Wednesday, 26th February 2020

ಅಂತರ್ಜಾಲದೊಳಗೆ ಹುಯಿಲಿಟ್ಟರೆ ಮಾರುತ್ತರಿಸುವವು ನೂರು ಸ್ವರ!

ಹಲೋ, ನಾನು ನಿಮಗೆ ಯಾರನ್ನೋೋ ಪರಿಚಯಿಸಲು ಬಯಸುತ್ತೇನೆ. ಈ ಚಿತ್ರದಲ್ಲಿ ಕಾಣುತ್ತಿಿರುವವರು jomny ಇದೇನು ಜಾನಿ ಸ್ಪೆೆಲಿಂಗ್ ತಪ್ಪಾಾಗಿದೆ ಎಂದು ಯೋಚಿಸಬೇಡಿ. ಕರೆಯುವುದು ಜಾನಿ ಅಂತಾನೇ. ಆದರೆ ಅಕಸ್ಮಾತ್ತಾಗಿ ಸ್ಪೆೆಲಿಂಗ್‌ನಲ್ಲಿ ಒಂದು  “M” ನುಸುಳಿಬಿಟ್ಟಿಿದೆ, ಏನು ಮಾಡುವುದು ನಾವು ಯಾರೂ ಪರಿಪೂರ್ಣರಲ್ಲವಲ್ಲ? ಅದರಿಂದಾಗಿ ಹೀಗೆ!
ಈತ ಒಬ್ಬ ಏಲಿಯನ್. ಮನುಷ್ಯರ ಅಧ್ಯಯನಕ್ಕಾಾಗಿ ಕಳುಹಿಸಲ್ಪಟ್ಟವನು. ಮನೆಯಿಂದ ದೂರ ಬಂದಿರುವುದು ಜಾನಿಗೆ ಎಲ್ಲಿಯೋ ಕಳೆದುಹೋದಂತಾಗಿದೆ. ಒಂಟಿತನ ಬಾಧಿಸುತ್ತಿಿದೆ. ಈ ಭಾವನೆಯನ್ನು ನಾವೆಲ್ಲರೂ ಅನುಭವಿಸುತ್ತೇವೆ- ಕಡೇಪಕ್ಷ ನಾನು-ಎಂದು ಖಂಡಿತವಾಗಿ ಅನಿಸುತ್ತದೆ. ನನ್ನ ಜೀವನದ ಒಂದು ಘಟ್ಟದಲ್ಲಿ, ವಿಶೇಷವಾಗಿ ಇಂತಹ ಪರಕೀಯ ಭಾವ ಕಾಡುತ್ತಿಿದ್ದಾಾಗಲೇ ನಾನು ‘ಜಾನಿ ಹೆಸರಿನ ಒಬ್ಬ ಏಲಿಯನ್ ಇರುತ್ತಾಾನೆ…’ ಎಂದು ನಿಮಗೆ ತೋರಿಸುತ್ತಿಿರುವ ಸಚಿತ್ರಕತೆ ಬರೆದೆ. ಆಗಷ್ಟೇ ನಾನು ಕೇಂಬ್ರಿಿಡ್‌ಜ್‌ ಬಂದಿದ್ದೆೆ. ಮೆಸಚ್ಯುಸೆಟ್‌ಸ್‌ ಇನ್‌ಸ್ಟಿಿಟ್ಯೂಟ್ ಆಫ್ ಟೆಕ್ನಾಾಲಜಿ-*ಐ,ನಲ್ಲಿ ನನ್ನ ಪಿಎಚ್.ಡಿ ಅಧ್ಯಯನ ಆರಂಭಿಸಿದ್ದೆೆ. ಬಂದ ಹೊಸತರಲ್ಲಿ ನಾನು ಅಲ್ಲಿಗೆ ಸೇರಿದವನಲ್ಲ, ಒಂಟಿ ಎಂದು ಬಹಳ ಅನಿಸುತ್ತಿಿತ್ತು. ನನ್ನ ಸುತ್ತಲಿನ ಪರಿಸರ ಒಂದು ಬಗೆಯಲ್ಲಿ ಕುಬ್ಜನಂತೆ ಮಾಡುತ್ತಿಿತ್ತು.

ಆದರೆ ನನಗೆ ಒಂದು ಜೀವದಾಯಿನಿ ಆಸರೆಯೂ ಇತ್ತು. ಅದೆಂದರೆ ಸಾಮಾಜಿಕ ಮಾಧ್ಯಮ. ವರ್ಷಗಳಷ್ಟು ಹಿಂದಿನಿಂದ ಅಲ್ಲಿ ಜೋಕ್‌ಸ್‌ ಬರೆಯುತ್ತಿಿದ್ದೆೆ-ನಿಮಗೆ ಗೊತ್ತಿಿರಲಿ-ಈಗ ಏಕಾಕಿತನದ ವ್ಯಥೆಯಲ್ಲಿ ಅದನ್ನು ಹೆಚ್ಚು ಹೆಚ್ಚು ಮಾಡುತ್ತಿಿರುವುದು ನನಗೇ ಗೊತ್ತಾಾಗುವಂತಿತ್ತು. ಈಗೊಂದು ಮಾತು ಸೇರಿಸಬೇಕು. ನನಗೇನೋ ಇಂಟರ್‌ನೆಟ್ ಒಂದು ಸಾಂಗತ್ಯದ ದಾರಿಯಾಗಿ ಕಂಡಿರಬಹುದು. ಆದರೆ ಅದನ್ನು ಅತ್ಯಂತ ಒಂಟಿತನ ಉಂಟುಮಾಡುವ ತಾಣ ಎಂದುಕೊಳ್ಳುವವರೂ ಇದ್ದಾಾರೆ. ಖಂಡಿತ ಹಾಗೆನಿಸಲು ಸಾಧ್ಯವಿದೆ. ಏಕೆಂದರೆ, ಒಂದು ಬೃಹತ್, ಅಸೀಮ ಶೂನ್ಯದೊಳಗೆ ನಾವು ಏನನ್ನೋೋ ಹೇಳಲು ಬಯಸುತ್ತಿಿರುತ್ತೇವೆ; ಆದರೆ ಕೇಳಿಸಿಕೊಳ್ಳುವವರು ಯಾರೂ ಇರುವುದಿಲ್ಲ ಅಂದಾಗ ಅದು ಏಕಾಕಿತನವನ್ನು ದ್ವಿಿಗುಣಗೊಳಿಸಲು ಸಾಕು. ಆದರೆ ಯಾರೂ ಕೇಳಿಸಿಕೊಳ್ಳದ ಶೂನ್ಯವನ್ನೇ ಕೂಗಿ ಮಾತನಾಡಿಸುವುದರಿಂದ ನನಗೇನೋ ಸಾಂತ್ವನ ಸಿಕ್ಕಿಿತು. ಅದರೊಂದಿಗೆ ನನ್ನ ತೋಡಿಕೊಳ್ಳುವಿಕೆ ಸಾಗಿದಂತೆ ಕ್ರಮೇಣ ಆ ಬೃಹತ್ ಶೂನ್ಯ ನನಗೆ ಮಾರುತ್ತರ ನೀಡಲು ಆರಂಭಿಸಿತು. ನಿಜವಾಗಿ ಅದೊಂದು ಅನಂತ ಶೂನ್ಯವಲ್ಲ, ಬದಲಾಗಿ ಎಲ್ಲ ರೀತಿಯ ಜನರಿಂದ ತುಂಬಿದೆ. ಅವರೂ ಸಹ ಹೀಗೆ ಶೂನ್ಯದೊಂದಿಗೆ ಮಾತು ನಡೆಸುತ್ತಿಿದ್ದಾಾರೆ ಹಾಗೂ ತಮ್ಮನ್ನು ಯಾರಾದರೂ ಆಲಿಸಲಿ ಎಂದು ಬಯಸುತ್ತಿಿದ್ದಾಾರೆ ಎಂಬುದು ಅರ್ಥವಾಯಿತು.

ಸಾಮಾಜಿಕ ಮಾಧ್ಯಮಗಳು ಸಾಕಷ್ಟು ಕೆಡುಕುಗಳನ್ನು ಹೊತ್ತು ಬಂದಿವೆ. ಅದನ್ನು ನಾನು ಸುತರಾಂ ಅಲ್ಲಗಳೆಯುವುದಿಲ್ಲ. ಅದನ್ನು ‘ಹಾಗಲ್ಲ, ಹೀಗೆ’ ಎಂದು ಚರ್ಚಿಸುವ ಗೊಡವೆಗೂ ಹೋಗಲಾರೆ. ನೀವು ಯಾವುದೇ ವೇಳೆ ‘ಆನ್‌ಲೈನ್’ ಇದ್ದರೂ ಸಾಕಷ್ಟು ದುಃಖ, ಸಿಟ್ಟು ಮತ್ತು ಹಿಂಸೆ ಕಾಣಸಿಗುತ್ತದೆ. ಪ್ರಪಂಚ ಕೊನೆಗೊಳ್ಳುತ್ತಿಿದೆ ಎಂಬಷ್ಟು ಹತಾಶೆಯಾಗುತ್ತದೆ. ಆದರೂ ನನ್ನ ಅತ್ಯಾಾಪ್ತ ಮಿತ್ರರೆಲ್ಲ ಅಂತರ್ಜಾಲದಲ್ಲಿ ದೊರಕಿದವರೇ ಆಗಿದ್ದಾಾರೆ ಎಂಬ ನನ್ನ ಈ ಗಟ್ಟಿಿ ಭಾವನೆಯನ್ನು ಅಲ್ಲಗಳೆಯಲಾರೆ, ಇದು ಹೇಗೆ ಸಾಧ್ಯ ಎಂಬ ಸಂದಿಗ್ಧವನ್ನೂ ನಾನು ಎದುರಿಸುತ್ತಿಿರುತ್ತೇನೆ. ಆದರೆ ಮುಖತಃ ನೋಡದೆ ಆನ್‌ಲೈನ್ ದೊರೆತ ಇವರೇ ಅಂತರಾಳಕ್ಕೆೆ ಹತ್ತಿಿರ ಹೇಗೆ ಬಂದರು ಎಂಬ ಪ್ರಶ್ನೆೆ ಹಾಕಿಕೊಂಡರೆ ಸಾಮಾಜಿಕ ಮಾಧ್ಯಮಗಳಿಗೆ ಇರುವ ಒಂದು confessional nature ಅರಿವಿಗೆ ಬರುತ್ತದೆ. ಎಲ್ಲರೂ ಅಲ್ಲಿ ಏನೋ ತುಂಬ ಖಾಸಗಿಯಾದುದನ್ನು ಇತರರೊಡನೆ ಹಂಚಿಕೊಳ್ಳುತ್ತಾಾ, ಆ ಮೂಲಕ ಒಂದು ನಿರಾಳ ಅನುಭವಿಸುತ್ತಿಿರುತ್ತಾಾರೆ. ಏಕಾಂತದಲ್ಲಿ, ಡೈರಿಯಲ್ಲಿ ಅತ್ಯಂತ ಆಪ್ತವಾದುದನ್ನು ಏನೋ ಬರೆಯುತ್ತಾಾ ಅದೇ ಕಾಲಕ್ಕೆೆ ಅದು ಪ್ರಪಂಚದ ಎಲ್ಲರಿಗೂ ಗೊತ್ತಾಾಗಲಿ ಎಂಬಂತಹ ಪ್ರಕ್ರಿಿಯೆ ಅದು. ಇದರೊಂದಿಗೆ ನಮಗಿಂತ ಬಹಳ ಭಿನ್ನರಾಗಿರುವ ಮಂದಿ ನಮ್ಮ ಅನುಭವಗಳ ಕುರಿತು ಹೇಗೆ ಯೋಚಿಸುತ್ತಾಾರೆ, ಯಾವ ರೀತಿಯ ಕಾಣ್ಕೆೆ, ದೃಷ್ಟಿಿಕೋನ ಅವರಿಂದ ಸಿಗಬಹುದು ಎಂಬ ಸಂಗತಿಯೂ ಇದರೊಂದಿಗೇ ಹೆಣೆದುಕೊಂಡಿರುತ್ತದೆ. ಕೆಲ ವೇಳೆ ಇದು ಚಂದ.

ಉದಾಹರಣೆಗೆ ನಾನು ಮೊದಲು ಟ್ವಿಿಟರ್ ಖಾತೆ ತೆಗೆದಾಗ ಅಲ್ಲಿ ಎಷ್ಟೊೊಂದು ಜನ ಮಾನಸಿಕ ಆರೋಗ್ಯ, ತಾವು ಥೆರಪಿಗೆ ಒಳಗಾಗುತ್ತಿಿರುವುದು ಇತ್ಯಾಾದಿ ವಿಷಯಗಳನ್ನೆೆಲ್ಲ ಮಾತನಾಡುತ್ತಿಿದ್ದುದು ಕಂಡೆ. ನಿಜ ಜೀವನದಲ್ಲಿ ಮಾನಸಿಕ ಆರೋಗ್ಯ, ಸಮಸ್ಯೆೆ ಮುಂತಾದವುಗಳಿಗೆ ಬೇಡದ ಒಂದು ಕಳಂಕ ಅಂಟಿಕೊಂಡಿರುವಾಗ ಮುಖತಃ ಇಷ್ಟು ಸಲೀಸಾಗಿ ಅವರು ಅದನ್ನೆೆಲ್ಲ ವ್ಯಕ್ತಪಡಿಸುವುದು ಸಾಧ್ಯವಿರಲಿಲ್ಲ. ಆದರೆ ಅವರು ಇಂತಹ ಒಂದು ಸಂವಾದವನ್ನು ಮಾಮೂಲಿ ವಿಷಯ ಮಾಡಲು ಅಂತರ್ಜಾಲ ಒಂದು ಮಾಧ್ಯಮವಾಯಿತು. ಏನಾದರೂ ಸಮಸ್ಯೆೆಯಿದ್ದರೆ ಚಿಕಿತ್ಸಕರ ಬಳಿ ನಾನೂ ಹೋಗಬಹುದು ಎಂದಾಗ ನನಗೆ ಅನ್ನಿಿಸಿತು.

ಆದರೆ ಇನ್ನು ಕೆಲವರಿಗೆ ಇಂತಹ ಚರ್ಚೆಗಳನ್ನು ಸಾರ್ವಜನಿಕವಾಗಿ, ಮುಕ್ತವಾಗಿ ಅಂತರ್ಜಾಲದಲ್ಲಿ ಮಾಡುವುದು ಇಂದಿಗೂ ಹೆದರಿಕೆ ಹುಟ್ಟಿಿಸುತ್ತದೆ. ವಿಶೇಷವಾಗಿ, ಒಂದು ಪ್ರಬುದ್ಧ ತಯಾರಿಯನ್ನು ಅದಕ್ಕಾಾಗಿ ನಡೆಸದೇ ಆನ್‌ಲೈನ್ ಒಡನಾಡುವುದು ಒಂದು ರೀತಿಯಲ್ಲಿ ಅಂತರ್ಜಾಲದಲ್ಲಿ ‘ಸಿಲುಕಿ’ಕೊಂಡಂತೆ ಎಂದವರು ಭಾವಿಸುತ್ತಾಾರೆ. ಆದರೆ ಹೀಗೆ ತಿಳಿಯದವರಾಗಿ ಇರುವುದಕ್ಕೇ ಸಾಮಾಜಿಕ ಮಾಧ್ಯಮಗಳು ಹೇಳಿ ಮಾಡಿಸಿದಂತಿವೆ ಎಂದು ನನಗೆ ಅನ್ನಿಿಸಿ ರೋಚಕತೆ ಮೂಡುತ್ತದೆ. ನನ್ನ ಪ್ರಕಾರ ಅಪರಿಪೂರ್ಣತೆಗಳನ್ನು, ಅಭದ್ರತೆಗಳನ್ನು, ದೌರ್ಬಲ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆೆ ತುಂಬ ಮಹತ್ವ ಇದೆ. ತಮಗೆ ಭಯವಾಗುತ್ತಿಿದೆ, ಒಂಟಿತನ ಕಾಡುತ್ತಿಿದೆ, ದುಃಖವೆನಿಸುತ್ತಿಿದೆ ಎಂದು ಯಾರಾದರೂ ಭಾವನೆಗಳನ್ನು ಹಂಚಿಕೊಂಡಿದ್ದರೆ ಅದನ್ನು ಓದಿದವರಿಗೆ ಅವರ ಏಕಾಕಿತನ ಕಡಿಮೆಯಾದಂತೆ ಅನಿಸುತ್ತದೆ. ಹಾಗೆಂದು ನನ್ನ ಒಂಟಿತನವನ್ನು ಅವರು ಕಳೆಯುತ್ತಾಾರೆ ಎಂದಲ್ಲ, ಬದಲಾಗಿ ನಾನೊಬ್ಬನೇ/ಳೇ ಈ ಅವಸ್ಥೆೆಯಲಿಲ್ಲ ಎಂಬ ಸಂಗತಿಯಿಂದ ಆ ಸಮಾಧಾನ ಮೂಡುತ್ತದೆ. ಒಬ್ಬ ಲೇಖಕನಾಗಿ, ಕಲಾವಿದನಾಗಿ ವೈಯಕ್ತಿಿಕ ಅಭದ್ರತೆಯನ್ನು ಸಾಮಾಜಿಕವಾಗಿ ಅನುಭವಿಸುವ, ಇತರರೊಂದಿಗೆ ಹಂಚಿಕೊಂಡು ಪರಸ್ಪರ ಸಾಂತ್ವನ ಕಾಣುವ ಅನುಕೂಲ ಇರಬೇಕೆಂಬುದು ನಾನು ಬಯಸುತ್ತೇನೆ.
ಮಾತಿಗೆ ನಿಲುಕದ ಒಳಗಿನ ಭಾವನಾದ್ರವ್ಯ ಹೊರಬಂದು ಬೆಳಕು ಕಾಣುವುದು, ಮಾತಾಗಿ ಪರಿವರ್ತಿತವಾಗುವುದು, ಅದರ ಮೂಲಕ ಇತರರನ್ನು ತಲುಪುವುದು ನನ್ನನ್ನು ಬಹಳ ಉಮೇದಿಗೆ ಹಚ್ಚುತ್ತದೆ.

ಜತೆಗೆ ಇದನ್ನು ಓದಿದವರು ತಮ್ಮ ಭಾವನೆಗಳಿಗೂ ಶಬ್ದ ರೂಪ ಕೊಡಲು ಮುಂದಾಗಲಿ ಎಂಬ ಭರವಸೆ ಇರುತ್ತದೆ. ನಾನು ಹೇಳುತ್ತಿಿರುವುದೆಲ್ಲ ಅತಿಶಯಗಳು, ಅಮೂರ್ತವಾಗಿವೆ ಎಂದು ನಿಮಗೆ ಕೇಳಿಸುತ್ತಿಿರಬಹುದು. ಆದರೆ ಇವನ್ನೆೆಲ್ಲ ಸುಲಭ ಮಾರ್ಗದಲ್ಲಿ ತಲುಪಬಹುದಾದ ಸಣ್ಣ ಸಣ್ಣ ಪ್ಯಾಾಕೇಜ್‌ಗಳಾಗಿ ಇಡುವುದು ನನ್ನ ಅಂತಿಮ ಆಶಯ. ಆಗ ಮೋಜು-ಮಸ್ತಿಿಯೂ ಅದರಲ್ಲಿ ಸೇರುತ್ತದೆ. ಒಂದು ಕತೆಯ ರೂಪದಲ್ಲಿ, ಚಿತ್ರಗಳನ್ನು ಬಿಡಿಸಿದ ಪುಟ್ಟ ಪುಸ್ತಕವಾಗಿ ಹಾಗೂ ಕೆಲವೊಮ್ಮೆೆ ಒಂದು ಚಾಟೂಕ್ತಿಿ, ಸಿಲ್ಲಿ ಜೋಕ್ ಆಗಿಯೂ ಈ ವಿಚಾರಗಳನ್ನು ಅಂತರ್ಜಾಲದಲ್ಲಿ ಒಗೆಯುತ್ತಿಿರುತ್ತೇನೆ. ಕೆಲ ತಿಂಗಳ ಹಿಂದೆ *ಟಜಡ್ಝಿಜ್ಞಿಿಜ ಛ್ಟಿಿಜ್ಚಿಿಛಿ‘ ಎಂಬ ಒಂದು ಅಪ್ಲಿಿಕೇಶನ್‌ನ್ನು ಅಭಿವೃದ್ಧಿಿಪಡಿಸಬಾರದೇಕೆ ಎಂದು ಪ್ರಕಟಿಸಿದ್ದೆೆ: ‘ನಾಯಿ ಬಂದು ಬಾಗಿಲಲ್ಲಿ ಕಾಣಿಸಿಕೊಳ್ಳುತ್ತದೆ, ನೀವು ಆಗ ಎದ್ದು ವಾಕ್ ಮಾಡಲು ಹೊರಡುತ್ತೀರಿ’ ಎಂಬ ಐಡಿಯಾ ಅದರಲ್ಲಿತ್ತು. ಏನೇ ಭಿನ್ನತೆಗಳಿದ್ದರೂ ಕೊನೆಗೆ ನಾವೆಲ್ಲರೂ ಮನುಷ್ಯರು ಎಂಬ ಸಾಮಾನ್ಯ ತತ್ವ ಇವೆಲ್ಲ ಪ್ರಯತ್ನಗಳಿಂದ ಹೊಮ್ಮುತ್ತಿಿರುತ್ತದೆ.

ಪ್ರತಿ ಸಾರಿ ಒಂದು ಇ ಮೇಲ್ ಕಳಿಸುವಾಗಲೂ ನಾನು ಅನುಭವಿಸುವ ಆತಂಕವನ್ನು ನಿಮಗೆ ಹೇಳಲೇಬೇಕು. ಎಲ್ಲರೂ ಸಾಮಾನ್ಯವಾಗಿ *‘ಆಛಿಠಿ,‘ ಎಂದು ತಾನೇ ಸಹಿ ಮಾಡುವುದು?* ‘ಐ ಞ ಠ್ಟಿಿಜ್ಞಿಿಜ ಞ ಚಿಛಿಠಿ,‘ ಅಥವಾ ಇನ್ನೂ ವಿಸ್ತಾಾರವಾಗಿ *‘್ಝೃಛಿಛಿ ಟ್ಞ’ಠಿ ಠಿಛಿ ಞಛಿ, ಐ ್ಟಟಞಜಿಛಿ ಐ’ಞ ಠ್ಟಿಿಜ್ಞಿಿಜ ಞ ಚಿಛಿಠಿ!‘ ಎಂಬುದರ ಸಂಕ್ಷಿಿಪ್ತ ರೂಪ ಅದು ಎಂದೇ ನನ್ನ ಮನಸ್ಸಿಿನಲ್ಲಿರುತ್ತದೆ. ಅಥವಾ ಸ್ನೇಹ ಹಸ್ತ ಚಾಚುವ ಯತ್ನದಲ್ಲಿ ಹೀಗೆ ಬರೆದಿರುತ್ತೇನೆ: *ಜ್ಛಿಿ ಐ ್ಚಟ್ಠ್ಝ ಛಿ ಜ್ಞ್ಞಿಿಛ್ಟಿಿ ಡಿಜಿಠಿ ್ಞಟ್ಞಛಿ, ಛಿ ಟ್ಟ ್ಝಜಿಛಿ, ಐ ಡಿಟ್ಠ್ಝ. ಐ ಞ ಛ್ಟಿಿ ್ಝಟ್ಞಛ್ಝಿಿ. ಇದಕ್ಕೆೆಲ್ಲ ನೆಟ್ಟಿಿಗರು ಭರ್ಜರಿ ಸ್ಪಂದನೆಯನ್ನೇ ನೀಡುತ್ತಾಾರೆ. ನನ್ನೊೊಂದಿಗೆ ನಕ್ಕು ನಲಿದವರು ಅದೇ ವೇಗದಲ್ಲಿ ಲೀನರಾಗುತ್ತಾಾರೆ. ಆಗ ನಾನು ಮತ್ತೆೆ ಅದೇ ಒಂಟಿಬಡುಕ! ಆದರೂ ಪರವಾಗಿಲ್ಲ, ಈ ಮಿಂಚಿನ ಸಭೆಗಳು ನನ್ನ ಪಾಲಿಗೆ ಬಹಳ ಅರ್ಥಪೂರ್ಣ.

ಉದಾಹರಣೆಗೆ ಆರ್ಕಿಟೆಕ್ಚರ್ ಶಿಕ್ಷಣ ಮುಗಿಸಿ ಕೇಂಬ್ರಿಿಡ್‌ಜ್‌‌ಗೆ ನಾನು ಬಂದ ಹೊಸತರಲ್ಲಿ ‘ನಿಮ್ಮೊೊಂದಿಗೆ ಕೊನೆ ಸಂಭಾಷಣೆ ಮಾಡಿದ ಎಷ್ಟು ಮಂದಿ ನಿಮ್ಮ ಜೀವನದಲ್ಲಿ ಇದ್ದಾಾರೆ?’ ಎಂಬ ಪ್ರಶ್ನೆೆಯನ್ನು ನೆಟ್‌ನಲ್ಲಿ ಹಾಕಿದ್ದೆೆ. ಹಲವು ನಗರ, ದೇಶಗಳಿಗೆ ಪ್ರಯಾಣಿಸಿರುವ ನನ್ನ ಹಲವು ಸ್ನೇಹಿತರು, ಅವರೊಂದಿಗೆ ಮತ್ತೆೆ ಸಂಪರ್ಕ ಎಷ್ಟೊೊಂದು ಕಷ್ಟಸಾಧ್ಯ ಎಂಬ ಯೋಚನೆಗಳೆಲ್ಲ ಆಗ ನನ್ನ ತಲೆಯಲ್ಲಿ ಇದ್ದವು. ಆದರೆ ಅದಕ್ಕೆೆ ಉತ್ತರವಾಗಿ ತಮ್ಮ ಅನುಭವಗಳನ್ನು ಅನೇಕರು ಹಂಚಿಕೊಳ್ಳತೊಡಗಿದರು. ಒಬ್ಬ ಕುಟುಂಬ ಸದಸ್ಯರೊಂದಿಗೆ ವಿರಸವಾಗಿರುವುದನ್ನು ಒಬ್ಬರು ಬರೆದರೆ, ಇನ್ನೊೊಬ್ಬರು ತಮ್ಮ ಶಾಲಾ ಸಹಪಾಠಿಗಳನ್ನು ನೆನಪಿಸಿಕೊಂಡಿದ್ದರು. ಆದರೆ ಇದಷ್ಟೇ ಅಲ್ಲ, ನನ್ನ ಪ್ರಶ್ನೆೆಗೆ ಉತ್ತರಿಸುವ ನೆವದಲ್ಲಿ ಇತರ ಹಲವರೊಂದಿಗೂ ಅವರು ಸಂವಹನವನ್ನು ಇದರಿಂದ ಸಾಧಿಸಿದ್ದರು. ಮತ್ತು ಎಲ್ಲರೂ ತೋಚಿದ ಸಲಹೆಗಳನ್ನು ಕೊಡುತ್ತಾಾ ವಿರಸ ಅನುಭವಿಸಿದವರಿಗೆ, ಸ್ನೇಹಿತರನ್ನು ‘ಮಿಸ್’ ಮಾಡಿಕೊಳ್ಳುತ್ತಿಿರುವವರಿಗೆ ಸಾಂತ್ವನ ಹೇಳುತ್ತಿಿದ್ದರು. ಕ್ರಮೇಣ ಅಲ್ಲೊೊಂದು *ಞಜ್ಚ್ಟಿಿಟ್ಚಟಞಞ್ಠ್ಞಜಿಠಿ. ಸೂಕ್ಷ್ಮರೂಪಿ ಸಮುದಾಯವೇ ನಿರ್ಮಾಣವಾಯಿತು.

ಹೀಗೆ ಏನಾದರೊಂದು ಮಹತ್ವವಾದುದನ್ನು ನೆಟ್ಟಿಿಗರಲ್ಲಿ ಯಾರಾದರೂ ಪೋಸ್‌ಟ್‌ ಮಾಡಿದ ಕೂಡಲೇ ಅಲ್ಲೊೊಂದು ಮೈಕ್ರೋೋಕಮ್ಯುನಿಟಿ ರಚಿತವಾಗುವ ಸಾಧ್ಯತೆ ಇರುತ್ತದೆ. ಅಂದರೆ ವೈವಿಧ್ಯದಲ್ಲಿ ಏಕತೆ. ಭಿನ್ನತೆ ಇರುವವರೆಲ್ಲ ಸನ್ನಿಿವೇಶ. ಇಂಟರ್‌ನೆಟ್ ಬರೀ ಕೆಸರೆರೆಚಾಟವೇನಲ್ಲ. ಅಲ್ಲೂ ಒಂದು ಮುಕ್ತ ಆತ್ಮ ನಿಮಗೆ ಸಿಗಬಹುದು. ಪೋಸ್‌ಟ್‌‌ಗೆ ಬಂದ ಉತ್ತರಗಳನ್ನು ಓದುವಾಗ ಅಪರೂಪದ ಒಳನೋಟದ, ಹಾಸ್ಯಪ್ರಜ್ಞೆೆಯ ಕಾಮೆಂಟ್ ಮುದಗೊಳಿಸಬಹುದು. ಯಾರನ್ನೋೋ ನೀವು ಫಾಲೋ ಮಾಡುತ್ತಿಿದ್ದಾಾಗ, ಅವರೂ ನಿಮ್ಮನ್ನು ಗಮನಿಸುತ್ತಿಿರುವುದು ಗೊತ್ತಾಾಗಬಹುದು. ಪರಿಚಿತರಾಗಿದ್ದರೆ ಅವರ ವಿಚಾರ, ದೃಷ್ಟಿಿಕೋನ, ಆಯ್ಕೆೆಗಳ ಒಂದು ಕುಡಿನೋಟ ಸಿಗಬಹುದು. ಅಥವಾ ಅದೃಷ್ಟವಂತರು ನೀವಾಗಿದ್ದರೆ ಇನ್ನೊೊಬ್ಬ ಏಲಿಯನ್ ಅನ್ನೇ ಭೇಟಿಮಾಡುವಂತಾಗಬಹುದು! (ಹಾಗೆ ಎರಡು ಒಂಟಿ ಜೀವಗಳು ಒಂದು ವಿಚಿತ್ರ ಜಾಗದಲ್ಲಿ ಒಂದುಗೂಡಿದರೆ ಅದೇ ಅವರಿಗೆ ಮನೆಯಿದ್ದಂತೆ).

ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಕಿರುಚಾಟ, ದ್ವೇಷ, ಕಿಡಿಗೇಡಿತನ, ಮತ್ಸರ, ನಂಜಿನ ಪ್ರತಿಕ್ರಿಿಯೆಗಳು ಕಾಣಸಿಗುತ್ತವೆ. ಒಬ್ಬರು ಇನ್ನೊೊಬ್ಬರ ಮೇಲೆ ವಿಷ ಕಾರುವುದು, ತಪ್ಪುು ಮಾಹಿತಿ ಹರಡುವುದು ತಡೆಯಿಲ್ಲದೇ ಸಾಗುತ್ತಿಿದೆ. ಆದರೂ ಆನ್‌ಲೈನ್ ಸ್ಪೇಸ್‌ಗಳಿಂದ ನಾನು ದೂರ ಉಳಿಯಲಾರೆ. ಜನ ಇರುವುದೇ ಅಲ್ಲಿ ಎಂಬ ಕಾರಣಕ್ಕಾಾಗಿ ನನಗೆ ಅತ್ತ ಆಕರ್ಷಣೆ. ಕೆಲ ಸಾರಿ ಇವೆಲ್ಲ ಒಗ್ಗಟ್ಟು, ಸಹಾನುಭೂತಿ, ಅನುಕಂಪ, ಸ್ನೇಹ ವಿನಿಮಯ ಬಹಳ ಮೇಲುಮೇಲಿನದಲ್ಲವೇ ಎಂದು ಸಹ ಅನಿಸುತ್ತದೆ. ಆದರೂ ಈ ಮಿನಿ ಸುರಕ್ಷಿಿತ ತಾಣಗಳು ನನ್ನನ್ನು ಏಕಾಕಿತನ ಕಾಡದಂತೆ ಕಾಪಾಡಿವೆ. ಕೈ ಹಿಡಿದು ಜತೆಗೂಡಿವೆ. ಬೇಸರ ಮೂಡಿ ‘ಲಾಗಿನ್’ ಆದಾಗಲೆಲ್ಲ ವಿಸ್ಮಯಗಳನ್ನೇ ಅವು ಹೊರ ತೆಗೆದಿವೆ. ‘ಜೀವನ ಕೆಟ್ಟದಾಗಿದೆ, ಎಲ್ಲರೂ ದುಃಖಿತರಾಗಿದ್ದಾಾರೆ ಮತ್ತು ನಾವೆಲ್ಲ ಒಂದು ದಿನ ಸಾಯುತ್ತೇವೆ’ ಎಂದು ಹಲಬುವಾಗ ಕಾರ್ಮೋಡದ ಅಂಚಿಗೆ ಇರುವ ಬೆಳ್ಳಿಿ ಕಿರಣ ಆಗಿವೆ ಎಂದು ನಂಬುತ್ತೇನೆ.

ಜಾನಿ ಸನ್

ಇಪ್ಪತ್ತೇಳರರ ಹರೆಯದ ಕೆನಡಾದ ಲೇಖಕ, ಇಲಸ್ಟ್ರೇಟರ್ ಜಾನಿ ಸನ್ ಸಚಿತ್ರ ವೈನೋದಿಕ ಕಾದಂಬರಿ  a aliebn when  ur a aliebn too  ಬರೆದಿದ್ದಾರೆ. ಎಂಐಟಿಯಲ್ಲಿ ಅರ್ಬನ್ ಸ್ಟಡೀಸ್ ಮತ್ತು ಸಿಟಿ ಪ್ಲಾಾನಿಂಗ್‌ನಲ್ಲಿ ಸಂಶೋಧನಾರ್ಥಿ. ವ್ಯಂಗ್ಯ ಚಿತ್ರಕಾರ, ಡಿಸೈನರ್, ನಾಟಕಕಾರ ಸಹ ಆಗಿರುವ ಜಾನಿ, ಪ್ರಸಿದ್ಧ ಯೇಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದವರು. ಸದ್ಯ ಸೋಷಿಯಲ್ ಮೀಡಿಯಾ, ಆನ್‌ಲೈನ್ ಕಮ್ಯುನಿಟಿ ಕುರಿತು ಅಧ್ಯಯನ ನಡೆಸಿದ್ದಾರೆ.

Leave a Reply

Your email address will not be published. Required fields are marked *