Thursday, 7th December 2023

ಹಂಪಿಗೆ ಬೇಕಿದೆ ಕಾಶಿಯಂಥ ಕಾರಿಡಾರ‍್ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ವಿಜಯನಗರವನ್ನು ಆಳಿದ ಎಲ್ಲಾ ಅರಸರು ತಮ್ಮನ್ನು ಮಹಾರಾಜರೆಂದು ಭಾವಿಸಿದವರಲ್ಲ. ‘ವಿರೂಪಾಕ್ಷನೇ ಚಕ್ರವರ್ತಿ, ನಾವು ಕೇವಲ ಆತನ ಆಜ್ಞಾಪಾಲಕರು’ ಎಂದು ಪರಿಭಾವಿಸಿಯೇ ಆಳಿದವರು. ಪ್ರಜೆಗಳೂ ಅಷ್ಟೇ, ವಿರೂಪಾಕ್ಷನೇ ಅಂತಿಮ ಎಂದು ಭಾವಿಸಿ ಭಯ-ಭಕ್ತಿ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿದ್ದರು.

ಹಂಪಿ ವಿಶ್ವವಿದ್ಯಾಲಯದ ಇಂದಿನ ಉಪಕುಲಪತಿಗಳಾದ ಡಾ. ಡಿ.ವಿ.ಪರಮಶಿವಮೂರ್ತಿಗಳು ಬೆಳಕಿಗೆ ತಂದಿರುವ ವಿಜಯನಗರದ ಪ್ರಪ್ರಥಮ ಶಾಸನದಲ್ಲಿ ಸಾಮ್ರಾಜ್ಯದ ಸ್ಥಾಪನೆಯ ವಿಷಯಗಳನ್ನು ದಾಖಲಿ ಸುತ್ತಾ ಕೆಲ ಆದೇಶಗಳನ್ನು ಹೊರಡಿಸುವ ಒಂದನೇ ಹರಿಹರರಾಯ ತನ್ನ ಹೆಸರಿನ ಅಂಕಿತ ಬರೆಯದೇ ಬದಲಿಗೆ ‘ಶ್ರೀ ವಿರೂಪಾಕ್ಷ’ ಎಂದು ಬರೆಸುತ್ತಾನೆ.

ಮುಗ್ಧರೂ ಆಸ್ತಿಕರೂ ಸಹಿಷ್ಣುಗಳೂ ಆದ ಸನಾತನಿಗಳ (ಹಿಂದೂಗಳ) ನೆಲಕ್ಕೆ ಕಾಲಿಟ್ಟ ಪರಧರ್ಮ ಭಂಜಕರಾದ ಇಸ್ಲಾಂ ದಾಳಿಕೋರರು, ದರೋಡೆ ಕೋರರು ಉತ್ತರ ಭಾರತವನ್ನು ಆಕ್ರಮಿಸಿ ದಕ್ಷಿಣದತ್ತ ಧಾವಿಸುತ್ತಿದ್ದ ಅಪಾಯಕಾರಿ ಸನ್ನಿವೇಶದಲ್ಲಿ ಹಿಂದೂಧರ್ಮವನ್ನು ಉಳಿಸುವ ಏಕಮಾತ್ರ ಉದ್ದೇಶದಿಂದ ಸ್ಥಾಪನೆಯಾದ (೧೩೩೬) ಜಗತ್ತಿನ ಏಕೈಕ ಸಾಮ್ರಾಜ್ಯ ವಿಜಯನಗರ. ೧೫೬೫ರ ರಕ್ಕಸ ತಂಗಡಿ ಯುದ್ಧದಲ್ಲಿ ವಿಜಯನಗರದ ಸೈನ್ಯದಲ್ಲಿದ್ದ ‘ಗಿಲಾನಿ ಸಹೋದರು’ ಎಂಬ ಇಸ್ಲಾಂ ಸೈನಿಕರ ವಿಶ್ವಾಸದ್ರೋಹದಿಂದಾಗಿ ವಿಜಯನಗರ ಪತನವಾಗಿ ಜಿಹಾದಿಗಳು ಹಂಪಿಯನ್ನು ಮನಸೋಇಚ್ಛೆ ಹಾಳು ಗೆಡವಿದರು. ಇದು ಯಾವುದೇ ಸರಕಾರದಿಂದಾಗಲಿ, ಗುಲಾಮರಿಂದಾಗಲಿ ಅಥವಾ ಲದ್ದಿಜೀವಿಗಳಿಂದಾಗಲಿ ಕಲಿಯಬೇಕಾದ ಪಾಠವಲ್ಲ. ಹಂಪಿಯ ಪ್ರತಿಯೊಂದು ಕಲ್ಲುಗಳೂ ವಿಷಾದದಿಂದ ಸಾರಿಸಾರಿ ಹೇಳುತ್ತಿವೆ.

ಸ್ಕಂದ ಪುರಾಣದಲ್ಲಿನ ಮನ್ಮಥ ದಹನ, ಪಂಪಾ ಕಲ್ಯಾಣ, ಕಾರ್ತಿಕೇಯ ಜನನ, ತಾರಕಾಸುರನ ಸಂಹಾರ ಒಳಗೊಂಡ ಪ್ರಸಂಗದಲ್ಲಿ ಪಾರ್ವತಿ ದೇವಿಯು ಕನ್ಯೆಯಾಗಿ ಹೇಮಕೂಟದಲ್ಲಿ ಲಿಂಗ ರೂಪಿ ಶಿವನನ್ನು ಆರಾಧಿಸುತ್ತಾಳೆ. ಮುಂದೆ ಪಂಪಾದೇವಿ-ವಿರೂಪಾಕ್ಷ ವಿವಾಹವಾಗಿ ಲೋಕಕಲ್ಯಾಣವಾಗುತ್ತದೆ. ಈ ಪುರಾಣದ ಅನುಷ್ಠಾನದಂತೆ ಮಾರ್ಗಶಿರ ಮಾಸದಲ್ಲಿ ಜರುಗುವ ತೆಪ್ಪೋತ್ಸವದಲ್ಲಿ ವರ ವಿರೂಪಾಕ್ಷದೇವರ ಪರವಾಗಿ ವಿದ್ಯಾರಣ್ಯ ಮಠದ ಶ್ರೀಗಳು-ಅರ್ಚಕರು ಮತ್ತು ವಧು ಪಂಪಾ ದೇವಿಯ ಪರವಾಗಿ ಶ್ರೀರಾಮಸೀತೆಯ ಪ್ರತಿನಿಧಿಗಳಾಗಿ ಚಕ್ರತೀರ್ಥದ ಕೋದಂಡರಾಮ ದೇಗುಲದ ಅರ್ಚಕರು ಪಂಪಾ-ವಿರೂಪಾಕ್ಷರ ನಿಶ್ಚಿತಾರ್ಥ ಶಾಸ್ತ್ರವನ್ನು ನೆರವೇರಿಸುತ್ತಾರೆ.

ಮುಂದೆ ಚೈತ್ರ ಮಾಸದ ಹುಣ್ಣಿಮೆಯಲ್ಲಿ (ಮುಂದೆ ರಾಮಾಯಣದ ಕಿಷ್ಕಿಂದೆಯಲ್ಲಿ ಅಂದೇ ಹನುಮ ಜಯಂತಿ) ಪಂಪಾಕಲ್ಯಾಣ ಜರುಗುತ್ತದೆ. ಈ ಆಚರಣೆಯಲ್ಲಿ ರಾಜವಂಶಸ್ಥರು ವಿದ್ಯಾರಣ್ಯ ಪೀಠಾಧಿಪತಿಗಳಿಗೆ ಕಿರೀಟಧಾರಣೆ ಮಾಡಿದರೆ, ಪೀಠಾಧಿಪತಿಗಳು ಶ್ರೀಕೃಷ್ಣದೇವರಾಯ ಸಮರ್ಪಿಸಿ ರುವ ನವರತ್ನಖಚಿತ ಸುವರ್ಣಮುಖವನ್ನು ವಿರೂಪಾಕ್ಷ ದೇವರಿಗೆ ತೊಡಿಸುವ ಸಂಪ್ರದಾಯವಿದೆ. ಎರಡನೆಯದಾಗಿ ತ್ರೇತಾಯುಗದಲ್ಲಿ ಶ್ರೀರಾಮ- ಲಕ್ಷ್ಮಣರು ಇಲ್ಲಿನ ಕಿಷ್ಕಿಂದಾ ಪ್ರವೇಶಿಸುತ್ತಾರೆ. ಶ್ರೀರಾಮ ತನ್ನ ಚಾತುರ್ಮಾಸವನ್ನು ಹಂಪಿಯ ಇಂದಿನ ಮಾಲ್ಯವಂತ (ಮೌಲ್ಯವಂತ) ರಘುನಾಥ ಪರ್ವತದಲ್ಲಿ ಆಚರಿಸಿ ಇಲ್ಲಿನ ಪಂಪಾವಿರೂಪಾಕ್ಷ ದೇವರನ್ನು ಆರಾಧಿಸಿದ್ದರ ಫಲವಾಗಿ ವಾನರಾಧಿಪತಿ ವಾಲಿ-ಸುಗ್ರೀವರ ಪರಿಚಯವಾಗುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಶ್ರೀರಾಮ-ಹನುಮದೇವರಸಂಗಮವಾಗುತ್ತದೆ. ಇಲ್ಲಿಂದ ವಾನರ ಸೇನೆಯೊಂದಿಗೆ ಶ್ರೀರಾಮ ಯುದ್ಧಕಾಂಡ ಪ್ರವೇಶಿಸುತ್ತಾನೆ.

ಮೂರನೆಯದು ಐತಿಹಾಸಿಕ. ೧೩೩೬ರಲ್ಲಿ ಶೃಂಗೇರಿಯಲ್ಲಿ ಸನ್ಯಾಸಿಗಳಾಗಿದ್ದ ವಿದ್ಯಾರಣ್ಯರು ಹಂಪಿಗೆ ಬಂದು ನೆಲೆಸಿದ್ದಾಗ, ಅಲ್ಲಿ ಮೊಲವು ಕಾಡುನಾಯಿಯನ್ನು ಬೆನ್ನಟ್ಟುವ ವಿಚಿತ್ರ ದೃಶ್ಯವನ್ನು ಕಂಡ ‘ಹರಿಹರ-ಬುಕ್ಕ’ ಸಹೋದರರು (ಮೇಲೆ ಹೇಳಿದ ಶಾಸನದಲ್ಲಿ ಉಲ್ಲೇಖವಿದೆ) ವಿದ್ಯಾರಣ್ಯರ ಬಳಿ ಬಂದು ಹೇಳಿಕೊಂಡಾಗ ವಿದ್ಯಾರಣ್ಯರಿಗೆ ಈ ನೆಲದ ವೀರತ್ವ ಮತ್ತು ಹಿಂದೂ ಧರ್ಮಕ್ಕೆ ಇಸ್ಲಾಂ ದಾಳಿಕೋರರಿಂದ ಸಂಭವಿಸಲಿರುವ ಗಂಡಾಂತರದ ಮುನ್ಸೂಚನೆಯ ಅರಿವಾಗಿ ಹರಿಹರನಿಗೆ ರಾಜದೀಕ್ಷೆ ನೀಡಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ ‘ಧರ್ಮಗುರುಗಳಾಗಿ’ ನಿಲ್ಲುತ್ತಾರೆ.

ಇಂಥ ವಿದ್ಯಾರಣ್ಯರ ಪೀಠದ ಪರಂಪರೆ ಇಂದಿಗೂ ಹಂಪಿಯಲ್ಲಿದ್ದು ಶಂಕರಾಚಾರ್ಯರಾದಿಯಾಗಿ ೫೭ನೇ ಮತ್ತು ವಿದ್ಯಾರಣ್ಯರಾದಿಯಾಗಿ ೪೭ನೇ ಯತಿಗಳಾಗಿ
ಶ್ರೀ ವಿದ್ಯಾರಣ್ಯ ಭಾರತೀ ಶ್ರೀಗಳು ಪೀಠಾಧಿಪತಿಗಳಾಗಿದ್ದಾರೆ. ಹೀಗೆ ಪುರಾಣ, ರಾಮಾಯಣ, ಐತಿಹಾಸಿಕ ಕಾಲಮಾನಗಳಲ್ಲಿ ಪಂಪಾದೇವಿ- ಶ್ರೀರಾಮ-ವಿದ್ಯಾರಣ್ಯ ಹರಿಹರಬುಕ್ಕರು ಪೂಜಿಸಿ ದಂತೆ ಇಂದಿಗೂ ವಿರೂಪಾಕ್ಷದೇವರಿಗೆ ‘ತ್ರಿಕಾಲ ’ ಅಭಿಷೇಕವಾಗುತ್ತದೆ. ಈ ಸಾಮ್ರಾಜ್ಯವು ಸಕಲ ಜಾತಿಗಳು, ಅವರ
ಕರ್ಮ ಸಿದ್ಧಾಂತಗಳಿಗೂ ಸ್ವರ್ಗವೆನಿಸಿತ್ತು. ಹಿಂದೂ ಧರ್ಮದ ಅಂಗವಾದ ಜೈನಧರ್ಮವೂ ಆದರಣೀಯವಾಗಿತ್ತು. ಅಲ್ಲದೇ ಬಹಮನಿ ರಾಜ್ಯವನ್ನು ಗೆದ್ದಾಗ ಅಲ್ಲಿನ ಮುಸ್ಲಿಂ ಸೈನಿಕರಿಗೆ ವಿಜಯನಗರದ ಸೈನ್ಯದೊಳಗೆ ಸೇರಿಸಿಕೊಳ್ಳಲಾಗುತ್ತಿತ್ತು.

ಶ್ರೀಕೃಷ್ಣದೇವರಾಯರಿಗೆ ಸನಾತನ ಪರಂಪರೆಯನ್ನು ಜಗತ್ತಿಗೆ ಸಾರಬೇಕೆಂಬ ಉದ್ದೇಶ ಯಾವ ಮಟ್ಟಕ್ಕಿತ್ತೆಂದರೆ ಸಾಮ್ರಾಜ್ಯದಲ್ಲಿದ್ದ ಸಾವಿರಾರು ಗುಡಿಗಳಲ್ಲಿ ಪೂಜಾಕೈಂಕರ್ಯಗಳನ್ನು ನೆರವೇರಿಸಲು ಉತ್ತರದ ಕಾಶಿಯಿಂದ ಆರು ಸಾವಿರ ‘ಸ್ಮಾರ್ತ’ ಬ್ರಾಹ್ಮಣರನ್ನು (ನೆನಪಿರಲಿ, ರಾಯ ಸ್ವತಃ ವೈಷ್ಣವ ಕುಲದವನಾಗಿದ್ದ) ಕರೆಸಿ ಅವರಿಗೆ ಆಶ್ರಯ ನೀಡುತ್ತಾರೆ. ಇಂದಿಗೂ ಅವರನ್ನು ‘ಆರುವೇಲು ಬ್ರಾಹ್ಮಣಲು’ ಎಂದೇ ಕರೆಯಲಾಗುತ್ತದೆ. ಹಂಪಿಯಲ್ಲಿ ಜರುಗುವ ಧಾರ್ಮಿಕ ಆಚರಣೆಗಳಲ್ಲಿ, ಬ್ರಹ್ಮರಥೋತ್ಸವ ನಡೆಯುವ ಕಾಲದಲ್ಲಿ ಸಕಲ ಜಾತಿಗಳ ಮಹತ್ವವಿದೆ. ರಥವನ್ನು ಇಲ್ಲಿನ ಬೇಡ ಜನಾಂಗದವರೇ ಎಳೆದು ಆರಂಭಿಸುವ ಸಂಪ್ರದಾಯವಿದೆ.

ದಲಿತರು, ಕುರುಬರು, ಕುಂಬಾರರು, ಮಡಿವಾಳರು, ಬೇಡರು ಹೀಗೆ ಪ್ರತಿಯೊಂದು ವೃತ್ತಿ ಆಧರಿತ ಜಾತಿಗಳಿಗೂ ಹಂಪಿಯ ಪಂಪಾಪತಿಯೊಂದಿಗೆ ತಲತಲಾಂತರದ ಅವಿನಾಭಾವ ಸಂಬಂಧವಿದೆ. ಉತ್ತರ ಕರ್ನಾಟಕದ ಬಹುತೇಕ ಮನೆತನಗಳಿಗೆ ಪಂಪಾಪತಿಯೇ ಮನೆದೇವರು. ವಿಶೇಷವೆಂದರೆ ವಿಜಯನಗರವನ್ನು ಆಳಿದ ಎಲ್ಲಾ ವಂಶಗಳ ಅರಸರು ತಮ್ಮನ್ನು ತಾವು ಮಹಾರಾಜರೆಂದು ಭಾವಿಸಿದವರಲ್ಲ. ವಿರೂಪಾಕ್ಷನೇ ಚಕ್ರವರ್ತಿ, ಆತನೇ ದೊರೆಮ ನಾವುಗಳು ಕೇವಲ ಆತನ ಆಜ್ಞಾಪಾಲಕರು ಎಂದು ಪರಿಭಾವಿಸಿಯೇ ಆಳಿದವರು. ಪ್ರಜೆಗಳೂ ಅಷ್ಟೇ, ವಿರೂಪಾಕ್ಷನೇ ಅಂತಿಮ ಎಂದು ಭಾವಿಸಿ ಭಯ-ಭಕ್ತಿ,
ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿದ್ದರು.

ಅಲ್ಲಿ ಮಾನವ ವೈಭವೀಕರಣ, ವ್ಯಕ್ತಿಪೂಜೆ ಎಂಬುದು ಅಸಹ್ಯವೆನಿಸಿತ್ತು ಎಂಬುದಕ್ಕೆ ಹರಿಹರ-ರಾಘವಾಂಕ ಪ್ರಸಂಗ ಸಾಕ್ಷಿ. ಇಂದಿಗೂ ವಿರೂಪಾಕ್ಷನ ಪರಮ
ಭಕ್ತರು ಸ್ವವೈಭವ ಮೆರೆಯುವುದಿಲ್ಲ, ಸನ್ಮಾನ- ಗೌರವ. ಹಾರ-ತುರಾಯಿಗಳನ್ನು ಸ್ವೀಕರಿಸುವುದಿಲ್ಲ. ಎಲ್ಲವನ್ನೂ ಪಂಪಾಪತಿಗೆ ಅರ್ಪಿಸುತ್ತಾರೆ. ಇಂಥ
ವೈಚಾರಿಕತೆಗೆ ಪುರಾವೆ ಎಂಬಂತೆ ಇಂದಿನ ರಾಜಕಾರಣಿಗಳು ವಿರೂಪಾಕ್ಷ ದೇವರ ಗುಡಿ ಪ್ರವೇಶಿಸಲು ಹೆದರುತ್ತಾರೆ. ವಿರೂಪಾಕ್ಷ ದರ್ಶನ ಪಡೆದ ಕಪಟಿ
ಗಳು, ದುರುಳರು, ಅನೈತಿಕರು, ಅಪ್ರಾಮಾಣಿಕರಿಗೆ ಕೆಡುಕು ಕಟ್ಟಿಟ್ಟ ಬುತ್ತಿ. ಇನ್ನು ತುಂಗಭದ್ರ ತೀರದಲ್ಲಿ ಪಿತೃತರ್ಪಣ, ಪಿಂಡ ಅರ್ಪಣೆ ಬಹುಶ್ರೇಷ್ಠ ಎಂಬುದು ವಿದೇಶಿಗರಿಗೂ ಮನದಟ್ಟಾಗಿದೆ.

ಆಡಳಿತ, ಪ್ರಜಾಪಾಲನೆ, ಧರ್ಮರಕ್ಷಣೆಯಲ್ಲದೇ ಶ್ರೀಮಂತಿಕೆ, ವಾಸ್ತುಶಿಲ್ಪ, ವಿಜ್ಞಾನದಲ್ಲಿ ಹಂಪಿ ಆಗಲೇ ವಿಶ್ವವಿಖ್ಯಾತಿ ಪಡೆದಿತ್ತು. ಇಷ್ಟೆಲ್ಲಾ ಮಹತ್ವಗಳುಳ್ಳ ಹಂಪಿ ಇಂದು ಕೇವಲ ‘ಪ್ರವಾಸಿ ಕ್ಷೇತ್ರಕ್ಕಷ್ಟೇ’ ಸೀಮಿತವಾಗುತ್ತಿದೆ. ಹಂಪಿ ಗ್ರಾಮಪಂಚಾಯಿತಿ, ಜಿಲ್ಲಾಡಳಿತ, ಪ್ರವಾಸೋದ್ಯಮ, ಪ್ರಾಚ್ಯವಸ್ತು ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರವಲ್ಲದೇ ಕೇಂದ್ರದ ಪುರಾತತ್ವ ಇಲಾಖೆ, ಅಂತಾರಾಷ್ಟ್ರೀಯ ‘ಯುನೆಸ್ಕೋ’ ಸಂಸ್ಥೆಗೂ ಒಳಪಟ್ಟಿದ್ದರೂ ಹಂಪಿ ಉದ್ಧಾರ ಮಾತ್ರ ಆಗುತ್ತಿಲ್ಲ.
ಈ ಎಲ್ಲಾ ಆಡಳಿತಗಳ ಸುಳಿಯಲ್ಲಿರುವ ಪುರಾಣ ಕ್ಷೇತ್ರ, ಯಾತ್ರಾಸ್ಥಳ, ಧಾರ್ಮಿಕ ಸ್ಥಳವಾಗಿರುವ ಹಂಪಿಯ ಕುಲದೈವ ವಿರೂಪಾಕ್ಷ ದೇಗುಲವನ್ನೇ
‘ಸ್ಮಾರಕ’ವಾಗಿಸುವ ಅಪಾಯವಿದೆ. ಹಂಪಿಯಲ್ಲಿ ರಾಯನ ಕಾಲದಲ್ಲಿದ್ದ ಅರ್ಚಕರ ಪರಂಪರೆ ಯೊಂದಿಗೇ ಎಲ್ಲಾ ವರ್ಗದವರೂ ನಿವಾಸಿಗಳಾಗಿದ್ದಾರೆ.

ಹಂಪಿಗೆ ಬರುವ ಪ್ರವಾಸಿಗರೇ ಇವರ ದುಡಿಮೆಗೆ ಆಧಾರ. ಇಂಥ ಸ್ಥಳದ ಮೇಲೆ ಕಣ್ಣಿಟ್ಟು ೩೦ ವರ್ಷಗಳ ಹಿಂದೆ ಕಾಶ್ಮೀರದಿಂದ ಮುಸಲ್ಮಾನ ವ್ಯಾಪಾರಿಗಳು ಬಂದು ಕರಕುಶಲವಸ್ತುಗಳ ಅಂಗಡಿ ಗಳನ್ನು ತೆರೆದು ಹಂಪಿ ರಾಜಬೀದಿಯನ್ನೇ ಆಕ್ರಮಿಸಿಕೊಳ್ಳುತ್ತಾರೆ. ಇಂಥವರಿಂದ ವಿರೂಪಾಕ್ಷನ ವ್ಯಾಪ್ತಿಯೊಳಗೆ ವಿದೇಶಿಗರಿಗಾಗಿ ಮಾಂಸಹಾರ, ಮಾದಕ ವಸ್ತುಗಳ ಪ್ರವೇಶವಾಗುತ್ತದೆ. ವೇಶ್ಯಾವಾಟಿಕೆಯೂ ನಡೆಯುತ್ತಿದೆ ಎಂಬ ಆರೋಪಕ್ಕೆ ಸ್ಥಳಿಯ ಹಂಪಿಗರು
ಗುರಿಯಾಗುತ್ತಾರೆ. ಈ ಕಾಶ್ಮೀರಿ ಮುಸಲ್ಮಾನರ ‘ಕಾರ್ಯಪ್ರತಿಷ್ಠಾಪನೆ’ಯ ಆದ್ಯತೆಯಾಗಿ ಹಂಪಿ ಸುತ್ತಲಿನ ‘ಶಾಂತಿದೂತರು’ ಪ್ರಚೋದನೆಗೊಂಡ
ಪರಿಣಾಮ ಒಂದೊಂದೇ ಸ್ಮಾರಕಗಳು ಹಸಿರು ಹೊದಿಕೆ, ಹಸಿರು ಬಣ್ಣಗಳನ್ನು ಪಡೆದುಕೊಂಡು ದಿಢೀರ್ ದರ್ಗಾಗಳು, ಕೃತಕ ಸಮಾಧಿಗಳು ಕಾಣಿಸಿ
ಕೊಂಡು ಸ್ಮಾರಕ-ಗುಡಿ-ಮಂಟಪಗಳೇ ಮತಾಂತ ರಕ್ಕೆ ಒಳಗಾಗುತ್ತವೆ. ಆಗಲೇ ಡಾ. ಎಂ.ಚಿದಾನಂದ ಮೂರ್ತಿ, ಇತಿಹಾಸಕಾರ ಡಾ.ಸೂರ್ಯನಾಥ
ಕಾಮತ್ ಅವರು ಜಾಗೃತಗೊಂಡು ಹಂಪಿಯ ಮೇಲೆ ಮತ್ತೊಂದು ಸುತ್ತಿನ ಇಸ್ಲಾಂ ಆಕ್ರಮಣ ನಡೆಯದಂತೆ ಹೋರಾಡುತ್ತಾರೆ. ಹೀಗೆ ಕಾಶ್ಮೀರಿ
ಮುಸಲ್ಮಾನರ ಜನಸಂಖ್ಯೆಯೂ ಹೆಚ್ಚಿದ್ದಲ್ಲದೇ ಅವರ ಗುಣಲಕ್ಷಣವೆಂಬಂತೆ ಒಬ್ಬ ಗೋವಿನ ಮೇಲೆ ಅತ್ಯಾಚಾರ ಎಸಗಿ ಸಿಕ್ಕುಬಿದ್ದಾಗ ಆತನನ್ನು ಹುಚ್ಚ
ಎಂದು ‘ತೀರ್ಮಾನಿಸಿ’ ಕಾಶ್ಮೀರಕ್ಕೆ ಕಳಿಸುತ್ತಾರೆ.

ಕೊನೆಗೆ ಕಾಶ್ಮೀರ ಮುಸಲ್ಮಾನರ ‘ಉತ್ತುಂಗ ಅವಸ್ಥೆ ಯಂತೆ’ ಇಮ್ರಾನ್ ಎಂಬ ಭಯೋತ್ಪಾದಕ ದೊಡ್ಡ ಬಂದೂಕಿನ ಸಮೇತ ಸಿಕ್ಕಿಬಿದ್ದಾಗಲೇ ಸ್ಥಳೀಯ
ಪೊಲೀಸರಿಗೆ ಅದು ಮಕ್ಕಳಾಡುವ ಗನ್ ಅಲ್ಲವೆಂದು ಅರಿವಾದದ್ದು. ಆಗಲೇ ಕರ್ತವ್ಯದ ಜ್ಞಾನೋದಯ ವಾಗಿ ಕಾಶ್ಮೀರಿ ಮುಸಲ್ಮಾನರನ್ನು ಹೊರದಬ್ಬುತ್ತಾರೆ.
ಆದರೆ ಇವರಿಂದ ಅವಮಾನಕ್ಕೆ, ನಿಂದನೆಗೆ,ಯಾತನೆಗೆ ಗುರಿಯಾದವರು ಮಾತ್ರ ಸ್ಥಳೀಯ ನಿವಾಸಿಗಳು.

ಇದರ ಪರಿಣಾಮ ನ್ಯಾಯಾಲಯದ ಆದೇಶ ವಾಗಿ ಹಂಪಿಯ ಸಂಪೂರ್ಣ ಬಜಾರು ಖಾಲಿಯಾಗಿ ಹಿಂದಿದ್ದ ಮಂಟಪಗಳು ಬೆಳಕಿಗೆ ಬಂದವು, ಆದರೀಗ ಅರ್ಚಕರ ಕುಟುಂಬವಲ್ಲದೆ ಇನ್ನಿತರರೂ ವಾಸವಾಗಿರುವ ‘ಹಂಪಿ ಜನತಾ ಪ್ಲಾಟ್’ ಅನ್ನೂ ಖಾಲಿ ಮಾಡಿಸುವ ವಾದ ಹೈಕೋರ್ಟಿನಲ್ಲಿ ನಡೆಯುತ್ತಿದೆ. ಒಂದೊಮ್ಮೆ ಅವರುಗಳೂ ಖಾಲಿಯಾದರೆ ಇಂಥ ತೀರ್ಥಸ್ಥಳದ ಭವಿಷ್ಯವೇನು? ಜನರಹಿತ ಪ್ರದೇಶ ವಾದರೆ ಅತ್ಯಮೂಲ್ಯ ದೇವಾಲಯ-ಶಾಸನಗಳನ್ನು  ಯುವವರಾರು? ಹಂಪಿ ಪಾರಂಪರಿಕ (ಹೆರಿಟೇಜ್) ಸ್ಥಳ ಎಂದಮೇಲೆ ಅಲ್ಲಿ ಪಾರಂಪರಿಕ ನಿವಾಸಿಗಳೂ ಇರಬೇಕಲ್ಲವೇ? ಪ್ರವಾಸಿಗರಲ್ಲಿ ಉಳ್ಳವರೇನೋ ಹೊಸಪೇಟೆಯ ಹೋಟೆಲ್‌ಗಳಲ್ಲಿ ಉಳಿದುಕೊಂಡು ಹಂಪಿ ಸುತ್ತುತ್ತಾರೆ. ಆದರೆ ಭಕ್ತ ಬಡಕುಟುಂಬಗಳು ಹಂಪಿಗೆ ಬಂದರೆ ಅವರಿಗೆ ವಸತಿ, ಊಟ-ತಿಂಡಿ, ಶೌಚಾಲಯಗಳ ಸೌಕರ್ಯವಿಲ್ಲ. ಅಂಥ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಜನತಾ ಪ್ಲಾಟ್ ನಿವಾಸಿಗಳಿಗೂ ಉಳಿಗಾಲವಿಲ್ಲದಂತಾಗಿದೆ.

ಈಗಾಗಲೇ ಬೃಹತ್ ದೇಗುಲಗಳು ನಿರ್ಜೀವ ವಾಗಿ ಪ್ರವಾಸಿಗರು ಪಾದರಕ್ಷೆ ಧರಿಸಿಯೇ ಗರ್ಭ ಗುಡಿಯೊಳಗೆ ಓಡಾಡುವುದನ್ನು ನೋಡುವಂತಾಗಿದೆ. ಕಾನೂನುಗಳಿಗಿಂತ ಮಿಗಿಲಾಗಿ ಹಂಪಿಯ ಪಾರಂಪರಿಕತೆ, ನಾಗರಿಕತೆಯ ರಕ್ಷಣೆ ಮಹತ್ವ ದ್ದಾಗಿದೆ. ಅದಕ್ಕಾಗಿ ಈಗಿರುವ ಒಂದೇ ದಾರಿಯೆಂದರೆ ಸ್ಥಳೀಯರ ಪರವಾಗಿ ವಕಾಲತ್ತು ವಹಿಸಿ ರುವ ಹಿರಿಯ ನ್ಯಾಯವಾದಿ ಅಶೋಕ್ ಹಾರನ ಹಳ್ಳಿಯವರು ಸ್ಥಳೀಯರ ಒಂದು ನಿಯೋಗ ದೊಂದಿಗೆ ಇಂಥ ಅಮೋಘ ದೇವಾಲಯದ ಪಾರಂಪರಿಕತೆ, ಹಿನ್ನೆಲೆ, ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನದಟ್ಟು ಮಾಡಿ ಕೊಟ್ಟು, ವಿರೂಪಾಕ್ಷ ದೇಗುಲವಲ್ಲದೇ ಇನ್ನಿತರ
ದೇವಾಲಯಗಳ ಗತವೈಭವವನ್ನು ಮರುಸ್ಥಾಪಿಸುವ ಪ್ರಯತ್ನ ಮಾಡಬಹುದಾದ ಕಾಶಿಯಂಥ ಕಾರಿಡಾರ್ ಯೋಜನೆಗೆ ಆಗ್ರಹಿಸಬೇಕಿದೆ. ಸನಾತನ
ಅಸ್ತಿತ್ವವನ್ನು ಸಾರುವ ದೇಗುಲಗಳ ಮೌಲ್ಯ ಮೋದಿ ಯವರಿಗೆ ತಿಳಿದಿದೆ.

ವಾರಾಣಸಿ, ಉಜ್ಜಯಿನಿ ದೇಗುಲಗಳಲ್ಲಿರುವಂಥ ಕಾರಿಡಾರ್ ಯೋಜನೆ ಯನ್ನು ಹಂಪಿಗೂ ತಂದರೆ ವಿಜಯನಗರ ಸ್ಥಾಪನೆಯ ಉದ್ದೇಶವನ್ನು ಸಾರ್ಥಕಗೊಳಿಸಿ
ದಂತಾಗುತ್ತದೆ. ಇಲ್ಲದಿದ್ದರೆ ಹಂಪಿಯ ಅಭ್ಯುದಯ ಅಷ್ಟು ಸುಲಭವಲ್ಲ! ಪಂಪಾಪತಿ, ನೀನೇ ಗತಿ!

Leave a Reply

Your email address will not be published. Required fields are marked *

error: Content is protected !!