಾಜ್ಯದಲ್ಲಿ ಸಾಂಕ್ರಾಾಮಿಕ ರೋಗ ಹೆಚ್ಚಳವಾಗಿ ಪ್ರಯೋಗಾಲಯ ತಂತ್ರಜ್ಞರ ಅವಶ್ಯಕತೆ ಹೆಚ್ಚಿಿರುವಾಗ ಮತದಾರ ಪಟ್ಟಿಿ ಪರಿಷ್ಕರಣೆ ಕಾರ್ಯಕ್ಕೆೆ ಅವರನ್ನು ನಿಯೋಜಿಸುವ ಅಗತ್ಯವಿರಲಿಲ್ಲ ಎಂಬ ಮಾತು ಕೇಳಿಬರುತ್ತಿಿದೆ.

ಬಿಬಿಎಂಪಿಗೆ ಮನವಿ:
ಸೆಂಟ್ರಲ್ ಮಲೇರಿಯಾ ಲ್ಯಾಾಬ್‌ನ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆೆ ಪಡೆದಿರುವುದರಿಂದ ಆಗಿರುವ ಸಮಸ್ಯೆೆಗಳನ್ನು ತಿಳಿಯ ಪಡಿಸುವ ಮೂಲಕ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾಾರೆ.

ರೋಗಿಗಳ ಆರೋಗ್ಯ ವಿಚಾರದಲ್ಲಿ ನಿಷ್ಕಾಳಜಿ
ಬಿಬಿಎಂಪಿ ಮತದಾರರ ಪರಿಷ್ಕರಣೆ ಅಭಿಯಾನವು ಅ.15ರ ವರೆಗೂ ನಡೆಯಲಿದ್ದು, ಅಲ್ಲಿಯ ತನಕ ಲ್ಯಾಾಬ್‌ನ ಸಿಬ್ಬಂದಿ ಚುನಾವಣಾ ಕಾರ್ಯ ಮಾಡಬೇಕಾಗುತ್ತದೆ. ಮರಳಿ ಲ್ಯಾಾಬ್‌ಗೆ ಬರುವುದರೊಳಗೆ ಕನಿಷ್ಠ 30 ಸಾವಿರಕ್ಕೂ ಹೆಚ್ಚು ರಕ್ತ ಮಾದರಿಗಳು ಬಾಕಿ ಉಳಿದಿರುತ್ತವೆ. ಅವುಗಳ ಪರೀಕ್ಷೆೆ ಮುಗಿಸಲು ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಜತೆಗೆ ಕೆಲಸದ ಒತ್ತಡ ಹೆಚ್ಚಾಾಗಲಿದೆ. ಪ್ರತಿವರ್ಷ ಸೆಪ್ಟೆೆಂಬರ್ ತಿಂಗಳಲ್ಲಿ ಮತದಾರ ಪರಿಷ್ಕರಣೆ ಅಭಿಯಾನ ನಡೆಯುತ್ತದೆ. ಈ ವೇಳೆ ಸೆಂಟ್ರಲ್ ಮಲೇರಿಯಾ ಲ್ಯಾಾಬ್ ಸಿಬ್ಬಂದಿಯನ್ನೇ ನಿಯೋಜಿಸಲಾಗುತ್ತಿಿದೆ. ಸಾಕಷ್ಟು ಬಾರಿ ಮನವಿ ಮಾಡಿದರೂ ನಿಯೋಜಿಸುತ್ತಾಾರೆ. ಹೀಗಾಗಿ, ಲ್ಯಾಾಬ್‌ನ ಪರೀಕ್ಷೆೆಗಳಿಗೆ ಸಾಕಷ್ಟು ಹಿನ್ನಡೆಯಾಗುತ್ತಿಿದೆ. ರೋಗಿಗಳ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದಂತಾಗಿದೆ.

Leave a Reply

Your email address will not be published. Required fields are marked *