Friday, 1st December 2023

ಹುಸಿ ವಿಜ್ಞಾನಿಗಳು, ಬಯೋಪೈರೆಸಿ – ಮಷೇಲ್ಕರ್‌

ಶಿಶಿರಕಾಲ

shishirh@gmail.com

ಹೊಸಬರನ್ನು ಭೇಟಿಯಾದಾಗ ಅವರ ಉದ್ಯೋಗವವೇನೆಂದು ಕೇಳುತ್ತೇವೆ. ಆ ಮೂಲಕ ಅವರ ದಿನಚರಿ, ಮನೆ, ಬದುಕು, ಜೀವನ ರೀತಿ, ಆರ್ಥಿಕ ಮಟ್ಟ ಮತ್ತಿತ್ಯಾದಿ ಒಂದಿಷ್ಟನ್ನು ಅಂದಾಜಿಸಿಕೊಳ್ಳುತ್ತೇವೆ. ಅದಕ್ಕನುಗುಣವಾಗಿ ವ್ಯವಹಾರ ಮುಂದುವರಿಯುತ್ತದೆ. ಈ ಕೆಲಸವನ್ನು ಪ್ರತಿಯೊಬ್ಬರೂ ಮಾಡುತ್ತಾರೆ. ನಮ್ಮ ಸುತ್ತಲಿನ ಬಹಳಷ್ಟು ಉದ್ಯೋಗಗಳು ಏನೆಂಬುದು ಜನಸಾಮಾನ್ಯರಿಗೆ, ಉಳಿದವರಿಗೆ ತಿಳಿದಿರುತ್ತದೆ. ಉದಾಹರಣೆಗೆ ಶಿಕ್ಷಕ, ಬಸ್ ಕಂಡಕ್ಟರ್,
ಡಾಕ್ಟರ್ ಇತ್ಯಾದಿ. ಅವರೆಲ್ಲರ ಉದ್ಯೋಗ ಮತ್ತು ದುಡಿಮೆ, ಹೇಗೆ ಮತ್ತು ಎಷ್ಟು ಎಂಬ ಅಂದಾಜು ಸಾರ್ವಜನಿ ಕರಿಗೆ ಇದೆ.

ಇನ್ನು ಕೆಲವೊಂದಿಷ್ಟು ಉದ್ಯೋಗಗಳಿವೆ – ವಿಜ್ಞಾನಿಗಳು, ಬಯೋಟೆಕ್, ಐಟಿ, ಗುಪ್ತಚರ ಇತ್ಯಾದಿ. ಇವರೆಲ್ಲರ ಕಾರ್ಯಕ್ಷೇತ್ರ ಸಾರ್ವಜನಿಕವಲ್ಲ. ಹಾಗಾಗಿ ಸಿನೆಮಾ ಅಥವಾ ಇನ್ಯಾವುದೋ ವಿವರಣೆಯಿಂದಲೇ ಅವರ ಉದ್ಯೋಗ, ಜೀವನ ವನ್ನು ಉಳಿದವರು ಕಲ್ಪಿಸಿಕೊಳ್ಳುವುದು. ಈ ರೀತಿ ಉದ್ಯೋಗದಿಂದ ಅಳೆದು ತೂಗುವ ಕೆಲಸ ಇಷ್ಟಕ್ಕೇ ನಿಲ್ಲು ವುದಿಲ್ಲ. ಅದರಾಚೆ ಇಂತಹ ಉದ್ಯೋಗವೆಂದರೆ ಅವರ ವ್ಯಕ್ತಿತ್ವವೂ ಹೀಗೆಯೇ ಎಂಬೊಂದು ಸಾರ್ವಜನಿಕ ಭ್ರಮೆ ಶುರುವಾಗುತ್ತದೆ. ಉದಾಹರಣೆಗೆ ಐಟಿ ಎಂದರೆ ಇಡೀ ದಿನ ಕಂಪ್ಯೂಟರಿ ನೊಳಕ್ಕೆ ತಲೆ ತೂರಿಸಿಕೊಂಡು ಕೂರುವ, ಸಮಾಜಕ್ಕೆ ನಿಷ್ಪ್ರಯೋಜಕ, ಆದರೆ ಚೆನ್ನಾಗಿ ದುಡಿಯುವ ವರ್ಗ ಎಂದು.

ವಿಜ್ಞಾನ ಕ್ಷೇತ್ರದ ಉದ್ಯೋಗಗಳೂ ಹಾಗೆಯೇ. ಸೈಂಟಿಸ್ಟ್ ಎಂದಾಕ್ಷಣ ಬಿಳಿ ಏಪ್ರನ್- ನಿಲುವಂಗಿ ಹಾಕಿ ಕೊಂಡ, ಕನ್ನಡಕ ಧರಿಸಿ, ಫ್ರೆಂಚ್ ಗಡ್ಡ ಬಿಟ್ಟುಕೊಂಡ, ಹೊರ ಜಗತ್ತಿನ ಇರುವಿನ ಕಲ್ಪನೆಯೇ ಇರದ, ತಮ್ಮದೇ ಲೋಕದಲ್ಲಿ ಬದುಕುವ ಅತ್ಯಂತ ಶಾಣ್ಯಾ ಮಂದಿ. ಅವರು ಏನನ್ನಾದರೂ ಕಂಡುಹಿಡಿದರೆ ಸ್ನಾನ ಮಾಡುವು ದನ್ನು ಬಿಟ್ಟು ಬಟ್ಟೆಯಿಲ್ಲದೇ ಬೀದಿಗೆ ಓಡಿ ಬಂದುಬಿಡುತ್ತಾರೆ, ಮ್ಯಾಡ್ ಸೈಂಟಿಸ್ಟ್ – ಎಂಬಿತ್ಯಾದಿ ಕಲ್ಪನೆ ಗಳು. ಈ ಎಂಜಿನಿಯರಿಂಗ್, ಸೈನ್ಸ್ ಇವೆಲ್ಲವುಗಳಲ್ಲಿ ಸಾವಿರಾರು ಉಪ ವಿಭಾಗಗಳಿವೆ ಎಂಬ ಅಂದಾಜು ಹಲವರಿಗೆ ಇರುವುದಿಲ್ಲ. ಇವೆಲ್ಲ ಒಂದೇ ಉದ್ಯೋಗವಲ್ಲ. ಒಂದು ವೈಜ್ಞಾನಿಕ ಅಥವಾ ಎಂಜಿನಿಯ ರಿಂಗ್ ಕಂಪನಿಯಿದೆಯೆಂದರೆ ಅಲ್ಲಿ ಸಾವಿರದೆಂಟು ರೀತಿಯ ಕೆಲಸದವರ ಅವಶ್ಯಕತೆಯಿರುತ್ತದೆ.

ಐಟಿ ಕಂಪನಿಯಲ್ಲಿರುವವರೆಲ್ಲ ಕೋಡಿಂಗ್, ಎಕ್ಸೆಲ್ ಶೀಟ್ ಮಾಡಿಕೊಂಡು ಕೂರುವವರಲ್ಲ. ಅಲ್ಲಿಯೂ ಕಸ ಗುಡಿಸುವವನಿಂದ ಹಿಡಿದು ಹಣದ ಲೆಕ್ಕವಿಡುವ
ಪರಿಶೋಧಕನವರೆಗೆ ಎಲ್ಲರೂ ಬೇಕು. ಅಮೆರಿಕದಲ್ಲಿ ಬಹಳಷ್ಟು ಮಂದಿ  NRI  ವಿಜ್ಞಾನಿಗಳಿದ್ದಾರೆ. ಅವರಲ್ಲಿ ಮಹಾನ್ ಸಾಧಕರಿದ್ದಾರೆ, ಜಗತ್ತನ್ನೇ ಬದಲಿಸಿದ
ಆವಿಷ್ಕಾರ ಮಾಡಿದವರಿzರೆ. ಇನ್ನು ಕೆಲವರು ದೊಡ್ಡ ಲ್ಯಾಬ್‌ಗಳಲ್ಲಿ ಕೆಲಸಮಾಡುವವರು. ಅವರೆಲ್ಲರೂ ವಿಜ್ಞಾನಿ ಗಳೇ ಆಗಿದ್ದರೂ ಕೆಲಸ ಭಿನ್ನ. ಸೈಂಟಿಸ್ಟ್ ಎಂದಾಕ್ಷಣ ಎಲ್ಲರೂ ದೊಡ್ಡದೊಂದು ಅವಿಷ್ಕಾರದತ್ತ ಕೆಲಸ ಮಾಡುತ್ತಿರುತ್ತಾರೆ ಎಂದೇನಲ್ಲ. ಬಹುತೇಕರದು ಯಾವುದೊ ಚಿಕ್ಕ ವಿಭಾಗದಲ್ಲಿ ಕೆಲಸವಿರುತ್ತದೆ. ನಾನು ಹೇಳಲು ಹೊರಟಿರುವುದು ಇನ್ನೊಂದು ನಮೂನೆಯ  NRI  ವಿಜ್ಞಾನಿಗಳ ಬಗ್ಗೆ. ಇವರದು ಹೇಳಲಿಕ್ಕೆ ವಿಜ್ಞಾನದ ಲ್ಯಾಬ್‌ನಲ್ಲಿ ಕೆಲಸ.

ಅವರು ಲ್ಯಾಬ್‌ನಲ್ಲಿ ಎಲೆಕ್ಟ್ರಿಷಿಯನ್, ಸ್ವಚ್ಛತೆಯ, ತ್ಯಾಜ್ಯ ನಿರ್ವಹಣೆಯ ಮೇಲ್ವಿಚಾರಕರಾಗಿರುತ್ತಾರೆ. ಅಥವಾ ಅಲ್ಲಿನ ಅಕೌಂಟಿಂಗ್‌ನಲ್ಲಿ ಕೆಲಸ ಮಾಡುತ್ತಿ ರುತ್ತಾರೆ. ಅವರು ಮೊದಮೊದಲು ತಾನು ಕೂಡ ವಿಜ್ಞಾನಿ ಎಂದು ಹೇಳಿಕೊಂಡಿರುತ್ತಾರೆ. ಕಾಲ ಕಳೆದಂತೆ ಈ ಸುಳ್ಳು ಅಷ್ಟಕ್ಕೇ ನಿಲ್ಲುವುದಿಲ್ಲ. ತಾನು ಕೂಡ ಏನೋ ಒಂದು ಆವಿಷ್ಕಾರ ಮಾಡಿದ್ದೇನೆ ಎಂಬ ಸುಳ್ಳು ಶುರು ವಾಗುತ್ತದೆ. ಇಂಥವರಲ್ಲಿ ಕೆಲವರದ್ದು ವಿಚಿತ್ರ ಖಯಾಲಿ. ಸಿಕ್ಕ ಸಿಕ್ಕ ಸಭೆಗಳಲ್ಲಿ, ಸಮಾರಂಭ ಗಳಲ್ಲಿ, ಉತ್ಸವಗಳಲ್ಲಿ ತಮ್ಮ ಸಾಧನೆಯ ಸುಳ್ಳನ್ನು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಜನಾಕರ್ಷಣೆ ಮತ್ತು ಗೌರವವನ್ನು ಪಡೆಯುವ ಕೀಳು ಮಟ್ಟದ ಹಪಾಹಪಿ ಅದು.

ಅಂತಹ ಕೆಲವು  NRI  ವಿಜ್ಞಾನಿಗಳು ಭಾರತದಲ್ಲಿನ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ, ಅವರಿಗೆ ಒಂದಿಷ್ಟು ದುಡ್ಡು ಕೊಟ್ಟು, ಅವರಿಂದ ಕರ್ನಾಟಕ ರತ್ನ, ಮುತ್ತು, ಹವಳ, ಪಚ್ಛೆ, ಭೂಷಣ ಎಂಬಿತ್ಯಾದಿ ನಕಲಿ ಪ್ರಶಸ್ತಿ ಪಡೆಯುತ್ತಾರೆ. ಅಂಥದ್ದನ್ನು ಫೋಟೋಫ್ರೇಮ್ ಹಾಕಿ ಸಂಭ್ರಮಿಸುತ್ತಾರೆ, ನಿರಂತರ ಹೇಳಿ ಕೊಂಡು ತಿರುಗುತ್ತಿರುತ್ತಾರೆ. ಸೋಷಿಯಲ್ ಮೀಡಿಯಾ ದಲ್ಲಿ ಹಾಕುತ್ತಾರೆ. ಬಹುತೇಕರು, ಇರಬಹುದು ಬಿಡು ಎಂದು ಸುಮ್ಮನಾಗುವವರೇ. ಇಬ್ಬರಿದ್ದಾರೆ. ಅವರ ಪ್ರಕಾರ
ಅರಿಶಿನವನ್ನು ಕಂಡುಹಿಡಿದದ್ದೇ ಇವರು. ಅರಿಶಿನದ ಔಷಽಯ ಗುಣಗಳ ಬಗ್ಗೆ ಜಗತ್ತಿಗೆ ತಿಳಿಸಿದ್ದು ಇವರು. ಇವರಲ್ಲಿಯೇ ಮೊದಲು!

ಆವಿಷ್ಕಾರಕ್ಕೆ ನೊಬೆಲ್ ಎಲ್ಲ ಬರಬೇಕಿತ್ತು ಎಂದು ಇವರೇ ಹೇಳಿಕೊಂಡು ತಿರುಗುವುದು. ಪುಣ್ಯಾತ್ಮನ ಹೆಸರಲ್ಲಿ ಒಂದೇ ಒಂದು ಪೇಟೆಂಟ್ ಬಿಡಿ, ಖಾಲಿ ಟೆಂಟ್
ಕೂಡ ಇಲ್ಲ. ಅವರ ಪ್ರಕಟವಾದ ರದ್ದಿ ಪೇಪರ್‌ಗೆ ಒಂದೆರಡು ‘ಸೈಟೇಷನ್’ ಬಿಟ್ಟರೆ, ಬಾಕಿಯದೆಲ್ಲ ಬಾಯಿಯ ಲ್ಲಿನ ಸರ ಪಟಾಕಿ, ಹಸೀ ಸುಳ್ಳು. ಕೆಲವೊಮ್ಮೆ ಇಂಥವರು ಕನ್ನಡ ಕೂಟ, ಅದೂ-ಇದು ಗುಂಪಿನಲ್ಲಿ ಸೇರಿಕೊಂಡು, ನಿರಂತರ ಸುಳ್ಳುಹೇಳುತ್ತ, ಇರುವವರಿಗೆಲ್ಲ ಹಿಂಸಿಸುತ್ತಿರುತ್ತಾರೆ. ಅಂಥ ವರು ಕೊಡುವ ಡೊನೇಶನ್‌ನಿಂದಾಗಿ ಸಹಿಸಿಕೊಳ್ಳಬೇಕಾದ ಸ್ಥಿತಿ ಕೆಲವೊಮ್ಮೆ ಎದುರಾಗುತ್ತದೆ.

ಕಳೆದ ಒಂದು ಶತಮಾನದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ನಡೆದಷ್ಟು ಮೋಸ, ವಂಚನೆ, ಮಾತ್ಸರ್ಯ, ಪ್ರಲೋಭನೆ, ಕಳ್ಳತನ, ಸುಳ್ಳು, ದಬ್ಬಾಳಿಕೆ ಬಹುಶಃ ಇನ್ನೊಂದು
ಉದ್ಯೋಗದಲ್ಲಿ ನಡೆ ದಿರಲಿಕ್ಕಿಲ್ಲ. ಅಷ್ಟೊಂದು ಮೋಸ, ಏನೋ ಒಂದನ್ನು ಕದ್ದು ತಾನೇ ಕಂಡುಹಿಡಿದದ್ದು ಎನ್ನುವುದು, ಮಧ್ಯ ರಾತ್ರಿ ಇನ್ನೊಬ್ಬ
ವಿಜ್ಞಾನಿಯ ನೋಟ್ಸ್ ಕದ್ದು ಅದೆಲ್ಲ ತನ್ನದೇ ಆವಿಷ್ಕಾರ ಎಂದು ಮೊದಲೇ ಹಕ್ಕು ಸ್ಥಾಪಿಸಿಬಿಡುವುದು. ಸಮಾಜದಲ್ಲಿ ಆವಿಷ್ಕರಿಸಿದ ವಿಜ್ಞಾನಿ ಎಂದರೆ ವಿಶೇಷ ಮರ್ಯಾದೆಯಲ್ಲವೇ? ಹಾಗಾಗಿ ಬೇರೆ ದೇಶಗಳಿಗೆ ಹೋಗುವುದು, ಅಲ್ಲಿನ ಭಾಷೆ ಯನ್ನೂ ಕಲಿಯುವುದು, ಅಲ್ಲಿಂದ ತಿಳಿದು, ಕದ್ದು ತಂದು ಇದನ್ನು ನಾನೇ ಕಂಡುಹಿಡಿದೆ ಎನ್ನುವ ಕೆಲಸ. ಇದು ಯಥೇಚ್ಛ ವಾಗಿ ನಡೆಯಿತು.

ಈ ನಡುವೆ ಕೆಲವು  NRI  ವಿಜ್ಞಾನಿಗಳು ಭಾರತದಲ್ಲಿ ಅವರ ಅಜ್ಜಿ ಅಮ್ಮಂದಿರು ಹೇಳಿದ ಬೇರು ಬೊಗಟೆಗಳನ್ನೆಲ್ಲ ಅಮೆರಿಕಕ್ಕೆ, ಯುರೋಪಿಗೆ ತೆಗೆದುಕೊಂಡು
ಹೋಗುವುದು, ಅಲ್ಲಿ ಅಮ್ಮ ಅಜ್ಜಿ ಹೇಳಿದ್ದನ್ನು ಪರಾಮರ್ಶಿಸುವುದು, ಹೌದೆಂದಾರರೆ ತಮ್ಮದೇ ಅವಿಷ್ಕಾರವೆನ್ನುವುದು. ಪೇಟೆಂಟ್ ಪಡೆದುಬಿಡುವುದು. ಹೀಗೆ ನಮ್ಮ ಜ್ಞಾನವನ್ನು ಕೇವಲ ಪಾಶ್ಚಾತ್ಯರಷ್ಟೇ ಕದ್ದೊಯ್ಯುವ ಕೆಲಸ ಮಾಡಲಿಲ್ಲ. ಸ್ವಾತಂತ್ರ್ಯಾನಂತರವಂತೂ ಅಸಂಖ್ಯ ಭಾರತೀಯ ಸಂಜಾತ ವಿಜ್ಞಾನಿಗಳು ಈ ಕzಯ್ಯುವ ಕೆಲಸ ಮಾಡಿದರು. ಭಾರತ, ಆಫ್ರಿಕಾ ಮೊದಲಾದಲ್ಲಿನ ಶತಮಾನದಷ್ಟು ಹಳೆಯ ಜ್ಞಾನವನ್ನೆಲ್ಲ ತಮ್ಮದೇ ಆವಿಷ್ಕಾರವೆಂದು ಪೇಟೆಂಟ್ ಪಡೆಯುವುದು ೧೯೭೦ರ ನಂತರ ಎಗ್ಗಿಲ್ಲದೆ ನಡೆಯಿತು.

ಪೇಟೆಂಟ್ ವ್ಯವಸ್ಥೆ ಬಹಳ ಹಿಂದಿನಿಂದ ಇತ್ತು. ವಿಜ್ಞಾನಿಯಾದವನು ತನ್ನ ಆವಿಷ್ಕಾರದ ಮೇಲೆ ಇಪ್ಪತ್ತು ವರ್ಷ ಸಂಪೂರ್ಣ ಹಕ್ಕನ್ನು ಹೊಂದುವ ವ್ಯವಸ್ಥೆ. ಪೇಟೆಂಟ್ ಆಫೀಸಿಗೆ ಹೋಗಿ ತಾನು ಕಂಡುಹಿಡಿದದ್ದರ ವಿವರಣೆ ಸಲ್ಲಿಸಬೇಕು, ಅದಕ್ಕೆ ಅಲ್ಲಿನ ತಜ್ಞರು ‘ಹೌದು, ಇದು ಒಂದು ಹೊಸ ಆವಿಷ್ಕಾರ’ ಎಂದು ಪೇಟೆಂಟ್ ಕೊಡಬೇಕು. ಮುಂದಿನ ೨ ದಶಕ ಆ ಆವಿಷ್ಕಾರದ ಸಂಪೂರ್ಣ ಹಕ್ಕು, ಲಾಭಾಂಶ, ಎಲ್ಲಿ ಹೇಗೆ ಬಳಸಬೇಕು ಎಂಬಿತ್ಯಾದಿಯ ನಿರ್ಧಾರ ಆತನದು.
ಉಳಿದವರು ಅದನ್ನು ಬಳಸಬೇಕೆಂದರೆ ರಾಯಲ್ಟಿ- ರಾಯ ಧನ ಕೊಟ್ಟು ಅನುಮತಿ ಪಡೆಯಬೇಕು.

ಈ ರೀತಿ ಹೊರ ಬಡ ದೇಶದ ಸಾಂಪ್ರದಾಯಿಕ ಜ್ಞಾನವನ್ನು ಕದ್ದು ತರುವುದು, ಅದನ್ನು ತನ್ನದೇ ಆವಿಷ್ಕಾರ ಎನ್ನುವುದು. ಇದು ನಿರಂತರವಾಗಿ ಬಹು ಕಾಲದಿಂದ ನಡೆದುಬಂದದ್ದೇ ಆದರೂ ೧೯೮೦-೧೯೯೫ರ ಸಮಯದಲ್ಲಿ ಇದು ತಾರಕಕ್ಕೇ ರಿತ್ತು. ಇದಕ್ಕೊಂದು ಹೆಸರಿದೆ -Biopiracy. ಆ ಸಮಯ ದಲ್ಲಿ ಸಾಕಷ್ಟು ಹಣ ವಿeನಕ್ಕೆ ವಿನಿಯೋಗವಾಗು ತ್ತಿತ್ತು. ಟೆಕ್ನಾಲಜಿ ಎಂಬ ಹೊಸತೊಂದು ವಿeನ ಹುಟ್ಟಿ ಮೈಮುರಿಯುತ್ತಿದ್ದ ಸಮಯ ಅದು. ವಿeನ ಕಲಿತವರು ಭಾರತದಿಂದ
ಅಮೆರಿಕಕ್ಕೆ ಅದಾಗಲೇ ಬಂದು ಇಲ್ಲಿನ ಲ್ಯಾಬ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಕೆಲವರು –  NRI ಗಳು ಇಂತಹ ಕೆಲಸಕ್ಕೆ ಇಳಿದಿದ್ದರು.

೧೯೯೫ – ಸುಮನ್ ದಾಸ್ ಮತ್ತು ಹರಿಹರ ಕೊಹ್ಲಿ. ಈ ಇಬ್ಬರು  NRI  ವಿಜ್ಞಾನಿಗಳು. ಅರಿಶಿನ ಹಾಕುವುದರ ಮೂಲಕ ದೇಹದ ಮೇಲ್ಮೈನದ ಗಾಯವನ್ನು ಗುಣಮಾಡಬಹುದು ಎಂಬ ದೊಡ್ಡ (!) ವಿಷಯವನ್ನು ತಾವೇ ಆವಿಷ್ಕರಿಸಿರುವುದಾಗಿ, ಮತ್ತು ಇದರ ಮೇಲಿನ ಪೇಟೆಂಟ್ ಕೊಡಬೇಕಾಗಿ ಕೋರಿಕೆ ಸಲ್ಲಿಸಿದರು. ಅದು ಪೇಟೆಂಟ್ ಬೋರ್ಡ್‌ನಿಂದ ಒಪ್ಪಿಗೆಯೂ ಆಗಿ ಹೋಯ್ತು. ಆಗೆಲ್ಲ ಡಿಜಿಟಲ್ ಯುಗವಲ್ಲ. ಹಾಗಾಗಿ ಪೇಟೆಂಟ್ ಕೊಡು ವವರಿಗೆ ಇದು ಅಸಲಿ
ಅವಿಷ್ಕಾರ ವೋ, ನಕಲಿಯೋ ಎಂದು ತಿಳಿಯುವುದು ಹೇಗೆ? ಒಂದಿಷ್ಟು ಅಮೆರಿಕ ಮತ್ತು ಯುರೋಪ್ ರೆಫರೆನ್ಸ್ ಪುಸ್ತಕಗಳನ್ನು ಇಟ್ಟುಕೊಂಡು, ಅದರಲ್ಲಿಲ್ಲ
ದಿದ್ದರೆ ಪೇಟೆಂಟ್ ಕೊಟ್ಟುಬಿಡುತ್ತಿದ್ದರು.

ಅರಿಶಿನದ ಮೇಲಿನ ಪೇಟೆಂಟ್ ಸುದ್ದಿ ಭಾರತದಲ್ಲಿ ಹರಡಿತು. ನಮ್ಮಲ್ಲಿನ ಕೇಂದ್ರ ಮಂತ್ರಿಗಳಿಗೆ ಈ ಪೇಟೆಂಟ್ ಎಂದರೇ ನೆಂಬ ಅಂದಾಜೇ ಇದ್ದಂತಿರಲಿಲ್ಲ ಅಥವಾ ಅಸಡ್ಡೆ. ಅದೆಷ್ಟೋ ಕಾಲ ಈ ರೀತಿ ಭಾರತದ ಜ್ಞಾನವನ್ನು ಅಮೆರಿಕ, ಯುರೋಪಿನವರು ತಮ್ಮದು ಎನ್ನುವುದನ್ನು ಭಾರತ ಪ್ರತಿರೋಧಿಸಲೇ ಇಲ್ಲ.
ಇಂಥದ್ದನ್ನೆಲ್ಲ ಪ್ರತಿರೋಧಿಸುವ, ಅಮೆರಿಕದ ಪೇಟೆಂಟ್ ಮೇಲೆ ಕೇಸ್ ಮಾಡುವ ಜವಾಬ್ದಾರಿ ಯುಳ್ಳ ಯಾವುದೇ ಇಲಾಖೆಯೂ ಭಾರತದಲ್ಲಿ ಇರಲಿಲ್ಲ. ಆ
ಸಮಯದಲ್ಲಿ Council of Scientific and Industrial Research of India (CSIR))ನ ಮುಖ್ಯಸ್ಥರಾಗಿದ್ದವರು ಡಾ. ರಘುನಾಥ್ ಮಷೇಲ್ಕರ್.

ಮಷೇಲ್ಕರ್ ಅದಾಗಲೇ ಈ ರೀತಿ eನದ ಪೇಟೆಂಟ್ ಲೂಟಿಯ ಬಗ್ಗೆ ಹಲವಾರು ಕಡೆ ತಮ್ಮ ಧ್ವನಿ ಎತ್ತಿದ್ದರು. ಅವರನ್ನು ಸರಕಾರಿ ಮೇಲಧಿಕಾರಿಗಳು
ಮಷೇಲ್ಕರ್ ಬದಲು ‘ಪೇಟೆಂಟ್ಕರ್’ ಎಂದೇ ಕರೆಯುತ್ತಿದ್ದರಂತೆ. ಅವರಿಗೆ ಅರಿಶಿನದ ಮೇಲೆ ಪೇಟೆಂಟ್ ಪಡೆದದ್ದನ್ನು ಹೇಗಾದರೂ ಕಾನೂನಾತ್ಮಕವಾಗಿ ವಿರೋಧಿಸಬೇಕೆಂಬ ಹಂಬಲ. ಹಾಗಂತ ಅವರ ಡಿಪಾರ್ಟ್‌ಮೆಂಟಿನ ಕೆಲಸ ಅದಲ್ಲ. ಯಾರು ಇದನ್ನು ಕೈಗೆ ತೆಗೆದುಕೊಳ್ಳಬೇಕು ಎಂಬ ಸ್ಪಷ್ಟತೆ ಸರಕಾರಕ್ಕೆ ಇರಲಿಲ್ಲ. ಹಠಕ್ಕೆ ಬಿದ್ದು ಮೇಲಧಿಕಾರಿ ಗಳಿಂದ ಅನುಮತಿ ಪಡೆದು ಅಮೆರಿಕದ ಪೇಟೆಂಟ್ ಕೋರ್ಟಿ ನಲ್ಲಿ ದಾವೆ ಹೂಡಿದರು.

ದಾವೆಯೇನೋ ಆಯಿತು, ಈಗ ದಾಖಲೆಗಳನ್ನು ಕೊಡ ಬೇಕಲ್ಲ. ಇದು ಭಾರತದ ಜ್ಞಾನ, ಇಲ್ಲಿ ಗಾಯಕ್ಕೆ ಹಳದಿ ಹಚ್ಚುವ ಪದ್ಧತಿ ಇದೆ ಎನ್ನುವುದಕ್ಕೆ ಪುರಾವೆ ಕೊಡಬೇಕಲ್ಲ. ಭಾರತದಲ್ಲಿ ಅಂಥದ್ದಕ್ಕೆಲ್ಲ ಎಲ್ಲಿಯ ಪುರಾವೆಯಿದೆ? ಇದ್ದರೆ ಸಂಸ್ಕೃತ ಗ್ರಂಥದಲ್ಲಿ, ಆಯುರ್ವೇದದಲ್ಲಿ. ಡಾ. ಮಷೇಲ್ಕರ್ ಅದನ್ನು ಅಮೆರಿಕದ ವಕೀಲರಿಗೆ ಕಳುಹಿಸಿಕೊಟ್ಟರು. ಅಲ್ಲಿ ವಾದ ವಿವಾದವಾಯಿತು. ಸುಮಾರು ೨ ವರ್ಷದ ನಂತದ ಈ ಅರಿಶಿನದ ಮೇಲಿನ ಪೇಟೆಂಟ್ ಹಿಂಪಡೆಯಲಾಯಿತು. ಈ
ಕೇಸ್ ಗೆದ್ದು ಡಾ. ಮಷೇಲ್ಕರ್ ಒಮ್ಮಿಂದೊಮ್ಮೆಲೆ ಪತ್ರಿಕೆಗಳಲ್ಲಿ, ಜನಮಾನಸದಲ್ಲಿ ಹೀರೋ ಆಗಿಬಿಟ್ಟರು.

ಆದರೆ ಮಷೇಲ್ಕರ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅಮೆರಿಕದ ಪೇಟೆಂಟ್ ಆಫೀಸ್‌ನ ಆಧಾರ ಮಾಹಿತಿಗಳ ಪಟ್ಟಿಯಲ್ಲಿ ಆಯುರ್ವೇದ ಮತ್ತು ಭಾರತದ ಯಾವುದೇ ಜ್ಞಾನ ಇರಲೇ ಇಲ್ಲ ಎನ್ನುವುದು ಅವರಿಗೆ ಈಗ ತಿಳಿಯಿತು. ಇದು ೧೯೯೬ರ ಸ್ಥಿತಿ. ಅರಿಶಿನ ಆದ ಮೇಲೆ ಈ ಬಾರಿ ಬಾಸ್ಮತಿ ಅಕ್ಕಿಯ ಮೇಲೆ. ಅದನ್ನು ಬೆಳೆಯುವುದು ಹೇಗೆ ಎಂದು ಇನ್ನೊಬ್ಬ NRI ಪೇಟೆಂಟ್ ಪಡೆದುಕೊಂಡಿದ್ದ. ಮಷೇಲ್ಕರ್ ಅದನ್ನೂ ದಾವೆ ಹೂಡಿ ಗೆದ್ದರು. ಇದೆಲ್ಲದರ ನಡುವೆ ಅವರ ತಂಡಕ್ಕೆ ಸುಮಾರು ೪೦೦-೫೦೦ ಕೇಸ್‌ಗಳು, ಭಾರತದ ಜ್ಞಾನವನ್ನು ಕದ್ದೊಯ್ದು ಪೇಟೆಂಟ್ ಪಡೆದದ್ದು ಗಮನಕ್ಕೆ ಬಂತು. ಕೊನೆಗೆ ಭಾರತ ಸರಕಾರ ದೊಡ್ಡ ಯೋಜನೆಯನ್ನು ಹಮ್ಮಿಕೊಂಡಿತು.

ಹಂತ ಹಂತವಾಗಿ ಭಾರತದ ಜ್ಞಾನವನ್ನು ಕ್ರೋಡೀಕರಿಸಿ ಪೇಟೆಂಟ್ ಆಫೀಸಿಗೆ ಸಲ್ಲಿಸಲಾಯಿತು. ಅದಾಗಲೇ ಬಯೋಫೆರೆಸಿಯಿಂದಾಗಿ ಪೇಟೆಂಟ್ ವ್ಯವಸ್ಥೆಯ ಮೇಲೆ ನಂಬಿಕೆ ಕ್ಷೀಣಿಸಲು ಶುರುವಾಗಿದ್ದರಿಂದ ಪೇಟೆಂಟ್ ಡಿಪಾರ್ಟ್‌ಮೆಂಟ್‌ಗೆ ಕೂಡ ಅಳಿವು ಉಳಿವಿನ ಪ್ರಶ್ನೆ. ಅದು ಮಷೇಲ್ಕರ್, ಭಾರತ ಸರಕಾರ
ಕೊಟ್ಟ ಮಾಹಿತಿಯನ್ನು ಪಡೆದು ಹಿಮ್ಮುಖವಾಗಿ ಪೇಟೆಂಟ್ ಗಳನ್ನು ಹುಡುಕಿ ತಿರಸ್ಕರಿ ಸಲು ಶುರುಮಾಡಿತು. ಸಾವಿರಕ್ಕೂ ಹೆಚ್ಚು ಇಂತಹ ಜ್ಞಾನವನ್ನು ಕದ್ದು ಪೇಟೆಂಟ್ ಪಡೆದದ್ದು ಬೆಳಕಿಗೆ ಬಂತು. ಅವರಲ್ಲಿ NRI ವಿಜ್ಞಾನಿಗಳದ್ದೇ ಮೇಲುಗೈ. ಕ್ರಮೇಣ ಅದೆಲ್ಲ ಆವಿಷ್ಕಾರಗಳು ಭಾರತದ ಜ್ಞಾನದ ಪಟ್ಟಿಯಲ್ಲಿ ಸೇರಿಸ ಲಾಯಿತು. ಈಗ ಬಹುತೇಕ ಎಲ್ಲ ಜ್ಞಾನಗಳೂ ಡಿಜಿಟಲೀಕರಣವಾಗಿರು ವುದರಿಂದ ಪೇಟೆಂಟ್‌ನಲ್ಲಿ ಮೋಸದ ಪ್ರಮಾಣ ಕಡಿಮೆ.

ಈ ಭಾರತದ ಜ್ಞಾನವನ್ನು ಡಿಜಿಟಲೀಕರಣ ಮಾಡೋದು ಸಣ್ಣ ಕೆಲಸವಾಗಿರಲಿಲ್ಲ. ಬಹುತೇಕ ವಿಷಯಗಳು ಸಂಸ್ಕೃತ ದಲ್ಲಿದ್ದವು. ಆಯುರ್ವೇದವಂತೂ ಕಾವ್ಯ ರೂಪದಲ್ಲಿ. ಅದನ್ನು ಅರ್ಥಮಾಡಿಕೊಂಡು ಸರಿಯಾಗಿ ತರ್ಜುಮೆ ಮಾಡಬಲ್ಲ ವಿದ್ವಾಂಸರು ಬೇಕಿತ್ತು. ಸಂಸ್ಕೃತದಲ್ಲಷ್ಟೇ ಅಲ್ಲ, ತಮಿಳಿನಲ್ಲಿ, ತೆಳಗಿನಲ್ಲಿ, ಹಿಂದಿಯಲ್ಲಿ, ಕನ್ನಡದಲ್ಲಿ ಹೀಗೆ ಯಾವ ಯಾವುದೋ ಭಾಷೆಯಲ್ಲಿ. ಅದನ್ನು ಬರೀ ಇಂಗ್ಲಿಷಿಗೆ ತರ್ಜುಮೆ ಮಾಡಿದರೆ ಸಾಕಾಗುವುದಿಲ್ಲ. ಪೇಟೆಂಟ್ ಕೇವಲ
ಅಮೆರಿಕzಂದೇ ಅಲ್ಲ, ಹಾಗಾಗಿ ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಜಪಾನೀಸ್ ಭಾಷೆಗೂ ಭಾಷಾಂತರಿಸಬೇಕು.

ಇದೆಲ್ಲದರ ಜತೆ ಅಮೆರಿಕದವರು ಅದಾಗಲೇ ಯೋಗ ಮುದ್ರೆ ಗಳನ್ನು, ಆಸನಗಳನ್ನೆಲ್ಲ ಪೇಟೆಂಟ್ ಪಡೆದುಕೊಂಡು ಬಿಟ್ಟಿದ್ದರು. ಬಹುತೇಕರು ಭಾರತೀಯ ಸಂಜಾತ NRI ಗಳೇ. ಅವರನ್ನು ದೇಶದ್ರೋಹಿಗಳಲ್ಲದೆ ಇನ್ನೇನನ್ನಬೇಕು? ಅದೆಲ್ಲ ವನ್ನು ಸರಿಪಡಿಸಬೇಕೆಂದರೆ ಸಂಪೂರ್ಣ ಯೋಗ, ಅನಂತರದಲ್ಲಿ ಇನ್ನೊಂದು, ಹೀಗೆ ಬೆಳೆಯುತ್ತಲೇ ಹೋಯಿತು. ಕೊನೆ ಯಲ್ಲಿ ಈ ತಂಡ ೪,೫೦,೦೦೦ ರೋಗ ಪರಿಹಾರವನ್ನು ಕಲೆಹಾಕಿತು. ಒಮ್ಮೆ ಇಲ್ಲಿ ನಿಂತು ಅಂದಾಜಿಸಿಕೊಳ್ಳಿ. ಈ ದೇಶ ದಾಳಿ, ದಬ್ಬಾಳಿಕೆ, ಇವೆಲ್ಲ ಅಷ್ಟು ಕಾಲ ನಡೆದರೂ ಉಳಿದು ಕೊಂಡದ್ದೇ ಇಷ್ಟು. ಹಾಗಾದರೆ ಕಳೆದುಕೊಂಡದ್ದು ಎಷ್ಟಿರ
ಬಹುದು? ಇರಲಿ.

ಇದೆಲ್ಲದರಿಂದ ಭಾರತದ ಜ್ಞಾನಕ್ಕೆ ಸಲ್ಲಬೇಕಾದ ಮರ್ಯಾದೆ ಸಿಕ್ಕಂತಾಗಿದೆ. ಪಾಶ್ಚಾತ್ಯ ದೇಶದವರು ಬಾಯಿ ಬಿಟ್ಟು ಹೇಳದಿರಬಹುದು. ಆದರೆ ಪೇಟೆಂಟ್ ವ್ಯವಸ್ಥೆಯನ್ನು ಪ್ರಶ್ನಿಸಲು ಹೊರಟ ಡಾ.ಮಷೇಲ್ಕರ್, ಅಪಾರ ಜ್ಞಾನವನ್ನು ಒಂದೆಡೆ ಕ್ರೋಡೀಕರಿಸುವ ಅದ್ಭುತ ಕೆಲಸಕ್ಕೆ ಕಾರಣವಾದರು. ಭಾರತದ ಜ್ಞಾನ ಸಂಪತ್ತು ನಮಗಷ್ಟೇ ಎನ್ನುವವರಲ್ಲ ನಾವು. ಕಳೆದುಕೊಂಡದ್ದಕ್ಕೆ ಬೇಸರಿಸುವುದಕ್ಕಿಂತ ಈಗ ಉಳಿದದ್ದು ಭದ್ರವಾಗಿದೆ ಎಂಬುದೇ ಇಂದಿನ ಸಮಾಧಾನ.

Leave a Reply

Your email address will not be published. Required fields are marked *

error: Content is protected !!