Tuesday, 30th May 2023

ಇಲ್ಲದಿರುವಿಕೆ ಎದ್ದು ಕಾಣುವುದೂ ಒಂದು ಸೋಜಿಗವೇ!

ತಿಳಿರು ತೋರಣ

* ಶ್ರೀವತ್ಸ ಜೋಶಿ

ಇವತ್ತಿನದು ತಿಳಿರುತೋರಣದ ಇನ್ನೂರನೆಯ ಎಲೆ. ಈ ಸಂದರ್ಭಕ್ಕೆೆ ಅಂಕಣದಲ್ಲಿ ಏನು ವಿಶೇಷ ವಿಷಯ ಅಂತ ಕೇಳಿದಿರಾದರೆ ಉತ್ತರ: ‘ಏನೂ ಇಲ್ಲ!’

ಅಕ್ಕಿಿ ಆರಿಸುವಾಗ ಚಿಕ್ಕ ನುಚ್ಚಿಿನ ನಡುವೆ ಬಂಗಾರವಿಲ್ಲದ ಬೆರಳು ಎಂದರು ಮಲ್ಲಿಗೆಕವಿ ಕೆ. ಎಸ್. ನರಸಿಂಹ ಸ್ವಾಾಮಿ. ಬಹುಶಃ ಆ ಬೆರಳು ಬೇರಾರದೂ ಅಲ್ಲ ಅವರ ಪತ್ನಿಿ ವೆಂಕಮ್ಮನದೇ. ಏಕೆಂದರೆ ಕೆಎಸ್‌ನ ಕವಿತೆಗಳಲ್ಲಿ ಬರುವ ಶಾರದೆ, ಗೌರಿ, ಪದುಮ, ಕಾಮಾಕ್ಷಿ, ಮೀನಾಕ್ಷಿ, ಸೀತಾದೇವಿ… ಮುಂತಾದ ಕಾವ್ಯಕನ್ನಿಿಕೆಯರೆಲ್ಲ ಮತ್ತ್ಯಾಾರೂ ಅಲ್ಲ, ವೆಂಕಮ್ಮನೇ. ಅಷ್ಟಲ್ಲದೆ ನರಸಿಂಹ ಎಂದು ಹೆಸರಿದ್ದ ಕವಿ, ಗುಣಸ್ವಭಾವದಲ್ಲಿ ಮುಂದಿನೊಂದು ಅವತಾರ ಶ್ರೀರಾಮಚಂದ್ರನಂಥವರು. ಬೇರೆ ಹೆಣ್ಣುಗಳನ್ನು ಕಣ್ಣೆೆತ್ತಿಿಯೂ ನೋಡಿದವರಲ್ಲ. ಸಂದರ್ಶನವೊಂದರಲ್ಲಿ ತನ್ನ ಗಂಡನ ಬಗ್ಗೆೆ ಇಷ್ಟು ಒಳ್ಳೆೆಯ ಶಿಫಾರಸ್ಸು ಕೊಟ್ಟವರು ವೆಂಕಮ್ಮನೇ. ಇರಲಿ, ವಿಷಯ ಅದಲ್ಲ. ಅಕ್ಕಿಿ ಆರಿಸುತ್ತಿಿದ್ದ ಆ ಬೆರಳುಗಳಲ್ಲಿ ‘ಇಲ್ಲದ ಬಂಗಾರ’ವನ್ನು ಕವಿ ಕಂಡರು ಎಂಬುದು ನಮಗೆ ಬೇಕಾದ ವಿಚಾರ. ಅಂದರೆ, ರವಿ ಕಾಣದ್ದನ್ನು ಕವಿ ಕಂಡನು ಎಂಬಂತೆಯೇ? ಅಲ್ಲ, ಬಂಗಾರವು ಆ ಬೆರಳುಗಳಲ್ಲಿ *್ಚಟ್ಞಜ್ಚ್ಠಿಿಟ್ಠ ಚಿ ಚಿಛ್ಞ್ಚಿಿಛಿ ಆಗಿತ್ತು ಅಂತ. ಇಲ್ಲಿ ಬಂಗಾರ ಅಂದರೆ ಬಂಗಾರದ ಉಂಗುರ ಎನ್ನಿಿ. ಅಂತೂ ಅದರ ಅನುಪಸ್ಥಿಿತಿ ಕವಿಗೆ ಎದ್ದು ಕಾಣುತ್ತಿಿತ್ತು.

ಕೆ. ಎಸ್. ನರಸಿಂಹ ಸ್ವಾಾಮಿಯವರು ಕಡುಬಡತನದಲ್ಲಿ ಅಲ್ಲದಿದ್ದರೂ ಅತ್ಯಂತ ಸರಳವಾಗಿ, ಆರಕ್ಕೇರದ ಮೂರಕ್ಕಿಿಳಿಯದ ರೀತಿಯಲ್ಲಿ, ಬದುಕಿದವರು. ಆದ್ದರಿಂದ ವೆಂಕಮ್ಮನವರ ಕೈಬೆರಳುಗಳಲ್ಲಿ ಬಂಗಾರವಿಲ್ಲದಿದ್ದದ್ದು ಆಶ್ಚರ್ಯದ ಮಾತೇನಲ್ಲ. ಅದೇ ಕವಿತೆಯಲ್ಲಿ ಮುಂದೆ ಹೇಳಿರುವಂತೆ- ತಗ್ಗಿಿರುವ ಕೊರಳಿನ ಸುತ್ತ ಕರಿಮಣಿ ಒಂದೇ ಸಿಂಗಾರ ಕಾಣದ ಹೆರಳು; ಕಲ್ಲ ಹರಳನ್ನು ಹುಡುಕಿ ಎಲ್ಲಿಗೊ ಎಸೆವಾಗ ಝಲ್ಲೆೆನುವ ಬಳೆಯ ಸದ್ದು. ಪ್ರದರ್ಶನಪ್ರಿಿಯತೆ ಇಲ್ಲದೆ ಮಿನಿಮಮ್ ಆಭರಣಗಳು. ಎಷ್ಟು ಬೇಕೋ ಅಷ್ಟೇ.

ಆ ಕಾರಣದಿಂದಲೂ, ಅಕ್ಕಿಿ ಆರಿಸುವಾಗ ಚಿಕ್ಕ ನುಚ್ಚಿಿನ ನಡುವೆ ಕವಿ ಕಂಡ ‘ಬಂಗಾರವಿಲ್ಲದ ಬೆರಳು’ ವೆಂಕಮ್ಮನದೇ ಎಂದು ಹೇಳಲಿಕ್ಕಡ್ಡಿಿಯಿಲ್ಲ.

ಇನ್ನೊೊಂದು ಚಿಕ್ಕ ತರ್ಕವನ್ನೂ ನಾನಿಲ್ಲಿ ಮಂಡಿಸಬೇಕಿದೆ. ಇದಕ್ಕೆೆ ಸುಮಾರು ಐದಾರು ದಶಕಗಳ ಹಿಂದಿನ ಗ್ರಾಾಮೀಣ ಜೀವನಶೈಲಿಯನ್ನು, ಆರ್ಥಿಕ ಸ್ಥಿಿತಿಗತಿಗಳನ್ನು ನೆನಪಿಸಿಕೊಳ್ಳೋೋಣ. ಅಕ್ಕಿಿ ಆರಿಸುವುದು ಅಂದರೆ ಗೆರಸೆಯಲ್ಲಿ ಗೇರುವುದು. ಚಿಕ್ಕಪುಟ್ಟ ಕಲ್ಲು, ಬತ್ತದ ಹೊಟ್ಟು, ರೇಷನ್ ಅಕ್ಕಿಿಯಾದರೆ ಹುಳಹುಪ್ಪಟೆ ಇತ್ಯಾಾದಿಯನ್ನೆೆಲ್ಲ ಪ್ರತ್ಯೇಕಿಸುವ ಕೆಲಸ. ಶ್ರೀಮಂತರ ಮನೆಯಲ್ಲಾಾದರೆ ಅದನ್ನು ಕೆಲಸದವಳು ಮಾಡುತ್ತಾಾಳೆ. ಕೆಳ-ಮಧ್ಯಮ ವರ್ಗದಲ್ಲಾಾದರೆ ಮನೆಯೊಡತಿಯೇ ಮಾಡುತ್ತಾಾಳೆ. ದೈನಂದಿನ ಕೆಲಸಗಳ ವೇಳೆ ಕೈಬೆರಳುಗಳಿಗೆ ಬಂಗಾರದ ಉಂಗುರ ಹಾಕಿಕೊಳ್ಳಬಲ್ಲ ಸಾಮರ್ಥ್ಯ, ಸಂಭವನೀಯತೆ ಇಬ್ಬರಲ್ಲೂ ಕಡಿಮೆಯೇ.

ಅದರರ್ಥ, ‘ಬಂಗಾರವಿಲ್ಲದ ಬೆರಳು’ ಎಂದು ಅನುಪ್ರಾಾಸದ ಎರಡೇ ಎರಡು ಪದಗಳನ್ನು ಬಳಸಿ ನರಸಿಂಹಸ್ವಾಾಮಿಯವರು ಕೆಳ-ಮಧ್ಯಮ ವರ್ಗದ ಚಿತ್ರಣವೊಂದನ್ನು ಸ್ಪಷ್ಟವಾಗಿ, ಸಂಪೂರ್ಣವಾಗಿ ಚಿತ್ರಿಿಸಿದ್ದಾಾರೆ! ಕವಿಯ ತಾಕತ್ತಿಿರುವುದೇ ಅಂಥದರಲ್ಲಿ. ಒಂದುವೇಳೆ ಸಿರಿವಂತ ಹೆಂಗಸಾಗಿದ್ದರೆ, ‘ಬಗೆಬಗೆ ಹೊನ್ನಮುದ್ರಿಿಕೆಯಿಟ್ಟ ಬೆರಳು’ ಎಂದು ಪುರಂದರ ದಾಸರು ಕೃಷ್ಣಮೂರ್ತಿಯನ್ನು ಬಣ್ಣಿಿಸಿದಂತೆ ಕೆಎಸ್‌ನ ಸಹ ಬಣ್ಣಿಿಸುತ್ತಿಿದ್ದರು. ಅಂತಹ ಸಿರಿವಂತ ಹೆಂಗಸು- ದೈವಜ್ಞ ಸೋಮಯಾಜಿಯವರಂತೆ ಒಂದೊಂದು ಬೆರಳಿಗೆ ಒಂದೊಂದು ಬಗೆಯ ಹೊನ್ನಮುದ್ರಿಿಕೆಗಳನ್ನಿಿಟ್ಟುಕೊಂಡು- ಅಕ್ಕಿಿ ಆರಿಸುತ್ತಿಿರುವ ದೃಶ್ಯವನ್ನು ನಾವು ಕಲ್ಪಿಿಸಬಲ್ಲೆೆವೇ?

ಈಗ, ‘ಬಂಗಾರ ಇಲ್ಲದಿರುವಿಕೆ ಎದ್ದುಕಾಣುತ್ತಿಿತ್ತು’ ಎಂಬ ವಾಕ್ಯವನ್ನು ವಿಶೇಷವಾಗಿ ಗಮನಿಸಿ. ಬಂಗಾರ ಬಿಟ್ಟುಬಿಡಿ ಹಳದಿ ಲೋಹದ ಮೋಹ ಒಳ್ಳೆೆಯದಲ್ಲ. ‘ಇಲ್ಲದಿರುವಿಕೆ ಎದ್ದುಕಾಣುತ್ತಿಿತ್ತು’ ಎಂಬ ಭಾಗವಷ್ಟೇ ಸಾಕು, ಇದೊಂದು ಸ್ವಾಾರಸ್ಯಕರ ಯೋಚನಾಲಹರಿಯನ್ನು ಮುಂದುವರೆಸಲು. ಇಲ್ಲದಿರುವಿಕೆ ಎಂಬ ಪದದಲ್ಲೇ ಒಂದು ವಿರೋಧಾಭಾಸ ಇದೆ ನೋಡಿ. ಈ ಪದವನ್ನು ತುಂಡರಿಸಿದಾಗ ಸಿಗುವ ‘ಇಲ್ಲದೆ’ ಮತ್ತು ‘ಇರುವಿಕೆ’ ಇವು ಪರಸ್ಪರ ವಿರೋಧಪದಗಳು! ಹಾಗಾಗಿ, ಇಲ್ಲ ಎಂದು ಅರ್ಥೈಸಿಕೊಳ್ಳಬೇಕೇ, ಅಥವಾ ಇದೆ ಎಂದು

ಅರ್ಥೈಸಿಕೊಳ್ಳಬೇಕೇ? ಎದ್ದುಕಾಣುತ್ತಿಿತ್ತು ಅಂತ ಬೇರೆ ಇದೆ. ಇದ್ದದ್ದು ಎದ್ದುಕಾಣಬಹುದು, ಇಲ್ಲದ್ದು ಎದ್ದುಕಾಣುವುದು ಹೇಗೆ? ಇದು ಬರೀ ಪದಗಳ ಆಟ, ಭಾಷೆಯ ಚಮತ್ಕಾಾರ ಅಂದುಕೊಳ್ಳಬೇಡಿ. ಇಲ್ಲದಿರುವಿಕೆ ಎದ್ದುಕಾಣುವುದು, ಅಂದರೆ * ್ಚಟ್ಞಜ್ಚ್ಠಿಿಟ್ಠ ಚಿ ಚಿಛ್ಞ್ಚಿಿಛಿ ಎನ್ನುವುದು, ಒಂದು ದೊಡ್ಡ ಸೋಜಿಗ. ಅಗೆದಷ್ಟೂ ಅನಂತವಾಗುವ ವಿಚಾರ. ಇಲ್ಲ, ಏನಿಲ್ಲ, ಏನೂ ಇಲ್ಲ, ಏನೇನೂ ಇಲ್ಲ ಎಂದುಕೊಂಡದ್ದೇ ಇದೆ ಎಲ್ಲವೂ ಇದೆ ಎಂದಾಗುವಾಗ, ಜೊತೆಯಲ್ಲೇ ಒಂಚೂರು ಅಧ್ಯಾಾತ್ಮದ ಲೇಪನವೂ ಸೇರಿದರೆ, ತಲೆ ಗಿರ್ರೆೆನ್ನುತ್ತದೆ.

ಈ *್ಚಟ್ಞಜ್ಚ್ಠಿಿಟ್ಠ ಚಿ ಚಿಛ್ಞ್ಚಿಿಛಿ ಎಂಬ ಪದಪುಂಜ ಇಂಗ್ಲಿಿಷ್‌ನಲ್ಲೂ ಪ್ರಾಾಚೀನ ಕಾಲದಿಂದ ಇದೆಯಂತೆ. ಕ್ರಿಿಸ್ತಶಕ ಒಂದನೆ ಶತಮಾನದಲ್ಲಿ ಬಾಳಿದ್ದ ಟೇಸಿಟಸ್ ಎಂಬ ರೋಮನ್ ಇತಿಹಾಸಜ್ಞ ಲೇಖಕ ಲ್ಯಾಾಟಿನ್ ಭಾಷೆಯಲ್ಲಿ ಬಳಸಿದ್ದ ಪದಪುಂಜವೇ ಆಮೇಲೆ ಇಂಗ್ಲಿಿಷ್‌ಗೂ ಬಂತೆನ್ನುತ್ತಾಾರೆ. ಜುನಿಯಾ ಎಂಬಾಕೆಯ ಶವಯಾತ್ರೆೆಯಲ್ಲಿ ಆಕೆಯ ಸೋದರನ ಮತ್ತು ಗಂಡನ ಅನುಪಸ್ಥಿಿತಿ ಎದ್ದುಕಾಣುತ್ತಿಿತ್ತು ಎಂದು ವಿವರಿಸುವಾಗ ಟೇಸಿಟಸ್ ಈ ಪದಪುಂಜ ಬಳಸಿದ್ದಾಾನಂತೆ. ಈಗಲೂ ನಾವು ಸಭೆಸಮಾರಂಭಗಳಲ್ಲಿ ಯಾರಾದರೂ ಮುಖ್ಯ ವ್ಯಕ್ತಿಿ ಭಾಗವಹಿಸುತ್ತಾಾರೆ ಎಂದು ಬಹುನಿರೀಕ್ಷಿತರು ಕಾಣಿಸಿಕೊಳ್ಳದೇ ಇದ್ದಾಾಗ ಅವರ ಅನುಪಸ್ಥಿಿತಿ ಎದ್ದುಕಾಣುತ್ತಿಿತ್ತು ಎನ್ನುತ್ತೇವೆ. ವ್ಯಕ್ತಿಿಗಳಷ್ಟೇ ಅಲ್ಲ,

ವಸ್ತುಗಳದೂ ಇಲ್ಲದಿರುವಿಕೆ ಎದ್ದುಕಾಣುವುದಿದೆ. 2001ರ ಸೆಪ್ಟೆೆಂಬರ್ 11ರ ದುರ್ಘಟನೆಯಲ್ಲಿ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳು ಉರುಳಿದ ಮೇಲೆ ನ್ಯೂಯಾರ್ಕ್ ನಗರದ ಸ್ಕೈಲೈನ್ ನೋಡಿದಾಗ ಅವುಗಳ ಇಲ್ಲದಿರುವಿಕೆ ಎದ್ದುಕಾಣುತ್ತದೆ. ಅಷ್ಟೇಅಲ್ಲ, ತುಂಬ ಸಂಕಟವೂ ಆಗುತ್ತದೆ. ಈಗ ಅಲ್ಲಿ ‘ಫ್ರೀಡಮ್ ಟವರ್’ ಎಂಬ ಹೆಸರಿನ ಅತಿ ಎತ್ತರದ ಕಟ್ಟಡವೊಂದು ಎದ್ದುನಿಂತಿದೆಯಾದರೂ ಅವಳಿ ಕಟ್ಟಡಗಳನ್ನು ನೋಡಿನೋಡಿ ಅಭ್ಯಾಾಸವಾದವರಿಗೆ ಅವುಗಳ ಇಲ್ಲದಿರುವಿಕೆ ಎದ್ದುಕಾಣುತ್ತದೆ. ‘ಫ್ರೀಡಮ್ ಟವರ್’ ಇದೆ ಎನ್ನುವುದಕ್ಕಿಿಂತಲೂ ‘ಟ್ವಿಿನ್ ಟವರ್‌ಸ್‌’ ಇಲ್ಲ ಎನ್ನುವುದೇ ಮನಸ್ಸಿಿಗೆ ಗಾಢವಾಗಿ ತಟ್ಟುತ್ತದೆ. ಕೈ ಹಿಡಿದು ಜಗ್ಗುತ್ತದೆ.

ಒಂದು ರೀತಿಯಲ್ಲಿ ನಮ್ಮೆೆಲ್ಲರ ಜೀವನವೇ ಹಾಗೆ. ಗೋಪಾಲಕೃಷ್ಣ ಅಡಿಗರು ಅದನ್ನೇ ಎಷ್ಟು ಚೆನ್ನಾಾಗಿ ಹೇಳಿದ್ದಾಾರಲ್ಲವೇ? ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’. ಇದೆ ಎನ್ನುವುದು ನಮಗೆ ಅಲ್ಪ ಎಂಬಂತೆ ಭಾಸವಾಗತೊಡಗುತ್ತದೆ.
ಅತಿಪರಿಚಯಾದವಜ್ಞಾಾ ಎಂದು ಅದರ ಬಗೆಗಿನ ಆದರ ಕ್ಷೀಣಿಸುತ್ತದೆ. ಕೈಯಲ್ಲಿರುವ ಒಂದು ಹಕ್ಕಿಿಯು ಪೊದೆಯಲ್ಲಿರುವ ಎರಡು ಹಕ್ಕಿಿಗಳಿಗೆ ಸಮ ಎಂದು ಎಷ್ಟು ಉಪದೇಶ ಮಾಡಿದರೂ ನಮಗೆ ಹಿಡಿಸುವುದಿಲ್ಲ. ಇಲ್ಲ ಎನ್ನುವುದೇ ಅಗಾಧ, ಅನಂತ, ಅಕ್ಷಯ, ಅತ್ಯಮೂಲ್ಯ ಆಗಿರುತ್ತದೆ ಎಂದುಕೊಳ್ಳುತ್ತೇವೆ. ಅದು ಈಗಲೇ ನಮ್ಮ ಕೈಗೆ ಸಿಗಬೇಕು ಎಂಬ ಹಠ ನಮ್ಮಲ್ಲಿ ಮೂಡುತ್ತದೆ. ಜಿ. ಎಸ್. ಶಿವರುದ್ರಪ್ಪನವರು ಹೇಳಿದ ನುಡಿಗಳು ‘ಎಲ್ಲೋೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊೊಳಗೆ’ ಸಹ ಎಷ್ಟು ಅರ್ಥಗರ್ಭಿತ!

ಈ ಸೃಷ್ಟಿಿ ಆಗುವುದಕ್ಕೆೆ ಮುಂಚೆ ಏನೂ ಇರಲಿಲ್ಲವಂತೆ. ‘ಏನೂ ಇಲ್ಲ’ದ ಸ್ಥಿಿತಿಯಿಂದ ‘ಎಲ್ಲವೂ ಇದೆ’ಯನ್ನು ಭಗವಂತನು ನಮಗೆ ನಿರ್ಮಿಸಿಕೊಟ್ಟನು. ಭಗವಂತನ ಭಕ್ತರಾದ ನಾವು ‘ಎಲ್ಲವೂ ಇದೆ’ಯನ್ನೂ ‘ಏನೂ ಇಲ್ಲ’ವನ್ನೂ ಮನಬಂದಂತೆ ಬದಲಾಯಿಸಿಕೊಂಡೆವು. ಈ ಬ್ರಹ್ಮಾಾಂಡದಲ್ಲಿ ಏನಿದೆ ಏನಿಲ್ಲ ಎಂದು ಬಣ್ಣಿಿಸುತ್ತ ಎಲ್ಲವೂ ಇದೆಯೆನ್ನುವವರು ಮರುಕ್ಷಣದಲ್ಲೇ ಅತೃಪ್ತರಾಗಿ ಏನೂ ಇಲ್ಲ ಎಂದೆವು! ಏನೂ ಇಲ್ಲ ಅಂದರೆ ಸೊನ್ನೆೆ. ಸೊನ್ನೆೆಯ ಕಲ್ಪನೆ ಯಾರದು ಹೇಳಿ? ಆರ್ಯಭಟನದು. ಆತನಿಗಿಂತ ಮುಂಚೆ ಸೊನ್ನೆೆಯ ಬದಲಿಗೆ ದೇವನಾಗರಿ ಲಿಪಿಯ ‘ಖ’ ಅಕ್ಷರ ಬಳಕೆಯಾಗುತ್ತಿಿತ್ತಂತೆ. ಸಂಸ್ಕೃತದಲ್ಲಿ ‘ಖ’ ಅಂದರೆ ಆಕಾಶ. ಖಗ = ಪಕ್ಷಿ, ಖಗೋಳ =

ಭೂಮ್ಯಾಾಕಾಶಗಳು ಸೇರಿದ ಬ್ರಹ್ಮಾಾಂಡ. ಖೇಚರ = ಆಕಾಶದಲ್ಲಿ ಸಂಚರಿಸುವ. ಇವೆಲ್ಲ ಪದಗಳು ಇದೇ ‘ಖ’ ದಿಂದ ಬಂದಂಥವು. ಆಕಾಶವೆಂದರೆ ಅನಂತವಾದುದು. ‘ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ…’ ಈಶಾವಾಸ್ಯ ಉಪನಿಷತ್ತು ವಿವರಿಸುವ ಅದೇ ಇನ್ಫಿಿನಿಟಿ ಆಕಾಶ. ಪೂರ್ಣ ವೃತ್ತವನ್ನು ಬರೆದಾಗ ಅದು ಸೊನ್ನೆೆಯಂತೆ ಕಾಣುವುದು. ಆ ಸೊನ್ನೆೆಯೇ ಹಿಗ್ಗಿಿ ಬ್ರಹ್ಮಾಾಂಡವಾಗುವುದು. ಸೊನ್ನೆೆಯಿಂದ ಸೊನ್ನೆೆ ಕಳೆದರೂ ಸೊನ್ನೆೆ. ಸೊನ್ನೆೆಗೆ ಸೊನ್ನೆೆ ಕೂಡಿಸಿದರೂ ಸೊನ್ನೆೆ. ಅಧ್ಯಾಾತ್ಮದ ಲೇಪನ ಸೇರಿದರೆ ತಲೆ ಗಿರ್ರೆೆನ್ನುತ್ತದೆ ಎಂದಿದ್ದು ಅದಕ್ಕೇನೇ.

ಇದೆ’ಗಿಂತ ‘ಇಲ್ಲ’ವು ಅನಂತ ಅವಕಾಶ ಎಂದೆನಿಸುವುದಕ್ಕೆೆ ಇಲ್ಲೊೊಂದು ಸುಲಭದಲ್ಲಿ ಅರ್ಥವಾಗುವ ಉದಾಹರಣೆ ಇದೆ ನೋಡಿ: ಅದೊಂದು ಆಶುಭಾಷಣ ಸ್ಪರ್ಧೆ. ಸ್ಪರ್ಧಾಳುಗಳು ಒಬ್ಬೊೊಬ್ಬರಾಗಿ ವೇದಿಕೆಯ ಮೇಲೆ ಹೋಗಿ ಬುಟ್ಟಿಿಯಿಂದ ಚೀಟಿ ಎತ್ತಿಿಕೊಂಡು ಅದರಲ್ಲಿ ಬರೆದಿರುವ ವಿಷಯದ ಬಗ್ಗೆೆ ಐದು ನಿಮಿಷ ಮಾತಾಡಬೇಕು. ‘ನನ್ನ ನೆಚ್ಚಿಿನ ತಿಂಡಿ, ‘ನಾನು ಪ್ರಧಾನಿಯಾದರೆ, ‘ಸೋಶಿಯಲ್ ಮೀಡಿಯಾ ದುಷ್ಪರಿಣಾಮಗಳು ಮುಂತಾದ ತರಹೇವಾರಿ ಟಿಪಿಕಲ್ ವಿಷಯಗಳು. ಸರಿ, ನಾಲ್ಕೈದು ಸ್ಪರ್ಧಾಳುಗಳಿಂದ ಸಪ್ಪೆೆ, ಹದಾ ನಮೂನೆಯ, ಆಂ ಊಂ ಗಳಿಂದ ತುಂಬಿದ ಒಣಭಾಷಣಗಳ ಬಳಿಕ ಒಬ್ಬಾಾಕೆಯ ಸರದಿ ಬಂತು. ಆಕೆ ವೇದಿಕೆಯ ಮೇಲೆ ಹೋಗಿ ಬುಟ್ಟಿಿಯಿಂದ ಚೀಟಿ ಎತ್ತಿಿಕೊಂಡು ತೆರೆದುನೋಡಿದರೆ ಅದರಲ್ಲೇನಿದೆ? ಖಾಲಿ ಚೀಟಿ! ಒಂದುಕ್ಷಣ ತಬ್ಬಿಿಬ್ಬಾಾದ ಆಕೆ ಸ್ಪರ್ಧೆಯ ತೀರ್ಪುಗಾರರಿಗೆ ತನಗೆ ಬಂದ ವಿಷಯದ ಬಗ್ಗೆೆ ತಿಳಿಸಿದಳಂತೆ.

ಅರ್ಥಾತ್ ತನ್ನ ಚೀಟಿಯಲ್ಲಿ ವಿಷಯವೇ ಇಲ್ಲದಿರುವುದನ್ನು ತಿಳಿಸಿದಳಂತೆ. ತೀರ್ಪುಗಾರರಿಗೂ ಕಸಿವಿಸಿ. ಪರವಾಗಿಲ್ಲಮ್ಮ ಇನ್ನೊೊಂದು ಚೀಟಿಯನ್ನು ಎತ್ತಿಿಕೋ ಎನ್ನಬೇಕೇ ಅಥವಾ ನಿನಗೆ ತೋಚಿದ ಯಾವುದೇ ವಿಷಯದ ಬಗ್ಗೆೆಯಾದರೂ ನಿಗದಿತ ಅವಧಿಯಲ್ಲಿ ಭಾಷಣ ಮಾಡು ಎನ್ನಬೇಕೇ ಎಂದು ಉಭಯಸಂಕಟ. ಆದರೆ ಆ ಸ್ಪರ್ಧಾಳು ಅತಿಜಾಣೆ. ಅದಕ್ಕಿಿಂತಲೂ ಹೆಚ್ಚಾಾಗಿ ಸ್ವಾಾಭಿಮಾನಿ. ಮಿಕ್ಕ ಸ್ಪರ್ಧಿಗಳಿಗಿಲ್ಲದ ಹೆಚ್ಚುವರಿ ಆಯ್ಕೆೆಯ ಅವಕಾಶ ತನಗೆ ಬೇಡ ಎಂದು ನಿರಾಕರಿಸಿದಳು. ಆಯ್ತು ಬಿಡಿ, ಈ ‘ವಿಷಯ ಏನೂ ಇಲ್ಲ’ದ ಬಗ್ಗೆೆಯೇ ಮಾತಾಡ್ತೇನೆ ಎಂದು ಹೇಳಿ ಭರ್ಜರಿ ಭಾಷಣ ಬಿಗಿದೇಬಿಟ್ಟಳು. ಇಲ್ಲದ ವಿಷಯವೇ ಅವಳ ಪ್ರತಿಭೆಯ ಮೂಸೆಯಲ್ಲಿ ಅದ್ಭುತ ವಿಷಯವಾಗಿ ಹೊಳೆಯಿತು. ವಿಷಯರಹಿತ ವಿಷಯದ ಬಗ್ಗೆೆ ವಾಗ್ಝರಿ ಹರಿಯಿತು. ತೀರ್ಪುಗಾರರೂ ಆಯೋಜಕರೂ ಸಭಿಕರೂ ಸಹಸ್ಪರ್ಧಿಗಳೂ ತಲೆದೂಗಿದರು. ಚಪ್ಪಾಾಳೆಯ ಸುರಿಮಳೆಯಾಯ್ತು. ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಆಕೆಯ ಪಾಲಾಯ್ತು! ನಿರ್ದಿಷ್ಟ ವಿಷಯ ಬರೆದಿದ್ದ ಚೀಟಿ ಸಿಗುತ್ತಿಿದ್ದರೆ ಆಕೆಯೂ ಆಂ ಊಂ ಎಂದು ಕಾಲಕ್ಷೇಪ ಮಾಡುತ್ತಿಿದ್ದಳೋ ಏನೋ.

ಏನೂ ‘ಇಲ್ಲ’ವೇ ನಮಗೆ ಅಭ್ಯಾಾಸವಾಗಿ ಹೋಗುವುದು, ಮಾತಿನಲ್ಲಿ ಹಾಸುಹೊಕ್ಕಾಾಗುವುದು, ಅದೇ ನಮ್ಮ ಜೀವನಶೈಲಿಯಾಗುವುದೂ ಇದೆ. ‘ನಿಮ್ಮತ್ರ ಒಂದು ಇಂಪಾರ್ಟೆಂಟ್ ವಿಷಯ ಮಾತಾಡೋದಿತ್ತು’ ಎಂದು ಪೀಠಿಕೆ ಹಚ್ಚುವವರನ್ನು ಗಮನಿಸಿ. ಅವರ ಎರಡನೇ ವಾಕ್ಯ ‘ಏನಿಲ್ಲ, ಒಂದು ಹತ್ತುಸಾವಿರ ಸಾಲ ಸಿಗ್ಬಹುದಾ?’ ಎಂದೇ ಇರುತ್ತದೆ. ಮೂರು ಮತ್ತೊೊಂದು ಹೆಂಗಸರು ಒಟ್ಟು ಸೇರಿದಲ್ಲಿ ಲೋಕಾಭಿರಾಮದ ಅಂತೆಕಂತೆ ಮಾತುಕತೆ ಸಾಗುತ್ತಿಿದ್ದಾಾಗ ಯಾರಾದರೂ ಮಧ್ಯ ಪ್ರವೇಶಿಸಿ ‘ಏನ್ ಮಾತಾಡ್ತಿಿದ್ರಿಿ?’ ಎಂದು ಕೇಳಿದರೆ ಥಟ್ಟನೆ ಬರುವ ಉತ್ತರ ‘ಏನೂ ಇಲ್ಲ’ ಎಂದೇ. ಅವರು ಆಡೋ ಮಾತುಗಳು ಶೇಕ್‌ಸ್‌‌ಪಿಯರನ ಕಾಮಿಡಿ ನಾಟಕದ ಹೆಸರಿನಂತೆ ‘ಮಚ್ ಆಡೋ ಎಬೌಟ್ ನಥಿಂಗ್ ಆಗಿರುವುದೂ ನಿಜವೇ ಎನ್ನಿಿ. ಹಾಗೆಯೇ, ತನ್ನ ರೂಮ್‌ನಲ್ಲೇ ಕುಳಿತು ಬ್ರಹ್ಮಾಾಂಡವನ್ನೇ ಸೃಷ್ಟಿಿಸುತ್ತಿಿದ್ದೇನೋ ಎಂದು ಕೆಲಸದಲ್ಲಿ ತಲ್ಲೀನರಾಗಿರುವ ಮಗನನ್ನು/ಮಗಳನ್ನು ಏನ್ಮಾಾಡ್ತಿಿದ್ದೀಯಮ್ಮಾಾ ಊಟಕ್ಕೆೆ ಬಾ ಎಂದು ಕರೆದರೆ ಉತ್ತರ ಬರೋದು ‘ಏನೂ ಇಲ್ಲ’ ಎಂದೇ. ಒಂದೊಮ್ಮೆೆ ಆ ಮಗು ‘ಏನು ಅಡುಗೆ ಇವತ್ತು?’ ಎಂದು ಕೇಳಿದರೆ ಅಮ್ಮನ ಉತ್ತರವಿರುವುದೂ ‘ಏನಿಲ್ಲ, ನಿನ್ನ ಇಷ್ಟದ್ದೇನನ್ನೋೋ ಮಾಡಿದ್ದೇನೆ’ ಎಂದೇ. ಅಲ್ಲೂ ಮೊದಲಿಗೊಂದು ‘ಏನಿಲ್ಲ’ ಇರಲೇಬೇಕು.

ಭಿಕ್ಷುಕನೊಬ್ಬ ಮನೆಮುಂದೆ ನಿಂತು ‘ಅಮ್ಮಾಾ ತಾಯೀ…’ ಎಂದು ದೈನ್ಯದಿಂದ ಕೂಗಿದ. ಒಳಗಿಂದ ಬಂದ ಉತ್ತರ ‘ಏನಿಲ್ಲ, ಮುಂದೆ ಹೋಗು!’ ಆ ಭಿಕ್ಷುಕನೋ ಮಾತಿನಲ್ಲಿ ಜಾಣ. ‘ಏನೂ ಇಲ್ಲ ಅಂತಾದ್ರೆೆ ನೀವೂ ನನ್ನೊೊಟ್ಟಿಿಗೆ ಬನ್ನಿಿ ತಾಯಿ, ಒಟ್ಟಿಿಗೇ ಭಿಕ್ಷೆ ಬೇಡೋಣ’ ಎಂದನಂತೆ. ಮಹಾಭಾರತದಲ್ಲಿ ದೂರ್ವಾಸರು ಬಂದಾಗ ದ್ರೌೌಪದಿಗೆ ಅದೇ ಸನ್ನಿಿವೇಶ ಬಂದದ್ದಲ್ವಾಾ? ದೂರ್ವಾಸರು ಬಂದದ್ದು ಭಿಕ್ಷುಕನಾಗಿ ಅಲ್ಲ, ಅತಿಥಿಯಾಗಿ. ಜತೆಯಲ್ಲೊೊಂದಿಷ್ಟು ಜನ ಶಿಷ್ಯರು. ಎಲ್ಲರಿಗೂ ಹಸಿವೆಯಾಗಿದೆ. ಆದರೆ ಅವರಿಗೆ ಬಡಿಸಲಿಕ್ಕೆೆ ದ್ರೌೌಪದಿಯ ಬಳಿ ಏನೂ ಇರಲಿಲ್ಲ. ನಥಿಂಗ್. ಆಕೆ ಅನ್ನದ ಪಾತ್ರೆೆ ಸರಿಯಾಗಿ ತೊಳೆದಿರಲಿಲ್ಲವೋ ಅಥವಾ ಜಗನ್ನಿಿಯಾಮಕನ ಮಾಯೆಯೋ ಅಂತೂ ಪಾತ್ರೆೆಯಲ್ಲಿ ಒಂದು ಅಗಳು ಕಂಡುಬಂತು. ನಥಿಂಗ್ ಇದ್ದದ್ದು ಸಮ್‌ಥಿಂಗ್ ಆಯ್ತು. ಕೃಷ್ಣಪರಮಾತ್ಮ ಅದನ್ನು ಅಕ್ಷಯಪಾತ್ರೆೆಯಾಗಿಸಿದ. ಸಮ್‌ಥಿಂಗ್ ಇದ್ದದ್ದು ಎವೆರಿಥಿಂಗ್ ಆಯ್ತು! ಹಾಗಾಗಿ, ಏನೂ ಇಲ್ಲ ಎಂದು ಹೇಳಿದರೂ ಊಪರ್‌ವಾಲಾ ಕೈಹಿಡಿದೇ ಹಿಡಿಯುತ್ತಾಾನೆನ್ನುವುದು ಶತಸಿದ್ಧ.

ಕೊನೆಯಲ್ಲಿ ಇನ್ನೂ ಒಂದು ‘ಏನೂ ಇಲ್ಲ’ ರಸಪ್ರಸಂಗವನ್ನು ಬಣ್ಣಿಿಸಿ ಈ ಹರಟೆಯನ್ನು ಮುಗಿಸುತ್ತೇನೆ. ಇದನ್ನು ನನಗೆ ಮೈಸೂರಿನಲ್ಲಿರುವ ಹಿರಿಯ ಮಿತ್ರ ಪ್ರೊೊ.ವಿಕ್ರಮ ಕವಲಿ ಅವರು ಹೇಳಿದ್ದು. ಯಥಾವತ್ತಾಾಗಿ ಅವರ ಮಾತುಗಳಲ್ಲೇ ಕೇಳಬೇಕು. ಹೈಸ್ಕೂಲಿನಲ್ಲಿದ್ದಾಾಗ ನಮಗೆ ಬಡಿಗೇರ ಎಂಬ ಮಾಸ್ತರ ಇದ್ದರು. ಅವರ ಕುಲಕಸಬು ಬಡಗಿತನವೇ. ಹೆಚ್ಚಿಿನ ವ್ಯಾಾಸಂಗ ಮಾಡಿ ಮಾಸ್ತರ ಆಗಿದ್ದರು. ಅವರ ಮಗ ರುದ್ರಣ್ಣ ನನ್ನ ಕ್ಲಾಾಸಿನಲ್ಲಿ ಸಹಪಾಠಿ, ಗೆಳೆಯ. ಆಗಾಗ ಭಾನುವಾರದ ಬಿಡುವಿನ ವೇಳೆಯಲ್ಲಿ ನಮ್ಮ ಮನೆಗೆ ಬರುತ್ತಿಿದ್ದ. ಹೀಗೆಯೇ ಒಂದು ದಿನ ಬಂದಾಗ ಕೀಟಲೆಯ ಸ್ವಭಾವದ ನಮ್ಮ ಅಣ್ಣ, ‘ಏನು ರುದ್ರಣ್ಣಾಾ, ನಿಮ್ಮ ಅಪ್ಪ ಮನ್ಯಾಾಗ ಇದ್ದಾಾನ?’ ಎಂದು ಕೇಳಿದ. ‘ಹೂಂ, ಇದ್ದಾಾನೆ’ ಎಂದನು ರುದ್ರಣ್ಣ. ‘ಏನ ಮಾಡ್ತಿಿದ್ದಾಾನೆ?’ ಎಂದು ಮತ್ತೆೆ ನನ್ನಣ್ಣನ ಪ್ರಶ್ನೆೆ. ‘ಏನೂ ಇಲ್ಲ’ ಎಂದು ರುದ್ರಣ್ಣನ ಉತ್ತರ. ‘ಅದಕ್ಕ ನೀ ತಪ್ಪಿಿಸ್ಗೊೊಂಡ್ ಓಡಿ ಬಂದ್ಬಿಿಟ್ಯಾಾ?’ ಎಂದು ನಸುನಕ್ಕ ನನ್ನ ಅಣ್ಣ. ಪಾಪ, ರುದ್ರಣ್ಣ ಇಂತಹ ಸಂದರ್ಭಗಳಲ್ಲಿ ಎಲ್ಲರೂ ಕೊಡುವ ತರಹ ‘ಏನಿಲ್ಲ’ ಎಂಬ ಮುಗ್ಧ ಉತ್ತರ ಕೊಟ್ಟಿಿದ್ದ. ನಮ್ಮ ಅಣ್ಣನ ವ್ಯಂಗ್ಯ ಅವನಿಗೆ ತಿಳಿಯಲಿಲ್ಲ. ಉದ್ಯೋೋಗವಿಲ್ಲದ ಬಡಗಿ ಏನು ಮಾಡುತ್ತಾಾನೆ ಎಂಬ ಗಾದೆಯ ಮಾತು ರುದ್ರಣ್ಣನಿಗೆ ಗೊತ್ತಿಿತ್ತೇನೋ ನಿಜ. ಆದರೆ ಆ ಸಮಯದಲ್ಲಿ ತನ್ನಪ್ಪ ಒಬ್ಬ ಬಡಗಿ ಎನ್ನುವ ವಿಷಯ ಅವನ ಗಮನದಲ್ಲಿ ಬಂದಿರಲಿಲ್ಲ!

ಇವತ್ತಿಿನದು ತಿಳಿರುತೋರಣದ ಇನ್ನೂರನೆಯ ಎಲೆ. ಈ ಸಂದರ್ಭಕ್ಕೆೆ ಅಂಕಣದಲ್ಲಿ ಏನು ವಿಶೇಷ ವಿಷಯ ಅಂತ ಕೇಳಿದಿರಾದರೆ ಉತ್ತರ: ‘ಏನೂ ಇಲ್ಲ!’ ನಿಮ್ಮ ನಿರಂತರ ಪ್ರೀತಿ ಪ್ರೋೋತ್ಸಾಾಹಗಳಿಗೆ, ತಿಳಿವನ್ನು ಹೆಚ್ಚಿಿಸುವುದರಲ್ಲಿ ನೀವೆಲ್ಲರೂ ಭಾಗಿಯಾಗುತ್ತಿಿರುವುದಕ್ಕೆೆ, ಹೃತ್ಪೂರ್ವಕ ಧನ್ಯವಾದ. ಅಮೆರಿಕದಲ್ಲಿ ಇದು ‘ಥ್ಯಾಾಂಕ್‌ಸ್‌ ಗಿವಿಂಗ್’ ಹಬ್ಬದ ಸೀಸನ್ ಆಗಿರುವುದೊಂದು ಕೊಇನ್ಸಿಿಡೆನ್ಸು. ಮತ್ತೆೆ ಮುಂದಿನವಾರ ಭೇಟಿಯಾಗೋಣ- ವಿಷಯ ‘ಏನಿಲ್ಲ’ ಖಂಡಿತ ಅಲ್ಲ!

error: Content is protected !!