Tuesday, 29th September 2020

ಆಸ್ಟ್ರೇಲಿಯಾಗೆ ರೋಚಕ 19 ರನ್ ಗೆಲುವು

ಮ್ಯಾನ್ಚೆಸ್ಟರ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮೊದಲನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ರೋಚಕ 19 ರನ್ ಗೆಲುವು ದಾಖಲಿಸಿದೆ.

ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್ ಅವರ ಚೊಚ್ಚಲ ಏಕದಿನ ಶತಕ ವ್ಯರ್ಥವಾಗಿದೆ. ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಕಾಂಗರೂ ಪಡೆ 1-0 ಯ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾದಿಂದ ನಾಯಕ ಆಯರನ್ ಫಿಂಚ್ 16, ಮಾರ್ಕಸ್ ಸ್ಟೋಯ್ನಿಸ್ 43, ಮಾರ್ನಸ್ ಲ್ಯಬುಶೇನ್ 21, ಮಿಚೆಲ್ ಮಾರ್ಷ್ 73, ಅಲೆಕ್ಸ್ ಕ್ಯಾರಿ 10, ಗ್ಲೆನ್ ಮ್ಯಾಕ್ಸ್‌ವೆಲ್ 77, ಮಿಚೆಲ್ ಸ್ಟಾರ್ಕ್ 19 ರನ್‌ ಸೇರಿಸಿ ದರು. ಆಸೀಸ್ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 294 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಆರಂಭಿಕ ಜಾನಿ ಬೇರ್ಸ್ಟೋವ್ 84, ನಾಯಕ ಇಯಾನ್ ಮಾರ್ಗನ್ 23, ಸ್ಯಾಮ್ ಬಿಲ್ಲಿಂಗ್ಸ್ 118 (110 ಎಸೆತ), ಕ್ರಿಸ್ ವೋಕ್ಸ್ 10 ರನ್ ಸೇರ್ಪಡೆಯೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 275 ರನ್ ಪೇರಿಸಿ ಶರಣಾಯಿತು.

ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ 3, ಮಾರ್ಕ್ ವುಡ್ 3, ಆದಿಲ್ ರಶೀದ್ 2 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿ ಯಾದ ಜೋಶ್ ಹ್ಯಾಝಲ್ವುಡ್‌ 26 ರನ್‌ಗೆ 3, ಆಯಡಮ್ ಜಂಪಾ 55ಕ್ಕೆ 4 ವಿಕೆಟ್‌ ಮುರಿದು ಗಮನ ಸೆಳೆದರು. ಹ್ಯಾಝಲ್ವುಡ್ ಪಂದ್ಯಶ್ರೇಷ್ಠರೆನಿಸಿದರು.

Leave a Reply

Your email address will not be published. Required fields are marked *