Saturday, 20th April 2024

ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಸಾಧ್ಯವಿಲ್ಲವೇ?

ಸಮಸ್ಯೆೆ 

ಬೈಂದೂರು ಚಂದ್ರಶೇಖರ ನಾವಡ, ಮಾಜಿ ಸೈನಿಕರು

ಇಂತಹ ಘಟನೆಗಳಿಗೆ ಹೆಚ್ಚಾಾಗಿ ಮಹಿಳೆಯರು, ಮಕ್ಕಳು, ವೃದ್ಧರೇ ಆಗಿರುತ್ತಾಾರೆ. ಹೋಟೆಲ್‌ಗಳಲ್ಲಿ, ಮನೆಗಳಲ್ಲಿ ಮಿಕ್ಕುಳಿಯುವ ಆಹಾರ ದಾರಿ ಬದಿಗಳಲ್ಲಿ ಎಲ್ಲೆಂದರಲ್ಲಿ ಸುರಿಯುವುದೂ ನಾಯಿಗಳಿಗೆ ವರದಾನವಾಗಿ ಅವುಗಳ ಸಂಖ್ಯೆೆ ಹೆಚ್ಚುತ್ತಿಿದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕ ರಾಜ್ಯದಾದ್ಯಂತ 83,837 ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸುಮಾರು 7,521 ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿವೆ. ಮಕ್ಕಳು, ವೃದ್ಧರು, ಸ್ತ್ರೀಯರು ಅಲೆಮಾರಿ ನಾಯಿಗಳ ಕಾಟದಿಂದ ರಸ್ತೆೆಯಲ್ಲಿ ಸುರಕ್ಷಿತವಾಗಿ ಓಡಾಡುವುದೇ ಕಠಿಣವಾಗಿದೆ ಎಂಬುದು ದಿನದಿಂದ ದಿನಕ್ಕೆೆ ಸಮಸ್ಯೆೆ ಉಲ್ಭಣಿಸುತ್ತಿಿದೆ. ಜೂನ್‌ನಲ್ಲಿ ದುರ್ಗೇಶ್ ಎನ್ನುವ ಬಾಲಕ ಬೆಂಗಳೂರಿನ ಹೊರವಲಯದ ಅಜ್ಜೇಗೌಡನ ಪಾಳ್ಯದಲ್ಲಿ ಬೀದಿ ನಾಯಿಗಳ ದಾಳಿಗೊಳಗಾಗಿ ಅತಿಯಾದ ರಕ್ತ ಸ್ರಾಾವದಿಂದ ತನ್ನ ಪ್ರಾಾಣವನ್ನೇ ಕಳೆದುಕೊಂಡ. ದೇಶದಾದ್ಯಂತ ಪ್ರತಿನಿತ್ಯ ಅಮಾಯಕರು ಅನಿಯಂತ್ರಿಿತವಾಗಿ ನಾಯಿಗಳ ಹಾವಳಿಯಿಂದ ಮರಣವನ್ನಪ್ಪಿಿದ ಘಟನೆಗಳು ನಡೆಯುತ್ತಿಿವೆ.

ಬಿಬಿಎಂಪಿಯ ಅಂಕಿ ಅಂಶಗಳ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ 2 ನಿಮಿಷದಲ್ಲಿ 3 ನಾಯಿ ಕಡಿತ ಸಂಭವಿಸುತ್ತಿಿದೆ. ತಡ ರಾತ್ರಿಿ ರಾತ್ರಿಿ ಪಾಳಿ ಮುಗಿಸಿ ವಾಪಾಸಾಗುವ ಉದ್ಯೋೋಗಿಗಳು, ಸಾಫ್‌ಟ್‌‌ವೇರ್ ಎಂಜಿನಿಯರ್‌ಗಳು ಬೀದಿ ನಾಯಿ ಕಾಟದಿಂದ ಭಯದ ಸ್ಥಿಿತಿಯಲ್ಲಿ ರಸ್ತೆೆಯಲ್ಲಿ ಸಂಚರಿಸುವ ಸ್ಥಿಿತಿ ಇದೆ. ಪ್ರಾಾಣಿ ಹಕ್ಕುಗಳ ಎದುರು ಅಸಹಾಯಕವಾಗಿರುವ ಮಹಾನಗರ ಪಾಲಿಕೆ ಆಡಳಿತ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸುವ ಹಾಗೂ ಸಂತಾನ ನಿಯಂತ್ರಣದ ಮೂಲಕ ಪರಿಹಾರ ಹುಡುಕುವ ಯತ್ನ ನಡೆಸುತ್ತಿಿದೆ. 2012 ರ ಗಣತಿಯಂತೆ ಸುಮಾರು 1.83 ಲಕ್ಷ ಬೀದಿ ನಾಯಿಗಳಿರುವ ಬೆಂಗಳೂರಿನಲ್ಲಿ ಅವುಗಳ ಭಾರಿ ಸಮಸ್ಯೆೆಯಾಗಿ ಮಹಾನಗರ ಪಾಲಿಕೆ ಹಾಗೂ ನಾಗರಿಕರನ್ನು ಕಾಡುತ್ತಿಿದೆ.

ಇನ್ನು ಮುಂಬಯಿಯಲ್ಲಿ 1994 ಮತ್ತು 2015 ರ ನಡುವಿನ ಇಪ್ಪತ್ತು ವರ್ಷಗಳಲ್ಲಿ 1993 ರ ಸರಣಿ ಬಾಂಬ್ ಸ್ಫೋೋಟ, 2008 ರ ಉಗ್ರವಾದಿ ದಾಳಿಯಲ್ಲಿ ಮೃತರಾದ ಸಂಖ್ಯೆೆಗಿಂತಲೂ 422, ಅಧಿಕ ಜನರು ಬೀದಿ ನಾಯಿ ಕಡಿತದಿಂದ ಮೃತರಾಗಿದ್ದಾರೆಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ. ಈ ಅವಧಿಯಲ್ಲಿ ಅಂದಾಜು 13 ಲಕ್ಷ ನಾಗರಿಕರು ಬೀದಿ ನಾಯಿ ಕಡಿತಕ್ಕೊೊಳಗಾಗಿದ್ದಾರೆ. ಆದರೆ, ಮುಂಬಯಿ ಮಹಾನಗರ ಪಾಲಿಕೆ ಸುಪ್ರಿಿಂ ಕೋರ್ಟ್‌ಗೆ ಸಲ್ಲಿಸಿದ ಪಿಟಿಷನ್‌ನಲ್ಲಿ 1994 ರಿಂದ 2015ರ 20 ವರ್ಷದಲ್ಲಿ 434 ಜನರು ರೇಬಿಸ್ ನಿಂದ ಸಾವಿಗೀಡಾಗಿದ್ದಾರೆ.

ಕೇರಳದಲ್ಲಿ 2016ರಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದಾಗ ಅವುಗಳ ವಿರುದ್ಧ ದೊಡ್ಡ ಅಭಿಯಾನವೇ ಶುರುವಾಗಿತ್ತು. ಜೋಸ್ ಮಾವೇಲಿ ಎನ್ನುವವರು ಬೀದಿ ನಾಯಿಗಳನ್ನು ಕೊಲ್ಲುವವರಿಗೆ 500 ರು. ಬಹುಮಾನದ ಘೋಷಣೆ ಮಾಡಿ ಪ್ರಾಾಣಿ ಪ್ರಿಿಯರ ವಿರೋಧವನ್ನು ಎದುರಿಸಬೇಕಾಯಿತು. ಅವರ ವಿರುದ್ಧ ಏಳು ಮೊಕದ್ದಮೆಗಳು ದಾಖಲಾದವು. ಬೀದಿ ನಾಯಿಗಳ ಹಾವಳಿಯಿಂದ ಜನರು ಮರಣಾಂತಿಕ ಹಲ್ಲೆಗೊಳಗಾಗುತ್ತಿಿರುವ ಘಟನೆಗಳು ಹೆಚ್ಚುತ್ತಿಿರುವ ಹಿನ್ನೆೆಲೆಯಲ್ಲಿ ಕೇರಳ ಉಚ್ಚ ನ್ಯಾಾಯಾಲಯ ಕಳೆದ ವರ್ಷ ಕಳವಳ ವ್ಯಕ್ತಪಡಿಸಿತ್ತು. ಮನುಷ್ಯನ ಪ್ರಾಾಣ ಬೀದಿ ನಾಯಿಯ ಪ್ರಾಾಣಕ್ಕಿಿಂತ ಹೆಚ್ಚಿಿನದ್ದು ಎಂದು ನ್ಯಾಾಯಾಲಯ ಅಭಿಪ್ರಾಾಯ ಪಟ್ಟಿಿತ್ತು.

1960 ರ ಪ್ರಾಾಣಿ ಹಿಂಸೆ ನಿಯಂತ್ರಣ ಕಾಯಿದೆಯ ಸೆಕ್ಷನ್ 428 ಮತ್ತು 429ರ ಅನುಸಾರ ಯಾವುದೇ ಪ್ರಾಾಣಿಯನ್ನು ಹೊಡೆಯುವುದು, ಹತ್ಯೆೆಗೈಯ್ಯುವುದು. ಅವುಗಳ ಮೇಲೆ ಉದ್ದೇಶ ಪೂರ್ವಕ ವಾಹನ ಚಲಾಯಿಸಿ ಗಾಯಗೊಳಿಸುವುದು ಶಿಕ್ಷಾರ್ಹ ಅಪರಾಧ. 2000 ರು. ದಂಡ ಅಥವಾ 5 ವರ್ಷದ ಜೈಲು ಶಿಕ್ಷೆಗೂ ಕಾರಣವಾಗಬಹುದು. ಸ್ಥಳೀಯಾಡಳಿಗಳ ಬಳಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸುವ, ಸಂತಾನ ನಿಯಂತ್ರಣಕ್ಕೊೊಳಪಡಿಸುವ ಉಪಾಯಗಳಷ್ಟೇ ಉಳಿದಿವೆ. 2001ರಲ್ಲಿ ಪ್ರಾಾಣಿಗಳ ಸಂತಾನ ನಿಯಂತ್ರಣ ಕಾನೂನಿನ ಪ್ರಕಾರ ಸಂತಾನ ನಿಯಂತ್ರಣ ಚಿಕಿತ್ಸೆೆ ಹೊಂದಿದ ಪ್ರಾಾಣಿಗಳನ್ನು ಸ್ಥಳಾಂತರಿಸುವಂತಿಲ್ಲ. ಭಾರಿ ಸಂಖ್ಯೆೆಯಲ್ಲಿ ಹೆಚ್ಚುತ್ತಿಿರುವ ನಾಯಿಗಳ ಸಂಖ್ಯೆೆ ನೀರಿನಲ್ಲಿ ಹೋಮ ಮಾಡಿದಂತೆ ಸ್ಥಳೀಯಾಡಳಿತದ ಪ್ರಯತ್ನಸುತ್ತಿಿದೆ.

ಜನವಸತಿ ಪ್ರದೇಶದಲ್ಲಿ ಸುರಿಯಲಾಗುವ ಕೋಳಿ ತ್ಯಾಾಜ್ಯ, ಮಾಂಸದ ವೇಸ್‌ಟ್‌‌ಗಳಿಗಾಗಿ ಕಾಯುತ್ತಿಿರುವ ನಾಯಿಗಳು ದಾರಿಹೋಕರ ಮೇಲೆ ದಾಳಿ ಮಾಡುತ್ತವೆ. ಮರಿ ಇಟ್ಟಿಿರುವ ತಾಯಿ ನಾಯಿಗಳು ಮರಿಯ ಮೇಲಿನ ಮಮತೆಯಿಂದ ಅದರ ಸುತ್ತಮುತ್ತ ಗೊತ್ತಿಿದ್ದೋ-ಗೊತ್ತಿಿಲದೆಯೋ ತಿರುಗುವರ ಮೇಲೆ ಎರಗಿ ಕಚ್ಚಿಿ ಬಿಡುತ್ತವೆ. ಇಂತಹ ಘಟನೆಗಳಿಗೆ ಹೆಚ್ಚಾಾಗಿ ಮಹಿಳೆಯರು, ಮಕ್ಕಳು, ವೃದ್ಧರೇ ಆಗಿರುತ್ತಾಾರೆ. ಹೋಟೆಲ್‌ಗಳಲ್ಲಿ, ಮನೆಗಳಲ್ಲಿ ಮಿಕ್ಕುಳಿಯುವ ಆಹಾರ ದಾರಿ ಬದಿಗಳಲ್ಲಿ ಎಲ್ಲೆಂದರಲ್ಲಿ ಸುರಿಯುವುದೂ ನಾಯಿಗಳಿಗೆ ವರದಾನವಾಗಿ ಅವುಗಳ ಸಂಖ್ಯೆೆ ಹೆಚ್ಚುತ್ತಿಿದೆ. ಹಾಗೆಯೇ ಪ್ರಾಾಣಿ ಪ್ರಿಿಯರು ಎಲ್ಲೆಂದರಲ್ಲಿ ತಿಂಡಿ ತಿನಿಸುಗಳನ್ನು ನೀಡುವುದರ ಮೂಲಕ ಉದಾರತೆ ಮೆರೆದು ತಿಂಡಿ ಸಿಗದಿದ್ದಾಗ ದಾರಿಹೋಕರ ಮೇಲೆ ದಾಳಿ ಮಾಡಲು ಪರೋಕ್ಷವಾಗಿ ಕಾರಣರಾಗುತ್ತಿಿದ್ದಾರೆ. ಹೆಂಗಸರು ಮಕ್ಕಳು ಮನೆಯಲ್ಲಿ ಉಳಿದ ಆಹಾರವನ್ನು ಯದ್ವಾಾತದ್ವಾಾ ಬೀದಿ ಬದಿಯಲ್ಲಿ ಎಸೆಯುವುದೂ ಸಮಸ್ಯೆೆ ಉಲ್ಭಣಕ್ಕೆೆ ಕಾರಣವಾಗಿದೆ.

ಭಾರತದಲ್ಲಿ ಎಲ್ಲಾ ನಾಗರಿಕರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದೇ ಕಠಿಣ ಸವಾಲಾಗಿರುವಾಗ ಬೀದಿ ನಾಯಿಗಳ ಸಂತಾನಹರಣ, ಅವುಗಳ ಸ್ಥಾಾನ ಪಲ್ಲಟ ಸ್ಥಳೀಯ ಆಡಳಿತದಿಂದ ಸಾಧ್ಯವಾಗದ ಕೆಲಸ. ಅಷ್ಟೊೊಂದು ಸಂಪನ್ಮೂಲ ಒದಗಿಸುವುದೂ ಸುಲಭ ಸಾಧ್ಯವಲ್ಲ. ಹಾಗೆಯೇ ಮಹಿಳೆಯರ, ಮಕ್ಕಳ, ಅಶಕ್ತರ ಅಮೂಲ್ಯ ಜೀವನವನ್ನು ಬೀದಿ ನಾಯಿಗಳ ಕೃಪೆಗೆ ಬಿಡಲು ಸಾಧ್ಯವೇ? ಪ್ರಾಾಣಿಗಳಿಗೂ ಮನುಷ್ಯರಷ್ಟೇ ಬದುಕುವ ಹಕ್ಕಿಿದೆ ಎನ್ನುವ ಪ್ರಾಾಣಿ ಪ್ರಿಿಯರ ವಾದ ಒಪ್ಪತಕ್ಕದ್ದಾದರೂ ಮನುಷ್ಯನ ಅಸ್ತಿಿತ್ವಕ್ಕೆೆ ಧಕ್ಕೆೆಯಾದಾಗ ಇದೇ ಪ್ರಾಾಣಿ ದಯೆಯ ಹೆಸರಲ್ಲಿ ಸಹಿಸಿಕೊಳ್ಳುವುದು ಸಾಧ್ಯವೇ? ಸರಕಾರವು ಜನಪ್ರತಿನಿಧಿಗಳ ಈ ಕುರಿತು ಗಂಭೀರವಾಗಿ ಚಿಂತಿಸಲಿ ಮತ್ತು ವ್ಯಾಾವಹಾರಿಕವೂ ಸ್ಪಷ್ಟವೂ ಆದ ನಿಯಮ ಜಾರಿಗೆ ಬರುವಂತೆ ಮಾಡಲಿ.

Leave a Reply

Your email address will not be published. Required fields are marked *

error: Content is protected !!