Friday, 7th October 2022

ಸಿದ್ಧಗಂಗಾ ಮಠದ ಪಿಯು ವಿದ್ಯಾರ್ಥಿ ಮೇಲೆ ಹಲ್ಲೆ

ತುಮಕೂರು: ಸಿದ್ಧಗಂಗಾ ಮಠದ ಪಿಯು ವಿದ್ಯಾರ್ಥಿ ಮೇಲೆ ಅಪರಿಚಿತ ಮೂವರು ಮಾರಣಾಂತಿಕ ಹಲ್ಲೆ ನಡೆಸಿದೆ.

ಭೀಮಶಂಕರ ಕ್ಷೇತ್ರಿ (18) ಕಾಲೇಜು ಮುಗಿಸಿಕೊಂಡು ಮಠಕ್ಕೆ ವಾಪಸಾಗುವಾಗ ಬೈಕ್​ನಲ್ಲಿ ಬಂದ ಮೂವರು ಏಕಾಏಕಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದು, ಮೊಬೈಲ್​ ಕಿತ್ತುಕೊಂಡು ಪರಾರಿಯಾಗಿ ದ್ದಾರೆ.

ದ್ವಿತೀಯ ಪಿಯು ಓದುತ್ತಿರುವ ವಿಜಯಪುರ ಜಿಲ್ಲೆ ಹಿಂಡಿ ತಾಲೂಕಿನ ಇಂಗಳಗಿ ಗ್ರಾಮದ ಭೀಮ ಶಂಕರ ಮಧ್ಯಾಹ್ನ ಕಾಲೇಜು ಮುಗಿಸಿ ಇಸ್ರೋ ನಿಲ್ದಾಣದಲ್ಲಿ ಬಸ್​ ಇಳಿದು ಮಠಕ್ಕೆ ತೆರಳುವಾಗ ಚಾಕುವಿನಿಂದ ಹಲ್ಲೆ ನಡೆದಿದೆ.

3 ವರ್ಷದಿಂದ ಮಠದಲ್ಲಿ ಓದುತ್ತಿದ್ದು, ಹಲ್ಲೆ ನಡೆಸಿದವರು ಅಪರಿಚಿತರು ಎಂದು ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿಯ ಎಡಗೈಗೆ ಬಲವಾದ ಪೆಟ್ಟು ಬಿದ್ದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೈಗೆ 30 ಹೊಲಿಗೆ ಹಾಕಲಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.