Tuesday, 7th July 2020

ಆತ್ಮವಿಶ್ವಾಸವೊಂದಿದ್ದರೆ ಸಾಧನೆ ಗಗನಕುಸುಮವೇನಲ್ಲ…

* ಮಲ್ಲಪ್ಪ. ಸಿ. ಖೊದ್ನಾಪೂರ

 ಜೀವನದಲ್ಲಿ ಉದಾತ್ತವಾದ ಗುರಿಯನ್ನಿಟ್ಟುಕೊಂಡು ಆ ಕಾರ್ಯದ ಅಥವಾ ಆ ಗುರಿಯ ಸಾಧನೆಯ ಪಯಣದಲ್ಲಿ ಎದುರಾಗುವ ಎಲ್ಲ ತೊಂದರೆ, ಕಷ್ಟ-ನಷ್ಟ, ಅಡ್ಡಿ-ಆತಂಕ, ಸಮಸ್ಯೆೆ, ಸೋಲುಗಳಿಂದ ಹತಾಶೆ, ವೈಫಲ್ಯಗಳ ಬಗ್ಗೆೆ ತಲೆಕೆಡಿಸಿಕೊಳ್ಳದೇ ಆ ಎಲ್ಲ ಸವಾಲುಗಳ ಬಗೆಗಿರುವ ಹಿಂಜರಿಕೆ ಮನೋಭಾವ, ಹಣೆಬರಹ ಎಂಬ ಮೌಢ್ಯತೆಯನ್ನು ತೊಲಗಿಸಿ ದೃಢ ಮನಸ್ಸು, ಕಾರ್ಯದಲ್ಲಿ ಶ್ರದ್ಧೆೆ, ಕಠಿಣ ಪರಿಶ್ರಮ, ಮತ್ತು ಆತ್ಮವಿಶ್ವಾಾಸದೊಂದಿಗೆ ಹೋರಾಡಿದರೆ ಜಯ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಖ್ಯಾತ ಉದ್ಯಮಿ ಅಜೀಂ ಪ್ರೇಮಜಿ ಅವರು ‘ಬದುಕು ಸುಲಭವಾಗಲಿ ಎಂದು ದೇವರಲ್ಲಿ ಪ್ರಾಾರ್ಥಿಸುವದಕ್ಕಿಿಂತ ಕಷ್ಟಗಳನ್ನು ಎದುರಿಸುವ ಆತ್ಮಬಲ ನೀಡಲೆಂದು ಕೋರುವುದು ಲೇಸು’ ಎಂದು ಹೇಳಿದ್ದಾಾರೆ. ಆದ್ದರಿಂದ ನಾವು ಯಾವುದೇ ಕಾರ್ಯವನ್ನು ಕೈಕೊಳ್ಳುವಾಗ ಅದರ ಬಗ್ಗೆೆ ಅಂಜಿಕೆ-ಭಯ, ಹಿಂಜರಿಕೆ, ಆಂತರಿಕ ದುಗುಡ, ಕೀಳರಿಮೆ, ನನಗೆ ಸಾಧ್ಯವಿಲ್ಲ, ನನ್ನಿಿಂದ ಅಸಾಧ್ಯ, ಆಗುವುದಿಲ್ಲ ಅಥವಾ ಏನಾಗುವುದೋ ಏನೋ ಎಂಬಂತಹ ನಕಾರಾತ್ಮಕ ಭಾವನೆಗಳು ನಮ್ಮನ್ನು ಸದಾ ಕಾಡುತ್ತಿಿರುತ್ತವೆ. ಈ ಎಲ್ಲ ನಿಷೇಧಾತ್ಮಕ ಮನೋಭಾವನೆಗೆ ದಿವ್ಯ ಔಷಧಿಯೇ ನಮ್ಮಲ್ಲಿರುವ ಆತ್ಮವಿಶ್ವಾಾಸ. ಇಂತಹ ಋಣಾತ್ಮಕ ಚಿಂತನೆಗಳಿಂದ ಹೊರಬಂದು ಕಾರ್ಯದಲ್ಲಿ ನಿಷ್ಠೆೆ, ಒಳ್ಳೆೆಯ ಆಲೋಚನೆ, ಆತ್ಮಸ್ಥೈರ್ಯ, ದೃಢನಿಶ್ಚಯ, ಸತತ ಪ್ರಯತ್ನ ಮತ್ತು ಕ್ರಿಿಯಾಶೀಲತೆಗಳು ನಮ್ಮ ಕಾರ್ಯಸಾಧನೆಗೆ ಉತ್ತಮ ದಿಕ್ಸೂಚಿಯಾಗಬಲ್ಲವು.

ಆತ್ಮವಿಶ್ವಾಾಸವೆಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ನಾವು ಯಾವುದೇ ಕೆಲಸ-ಕಾರ್ಯ ಮಾಡಲಿ ಅಥವಾ ಕೈಗೊಳ್ಳಲಿ ಆತ್ಮವಿಶ್ವಾಾಸವು ಇರಲೇಬೇಕು. ಜಗತ್ತಿಿನಲ್ಲಿ ಅಪೂರ್ವ ಸಾಧನೆಗೈದ ಮಹಾನ್ ಸಾಧಕರಲ್ಲಿರುವ ಅತಿ ಮಹತ್ವದ ಗುಣವೆಂದರೆ ಅದುವೇ ಆತ್ಮವಿಶ್ವಾಾಸ. ಅಂದರೆ ನಾವು ಮೊದಲು ನಮ್ಮನ್ನು ನಂಬಬೇಕು. ನಮ್ಮ ಬಗ್ಗೆೆ ವಿಶ್ವಾಾಸ ಮೂಡಬೇಕು ಮತ್ತು ನಮ್ಮಲ್ಲಿರುವ ವಿಶಿಷ್ಟ ಕಲೆ, ಪ್ರತಿಭೆ, ಶಕ್ತಿಿ-ಸಾಮರ್ಥ್ಯ, ಪರಿಣಿತಿ, ಪಾಂಡಿತ್ಯ, ಜ್ಞಾಾನ, ನೈಪುಣ್ಯತೆ ಮತ್ತು ಕುಶಲಗಾರಿಕೆಯನ್ನು ಬಳಸಿಕೊಂಡು ಎಂತಹ ಕಾರ್ಯವಾದರೂ ಸರಿ ನಾನು ಮಾಡಬಲ್ಲೆೆ, ಸಾಧಿಸಿಯೇ ತೀರುತ್ತೇನೆಂಬ ಆತ್ಮಬಲವನ್ನು ಬೆಳೆಸಿಕೊಳ್ಳಬೇಕು. ಒಬ್ಬ ವ್ಯಕ್ತಿಿ ದೈಹಿಕವಾಗಿ ಸದೃಢ ಮತ್ತು ಆರೋಗ್ಯ ಮತ್ತು ಶಕ್ತಿಿಯನ್ನು ಹೊಂದಿದ್ದರೂ ಅವನಲ್ಲಿ ಆತ್ಮವಿಶ್ವಾಾಸವೆಂಬುದು ಇಲ್ಲದಿದ್ದರೆ ಯಾವ ಪ್ರಯೋಜನವು ಇಲ್ಲ. ಆತ ಒಬ್ಬ ಉತ್ತಮ ಬಾಕ್ಸರ್ ಆಗಲಿಕ್ಕೆೆ ಸಾಧ್ಯವೇ ಇಲ್ಲ.

ಶಕ್ತಿಿ-ಸಾಮರ್ಥ್ಯಗಳ ಬಗ್ಗೆೆ ಅರಿವು ನಾವು ಕೈಗೆತ್ತಿಿಕೊಳ್ಳುತ್ತಿಿರುವ ಕಾರ್ಯದ ಬಗ್ಗೆೆ ಅವಶ್ಯಕ ಜ್ಞಾಾನ, ಸ್ಪಷ್ಟತೆ ಮತ್ತು ಅದನ್ನು ಅರ್ಥೈಸುವ ದೃಷ್ಟಿಿಕೋನದ ಬಗ್ಗೆೆ ನಮಗೆ ಅರಿವಿರಬೇಕು. ಇದರಿಂದ ನಾವು ಆ ಕಾರ್ಯದ ಬಗ್ಗೆೆ ನೋಡುವ ಮನೋಭಾವ, ದೃಷ್ಟಿಿಕೋನ ಮತ್ತು ಅದನ್ನು ಸಾಧಿಸುವ ಆತ್ಮವಿಶ್ವಾಾಸವು ನಮ್ಮಲ್ಲಿ ಒಡಮೂಡುತ್ತದೆ. ಶಕ್ತಿಿ-ಸಾಮರ್ಥ್ಯ, ಕಲೆ-ಪ್ರತಿಭೆ ಹಾಗೂ ಜಾಣ್ಮೆೆಯ ಕಲ್ಪನೆ, ಸ್ಪಷ್ಟತೆ ಮತ್ತು ತಿಳುವಳಿಕೆ ನಮ್ಮಲ್ಲಿರಬೇಕು. ಆಗ ನಮ್ಮಿಿಂದ ಆ ಕಾರ್ಯವನ್ನು ಮಾಡಿ ಮುಗಿಸಲು ಮತ್ತು ಅದರಲ್ಲಿ ಯಶ ಗಳಿಸಲು ಸಾಧ್ಯವಾಗುತ್ತದೆ.

ಉದಾತ್ತ ಗುರಿ ಪ್ರತಿಯೊಬ್ಬರೂ ಜೀವನದಲ್ಲಿ ಒಂದಿಲ್ಲೊೊಂದು ಗುರಿಯನ್ನು ಹೊಂದಿರಲೇಬೇಕು. ಹಾಗೆ ಮಾಡಬೇಕಾದ ಯಾವುದೇ ಕಾರ್ಯ ಅಥವಾ ಸಾಧನೆಗೆ ನಿರ್ದಿಷ್ಟ ಮತ್ತು ಉದಾತ್ತವಾದ ಗುರಿಯೆಂಬುದು ಇರಬೇಕು. ಸ್ವಾಾಮಿ ವಿವೇಕಾನಂದರ ಸಂದೇಶದಂತೆ ‘ಏಳು ಎದ್ದೇಳು, ನಿನ್ನ ಗುರಿ ಮುಟ್ಟುವತನಕ ನಿಲ್ಲದಿರು’ ಎಂಬಂತೆ ನಾವು ಆ ಗುರಿಯ ಸಾಧನೆಯತ್ತ ದಿಟ್ಟ ಹೆಜ್ಜೆೆಯನ್ನಿಿಟ್ಟು ವೃಥಾ ಕಾಲಹರಣ ಮಾಡದೇ, ವಿರಮಿಸದೇ ಕಾರ್ಯಪ್ರವೃತ್ತರಾದಾಗ ಮಾತ್ರ ಅದನ್ನು ಸಾಧಿಸಬಹುದು ಮತ್ತು ಅದರಲ್ಲಿ ಯಶಸ್ಸನ್ನು ಪಡೆಯಬಹುದು.

ದೌರ್ಬಲ್ಯಗಳನ್ನು ಮೆಟ್ಟಿಿ ನಿಲ್ಲಿ ಇಂದು ಬಹುತೇಕ ಜನರ ವಿಫಲತೆಗೆ ಮುಖ್ಯ ಕಾರಣವೇ ಆತ್ಮವಿಶ್ವಾಾಸದ ಕೊರತೆ. ನಮ್ಮಲ್ಲಿರುವ ದೌರ್ಬಲ್ಯಗಳೇ ನಮ್ಮನ್ನು ವೈಫಲ್ಯಗೊಳಿಸುತ್ತವೆ. ದೈಹಿಕವಾಗಿ ದುರ್ಬಲನಾಗಿದ್ದರೂ ಅವನಲ್ಲಿ ಆತ್ಮವಿಶ್ವಾಾಸವೊಂದಿದ್ದರೆ ಅವನಿಗಿಂತ ಶಕ್ತಿಿಶಾಲಿ ಈ ಜಗತ್ತಿಿನಲ್ಲಿಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನೋಡಲು ದೈಹಿಕವಾಗಿ ದುರ್ಬಲರಂತೆ ಅಥವಾ ಬಡಕಲು ಶರೀರವನ್ನು ಹೊಂದಿದ್ದರೂ ಅವರಲ್ಲಿರುವ ಅಪೂರ್ವ ತಾಳ್ಮೆೆ, ಆತ್ಮಬಲ ಮತ್ತು ಆತ್ಮವಿಶ್ವಾಾಸದಿಂದ ಇಡೀ ಜಗತ್ತೇ ತಲೆಬಾಗಿತ್ತು. ಸಿಂಹದತಿದ್ದ ಬ್ರಿಿಟಿಷರು ನಡುರಾತ್ರಿಿಯೇ ನಮ್ಮ ದೇಶವನ್ನು ಬಿಟ್ಟು ಓಡಿದರು ಎಂಬುದು ನಮಗೆಲ್ಲ ಉತ್ತಮ ನಿದರ್ಶನವಾಗಿದೆ.

ಅಷ್ಟೇ ಅಲ್ಲದೆ ಕಾರ್ಯದಲ್ಲಿ ಕೆಲವೊಮ್ಮೆೆ ಅಥವಾ ಹಲವು ಸಂದರ್ಭಗಳಲ್ಲಿ ಸಮಸ್ಯೆೆ, ತೊಂದರೆ, ಟೀಕೆ, ತೆಗಳಿಕೆ, ಹೀಯಾಳಿಕೆ, ಸೋಲು-ನೋವು, ಸಂಕಷ್ಟಗಳು ಎದುರಾಗಬಹುದು. ಅವುಗಳಿಗೆ ಜಗ್ಗದೆ ಬಗ್ಗದೆ, ಎದೆಗುಂದದೆ ಆ ಎಲ್ಲ ದೌರ್ಬಲ್ಯ ಮತ್ತು ಸವಾಲುಗಳನ್ನು ಮೆಟ್ಟಿಿ ನಿಂತು ಮುನ್ನಡೆದರೆ ಜಯ ಸಿಕ್ಕೇ ಸಿಗುತ್ತದೆ.

ನಿರಂತರ ಅಧ್ಯಯನ ಬರೀ ಆತ್ಮವಿಶ್ವಾಾಸವನ್ನು ಮಾತ್ರ ಬೆಳೆಸಿಕೊಂಡರೆ ಸಾಲದು. ಅದಕ್ಕೆೆ ಪೂರಕವಾಗಿ ಕಾರ್ಯಸಾಧನೆಗೆ ಬೇಕಾದ ಸತತ ಪ್ರಯತ್ನ, ಕಠಿಣ ಪರಿಶ್ರಮ ಅವಶ್ಯಕ. ಕೆಲವರು ಮೊದಲು ಅನೇಕ ಕೆಲಸ-ಕಾರ್ಯಗಳನ್ನು ಬಹಳ ಉತ್ಸುಕರಾಗಿ ಆರಂಭಿಸುತ್ತಾಾರೆ. ಆದರೆ ಕ್ರಮೇಣ ದಿನಗಳೆದಂತೆ ಅದರ ಮೇಲಿನ ಆಸಕ್ತಿಿ, ಉತ್ಸಾಾಹ, ಹುಮ್ಮಸ್ಸು, ತಾಳ್ಮೆೆ, ಕಳೆದುಕೊಳ್ಳುತ್ತಾಾರೆ. ಮತ್ತೊೊಬ್ಬರ ಅಭಿಪ್ರಾಾಯ, ಭಾವನೆಗಳಿಗೆ ಮತ್ತು ಬೇರೆಯವರು ತಮ್ಮ ಬಗ್ಗೆೆ ಏನೆಂದುಕೊಳ್ಳುತ್ತಾಾರೆಂಬ ಬಗ್ಗೆೆ ಕಿಂಚಿತ್ತೂ ಮಹತ್ವ ಕೊಡದೇ ದೃಢ ಮನಸ್ಸಿಿನಿಂದ ಪ್ರಯತ್ನಶೀಲ ಮತ್ತು ಕಾರ್ಯದಲ್ಲಿ ಮಗ್ನರಾದರೆ ನೀವು ಕಾರ್ಯದಲ್ಲಿ ಸಾಫಲ್ಯತೆಯನ್ನು ಪಡೆಯಬಹುದು. ಅದಕ್ಕಂತಲೇ ಡಾ. ಎಪಿಜೆ ಅಬ್ದುಲ್ ಕಲಾಂ ರವರು ‘ಸೋಲೆಂಬ ರೋಗಕ್ಕೆೆ ಆತ್ಮವಿಶ್ವಾಾಸ ಮತ್ತು ಕಠಿಣ ಪರಿಶ್ರಮವೇ ದೊಡ್ಡ ಮದ್ದು. ಇದು ಯಾರಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಿಟ್ಟ ಬುತ್ತಿಿ’ ಎಂದು ಹೇಳಿದ್ದಾಾರೆ.

ಸಕಾರಾತ್ಮಕ ಚಿಂತನೆ ಇರಲಿ ನೀವು ಜೀವನದಲ್ಲಿ ಏನನ್ನಾಾದರು ಸಾಧಿಸಬೇಕಾದರೆ ಅಥವಾ ಯಶಸ್ಸನ್ನು ಗಳಿಸಬೇಕಾದರೆ ಯಾವಾಗಲೂ ಗೆಲುವನ್ನು ಕುರಿತು ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳಿಿರಿ. ಎಂದಿಗೂ ಸೋತರೆ ಹೇಗೆ? ಮುಂದೇನು? ಮತ್ತೇನು ಮಾಡುವುದು ಮತ್ತು ಸೋಲಿಗೆ ಸಂಬಂಧಪಟ್ಟ ಸಂಗತಿಗಳನ್ನು ನಿಮ್ಮ ಮನಸ್ಸಿಿನಿಂದ ತೆಗೆದು ಹಾಕಿ. ಯಶಸ್ಸು ಸಾಧಿಸುವ ಹಾದಿಯಲ್ಲಿ ನಿಮಗೇನಾದರೂ ಅಡೆಚಣೆ, ಅಡ್ಡಿಿ-ಆತಂಕ, ಸಮಸ್ಯೆೆಗಳು ಬಂದರೆ ನಾನು ಖಂಡಿತವಾಗಿ ಅವುಗಳನ್ನು ಸಮರ್ಥವಾಗಿ ಎದುರಿಸಿ ಗೆಲುವು ಪಡೆದೇ ತೀರುತ್ತೇನೆಂಬ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಿಿ. ಆದುವೆ ನಿಮ್ಮನ್ನು ಗುರಿಯ ಸಾಧನೆಯತ್ತ ತಲುಪಿಸುತ್ತದೆ.

ಡಿ.ವಿ.ಜಿ ಅವರು ಹೇಳಿರುವಂತೆ ‘ ಇನ್ನೇನು ಮತ್ತೇನು ಗತಿಯೆಂದು ಬೆದರದಿರು, ನಿನ್ನ ಕೈಯೊಳಗಿಹುದೇ ವಿಧಿಯ ಲೆಕ್ಕಣಿಕೆ, ಕಣ್ಣಿಿಗೆಟುಕದೆ ಸಾಗುತಿಹುದು ದೈವದ ಸಂಚು, ತಣ್ಣಗಿರಿಸಾತ್ಮವನು ಮಂಕುತಿಮ್ಮ’ ಎಂಬ ನುಡಿಯಂತೆ ಯಶಸ್ಸು ಮತ್ತು ಅದೃಷ್ಟಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕಾರ್ಯಸಾಧನೆಗೆ ಅಥವಾ ಯಶಸ್ಸು ಪಡೆಯಲು ಹಣೆಬರಹ, ಅದೃಷ್ಟವೆಂಬುದು ಖಂಡಿತ ಇಲ್ಲ. ಜಗತ್ತಿಿನಲ್ಲಿ ಮಹಾನ್ ಸಾಧನಗೈದ ಮಹಾಪುರುಷರೆಲ್ಲರೂ ನಮ್ಮಂತೆ ಮನುಷ್ಯರೇ, ಅವರಲ್ಲಿ ಅಂತಹ ಆತ್ಮವಿಶ್ವಾಾಸವೆಂಬುದಿತ್ತು. ಅದುವೇ ಅವರ ಯಶಸ್ಸಿಿನ ಗುಟ್ಟು. ನೀವು ಎಂದಿಗೂ ನಿಮ್ಮ ಬಗ್ಗೆೆ, ನಿಮ್ಮನ್ನು ಕೀಳಾಗಿ ಕಾಣದೇ ಸದೃಢ ಮನೋಬಲ ಮತ್ತು ಆತ್ಮವಿಶ್ವಾಾಸದೊಂದಿಗೆ ಮುನ್ನುಗ್ಗಿಿದರೆ ಸಾಧನೆಯೇನು ಗಗನ ಕುಸುಮವೇನಲ್ಲ ಹಾಗೂ ಯಶಸ್ಸು ನಿಮ್ಮ ಮನೆಯ ಬಾಗಿಲಿಗೆ ಬರುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *