Wednesday, 1st February 2023

ಅವತಾರ್‌ 2 ನಲ್ಲಿ ಹೊಸ ಮಾಯಾಲೋಕ

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಅವತಾರ್ ೨ ಡಿಸೆಂಬರ್ ೧೬ರಂದು ತೆರೆಗೆ ಬರಲಿದೆ. ಸದ್ಯ ಚಿತ್ರದ ಅದ್ಭುತ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತಿದೆ.

ಅವತಾರ್ ಮೊದಲ ಭಾಗದಲ್ಲಿ ಪಂಡೋರಾ ಎಂಬ ನಿಗೂಢ ಗ್ರಹವನ್ನೇ ಸೃಷ್ಟಿ ಮಾಡ ಲಾಗಿತ್ತು. ಅಂತೆಯೇ ಈ ಬಾರಿಯೂ ನಿರ್ದೇಶಕರು, ಪ್ರೇಕ್ಷಕರನ್ನು ಸಮುದ್ರದ ಆಳಕ್ಕೆ ಕರೆದುಕೊಂಡು ಹೋಗಲಿದ್ದಾರೆ. ಅವತಾರ್‌ನಲ್ಲಿ ಜೇಕ್ ಸುಲ್ಲಿ ಕಥೆಯನ್ನು ಅತ್ಯದ್ಭುತ ವಾಗಿ ನಿರೂಪಿಸಿದ್ದ ನಿರ್ದೇಶಕರು ಎರಡನೇ ಭಾಗದಲ್ಲಿ ಆತನ ಮಗಳನ್ನು ಪರಿಚಯಿಸಿ ದ್ದಾರೆ.

ಅವತಾರ್ ಎರಡನೇ ಭಾಗವನ್ನು ನಿರ್ದೇಶಕರು ಆಧುನಿಕ ತಂತ್ರಜ್ಞಾನದಿಂದ ಕಟ್ಟಿ ಕೊಟ್ಟಿದ್ದಾರೆ, ಕಣ್ಮನ ಸೆಳೆಯುವ ಗ್ರಾಫಿಕ್ಸ್ ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅದರಲ್ಲೂ ತ್ರಿಡಿ ತಂತ್ರಜ್ಞಾನದಲ್ಲಿ ಅವತಾರ್ ೨ ಕಣ್ತುಂಬಿ ಕೊಳ್ಳುವುದೇ ಹಬ್ಬ. ಈ ಬಾರಿ ಸಮುದ್ರ ಆಳದಲ್ಲಿ ಬಹುತೇಕ ಕಥೆ ನಡೆಯುತ್ತದೆ.

ಅದನ್ನು ತೆರೆಯಲ್ಲಿ ನೋಡುವುದು ಇನ್ನೂ ರೋಚಕ ವಾಗಿರುತ್ತದೆ. ಮೊದಲ ಭಾಗದಲ್ಲಿ ವಿಭಿನ್ನ ಪ್ರಪಂಚದಲ್ಲಿ, ವಿಚಿತ್ರ ಜೀವಿಗಳನ್ನುದರ್ಶನ ಮಾಡಿಸಿದ್ದ ಜೇಮ್ಸ್ ಕ್ಯಾಮರೂನ್, ಈ ಬಾರಿ ಅದಕ್ಕಿಂತ ವಿಚಿತ್ರವಾದ ಜೀವಿಗಳನ್ನು ಇಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಡೈನೋಸಾರ್ ಮಾದರಿಯ ದೈತ್ಯ ಜೀವಿಗಳು ಇಲ್ಲಿವೆ. ಇಲ್ಲಿಯೂ ಬದುಕಿಗಾಗಿ ನಡೆಯುವ ಹೋರಾಟದ ಕಥನ ಹಾಸು ಹೊಕ್ಕಾಗಿದೆ. ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ಈ ವರ್ಷದ ಅಂತ್ಯಕ್ಕೆ ಪ್ರೇಕ್ಷಕರ ಮುಂದೆ ಬರಲಿದ್ದು ಆಕ್ಷನ್ ಅಡ್ವೆಂಚರ್ ಜತೆಗೆ ಎಮೋಷನಲ್ ಕಂಟೆಂಟ್ ಅನ್ನು ಹೊತ್ತು ಬರಲಿದೆ. ಸಾಮ್ ವರ್ಥಿಂಗ್‌ಟನ್, ಮಿಚಲ್ ರೋಡ್ರಿಗಜ್, ಜೋ ಸಲ್ಡಾನಾ, ಸ್ಟೀಪನ್ ಲಾಂಗ್, ಸಿಗೋರನಿ ವೇವರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

error: Content is protected !!