Friday, 19th April 2024

ಸ್ವಮೋಹವೆಂಬ ಮಾನವನ ಮನದ ಮುಂದಣ ಮಾಯೆ !

ಶ್ವೇತಪತ್ರ

shwethabc@gmail.com

ಸ್ವಮೋಹಿಗಳು ಎಲ್ಲರನ್ನೂ magnet ನಂತೆ ಆಕರ್ಷಿಸುತ್ತಾರೆ ಸೆಳೆಯುತ್ತಾರೆ. ತಮ್ಮ ಬಗ್ಗೆ ಅತಿರಂಜಿತ self ಇಮೇಜನ್ನು ಕ್ರಿಯೇಟ್ ಮಾಡುವುದರಲ್ಲಿ ಇವರು ನಿಸ್ಸೀಮರು. ಸುಳ್ಳೇ ವಿಶ್ವಾಸ ಮತ್ತು ಸುಳ್ಳೇ ಕನಸುಗಳ ಭ್ರಮೆ ಯನ್ನು ಸೃಷ್ಟಿಸಿ ಜನರನ್ನು ಆಕರ್ಷಿಸುವ magical power ಇವರಿಗಿರುತ್ತದೆ. ಇದನ್ನು ನಂಬಿ ಜನ longlasting  ಸಂಬಂಧವನ್ನು ಇವರೊಟ್ಟಿಗೆ ಬಯಸಿ ಇವರ ಬಲೆಯಲ್ಲಿ ಬಿದ್ದರೆ ಅದು ಕೇವಲ ಭ್ರಮೆಯೆಂದು ಅವರ ಅರಿವಿಗೆ ಬರುವು ದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ.

ಹುಚ್ಚು ಮನಸ್ಸಿಗೆ ಬರಿ ಹತ್ತಲ್ಲ ನೂರೆಂಟು ಮುಖ ನೂರೆಂಟು ರೂಪ. ಅಲ್ಲಮ ಇದೆ ಮನಸ್ಸಿನ ಮುಖವನ್ನ ಆಸೆಯ ಮಾಯೆ ಯೆಂದ, ಆಸೆಯನ್ನು ಮೀರಿದ ಮನದ ಮಾಯೆಯೊಂದಿದೆ ಅದುವೆ ಸ್ವಮೋಹ ನಮ್ಮ ಸೈಕಾಲಜಿ ಭಾಷೆಯಲ್ಲಿ ಹೇಳುವುದಾದರೆ ಇದು Narcissism. ಹೆಣ್ಣು-ಹೊನ್ನು-ಮಣ್ಣು ಎಲ್ಲವನ್ನೂ ಮೀರಿದ ನಾನತ್ವದ ಮಾಯೆಯೇ ಈ ಸ್ವಮೋಹ. ನಮ್ಮ ಬಗ್ಗೆ ನಾವು ಅನೇಕ ಸಂದರ್ಭಗಳಲ್ಲಿ ಬಡಾಯಿ ಕೊಚ್ಚಿಕೊಂಡವರೆ, Self marketing ಮಾಡಿಕೊಂಡವರೆ, ನಮ್ಮನ್ನು ನಾವು ಪ್ರೀತಿಸಿ ಕೊಂಡವರೆ ಆದರೆ ಸ್ವಪ್ರೀತಿಯೆಂಬ ಗೀಳಿನಲ್ಲಿ ನಮಗಿಂತ ಆದರ್ಶಪ್ರಾಯರಿಲ್ಲ, ಮಹತ್ವಾಕಾಂಕ್ಷೆಯುಳ್ಳವರಿಲ್ಲ, ಭವ್ಯ ಕಲ್ಪನೆಯನ್ನು ಹೊಂದಿದವರಿಲ್ಲ ಎಂಬ ಮಹತ್ವಪೂರ್ಣವಾದ image ಜತೆಗೆ ತನುಮನ ಕಣದಲ್ಲು ಮುಳುಗಿ ಹೋದರೆ
definetely ಅದು ಸ್ವಮೋಹವೆಂಬ ಗೀಳು.

ಸ್ವಮೋಹಿಗಳಿಗೆ ಗಾಳಿಗೋಪುರದ selfimage ಎಂದರೆ ಅತಿಯಾದ ಪ್ರೀತಿ ಏಕೆಂದರೆ ಈ ಇಮೇಜ್ ಅವರ ಮನದಾಳದ ಅಭದ್ರತೆ ಗಳನ್ನು ಎಲ್ಲಿಯೂ ಕಾಣದಂತೆ ಅವಾಯ್ಡ್ ಮಾಡಿ ಬಿಡುತ್ತದೆ. ಸ್ವಮೋಹಿಗಳ ಭವ್ಯತೆಯ ಭ್ರಮೆ ಅವರೆಡೆಗಿನ ವರ್ತನೆಯಲ್ಲೂ ಮನೋಭಾವದಲ್ಲೂ ಅನೇಕ ಅಪಸಾಮಾನ್ಯತೆಗೆ ಕಾರಣವಾಗಿಬಿಡುತ್ತದೆ. ಈ ಸ್ವಮೋಹ ಗೊತ್ತೇ ಆಗದಂತೆ ಎದುರಿಗಿರು ವವರನ್ನು, ಮನೆಯವರನ್ನು, ಸುತ್ತಲಿರುವವರನ್ನು ಹೈರಾಣಾಗಿಸಿಬಿಡುವ ವ್ಯಕ್ತಿತ್ವದ ಒಂದು ಅಸ್ವಸ್ಥತೆ.

ಮಜಾ ಏನೆಂದರೆ ಎಷ್ಟೋಸಾರಿ ಇದು ಅಸ್ವಸ್ಥತೆ ಎಂದು ಗೊತ್ತೇ ಆಗುವುದಿಲ್ಲ. ಇಲ್ಲಿ ವ್ಯಕ್ತಿ ಹೆಚ್ಚು ಸ್ವಕೇಂದ್ರಿತನಾಗಿರುತ್ತಾನೆ. (ನಾನು ಮತ್ತು ನಾನು ಎಂಬ ಪರಿಧಿ ಬಿಟ್ಟು ಯೋಚನೆಯೂ ಮಾಡಲಾಗದ) ಅವನ ವರ್ತನೆ ಮತ್ತು ಆಲೋಚನೆಯಲ್ಲಿ ದಾರ್ಷ್ಟ್ಯವೇ ಪ್ರಧಾನವಾಗಿರುತ್ತದೆ. ಸಹಾನುಭೂತಿಯೇ ಇಲ್ಲದ, ಎದುರಿಗಿರುವ ವ್ಯಕ್ತಿಯನ್ನು ಗಣನೆಗೆ ತೆಗೆದುಕೊಳ್ಳದ ಮತ್ತು ಎಲ್ಲರೂ ತನ್ನ ಬಗ್ಗೆ ಅತಿಯಾದ ಅಭಿಮಾನಪಡಲಿಯೆಂಬ ಮನೋಭಾವವಿರುತ್ತದೆ.

ಹಾಗೇ ಸುಮ್ಮನೆ observe ಮಾಡಿ ನಿಮ್ಮ ಸುತ್ತಮುತ್ತ ಯಾರಾದರೊಬ್ಬರು ಇಂತಹ ಸ್ವಮೋಹಿಗಳು ನಿಮಗೆ ಕಾಣ ಸಿಗುತ್ತಾರೆ. ಅಹಂಕಾರ, ಸ್ವಾರ್ಥ, ಹೇಳಿದ್ದನ್ನು ಹೇಳೇ ಇಲ್ಲ ಎಂದು ಸಾಧಿಸುವ ಕೌಶಲ, ಆಗಬೇಕು ಅಂದರೆ ಆಗಲೇಬೇಕು ಇವೆಲ್ಲ ಸ್ವಮೋಹದ ಮಾನಸಿಕ ಗುಣಗಳು. ಬೈ ಎನಿ ಚಾ ಯಾರಾದರೂ ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಿ ಅಂತ ಇವರಿಗೆ ಹೇಳಿದ್ರೆ ಅದಕ್ಕೆ ಅತಿಯಾದ ಪ್ರತಿರೋಧವನ್ನು ಒಡ್ಡುತ್ತಾರೆ. ಸ್ವಮೋಹಿಗಳ ಪ್ರವೃತ್ತಿಯೇ ತಮ್ಮ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದು.

ವಿಪರೀತ ಎನಿಸುವಷ್ಟು sensitive ಆಗಿಬಿಡುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳದೇ ವೈಯಕ್ತಿಕ ದಾಳಿಗೆ ಮುಂದಾಗಿಬಿಡುವುದು ಇವರ ಸ್ವಭಾವ. ಇಂತಹವರು ನಿಮ್ಮ ಬದುಕನಾದರೂ ಇದ್ದರೆ ಸದ್ದಿಲ್ಲದೆ ಅವರ ಡಿಮಾಂಡ್‌ಗಳಿಗೆ ಸ್ಪಂದಿಸಿ ಬಿಡುವುದಷ್ಟೇ ಅವರ ಕ್ರೋಧದಿಂದ ತಪ್ಪಿಸಿಕೊಳ್ಳಬಹುದಾದ ಸುಲಭದ ದಾರಿ. ಹೀಗೆ ಸ್ವಮೋಹಿಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯುತ್ತ ಅಂತಹವರ ಜತೆಗೆ ಆರೋಗ್ಯಕರವಾದ boundary ಯನ್ನು ಹಾಕಿ ಬದುಕಿ ಬಿಡುವುದು ನಾವು ತೋರುವ ಜಾಣ್ಮೆ. ಸ್ವಮೋಹವನ್ನು define ಮಾಡಬಹುದಾದ ಒಂದು ಮುಖ್ಯ ಗುಣವೆಂದರೆ ನಾನು ಮತ್ತು ನಾನಷ್ಟೇ ಎಂಬ ಅವರ ಅಟ್ಟಹಾಸ. ಈ ನಾನತ್ವ- ಅಹಂಕಾರವನ್ನು, ಆಡಂಬರ ಪ್ರದರ್ಶನವನ್ನು ಮೀರಿದ ಅವಾಸ್ತವಿಕ ಶ್ರೇಷ್ಠತೆಯ ಭಾವ.

ನಾವು ಬಹಳ ವಿಶೇಷ ವ್ಯಕ್ತಿಗಳು ನಮ್ಮನ್ನ ನಮ್ಮಂತಹ ವಿಶೇಷ ವ್ಯಕ್ತಿಗಳು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ ಅನ್ನುವುದು ಸ್ವಮೋಹಿಗಳ ಗಾಢವಾದ ನಂಬಿಕೆ. ಅತಿ ಸಾಮಾನ್ಯ ವಿಷಯಗಳಿಗೂ ಒಳ್ಳೆಯತನ ತೋರಿಸುವ ಇವರು ಮಾತ್ರ connect ಆಗುವುದು high-status ಜನಗಳಿಗೆ, ಜಾಗಗಳಿಗೆ ಮತ್ತು ವಸ್ತುಗಳಿಗೆ. ಎಲ್ಲರಿಗಿಂತ ತಾವು ಅತ್ಯುತ್ತಮರೆಂಬುದು ಸ್ವಮೋಹಿಗಳ ಮತ್ತೊಂದು ನಂಬಿಕೆ. ತಮ್ಮ ಸಾಧನೆಯನ್ನು ಪ್ರತಿಭೆಯನ್ನು ವಿಪರೀತ ಎನ್ನುವಷ್ಟು exaggerate ಮಾಡಿ ಕೆಲವೊಮ್ಮೆ ನೇರ ವಾಗೇ ಸುಳ್ಳನ್ನು ಹೇಳಿ ತಾವು ಗ್ರೇಟ್ ಎಂದು ಪ್ರತಿಪಾದಿಸಿಕೊಂಡು ಬಿಡುತ್ತಾರೆ.

ಇನ್ನೂ ಸಂಬಂಧಗಳ ಬಗ್ಗೆ ಅಥವಾ ಕೆಲಸದ ಬಗ್ಗೆ ಇವರು ಮಾತಿಗಿಳಿದರೆ ನೀವು ಕೇಳಿಸಿಕೊಳ್ಳಬಹುದಾದ್ದದ್ದು ಇವರಷ್ಟು ಕೆಲಸ ಮಾಡುವವರು ಮತ್ತೊಬ್ಬರಿಲ್ಲ ಹಂಗಾಗಿ ಇವರು ಗ್ರೇಟ್ ಮತ್ತು ಇಂತಹವರನ್ನು ಪಡೆದ ಅವರ ಮನೆಯವರು ತುಂಬ lucky ಗಳು ಎಂದು. ಅವರ ಪ್ರಕಾರ ಅವರು ನಿರ್ವಿವಾದವಿಲ್ಲದ star ಗಳು. ವಾಸ್ತವದ ಬದುಕು ಅವರ ಈ ಭವ್ಯ ಭ್ರಮಾಲೋಕವನ್ನು
support ಮಾಡದ ಕಾರಣ ಹೆಚ್ಚೇ ಅವರು ಭ್ರಮೆಯ ಲೋಕದಲ್ಲಿ ಬದುಕಲು ಶುರುವಿಟ್ಟುಕೊಳ್ಳುತ್ತಾರೆ ಮತ್ತು ಅವರ
ಭ್ರಮೆಯಲೋಕದಲ್ಲಿ ವಿರೂಪಗೊಂಡ ವಂಚನೆಯ ಆಲೋಚನೆಗಳೇ ಅವರಿಗೆ ಆಸರೆಯಾಗುತ್ತವೆ. ಈ ಕಲ್ಪನೆಗಳನ್ನು
ವೈಭವೀಕರಿಸುತ್ತಾ ತಮ್ಮ ವ್ಯಕ್ತಿತ್ವಕ್ಕೆ ಪೋಣಿಸತೊಡಗುತ್ತಾರೆ.

ತಮ್ಮದೇ ಯಶಸ್ಸಿನ, ಬುದ್ಧಿವಂತಿಕೆಯ, ಆದರ್ಶದ, ಪ್ರೀತಿಯ ಮೋಹ ಅವರನ್ನು ಅವರು ಸ್ಪೆಷಲ್ ಎಂದು feel ಮಾಡುವಂತೆ
ಮಾಡುತ್ತಾ ನಿಯಂತ್ರಣದಲ್ಲಿಡುತ್ತದೆ. ಇಂತಹ ಭವ್ಯ ಕಲ್ಪನೆಗಳು ಮನಸ್ಸಿನ ಆಳದಲ್ಲಿ ಅವರ ಖಾಲಿತನವನ್ನು, ಅವಮಾನ ಗಳನ್ನು, ರಕ್ಷಿಸುತ್ತಾ ಹೋಗುತ್ತವೆ. ಸ್ವಮೋಹಿಗಳ ಕಲ್ಪನೆಯ ಜಗತ್ತಿನ ಬಲೂನನ್ನು ಯಾರಾದರೂ ಚುಚ್ಚಲು ಹೋಗಿ ಅವರ ಕೋಪಕ್ಕೆ ಗುರಿಯಾಗುವುದುಕ್ಕಿಂತ ಅವರ ವಾಸ್ತವದ ನಿರಾಕರಣೆಯನ್ನು ಒಪ್ಪುತ್ತ ಬದುಕಿಬಿಡುವುದೇ ವಾಸಿ.

ಸ್ವಮೋಹಿಗಳ ವ್ಯಕ್ತಿತ್ವ ಹೇಗೆಂದರೆ ಗಾಳಿ ತುಂಬಿದ ಬಲೂನಿನಂತೆ ಇವರ ಜತೆಯಲ್ಲಿರುವವರು ನೀನು ಶ್ರೇಷ್ಠ ಎಂಬ ಗಾಳಿಯನ್ನು ಇವರ ಮನಸ್ಸಿಗೆ ಸದಾ ತುಂಬುತಲಿರಬೇಕು, ಅಹಂ ಅನ್ನು ಪೋಷಿಸುತ್ತಲೇ ಇರಬೇಕು ಹಾಗಾಗಿ ಇವರು ತಮ್ಮನ್ನು ಸದಾ ದೃಢೀಕರಿಸುವವರನ್ನು ಒಪ್ಪುತ್ತ ಅಂತಹವರ ಸುತ್ತ ಇರಲು ಹಾತೊರೆಯುತ್ತಾರೆ. ಈ ಸಂಬಂಧಗಳು ಕೇವಲ ಏಕಮುಖ ವಾಗಿರುತ್ತವೆ. ತಮ್ಮನ್ನು ತಾವು ವಿಶೇಷ ವ್ಯಕ್ತಿಗಳೆಂದು ಪರಿಭಾವಿಸಿರುವುದಕ್ಕಾಗಿ ಎಲ್ಲರೂ ತಮಗೆ ಅನುಕೂಲಕರವಾಗಿಯೇ ನಡೆದುಕೊಳ್ಳಬೇಕೆಂದು ಬಯಸುತ್ತದೆ ಸ್ವಮೋಹದ ಮನ.

ತಮಗೆ ಅನಿಸಿದ್ದನ್ನು ಪಡೆದೇ ತೀರಬೇಕೆಂಬ ಹಠ ಜತೆಗೆ ಜತೆಯಲ್ಲಿರುವವರು ತಮ್ಮ ಪ್ರತಿಯೊಂದು ಅನಿಸಿಕೆ, ಹುಚ್ಚಾಟವನ್ನು ಅನುಸರಿಸಬೇಕೆಂದು ಎಕ್ಸ್ಪೆಕ್ಟ್ ಮಾಡುತ್ತಾರೆ ಸ್ವಮೋಹಿಗಳು. ಇದೊಂದೇ ಅವರ ಮೌಲ್ಯವಾಗಿರುತ್ತದೆ. ಸ್ವಮೋಹಿಗಳ ಪ್ರಕಾರ ಯಾರಾದರೂ ಅವರ ಅವಶ್ಯಕತೆ ಯನ್ನು ಅರ್ಥಮಾಡಿಕೊಳ್ಳದೆ ಅರಿಯದೆ ಹೋದರೆ ಅವರೆಲ್ಲ useless. ನೀವೇನಾದರೂ ಅವರಿಂದ inreturn ಏನಾದರೂ ಪಡೆಯ ಬಯಸಿದರೆ ನೆನಪಿಡಿ ನೀವು ಪಡೆಯಬಹುದಾದದ್ದು ತಣ್ಣನೆಯ ಆಕ್ರೋಶ ಮಾತ್ರ. ಸ್ವಮೋಹಿಗಳು ಎಂದಿಗೂ ಬೇರೆಯವರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದೇ ಇಲ್ಲ.

ಸಹಾನುಭೂತಿ ಪದಕ್ಕೆ ಅವರ ಡಿಕ್ಷನರಿಯಲ್ಲಿ ಅರ್ಥವೇ ಇರುವುದಿಲ್ಲ infact ಬೇರೆ ಜನರು ಇವರ ಬದುಕಿನ ಅವಶ್ಯಕತೆಗಳನ್ನು ಪೂರೈಸುವ ವಸ್ತುಗಳಷ್ಟೇ ಆಗಿರುತ್ತಾರೆ. ಹಾಗಾಗಿ ತಮ್ಮ ಬಯಕೆಗಳು ಅಗತ್ಯತೆಗಳು ಪೂರೈಕೆಯಾಗ ಬೇಕೆಂದರೆ ಯಾರನ್ನು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳುತ್ತಾರೆ. ಪರಸ್ಪರ ಸಂಬಂಧದಲ್ಲಿ ಈ ಶೋಷಣೆ ದುರುದ್ದೇಶ ಪೂರಿತ ಎಂದು ಅರಿವಿಗೆ ಬರದಂತೆ ಘಟಿಸಿಬಿಟ್ಟಿರುತ್ತದೆ. ತಮ್ಮ ವರ್ತನೆ ಬೇರೆಯವರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂದು ಕಿಂಚಿತ್ತೂ ಇವರು ಯೋಚಿಸುವುದಿಲ್ಲ ಅವರಿಗೆ ಅರ್ಥವಾಗುವಂತೆ ವಿಷಯವೆಂದರೆ ಅವರ ಅಗತ್ಯತೆಗಳು.

ತಮ್ಮ ತಪ್ಪುಗಳನ್ನು ಬೇರೆಯವರ ಮೇಲೆ ಹೊರಿಸಿ ಅವರಲ್ಲಿ ಅಪರಾಧಿ ಪ್ರಜ್ಞೆಯನ್ನು ಮೂಡಿಸಿ ಕುಸಿದು ಹೋಗುವಂತೆ ಮಾಡಿ ಬಿಡುವುದರಲ್ಲಿ ಸ್ವಮೋಹಿಗಳು ನಿಸ್ಸೀಮರು. ತುಂಬಾ confident ಆದ, popular ಆದ ವ್ಯಕ್ತಿಗಳು ಇವರ ಸರ್ಕಲ್‌ನಲ್ಲಿ ಇದ್ದರೆ
ಅವರನ್ನು ಸಹಿಸುವುದಿಲ್ಲ. ಯಾಕೆಂದರೆ ಅಂತಹ ವ್ಯಕ್ತಿಗಳನ್ನು ತಮಗೆ threat ಎಂದೇ ಸ್ವಮೋಹಿಗಳು ಭಾವಿಸುತ್ತಾರೆ. ಅವರನ್ನು ಹೇಗಾದರೂ ಮಾಡಿ ತುಳಿಯಲು, ತಿರಸ್ಕರಿಸಲು ನೋಡುತ್ತಾರೆ. ಎಲ್ಲರೆದುರೂ ಅವರನ್ನು ಸಣ್ಣವರನ್ನಾಗಿ ಮಾಡಿ ಬಿಡುತ್ತಾರೆ ಇಲ್ಲವೇ ಅವಮಾನಿಸುವುದರ ಮೂಲಕ attack ಮಾಡುತ್ತಾರೆ.

ನಿಮಗೆ ಗೊತ್ತಿರಲಿ ಸ್ವಮೋಹಿಗಳು ಎಲ್ಲರನ್ನೂ magnet ನಂತೆ ಆಕರ್ಷಿಸುತ್ತಾರೆ ಸೆಳೆಯುತ್ತಾರೆ. ತಮ್ಮ ಬಗ್ಗೆ ಅತಿರಂಜಿತ
self ಇಮೇಜನ್ನು ಕ್ರಿಯೇಟ್ ಮಾಡುವುದರಲ್ಲಿ ಇವರು ನಿಸ್ಸೀಮರು. ಸುಳ್ಳೇ ವಿಶ್ವಾಸ ಮತ್ತು ಸುಳ್ಳೇ ಕನಸುಗಳ ಭ್ರಮೆಯನ್ನು
ಸೃಷ್ಟಿಸಿ ಜನರನ್ನು ಆಕರ್ಷಿಸುವ magical power ಇವರಿಗಿರುತ್ತದೆ. ಇದನ್ನು ನಂಬಿ ಜನ longlasting ಸಂಬಂಧವನ್ನು ಇವರೊ ಟ್ಟಿಗೆ ಬಯಸಿ ಇವರ ಬಲೆಯಲ್ಲಿ ಬಿದ್ದರೆ ಅದು ಕೇವಲ ಭ್ರಮೆಯೆಂದು ಅವರ ಅರಿವಿಗೆ ಬರುವುದಕ್ಕೆ ಹೆಚ್ಚು ಸಮಯ ಹಿಡಿಯುವು ದಿಲ್ಲ. ಸ್ವಮೋಹಿಗಳ ಸಹ ಪ್ರೀತಿಯನ್ನು ಏನಾದರೂ ನೀವು ಎಕ್ಸ್ಪೆಕ್ಟ್ ಮಾಡಿದರೆ ಒಂದು ನಿಮಿಷ ಯೋಚಿಸಿ ಅವರಿಗೆ ಬೇಕಿರು ವುದು ಸಂಬಂಧವಲ್ಲ ತಾವು ಹೇಳಿದ್ದನ್ನು ಪ್ರಶ್ನಿಸದೆ ಒಪ್ಪುವ ಅವರ ego ವನ್ನು pamper ಮಾಡುವ ಮನಸ್ಸಷ್ಟೇ.

ಸ್ವಮೋಹಿಗಳು ಎಷ್ಟು ಬೇಕಾದರೂ ಸುಳ್ಳು ಹೇಳಬಹುದು, ಹಿಂಗಿದ್ದಿದ್ದನ್ನು ಹಂಗೆ ಮಗುಚಬಹುದು, hurt ಮಾಡಬಹುದು, ಅಗೌರವಿಸಬಹುದು ಆದರೆ ಬೇರೆಯವರು ಇವುಗಳನ್ನು ಮಾಡುವ ಹಂಗಿಲ್ಲ by any chance ಮಾಡಿಬಿಟ್ಟರೆ ಅವರು ಜಗತ್ತಿನ ಪರಮಪಾಪಿಗಳಾಗಿ ಬಿಡುತ್ತಾರೆ ಇವರ ದೃಷ್ಟಿಯಲ್ಲಿ. ಅಲ್ಲಮನ ಮಾತುಗಳನ್ನು ಸ್ವಲ್ಪ ಸ್ವಮೋಹಕ್ಕೆ ಕನೆಕ್ಟ್ ಮಾಡಿ ಹೇಳುವು ದಾದರೆ… ನಾನೆಂಬ ಮಾಯೆ, ನನ್ನ ಬಿಟ್ಟರಿಲ್ಲವೆಂಬ ಮಾಯೆ, ನನಗಿಂತ ಉತ್ತಮರಿಲ್ಲ ವೆಂಬ ಮಾಯೆ, ನನಗಿಂತ ಆದರ್ಶ ವಂತರಿಲ್ಲವೆಂಬ ಮಾಯೆ, ಭವ್ಯ ಕಲ್ಪನೆಯ ಶ್ರೇಷ್ಠತೆಯ ಭ್ರಮೆಯ ಮಾಯೆ, ನಾನು, ನಾನು ಮತ್ತು ಬರೀ ನಾನಷ್ಟೇ ಎಂಬ ಮಾಯೆ, ಪರದೆ ಸರಿಸಿ ನೋಡಲಾಗದ ಮಾಯೆ, ಆಲೋಚನೆಗಳಲ್ಲು ಮನೋಭಾವಗಳಲ್ಲು ಬರೀ ನಾನತ್ವದ ಮಾಯೆ, ಮನದ ಮುಂದಣ ಸ್ವಮೋಹವೆಂಬ ಮಾಯೆ!

ಎಲ್ಲರೂ ನನ್ನ ಕಡೆ ಅತಿ ಹೆಚ್ಚು ಗಮನವಹಿಸಬೇಕು, ಎಲ್ಲರ ಅಟೆನ್ಶನ್ ನನಗೆ ಸಿಕ್ಕಿಬಿಡಬೇಕು, ಎಲ್ಲರೂ ನನ್ನನ್ನು ಆರಾಧಿಸ ಬೇಕು, ನಿನ್ನ ಬಿಟ್ಟರೆ ಇಲ್ಲ ಅಂತ ಹೊಗಳಬೇಕು, ಹೋದ ಕಡೆಯೆಲ್ಲ special treatment ಬೇಕು, ಹೀಗೆ ಮುಂದುವರೆಯುವ
ಸ್ವಮೋಹಿಗಳ ಅಸ್ವಸ್ಥತೆಯ ಜತೆ ಸ್ನೇಹಿತರಾಗಿ, ಮನೆಯರಾಗಿ ಕೋ ವರ್ಕರ್ಸ್ ಆಗಿ ಬದುಕಿಬಿಡುವುದಾದರೂ ಹೇಗೆ? ಆರೋಗ್ಯ ಕರವಾದ ಬೌಂಡರಿ ಹಾಕಿ ಅವರ ತಂಟೆಗೆ ಹೋಗದಂತೆ ನಮ್ಮ ಪಾಡಿಗೆ ನಾವು ಇದ್ದು ಬಿಡೋಣವೆಂದರೆ ಅವರ ಬೇಡದಿರುವ ಅಭಿಪ್ರಾಯಗಳನ್ನು advice ಗಳನ್ನು ಕೊಡುತ್ತಾ ನಾವು ಹಿಂಗೆ ನಡೆದುಕೊಳ್ಳಬೇಕೆಂದು expect ಮಾಡ್ತಾರೆ, boundary ದಾಟಿ ಬದುಕ ಹೊರಟರೆ ಜೀವಹಿಂಡೆ ಬಿಡುತ್ತಾರೆ ಹೆಂಗಪ್ಪ ಏಗೋದು? ಸ್ವಭಾವ ಮೋಹಿಗಳೊಂದಿಗೆ ನಿಮ್ಮ ನಡೆ ಸೌಮ್ಯ ವಾಗಿರಲಿ ಅವರು ಮಾಡುವ ನೋವುಗಳನ್ನು ಅವರ ನಿಷ್ಕ್ರಿಯ ವರ್ತನೆಯನ್ನು ಎಂದಿಗೂ ಅವರೊಟ್ಟಿಗೆ ಡಿಸ್ಕಸ್ ಮಾಡಬೇಡಿ ಅದನ್ನು ಬಹಳ offensive ಆಗಿ ತೆಗೆದುಕೊಂಡು ಬಿಡುತ್ತಾರೆ.

ಅವರ ಮೂಡ್ ಕೆಟ್ಟಾಗ ನಿಮ್ಮ ರಿಯಾಕ್ಷನ್ ಮಾತ್ರ ಸ್ಥಿತಪ್ರಜ್ಞವಾಗಿರಲಿ. ನಿಮ್ಮ ಬಗ್ಗೆ ಅವರು ವಿನಾಕಾರಣ ಅಪ್ಸೆಟ್ ಆಗಿಬಿಡ ಬಹುದು. ನಿಮ್ಮ ಬದುಕನ್ನು ನಿಯಂತ್ರಣಕ್ಕೆ ಪಡೆಯಲು ಪ್ರಯತ್ನಿಸಬಹುದು. ಆಗೆಲ್ಲ ಮೌನವಾಗಿದ್ದು ಬಿಡಿ, ಅದೇ ಅವರಿಗೆ ನೀವು ಕೊಡಬಹುದಾದ best answer. ಅವರ ತಪ್ಪುಗಳನ್ನು ನ್ಯೂನ್ಯತೆಗಳನ್ನು ಇನ್ಸೆಕ್ಯೂರಿಟೀಸ್‌ಗಳನ್ನು ಸುಳ್ಳುಗಳನ್ನು ಮುಚ್ಚಿ ಹಾಕಲು ಅವೆಲ್ಲವನ್ನೂ ನಿಮ್ಮ ತಲೆಗೆ ಕಟ್ಟಿ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಡಬಹುದು ಇವುಗಳಿಂದ ನಿಮಗೆ ದೊಡ್ಡ ಮಟ್ಟಿನ ತೊಂದರೆಯಾಗದ ಹೊರತು don’t take it personally. ಯಾವತ್ತಿಗೂ ಸ್ವಮೋಹಿಗಳ ಜತೆ ವಾದಿಸಬೇಡಿ ಅವರ ತಪ್ಪನ್ನು ಎತ್ತಿ ತೋರಿಸಲು ಹೋಗಬೇಡಿ ನೋಡಿದರೂ ನೋಡದಂಗೆ ಇದ್ದುಬಿಡಿ.

ನಿಮಗೆ ನೀವು ಚೆನ್ನಾಗಿ ಅರ್ಥವಾಗಿದ್ದರೆ ಇವರ ಅವಮಾನಗಳನ್ನು ಸುಳ್ಳುಗಳನ್ನು ಸುಲಭವಾಗಿ ಹ್ಯಾಂಡಲ್ ಮಾಡಿ ಬಿಡಬಹುದು. ಇವರನ್ನ ಇನ್ನಷ್ಟು ಮತ್ತಷ್ಟು ಅರ್ಥಮಾಡಿಕೊಳ್ಳಬೇಕಾ ಸ್ವಲ್ಪ sensitive ಆಗಿರಿ. emotional ಬ್ಲಾಕ್ ಮೇಲ್, ಕೆಟ್ಟ ಬೈಗುಳಗಳನ್ನು ಬಯ್ಯುವುದು ಇಲ್ಲ ಪ್ರೀತಿಯ ಬಾಂಬನ್ನು ಸಿಡಿಸಿ ಬಿಡುವುದು ಇವರ ಟೆಕ್ನಿಕ್ಸ್ ಸ್ಟ್ರಾಟಜೀಸ್ ಗಳಲ್ಲಿ ಮುಖ್ಯವಾದವು. ಬಿಟ್ಟುಹೋಗುವ ಪ್ರಯತ್ನ ಮಾಡಿದರೆ ನಿಮ್ಮನ್ನು ಹೆದರಿಸಿ ಬೆದರಿಸಿ ಮತ್ತೆ ಅವರ ಕಾಲ ಬುಡಕ್ಕೆ ಬೀಳುವಂತೆ ಮಾಡಿಕೊಂಡು ಬಿಡುತ್ತಾರೆ.

ನಮ್ಮ ಅಪ್ಪ, ಅಮ್ಮ, ಅಣ್ಣ, ತಮ್ಮ, ತಂಗಿ, ಗಂಡ, ಹೆಂಡತಿ, ಫ್ರೆಂಡ್ಸ್,ಪಕ್ಕದ ಮನೆಯವರು, ಕೆಲಸ ಮಾಡುವಲ್ಲಿನ ಬಾಸ್ ಅಥವಾ  co-workers ಯಾರು ಬೇಕಾದರೂ ಸ್ವಮೋಹಿಗಳಾಗಿರಬಹುದು. ಸಂಬಂಧಕ್ಕೆ ನಾವೆಷ್ಟು ಬೆಲೆ ಕೊಡುತ್ತೇವೆ ಎನ್ನುವು ದರ ಆಧಾರದ ಮೇಲೆ ಅವರ ಜತೆಗಿನ ಸಂಬಂಧ ಬೇಕಾ ಬೇಡವಾ? ನಿರ್ಧರಿಸಬಹುದು. ಉಸಿರುಗಟ್ಟಿಸುವ ಯಾವ ಸಂಬಂಧದ ಅಪೇಕ್ಷೆಯೂ ಹೆಚ್ಚು ದಿನ ನಿಲ್ಲಲಾರದು.

error: Content is protected !!