Friday, 27th May 2022

ಆಂಧ್ರದಲ್ಲಿ ಜಿಲ್ಲೆಗಳ ಸಂಖ್ಯೆ ದ್ವಿಗುಣ: ಅಧಿಸೂಚನೆ

ನವದೆಹಲಿ: ಆಂಧ್ರಪ್ರದೇಶ ಸರ್ಕಾರ ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 13 ರಿಂದ 26 ಕ್ಕೆ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.

ರಾಜ್ಯದ ಕ್ಯಾಬಿನೆಟ್‌ ನಿಂದ ಹೊಸ ಜಿಲ್ಲೆಗಳ ರಚನೆ ಅಂತಿಮಗೊಳಿಸಿದ ನಂತರ, ಆಂಧ್ರಪ್ರದೇಶ ಸರ್ಕಾರ  ಜಿಲ್ಲೆಗಳ ರಚನೆ ಕಾಯಿದೆ, ವಿಭಾಗದ 3(5) ಅಡಿ ಯಲ್ಲಿ ಹೊಸ ಜಿಲ್ಲೆ ರಚಿಸಲಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಂಪುಟ ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ ಹೆಚ್ಚಳಕ್ಕೆ ಒಪ್ಪಿಗೆ ನೀಡಿತ್ತು.

ಕೆಲವು ಜಿಲ್ಲೆಗಳನ್ನು ಮರುನಾಮಕರಣ ಮಾಡಲಾಗಿದೆ. ಹೊಸ ಕೇಂದ್ರ ಕಚೇರಿಯನ್ನು ನಿಯೋಜಿಸ ಲಾಗಿದೆ. ಆಂಧ್ರಪ್ರದೇಶದ ಹೊಸ ಜಿಲ್ಲೆಗಳನ್ನು ರಾಜ್ಯದಲ್ಲಿನ ಸಂಸದೀಯ ಕ್ಷೇತ್ರಗಳ ಆಧಾರದ ಮೇಲೆ ರಚಿಸಲಾಗಿದೆ.

ಸಂಸದೀಯ ಕ್ಷೇತ್ರಗಳ ಆಧಾರದ ಮೇಲೆ ಹೊಸ ಜಿಲ್ಲೆಗಳನ್ನು ರಚಿಸುವುದು ಸಿಎಂ ಜಗನ್ ರೆಡ್ಡಿ ಅವರ ಬಹುನಿರೀಕ್ಷಿತ ಭರವಸೆಯಾಗಿದೆ. ಅಧಿಸೂಚನೆಯಂತೆ ಪೂರ್ವ ಗೋದಾವರಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಕೃಷ್ಣ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಗುಂಟೂರು ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಕರ್ನೂಲ್ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಭಜಿಸಲಾಗಿದೆ. ಚಿತ್ತೂರ್ ಅನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.