Thursday, 30th November 2023

ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇನು ?

ಸ್ವಾಸ್ಥ್ಯ ಸಂಪದ

Yoganna55@gmail.com

ಮನುಷ್ಯನ ವೈಯಕ್ತಿಕ, ಕೌಟುಂಬಿಕ ಚಟುವಟಿಕೆಗಳು, ವ್ಯವಸಾಯ, ಕಟ್ಟಡ ಕಾಮಗಾರಿ, ಕೈಗಾರಿಕೆ, ವೈದ್ಯಕೀಯ, ಸಾಫ್ಟ್ ವೇರ್ ಚಟುವಟಿಕೆ ಇತ್ಯಾದಿಗಳಿಂದ ಹೊಮ್ಮುವ ತ್ಯಾಜ್ಯಗಳಿಂದ ಭೂ, ಜಲ, ವಾಯುಮಾಲಿನ್ಯಗಳು ಉಂಟಾಗುತ್ತಿದ್ದು, ಪರಿಸರದ ಉಳಿವಿಗೆ ಅವು ಮಾರಕ ವಾಗುತ್ತಿವೆ. ಆದ್ದರಿಂದ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಅವಶ್ಯಕ.

ಮನುಷ್ಯನನ್ನೂ ಒಳಗೊಂಡಂತೆ ಇಡೀ ಸೃಷ್ಟಿಯ ರಚನೆ ರಾಸಾಯನಿಕ ವಸ್ತುಗಳಿಂದಾಗಿದ್ದು, ಜರುಗುವ ಪ್ರತಿಯೊಂದು ಕ್ರಿಯೆಯ ಹಿಂದೆ ಒಂದು ನಿರ್ದಿಷ್ಟ ರಾಸಾಯನಿಕ ಕ್ರಿಯೆ ಇರುತ್ತದೆ. ಮಾಲಿನ್ಯಕಾರಕ ರಾಸಾಯನಿಕ ಗಳು, ಸಹಜ ರಾಸಾಯನಿಕ ವ್ಯವಸ್ಥೆಗಳನ್ನು ಅಸ್ತವ್ಯಸ್ತಗೊಳಿಸಿ, ಅದು ಪರಿಸರದ ಅಸಮತೋಲನಕ್ಕೆ ನಾಂದಿ ಯಾಗಿ ಅವಘಡಗಳುಂಟಾಗುತ್ತಿವೆ. ಸೃಷ್ಟಿಯಲ್ಲಿರುವ ಪರ್ವ ನಿಗದಿತ ಕಾರ್ಯಚಕ್ರಗಳನ್ನು ಮನುಷ್ಯ ತನ್ನ
ಅವಿವೇಕದ ಚಟುವಟಿಕೆಗಳಿಂದ ಅಸ್ತವ್ಯಸ್ತಗೊಳಿಸುತ್ತಿರುವುದರಿಂದ ಪರಿಸರದ ಅಸಹಜತೆ ಉಂಟಾಗಿ ವಿವಿಧ ಬಗೆಯ ಮಾಲಿನ್ಯಗಳಾಗುತ್ತಿವೆ.

ಕೈಗಾರಿಕೆಗಳ ರಾಸಾಯನಿಕ ಉಗುಳುವಿಕೆಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ, ಪೆಟ್ರೋಲಿಯಂ ಸುಡುವಿಕೆ ಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ಮತ್ತು ಭೂಮಿಯ ತಾಪಮಾನ ಏರಿಕೆ, ಕ್ರಿಮಿಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳಿಂದ ಉಂಟಾಗುತ್ತಿರುವ ಭೂಮಿ ಯೊಳಗಿನ ಸಹಜ ಸೂಕ್ಷ್ಮಜೀವಿಗಳ ನಾಶ, ತ್ಯಾಜ್ಯ ಗಳ ಕೊಳೆಯುವಿಕೆಯಿಂದ ಗಾಳಿ ಸೇರುತ್ತಿರುವ ಹಾನಿಕಾರಕ ರಾಸಾಯನಿಕ ವಸ್ತುಗಳಾದ ಅಮೋನಿಯಾ, ಹೈಡ್ರೋಜನ್ ಸಲೆ ಡ್, ಧೂಮಪಾನದಿಂದ ಹೊರಹೋಗುತ್ತಿರುವ ಸುಮಾರು ೭ ಸಾವಿರಕ್ಕೂ ಹೆಚ್ಚು ರಾಸಾಯನಿಕ ಗಳನ್ನುಳ್ಳ ಹೊಗೆ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳ ಸುಡುವಿಕೆ ಯಿಂದ ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡಯಾಕ್ಸೈಡ್, ಸಲರ್, ನೈಟ್ರೋಜನ್ ಡಯಾಕ್ಸೈಡ್, ನೈಟ್ರಿಕ್ ಆಕ್ಸೈಡ್, ಹೈಡ್ರೋಕಾರ್ಬನ್‌ಗಳು, ಆವಿಯಾಗುವ ಕಾರ್ಬನ್ ಯುಕ್ತ ಸಂಯುಕ್ತ ಇತ್ಯಾದಿ ವಿಷಕಾರಿ ರಾಸಾಯನಿಕ ಗಳು ಪರಿಸರ ಮಾಲಿನ್ಯಕ್ಕೆ ಮಾನವ ನಿರ್ಮಿತ ಪ್ರಮುಖ ಕಾರಣಗಳಾಗಿವೆ.

ಮಾನವನು ಪರಿಸರದ ಮೇಲೆ ಉಂಟುಮಾಡುತ್ತಿರುವಷ್ಟು ಮಾಲಿನ್ಯವನ್ನು ಸೃಷ್ಟಿಯಲ್ಲಿ ಇನ್ನಿತರ ಯಾವ ಜೀವಿಯೂ ಮಾಡುತ್ತಿಲ್ಲ. ಅತ್ಯುನ್ನತ ಮಟ್ಟದಲ್ಲಿ ವಿಕಾಸವಾಗಿರುವ ಮನುಷ್ಯ ಜೀವಿಯಿಂದಲೇ ಪರಿಸರ ಮಲಿನಗೊಳ್ಳುತ್ತಿರುವುದು ದುರ್ದೈವದ ಸಂಗತಿ! ಜನಸಂಖ್ಯಾ ಸ್ಫೋದ ಪರಿಣಾಮ ದಿಂದಾಗಿ ಕೈಗಾರಿಕೀಕರಣ ಮತ್ತು ವಾಣಿಜ್ಯೀಕರಣ ಅನಿವಾರ್ಯವೆಂಬ ಆರ್ಥಿಕತಜ್ಞರ ವಾದವನ್ನು ಅಲ್ಲಗಳೆಯುವಂತಿಲ್ಲ. ಇವುಗಳಿಂದ ಉಂಟಾಗ ಬಹುದಾದ ಪರಿಸರ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ, ಪರಿಸರ ಸ್ನೇಹಿ ಪರ್ಯಾಯ ಮಾರ್ಗಗಳ ಅನುಕರಣೆ ಅತ್ಯವಶ್ಯಕ.

ಹಸಿರುಮನೆ ಅನಿಲಗಳು (ಗ್ರೀನ್‌ಹೌಸ್ ಗ್ಯಾಸಸ್): ಸೂರ್ಯನಿಂದ ಭೂಮಿಗೆ ರವಾನೆಯಾಗುವ ಶಾಖ ಪುನಃ ಸೂರ್ಯನ ಕಡೆಗೇ ಪ್ರತಿಫಲಿಸಿ ವಾಪಸ್ ಹೋಗುವುದನ್ನು ವಾಯುಮಂಡಲ ದಲ್ಲಿರುವ ಹಸಿರುಮನೆ ಅನಿಲಗಳು ತಡೆಗಟ್ಟುತ್ತವೆ. ವಾಯುಮಂಡಲದಲ್ಲಿರುವ ಕಾರ್ಬನ್ ಡಯಾಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್, ಹೈಡ್ರೋ ಕ್ಲೋರೋ ಫ್ಲೋರೋ ಕಾರ್ಬನ್‌ಗಳು ಮತ್ತು ಕೆಳವಾಯುಮಂಡಲದಲ್ಲಿರುವ ಓಝೋನ್ ಇವು ಹಸಿರುಮನೆ ಅನಿಲಗಳಾಗಿದ್ದು, ಭೂಮಿಯ ತಾಪಮಾನವನ್ನು ಸಹಜ ಪ್ರಮಾಣದಲ್ಲಿ ನಿಯಂತ್ರಿಸುತ್ತವೆ.

ಸೃಷ್ಟಿಯ ಈ ಸಹಜ ಕ್ರಿಯೆಯನ್ನು ಹಸಿರುಮನೆ ಪರಿಣಾಮ (ಗ್ರೀನ್‌ಹೌಸ್ ಎಫೆಕ್ಟ್) ಎನ್ನಲಾಗುತ್ತದೆ. ಓಝೋನ್ ಪದರ ವಾಯುಮಂಡಲದ ಮೇಲು ಭಾಗದಲ್ಲಿದ್ದು, ಸೂರ್ಯನ ಕಿರಣದಿಂದ ಭೂಮಿಗೆ ವಿಷಕಾರಿ ಅಲ್ಟ್ರಾವಯಲೆಟ್ ಕಿರಣಗಳು ಬರುವುದನ್ನು ತಡೆಗಟ್ಟುತ್ತದೆ. ಮಾನವ ಕೈಗೊಳ್ಳು ತ್ತಿರುವ ಕೈಗಾರಿಕಾ ಚಟುವಟಿಕೆಗಳು, ತ್ಯಾಜ್ಯವಸ್ತುಗಳು ಮತ್ತು ಪೆಟ್ರೋಲಿಯಂ ವಸ್ತುಗಳ ದಹನ ಇತ್ಯಾದಿಗಳಿಂದ ಈ ಅನಿಲಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಪರಿಸರ ಮಾಲಿನ್ಯವನ್ನು ಉಂಟುಮಾಡುವುದಲ್ಲದೆ ಸೂರ್ಯನ ಶಾಖವನ್ನು ಅತಿಯಾಗಿ ಹೀರಿಕೊಂಡು ಭೂಮಿಯ ತಾಪಮಾನವನ್ನೂ ಹೆಚ್ಚಿಸಿ ಹಲವಾರು ಅವಘಡಗಳಿಗೆ ನಾಂದಿಹಾಡುತ್ತವೆ.

ವಾಯು ಮಂಡಲದಲ್ಲಿ ಈ ಅನಿಲಗಳ ಪ್ರಮಾಣಗಳನ್ನು ಕಡಿಮೆಮಾಡಬೇಕು. ಸಸ್ಯಗಳು ಈ ಅನಿಲಗಳನ್ನು ಹೀರಿಕೊಳ್ಳುವುದರಿಂದ ಸಸ್ಯಸಂಪತ್ತು ಪರಿಸರ ಮಾಲಿನ್ಯದ ವಿಮುಕ್ತಕಾರಕ. ಇಂದು ಹೆಚ್ಚುತ್ತಿರುವ ಸಕ್ಕರೆಕಾಯಿಲೆ, ಕ್ಯಾನ್ಸರ್, ಹೃದಯಾಘಾತ, ಚರ್ಮತೊಂದರೆಗಳಿಗೆ ಪರಿಸರ ಮಾಲಿನ್ಯವೇ
ಪ್ರಮುಖ ಕಾರಣ.

ಪ್ಲಾಸ್ಟಿಕ್ ಮಾಲಿನ್ಯ: ಪ್ಲಾಸ್ಟಿಕ್ ರಾಸಾಯನಿಕವಾಗಿ ಪಾಲಿ ಈಥೈಲೀನ್ ಪಾಲಿಮರ್ ಆಗಿದ್ದು ಇದು ಪೆಟ್ರೋಲಿಯಂ ಉತ್ಪನ್ನಗಳಿಂದ ಪ್ರಧಾನವಾಗಿ
ಮಾಡಲ್ಪಟ್ಟಿದೆ. ಸುಮಾರು ೧೩,೦೦೦ ಬಗೆಯ ರಾಸಾಯನಿಕಗಳು ಇದರ ಉತ್ಪತ್ತಿ ಮತ್ತು ಉಪಯೋಗದಲ್ಲಿ ಪ್ರಮುಖ ಪಾತ್ರವಹಿಸುತ್ತವೆಯಾದುದರಿಂದ ಇದರಿಂದುಂಟಾಗಬಹುದಾದ ಅನಾಹುತಗಳನ್ನು ಊಹಿಸಲು ಅಸಾಧ್ಯ. ೨೦೨೩ರ ಘೋಷಣೆ ಪ್ಲಾಸ್ಟಿಕ್ ಮಾಲಿನ್ಯವನ್ನು ಹೊಡೆದೋಡಿಸುವುದಾಗಿದ್ದು, ಇದರಿಂದುಂಟಾಗುವ ಭೂಮಿ, ಜಲ ಮತ್ತು ವಾಯುಮಾಲಿನ್ಯಗಳನ್ನು ತಡೆಯುವುದು ಅತ್ಯವಶ್ಯಕವಾಗಿದೆ.

ಕೃತಕವಾಗಿ ತಯಾರಿಸಲ್ಪಟ್ಟ ಪೆಟ್ರೋಲಿಯಂ ರಾಸಾಯನಿಕ ವಸ್ತುಗಳಿಂದ ಪ್ಲಾಸ್ಟಿಕ್ ರಚಿತವಾಗಿದ್ದು, ಇದನ್ನು ಸುಟ್ಟಾಗ ಅಥವಾ ಕರಗಿಸಿದಾಗ ಉಂಟಾಗುವ ಹಾನಿಕಾರಕ ರಾಸಾಯನಿಕಗಳು ಪರಿಸರ ಮಾಲಿನ್ಯವನ್ನುಂಟುಮಾಡುತ್ತವೆ. ಇತ್ತೀಚೆಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಅತಿ ಹೆಚ್ಚಾಗಿದ್ದು,
ಪ್ಲಾಸ್ಟಿಕ್ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ.

ಪ್ಲಾಸ್ಟಿಕ್‌ನಿಂದುಂಟಾಗುವ ತೊಂದರೆಗಳು: ೧) ಮನುಷ್ಯರಲ್ಲಿ ಕ್ಯಾನ್ಸರ್‌ಕಾರಕ: ಸಂತಾನ ಹೀನತೆ, ನರ ತೊಂದರೆಗಳು, ಥೈರಾಯ್ಡ್ ತೊಂದರೆ, ಅಸ್ತಮಾ, ಹೃದ್ರೋಗ, ಕೂದಲು ಮತ್ತು ಚರ್ಮದ ಸಮಸ್ಯೆಗಳು, ಲೈಂಗಿಕ ದೌರ್ಬಲ್ಯ, ಕ್ಯಾನ್ಸರ್ ಹಾಗೂ ಗೆಡ್ಡೆಗಳು ಉಂಟಾಗುತ್ತವೆ. ಮಕ್ಕಳು ಪ್ಲಾಸ್ಟಿಕ್ ತಿಂದು ಉಸಿರುನಾಳದಲ್ಲಿ ಸಿಕ್ಕಿಹಾಕಿಕೊಂಡು ಉಸಿರು ಕಟ್ಟಿ ದಿಢೀರ್ ಸಾವುಂಟಾಗಬಹುದು.

೨) ಭೂಮಿ ಮತ್ತು ವ್ಯವಸಾಯಕ್ಕೆ ಮಾರಕ: ಭೂಮಿ ಜಡವಸ್ತುವಲ್ಲ. ಅದರಲ್ಲಿ ಅಸಂಖ್ಯಾತ ಸೂಕ್ಷ್ಮಜೀವಿಗಳಿದ್ದು, ಸಸ್ಯಗಳಿಗೆ ಆಹಾರವನ್ನು ಒದಗಿಸು ತ್ತವೆ. ಪ್ಲಾಸ್ಟಿಕ್ ಅನ್ನು ವಿಭಜಿಸುವ ಸೂಕ್ಷ್ಮಜೀವಿಗಳು ಪರಿಸರದಲ್ಲಿರದ ಕಾರಣ ಅದು ದೀರ್ಘಕಾಲ ಭೂಮಿ, ಜಲದಲ್ಲಿದ್ದು (೨೦೦-೫೦೦ ವರ್ಷ) ವಿಷಮ ಪದಾರ್ಥಗಳನ್ನು ಬಿಡುಗಡೆ ಮಾಡುತ್ತದೆ. ಇದು ಬಹುಬೇಗ ಕರಗುವುದಿಲ್ಲವಾದುದರಿಂದ ಭೂಮಿಯೊಳಕ್ಕೆ ನೀರು ಕೆಳಗಿಳಿಯುವುದನ್ನು ತಡೆದು ಅಂತರ್ಜಲದ ವೃದ್ಧಿಗೆ ಧಕ್ಕೆ ತರುತ್ತದೆ.

೩) ಪ್ರಾಣಿಗಳಿಗೆ ವಿಷಕಾರಿ: ಪ್ಲಾಸ್ಟಿಕ್ ಅನ್ನು ಪ್ರಾಣಿಗಳು ತಿನ್ನುವುದರಿಂದ ಇದು ಜೀರ್ಣವಾಗದೆ ಅಡಚಣೆಗೊಂಡು ಮತ್ತು ಹೊಟ್ಟೆಯಲ್ಲಿ ವಿಷಮವಸ್ತು ಬಿಡುಗಡೆಯಾಗಿ ಹಾನಿಯನ್ನುಂಟು ಮಾಡುತ್ತದೆ.

೪) ವಾಯುಮಾಲಿನ್ಯ: ಪ್ಲಾಸ್ಟಿಕ್ ಸುಡುವಿಕೆಯಿಂದ ಉಂಟಾಗುವ ರಾಸಾಯನಿಕಗಳು ಓಝೋನ್ ಪದರವನ್ನು ದುರ್ಬಲಗೊಳಿಸುವುದಲ್ಲದೆ ಭೂಮಿಯ ತಾಪಮಾನವನ್ನು ಹೆಚ್ಚು ಮಾಡುತ್ತವೆ ಮತ್ತು ಆಮ್ಲೀಯ ಮಳೆಯನ್ನುಂಟು ಮಾಡುತ್ತವೆ.

೫) ಜಲಚರ ಜೀವಿಗಳಿಗೆ ಹಾನಿಕಾರಕ: ನೀರು ಪ್ಲಾಸ್ಟಿಕ್‌ನಿಂದ ಹೆಚ್ಚಾಗಿ ಮಲಿನಗೊಳ್ಳುತ್ತಿದೆ. ನೀರಿನಲ್ಲಿರುವ ಪ್ಲಾಸ್ಟಿಕ್, ಉದಾಹರಣೆಗೆ, ಮೀನು
ಗಾರಿಕೆಯ ಬಲೆ ಇತ್ಯಾದಿಗಳಲ್ಲಿ ವಿಷಮ ವಸ್ತುಗಳನ್ನು ಬಿಡುಗಡೆ ಮಾಡಿ ಜಲಚರ ಜೀವಿಗಳನ್ನು ನಾಶಮಾಡುತ್ತದೆ. ಜಲಚರ ಪ್ರಾಣಿಗಳು ಪ್ಲಾಸ್ಟಿಕ್
ಅನ್ನು ಸೇವಿಸಿ ಅದರ ದುಷ್ಪರಿಣಾಮಕ್ಕೀಡಾಗುತ್ತವೆ. ಇದರಿಂದ ಜಲಚರ ಜೀವಿ ಜಗತ್ತಿನ ನಾಶಕ್ಕೆ ಕಾರಣವಾಗುತ್ತಿದೆ. ೬) ಪ್ಲಾಸ್ಟಿಕ್‌ಗಳು ಒಳಚರಂಡಿ ಮತ್ತು ನೀರಿನ ಕೊಳವೆಗಳನ್ನು ಅಡಚಣೆಗೊಳಿಸುತ್ತವೆ.

ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವುದು ಹೇಗೆ?: ಪ್ಲಾಸ್ಟಿಕ್ ಉಪಯೋಗ ಅನಿವಾರ್ಯವಾಗಿದ್ದು ಅದು ಪರಿಸರದಲ್ಲಿ ತ್ಯಾಜ್ಯವಾಗಿ ಸೇರದಂತೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ. ಪ್ಲಾಸ್ಟಿಕ್ ತ್ಯಾಜ್ಯದಿಂದ ನೆಲಕ್ಕೆ ಹಾಸುವ ಟೈಲ್‌ಗಳನ್ನು ಉತ್ಪತ್ತಿಮಾಡುವ ತಂತ್ರಜ್ಞಾನ ಚಾಲ್ತಿಯಲ್ಲಿದ್ದು, ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಪ್ಲಾಸ್ಟಿಕ್ ಬದಲಾಗಿ ಕಾಗದ, ಬಟ್ಟೆ, ಲೋಹ ಇತ್ಯಾದಿ ಪರಿಸರಸ್ನೇಹಿ ವಸ್ತುಗಳನ್ನು ಉಪಯೋಗಿಸಬೇಕು. ತಮ್ಮದೇ ಆದ ಬಟ್ಟೆ ಅಥವಾ ಪೇಪರ್ ಬ್ಯಾಗ್‌ಗಳಲ್ಲಿ ಸಾಮಾನುಗಳನ್ನು ತರುವಂತಾಗಬೇಕು. ಪ್ಲಾಸ್ಟಿಕ್ ನೀರಿನ ಬಾಟಲುಗಳು ಮತ್ತು ಚೀಲಗಳನ್ನು ಒಮ್ಮೆ ಉಪಯೋಗಿಸಿ ಬಿಸಾಡದೆ ಪನರ್ ಉಪಯೋಗಿಸಬೇಕು, ಬೇಡವೆಂದಾಗ ತ್ಯಾಜ್ಯವಾಗಿ ಸಂಗ್ರಹಿಸಿಟ್ಟು ಸರಿಯಾಗಿ ವಿಲೇವಾರಿ ಮಾಡಬೇಕು.

ಸರಕಾರ ಕೈಗೊಳ್ಳಬೇಕಾದ ಪರಿಸರಸ್ನೇಹಿ ಕಾರ್ಯಗಳು: ಸರಕಾರ ಈಗಾಗಲೆ ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಷೇಽಸಿದೆ ಹಾಗೂ ಅತಿ ತೆಳುವಾದ ಪ್ಲಾಸ್ಟಿಕ್ ವಸ್ತುಗಳು ಬಹು ಸುಲಭವಾಗಿ ನೀರು, ಗಾಳಿ, ಭೂಮಿಯನ್ನು ಸೇರುವುದರಿಂದ ತೆಳುವಾದ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಷೇಧಿಸಿದೆ. ಈ ಕಾನೂನುಗಳನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಜೀವಿಗಳ ಸಂಖ್ಯೆಗೆ ಅನುಗುಣವಾಗಿ ಮರಗಿಡ ಗಳನ್ನು ಯಥೇಚ್ಛವಾಗಿ ಬೆಳೆಸಬೇಕು. ವಸ್ತುಗಳ ಸುಡುವಿಕೆಯನ್ನು ಮಿತಗೊಳಿಸ ಬೇಕು/ನಿರ್ಬಂಧಿಸಬೇಕು ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಜನಸಂಖ್ಯೆ ಮತ್ತು ಸಸ್ಯಸಂಖ್ಯೆ ಅನುಪಾತವನ್ನು ನಿಯಂತ್ರಿಸಬೇಕು. ಪರಿಸರಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಬೇಕು. ಪರಿಸರ ಸಂರಕ್ಷಣೆ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಕಡ್ಡಾಯ ಶಿಕ್ಷಣ ನೀಡಬೇಕು.

ತ್ಯಾಜ್ಯಗಳ ಮಾಲಿನ್ಯ:  ಮನುಷ್ಯನ ವೈಯಕ್ತಿಕ, ಕೌಟುಂಬಿಕ ಚಟುವಟಿಕೆಗಳು, ವ್ಯವಸಾಯ, ಕಟ್ಟಡ ಕಾಮಗಾರಿ, ಕೈಗಾರಿಕೆ, ವೈದ್ಯಕೀಯ, ಸಾ-ವೇರ್ ಚಟುವಟಿಕೆ ಇತ್ಯಾದಿಗಳಿಂದ ಹೊಮ್ಮುವ ತ್ಯಾಜ್ಯಗಳಿಂದ ಭೂ, ಜಲ, ವಾಯುಮಾಲಿನ್ಯಗಳುಂಟಾಗುತ್ತಿದ್ದು, ಪರಿಸರದ ಉಳಿವಿಗೆ ಮಾರಕವಾಗುತ್ತಿವೆ. ಆದ್ದರಿಂದ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಅವಶ್ಯಕ. ತ್ಯಾಜ್ಯಗಳಿಂದ ವಿದ್ಯುತ್ ತಯಾರಿಸಲಾಗುತ್ತದೆ. ತ್ಯಾಜ್ಯಗಳನ್ನು ಸುಟ್ಟು ವಿಲೇವಾರಿ ಮಾಡುವು ದನ್ನು ನಿಷೇಧಿಸಬೇಕು. ಬೆಂಕಿ ಪರಿಸರದ ಶತ್ರು. ಬೆಂಕಿ ಭೂಮಿಯ ಸಹಜ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುವುದಲ್ಲದೆ ಗಾಳಿಗೆ ಅಸಂಖ್ಯಾತ ವಿಷಮ ಕಾರಿ ರಾಸಾಯನಿಕಗಳನ್ನು ಸೇರಿಸುತ್ತದೆ.

ಮಾಲಿನ್ಯ ನಿಯಂತ್ರಣ ಮಂಡಳಿ: ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಸರಕಾರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ರಚಿಸಿದ್ದು, ಪರಿಸರ
ಮಾಲಿನ್ಯವನ್ನುಂಟುಮಾಡುವ ಮಾನವನ ಚಟುವಟಿಕೆಗಳನ್ನು ಕಾನೂನಿನ ಅನ್ವಯ ಅದು ನಿಯಂತ್ರಿಸುತ್ತಿದೆ. ಪರಿಸರದಲ್ಲಿ ಮಾಲಿನ್ಯಕಾರಕಗಳ ಗರಿಷ್ಠ ಗಡಿಯನ್ನು ಗುರುತಿಸಿ ನಿಯಂತ್ರಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸರ ಮಾಲಿನ್ಯ ತಡೆಯಲು ಕಟ್ಟುನಿಟ್ಟಿನ ಕಾನೂನುಗಳನ್ನು
ಜಾರಿಗೊಳಿಸಲಾಗುತ್ತಿದೆ. ಪರಿಸರದಲ್ಲಿ ‘ಕಾರ್ಬನ್’ ಪ್ರಮಾಣ ಮಾಲಿನ್ಯವನ್ನು ಸೂಚಿಸುವ ಅತಿಮುಖ್ಯವಾದ ಮಾನದಂಡವಾಗಿದ್ದು, ಇದನ್ನು ಕನಿಷ್ಠ
ಮಟ್ಟದಲ್ಲಿಡಲು ವಿಶ್ವಮಟ್ಟದಲ್ಲಿ ಕಾರ್ಯಕ್ರಮಗಳು ಜರುಗುತ್ತಿವೆ. ಪೆಟ್ರೋಲಿಯಂಗೆ ಬದಲಾಗಿ ಪರ್ಯಾಯ ಶಕ್ತಿಗಳಾದ ವಿದ್ಯುತ್, ಸೌರಶಕ್ತಿ, ಪರ
ಮಾಣು ಶಕ್ತಿಗಳನ್ನು ಉಪಯೋಗಿಸುವ ದಿಕ್ಕಿನಲ್ಲಿ ಪ್ರಯತ್ನಗಳಾಗುತ್ತಿವೆ. ಅವುಗಳ ಅತಿ ಬಳಕೆಯಿಂದಲೂ ಅನಾಹುತ ತಪ್ಪಿದ್ದಲ್ಲ.

ಆಧುನಿಕ ಮಾನವನಿಗೆ ಹಲವಾರು ಕಾರಣಗಳಿಂದಾಗಿ ಮಾಲಿನ್ಯಕಾರಕ ವಸ್ತುಗಳನ್ನು ಉತ್ಪತ್ತಿಮಾಡುವುದು ಅನಿವಾರ್ಯವಾಗಿರುವುದರಿಂದ ಅವುಗಳ
ದುಷ್ಪರಿಣಾಮಗಳನ್ನು ತಡೆಯುವ ನಿಟ್ಟಿನ ಕಾರ್ಯ ಗಳನ್ನೂ ಜತೆ ಜತೆಯಾಗಿ ಪಾಲಿಸುವುದು ಅತ್ಯವಶ್ಯಕ. ಏಕೆಂದರೆ, ಪರಿಸರವಿದ್ದರೆ ಮಾತ್ರ
ಪರಿವಾರ.

error: Content is protected !!