Tuesday, 15th October 2019

ಬಂಡುಕೋರರಿಗೆ ನಿಗಮ ಅನರ್ಹರ ಹಾದಿ ಸುಗಮ

ಅನರ್ಹ ಶಾಸಕರಿಗಿಲ್ಲ ಟಿಕೆಟ್ ತಪ್ಪುುವ ಆತಂಕ ಬಂಡಾಯ ನಾಯಕರಿಗೆ ನಿಗಮ ಮಂಡಳಿ ಹುದ್ದೆೆ ನೀಡಿದ ಸರಕಾರ ಶರತ್ ನಂದೀಶ್ ರೆಡ್ಡಿ ಸೇರಿ ಎಂಟು ಜನರಿಗೆ ನಿಗಮ ಮಂಡಳಿ ಹುದ್ದೆೆ

ಅನರ್ಹರ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಲು ಸಜ್ಜಾಗಿದ್ದ ಬಂಡಾಯ ನಾಯಕರಿಗೆ ನಿಗಮ ಮಂಡಳಿ ಸ್ಥಾನಮಾನ ನೀಡುವ ಮೂಲಕ ಅನರ್ಹರಿಗೆ ರಾಜ್ಯ ಬಿಜೆಪಿ ಸಿಹಿ ಸುದ್ದಿ ನೀಡಿದೆ.

ತಮ್ಮ ರಾಜಕೀಯ ಜೀವನವನ್ನು ಪಣಕ್ಕಿಿಟ್ಟು, ಬಿಜೆಪಿ ಸರಕಾರವನ್ನು ಅಧಿಕಾರಕ್ಕೆೆ ತಂದಿದ್ದ 17 ಅನರ್ಹ ಶಾಸಕರ ಪೈಕಿ ಎಂಟು ಶಾಸಕರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿದ್ದ ಬಿಜೆಪಿ ಅಭ್ಯರ್ಥಿಗಳಿಂದ ಸ್ಪರ್ಧೆ ಏರ್ಪಟ್ಟಿಿತ್ತು. ಟಿಕೆಟ್ ನೀಡದಿದ್ದರೆ, ಬಂಡಾಯವೇಳುವ ಎಚ್ಚರಿಕೆಯನ್ನು ಈ ನಾಯಕರು ನೀಡಿದ್ದರು. ಆದ್ದರಿಂದ ಇದೀಗ ಬಂಡಾಯ ಏಳುವ ಸಾಧ್ಯತೆಯಿರುವ ನಾಯಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾಾನ ನೀಡುವ ಮೂಲಕ, ಬಂಡಾಯದ ಬಿಸಿಯನ್ನು ತಣಿಸಿದೆ.

ಎಂಟು ನಿಗಮ-ಮಂಡಳಿ ಪೈಕಿ ಶರತ್ ಬಚ್ಚೇಗೌಡ ಹೊರತುಪಡಿಸಿ ಇನ್ನುಳಿದ ಏಳು ನಾಯಕರು ನಿಗಮ ಮಂಡಳಿ ಸ್ಥಾಾನವನ್ನು ಒಪ್ಪಿಿಕೊಂಡಿದ್ದಾಾರೆ. ಆದರೆ ಶರತ್ ಬಚ್ಚೇಗೌಡ ಮಾತ್ರ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾಾನವನ್ನು ನಿರಾಕರಿಸುವ ಮೂಲಕ ಟಿಕೆಟ್ ಬಂಡಾಯ ಅಭ್ಯರ್ಥಿಯಾಗಿ ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿದ್ದಾಾರೆ.

ಆರಂಭದಲ್ಲಿ ಉಪಚುನಾವಣೆ ಮುಗಿಯುವ ತನಕ 17 ಸಚಿವ ಸ್ಥಾಾನ ಹಾಗೂ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾಾನಗಳನ್ನು ಭರ್ತಿ ಮಾಡದಿರಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಹೊಸಕೋಟೆ, ಹಿರೇಕೆರೂರು, ಹೊಸಪೇಟೆ, ಕಾಗವಾಡ ಸೇರಿದಂತೆ ಎಂಟು ಕ್ಷೇತ್ರಗಳಲ್ಲಿ ಬಂಡಾಯವೇಳುವುದು ಖಚಿತವಾಗುತ್ತಿಿದ್ದಂತೆ, ಕೇವಲ ಎಂಟು ನಿಗಮ ಮಂಡಳಿಗೆ ನೇಮಕ ಮಾಡುವ ಮೂಲಕ ಬಿಜೆಪಿ ‘ಜಾಣ’ ನಡೆ ಅನುಸರಿಸಿದೆ.

ನಿಗಮ ಮಂಡಳಿ ಮೂಲಕ ಸಂತೈಸಿದ
ಪ್ರಮುಖವಾಗಿ ಸದ್ಯ ನಿಗಮ ಮಂಡಳಿ ಸ್ಥಾಾನಗಳನ್ನು ಪಡೆದಿರುವ ಎಲ್ಲ ನಾಯಕರ ಪೈಕಿ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಹೊರತುಪಡಿಸಿ, ಇನ್ನುಳಿದ ಎಲ್ಲ ನಾಯಕರು ಕೆಲವೇ ಸಾವಿರದ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು. ಆದ್ದರಿಂದ ಅನರ್ಹರಿಗೆ ಕ್ಷೇತ್ರ ಬಿಟ್ಟುಕೊಡಲು ಹಿಂದೇಟು ಹಾಕಿದ್ದರು. ಆದರೀಗ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾಾನ ನೀಡಿರುವುದರಿಂದ ಟಿಕೆಟ್ ಆಕಾಂಕ್ಷಿಿಯಾಗಿದ್ದರೂ ಈ ಯಾವ ನಾಯಕರು ಬಂಡಾಯ ಸಾರುವುದಿಲ್ಲ. ಇದರೊಂದಿಗೆ ಚುನಾವಣೆಗೆ ಸ್ಪರ್ಧಿಸುವ ಮೊದಲೇ ಆಯಕಟ್ಟಿಿನ ಸ್ಥಾಾನ ಸಿಕ್ಕಿಿರುವುದರಿಂದ ಎಲ್ಲ ನಾಯಕರು ಅನರ್ಹರ ಪರವಾಗಿ ಬ್ಯಾಾಟಿಂಗ್ ಮಾಡುವುದು ಖಚಿತ. ಆದ್ದರಿಂದ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಈ ನಿರ್ಣಯವನ್ನು ತಗೆದುಕೊಂಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಎಂಟು ಸ್ಥಾಾನವೂ ಅನರ್ಹರಿಗೆ ಮೀಸಲು
ಇನ್ನು 17 ಅನರ್ಹರ ಪೈಕಿ ಎಂಟು ಜನರಲ್ಲಿ ಮಾತ್ರ ಬಂಡಾಯದ ಬಿಸಿ ಹೆಚ್ಚಿಿತ್ತು. ಒಂದು ವೇಳೆ ಬಂಡಾಯ ಅಭ್ಯರ್ಥಿಗಳಾಗಿ ಇವರೆಲ್ಲ ಸ್ಪರ್ಧಿಸಿದ್ದರೆ ಚುನಾವಣೆ ಎದುರಿಸುವುದು ಕಷ್ಟವಾಗುತ್ತಿಿತ್ತು ಎನ್ನುವುದು ಖಾತ್ರಿಿಯಾಗಿತ್ತು. ಆದ್ದರಿಂದ ಈ ಬಂಡಾಯವನ್ನು ತಣಿಸುವಂತೆ ಮುಖ್ಯಮಂತ್ರಿಿಗಳ ಮೇಲೆ ಒತ್ತಡ ತಂತ್ರವನ್ನು ಅನುಸರಿಸಲಾಗಿದೆ. ಆದರೆ ಶರತ್ ರೀತಿ ಇನ್ನು ಕೆಲ ನಾಯಕರು ತಮಗೆ ನೀಡಿರುವ ಸ್ಥಾಾನವನ್ನು ನಿರಾಕರಿಸಿದರೆ ಏನು ಮಾಡಬೇಕೆಂಬ ಗೊಂದಲದಲ್ಲಿ ರಾಜ್ಯ ಬಿಜೆಪಿ ನಾಯಕರು ಇದೀಗ ಬಿದ್ದಿದ್ದಾರೆ.

ಸ್ಥಾನ ತಿರಸ್ಕರಿಸಿದ ಶರತ್
ಎಂಟಿಬಿ ನಾಗರಾಜ್ ಅವರಿಂದ ತೆರವಾಗಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸುವ ಬಗ್ಗೆೆ ಶರತ್ ಬಚ್ಚೇಗೌಡ ಆರಂಭದಿಂದಲೂ ಉತ್ಸುಕರಾಗಿದ್ದರು. ಆದರೆ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡುವುದು ಖಚಿತವಾಗುತ್ತಿಿದ್ದಂತೆ ಈ ಬಗ್ಗೆೆ ಆಕ್ಷೇಪವೆತ್ತಿಿ ಬಂಡಾಯ ನಿಲ್ಲುವ ಬಗ್ಗೆೆಯೂ ಹೇಳಿದ್ದರು. ನಿಗಮ ಮಂಡಳಿ ಸ್ಥಾಾನ ನೀಡುವುದರಿಂದ ಈ ಬಂಡಾಯ ತಣ್ಣಗಾಗುವುದು ಎಂದು ನಂಬಿದ್ದ ಬಿಜೆಪಿ ವರಿಷ್ಠರಿಗೆ ಶರತ್ ಉಲ್ಟಾಾ ಹೊಡೆದಿದ್ದು, ಹುದ್ದೆೆಯನ್ನು ನಿರಾಕರಿಸಿದ್ದಾಾರೆ.

ಕರ್ನಾಟಕ ಗೃಹ ಮಂಡಳಿ ಹುದ್ದೆೆಯನ್ನು ನಿರಾಕರಿಸಿದ್ದು, ಈ ಬಗ್ಗೆೆ ನನಗೆ ಯಾವುದೇ ಮಾಹಿತಿಯಿಲ್ಲ. ಒಂದು ವೇಳೆ ಈ ಹುದ್ದೆೆ ಸಿಕ್ಕಿಿದ್ದರೂ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಿರುವುದರಿಂದ ಅದನ್ನು ತಗೆದುಕೊಳ್ಳುವುದಿಲ್ಲ.
ಶರತ್ ಬಚ್ಚೇಗೌಡ
ಬಜೆಪಿ ಮುಖಂಡ

ಯಾರಿಗೆ ಯಾವ ನಿಗಮ
ಹೆಸರು ಹುದ್ದೆೆ
ಅಶೋಕ ಅಧ್ಯಕ್ಷ, ಕರ್ನಾಟಕ ಗಡಿ ಅಭಿವೃದ್ಧಿಿ ಪ್ರಾಾಧಿಕಾರ
ಭರಮಗೌಡ (ರಾಜು) ಕಾಗೆ ಅಧ್ಯಕ್ಷ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆ
ಯು.ಬಿ ಬಣಕಾರ್ ಅಧ್ಯಕ್ಷ, ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮ
ಬಸನಗೌಡ ತುರುವಿಹಾಳ ಅಧ್ಯಕ್ಷ, ಕಾಡಾ ಪ್ರಾಾಧಿಕಾರ, ತುಂಗಭದ್ರಾಾ ಯೋಜನೆ
ವಿ.ಎಸ್ ಪಾಟೀಲ್, ಅಧ್ಯಕ್ಷ, ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆೆ
ಎಚ್.ಆರ್ ಗವಿಯಪ್ಪ, ಅಧ್ಯಕ್ಷ, ಸಣ್ಣ ಕೈಗಾರಿಕೆ ಅಭಿವೃದ್ಧಿಿ ನಿಗಮ
ನಂದೀಶ್ ರೆಡ್ಡಿಿ, ಉಪಾಧ್ಯಕ್ಷ, ಬಿಎಂಟಿಸಿ
ಬಚ್ಚೇಗೌಡ, ಅಧ್ಯಕ್ಷ, ಕರ್ನಾಟಕ ಗೃಹ ಮಂಡಳಿ

Leave a Reply

Your email address will not be published. Required fields are marked *