Saturday, 4th July 2020

ಬಗಲಲ್ಲಿ ಧೂರ್ತರಿರುವಾಗ ಸ್ವತಂತ್ರವಾಗುವುದು ಬರಿ ಕನಸು!

ವಾಸ್ತವ

ಬೈಂದೂರು ಚಂದ್ರಶೇಖರ ನಾವಡ, ಮಾಜಿ ಯೋಧರು

ಕಡಿದಾದ ಪರ್ವತ ಶ್ರೇಣಿಗಳ ಆ ಹಚ್ಚ ಹಸುರು, ಗುಡ್ಡ ಬೆಟ್ಟದ ಮೇಲೂ ಕಿಲಕಿಲನೆ ನಗುವ ಸುಂದರ ಪುಷ್ಪಗಳ ಆಹ್ಲಾಾದಕರ ದೃಶ್ಯ, ಜುಳು ಜುಳು ಹರಿಯುವ ನದಿ-ತೊರೆಗಳ ಕಲರವ, ಗಿರಿ ಶಿಖರಗಳ ಮೇಲಿನಿಂದ ಸುದೂರದವರೆಗೆ ಕಾಣುವ ವಿಹಂಗಮ ನೋಟ, ಚಳಿಗಾಲದಲ್ಲಿ ಹಿಮಾಚ್ಛಾಾದಿತ ಗಿಡ-ಮರಗಳು, ಗುಡ್ಡ-ಬೆಟ್ಟಗಳ ಶ್ವೇತವರ್ಣ ಕಣ್ತುಂಬಿಕೊಂಡಷ್ಟೂ ಸಾಲದು. ಇನ್ನೂ ಮತ್ತೂ ನೋಡಬೇಕೆನ್ನುವಷ್ಟು ಮನವನ್ನಾಾವರಿಸಿಕೊಳ್ಳುವ ಆ ಭುವಿಯ ಸ್ವರ್ಗ ಕಾಶ್ಮೀರ ಕಣಿವೆ ಬಾಲಿವುಡ್-ಸ್ಯಾಾಂಡಲ್ ವುಡ್ ಸಿನಿಮಾ ನಿರ್ಮಾಪಕರಿಗೆ ಚಿತ್ರೀಕರಣಕ್ಕೆೆ ಹೇಳಿ ಮಾಡಿಸಿದ ಸ್ಥಳ.
ಪುರಾತನ ದೇವಳಗಳು, ಕಾರಣಿಕ ದೈವ ಸ್ಥಾಾನಗಳು, ಚೇತೋಹಾರಿ ದೃಶ್ಯಗಳ ಕಾಶ್ಮೀರ ಕಳೆದ ಮೂರು ದಶಕಗಳಿಂದ ಮತಾಂಧರ ರಕ್ತಪಾತ, ಉಪದ್ರವಿಗಳ ಪುಂಡಾಟ, ತಿಂಗಳುಗಟ್ಟಲೆ ನಡೆಯುವ ಬಂದ್ ಗಳಿಂದ ನಲುಗಿ ಹೋಗಿತ್ತು. ರಕ್ತದೋಕುಳಿಯನ್ನು ಕಾಣುತ್ತಾಾ , ಗುಂಡಿನ ಸಪ್ಪಳವನ್ನು ಕೇಳುತ್ತಾಾ ಬೆಳೆಯುತ್ತಿಿದ್ದ ಮಕ್ಕಳು ತಮ್ಮ ಆಟಗಳಲ್ಲೂ ಎಕೆ 47, ಪಿಸ್ತೋೋಲ್ ಆಟಿಕೆಗಳನ್ನು ಬಳಸುತ್ತಿಿದ್ದರು. ಗೋಡೆಯ ಮೇಲೆ ಉಗ್ರವಾದಿಗಳು ಮತ್ತು ಭಾರತೀಯ ಯೋಧರ ನಡುವಿನ ಕಾದಾಟವನ್ನು ಚಿತ್ರಿಿಸುತ್ತಿಿದ್ದರು. ಸೈನಿಕರನ್ನು ಜರಿಯುವ, ಕಲ್ಲು ತೂರುವ ಪ್ರತ್ಯೇಕತಾವಾದಿಗಳ ಮಾತುಗಳನ್ನು ಕೇಳುತ್ತಾಾ ತಲೆಮಾರುಗಳು ಬೆಳೆಯುತ್ತಿಿದ್ದುದು ವಿಷಾದಕರ.

ನೈಸರ್ಗಿಕ ಸಂಪತ್ತಿಿನ ಆಗರವಾದ ಕಾಶ್ಮೀರ ಕಣಿವೆ ಪ್ರವಾಸಿ ಭಾರತದ ಭೂ ಪಟದಲ್ಲಿ ಅಗ್ರಣೀಯ ಸ್ಥಾಾನದಲ್ಲಿರಬೇಕಿತ್ತು. ವೈಷ್ಣೋೋದೇವಿ,ಅಮರನಾಥ್ ಮೊದಲಾದ ಪವಿತ್ರ ಧಾರ್ಮಿಕ ಸ್ಥಳನ್ನೊೊಳಗೊಂಡ ರಾಜ್ಯ ಧಾರ್ಮಿಕ ಯಾತ್ರಾಾ ಸ್ಥಳವಾಗಿ ಹೊರಹೊಮ್ಮುವ ಬದಲಾಗಿ ದೇಶೀ-ವಿದೇಶೀ ಮತಾಂಧ ಉಗ್ರರ ದೇಶ ವಿರೋಧಿ ಚಟುವಟಿಕೆಗಾಗಿ ಹಾಗೂ ದಿನ ನಿತ್ಯವೆಂಬಂತೆ ಮುಗ್ಧರ ಅಮಾನುಷ ಹತ್ಯೆೆಯಿಂದಾಗಿ ಕುಖ್ಯಾಾತಿ ಪಡೆಯಿಯಿತು. ತಲೆ ತಲಾಂತರಗಳಿಂದ ಶಾಂತಿ ಸದ್ಭಾಾವಗಳಿಂದ ನೆಮ್ಮದಿಯ ಜೀವನ ನಡೆಸಿಕೊಂಡಿದ್ದ ಕಾಶ್ಮೀರಿ ಸಮಾಜದಲ್ಲಿ ಧಾರ್ಮಿಕ ಮತಾಂಧತೆಯ ವಿಷ ಬೀಜ ಅಂಕುರಗೊಂಡು ಹಿಂದೂ ಪಂಡಿತರನ್ನು ಹೊರಗಟ್ಟಲಾಯಿತು. ಸೇನೆ, ಪೋಲೀಸ್ ಪಡೆಗಳಲ್ಲಿ ನೌಕರಿ ಮಾಡಿಕೊಂಡಿದ್ದ ತಮ್ಮವರನ್ನೇ ನಿರ್ಮಮ ಹತ್ಯೆೆ ಮಾಡಲಾಯಿತು. ನೈಸರ್ಗಿಕ ವಿಕೋಪ ಬಂದಾಗ ಆಪತ್ಬಾಾಂಧವರಂತೆ ಸಹಾಯ ಮಾಡಿದ ಸೈನಿಕರ ಮೇಲೆ ಕಲ್ಲು ತೂರಾಟ ದಿನ ನಿತ್ಯದ ದಂಧೆಯಾಯಿತು. ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಂಡಿದ್ದ ಪಾಕಿಸ್ಥಾಾನ ಅಲ್ಲಿನ ನಿವಾಸಿಗಳನ್ನು ಎರಡನೇ ದರ್ಜೆಯ ಪಾಕಿಸ್ಥಾಾನೀಯರಂತೆ ನೋಡಿಕೊಳ್ಳುತ್ತಿಿರುವ ದೃಷ್ಟಾಾಂತ ಕಂಡೂ ಕಂಡೂ ಪಾಕಿಸ್ಥಾಾನದ ಪರ ನೀತಿಯನ್ನು ಅಲ್ಲಿನ ಚುನಾಯಿತ ಪಕ್ಷಗಳ ನಾಯಕರು ಬೆಂಬಲಿಸುತ್ತಾಾ ಬಂದರು. ಇನ್ನೊೊಂದೆಡೆ ಕಾಶ್ಮೀರದ ಸ್ವಘೋಷಿತ ನಾಯಕರೆಂದು ಬಿಂಬಿಸಿಕೊಳ್ಳುತ್ತಿಿರುವ ಹುರಿಯತ್ ಹಾಗೂ ಪ್ರತ್ಯೇಕತಾವಾದಿಗಳು ಜನಸಾಮಾನ್ಯರ ಜೀವನವನ್ನು ಇನ್ನಷ್ಟು ದುಃಖದಾಯಿಯಾಗಿ ಮಾಡಿದರು.

ಸ್ವಾಾತಂತ್ರ್ಯೋೋತ್ತರದ ಈ ಏಳು ದಶಕಗಳಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದವನ್ನು ತೊಡೆದು ಹಾಕಲು ಎಲ್ಲಾ ಕೇಂದ್ರ ಸರಕಾರಗಳು ಮಾತುಕತೆ, ಪ್ಯಾಾಕೇಜ್ ಗಳ ಮೇಲೆ ಪ್ಯಾಾಕೇಜ್ ಗಳ ಘೋಷಣೆ ನಡೆಸಿದರು. ಕೋಟ್ಯಂತರ ರು. ಹಣವನ್ನು ನೀರಿನಂತೆ ಹರಿಸಲಾಯಿತು. ಕಾಶ್ಮೀರಿಗಳನ್ನು ಬಡತನದಿಂದ ಮುಕ್ತಗೊಳಿಸಲು ವ್ಯರ್ಥ ಪ್ರಯತ್ನಗಳು ನಡೆದವು. ಕೇಂದ್ರದ ನೆರವನ್ನು ದುರ್ಬಳಕೆ ಮಾಡಿಕೊಂಡ ಅಲ್ಲಿನ ಮುಖ್ಯ ಧಾರೆಯ ರಾಜಕೀಯ ಪಕ್ಷಗಳು ಸಾಮಾನ್ಯ ಜನರನ್ನು ಅಜ್ಞಾನ, ಅನಾರೋಗ್ಯಯುತ ಬಡತನದ ಜೀವನದ ಅಂಧಕಾರದಲ್ಲಿರಿಸಿದವು. ಮತಾಂಧ ಪ್ರತ್ಯೇಕತಾವಾದಿಗಳು ಸಾಮಾನ್ಯ ಕಾಶ್ಮೀರಿಯ ದುರ್ಗತಿಯ ಗಾಯಕ್ಕೆೆ ಉಪ್ಪುು ಸಿಂಪಡಿಸುತ್ತ ಬಂದವು. ದಾರಿ ತಪ್ಪಿಿದ ಶಸ್ತ್ರಸಜ್ಜಿಿತ ಪುಂಡರ ಗ್ಯಾಾಂಗ್ ಗಳು ನಾಗರಿಕರ ಜೀವನವನ್ನು ನರಕಸದೃಶಗೊಳಿಸಿದವು. ಒಂದೆಡೆ ಉಗ್ರವಾದಿಗಳು ಮತ್ತು ಇನ್ನೊೊಂದೆಡೆ ಸೈನ್ಯ ಪಡೆಗಳ ಒತ್ತಡದ ನಡುವೆ ಕಾಶ್ಮೀರಿಗಳ ಸಾಮಾನ್ಯ ಜೀವನ ಮೂರಾಬಟ್ಟೆೆಯಾಯಿತು ಎನ್ನುವುದರಲ್ಲಿ ಸಂದೇಹವಿಲ್ಲ.

ಇದಾವುದರ ಪರಿವೆಯಿಲ್ಲದೇ ಕಾಶ್ಮೀರಿ ನಾಯಕರೆನಿಸಿಕೊಂಡವರು ಭಾರತದ ಬುದ್ಧಿಿಜೀವಿಗಳಿಗೆ ಮಂಕುಬೂದಿ ಎರಚುತ್ತಾಾ ಅಲ್ಲಿಂದ ಒಂದಷ್ಟು ಸಮರ್ಥನೆ ಪಡೆಯುತ್ತಾಾ ತಮ್ಮ ಸ್ವಾಾರ್ಥ ಸಾಧನೆ ಮಾಡಿಕೊಳ್ಳುತ್ತಾಾ ಬಂದರು. ವರ್ಷದ ಆರು ತಿಂಗಳು ಹಿಮಾಚ್ಛಾಾದಿತವಾಗಿರುವ ಕಣಿವೆ ಕೆಲವು ದಿನಗಳ ಮಟ್ಟಿಿಗೆ ಸಂದರ್ಶಿಸುವ ಪ್ರವಾಸಿಗರಿಗೆ ಸ್ವರ್ಗವಾದರೂ ಹೊರ ಜಗತ್ತಿಿನಿಂದ ಸಂಪರ್ಕ ಕಡಿದುಕೊಳ್ಳುವ ಆ ದಿನಗಳು ಅಲ್ಲಿನ ಮೂಲನಿವಾಸಿಗಳಿಗೆ ನರಕಸದೃಶವೇ ಸರಿ. ಸ್ವಾಾಸ್ಥ್ಯ, ಸಂಚಾರ ಸಾಧನಗಳ ವಿಕಾಸ, ಶಿಕ್ಷಣ ಸಂಸ್ಥೆೆಗಳ ಅಭಿವೃದ್ಧಿಿಯಂತಹ ಮೂಲ ಸೌಕರ್ಯದತ್ತ ಗಮನ ಕೊಡುವ ಬದಲು ಕುಟುಂಬ ಕೇಂದ್ರಿಿತ ಅಲ್ಲಿಯ ರಾಜಕೀಯ ಪಕ್ಷಗಳು ಕೇಂದ್ರದ ನೆರವನ್ನು ದುರುಪಯೋಗ ಮಾಡಿಕೊಳ್ಳುತ್ತಾಾ, ಉಗ್ರವಾದಕ್ಕೆೆ ಪರವಾಗಿ ಮೃದು ಧೋರಣೆ ತಳೆದವು.

ಭಾರತದ ಪ್ರಜಾಪ್ರಭುತ್ವ ಮತ್ತು ಉದಾರವಾದಿ ಸಿದ್ಧಾಾಂತದ ನೆರವಿನಿಂದ ಕಾನೂನಿನ ಪೂರ್ಣ ಸಂರಕ್ಷಣೆಯಲ್ಲಿ ಹುರಿಯತ್ ನಾಯಕರು ಸಕಲ ಸರಕಾರಿ ಭೋಗ-ಭಾಗ್ಯಗಳನ್ನು ಅನುಭವಿಸುತ್ತಾಾ, ವಿದೇಶಗಳಲ್ಲಿ ನೆಲೆಸಿರುವ ಕಾಶ್ಮೀರಿಗಳು ಮತ್ತು ಮುಸಲ್ಮಾಾನ ಜಗತ್ತಿಿಗೆ ತಾವು ಧರ್ಮ ಯುದ್ಧ ನಡೆಸುತ್ತಿಿರುವ ಭ್ರಮೆ ಹುಟ್ಟಿಿಸಿ ಚಂದಾ ಗಿಟ್ಟಿಿಸಿಕೊಳ್ಳುತ್ತಾಾ ಯುವಕರನ್ನು ದಾರಿತಪ್ಪಿಿಸುವ ಕೆಲಸ ನಿರಂತರ ಮಾಡುತ್ತಾಾ ಬಂದರು. ತಮ್ಮ ಕುಟುಂಬದ ಕುಡಿಗಳಿಗೆ ಲಂಡನ್, ನ್ಯೂಯಾರ್ಕ್‌ನಂತಹ ಶಹರಗಳಲ್ಲಿ ಉದ್ಯೋೋಗ-ಶಿಕ್ಷಣ ಕೊಡಿಸುತ್ತಾಾ ಸಾಮಾನ್ಯ ಕಾಶ್ಮೀರಿ ಯುವಕ-ಯುವತಿಯರು ಶಿಕ್ಷಣ,ಉದ್ಯೋೋಗ, ಸ್ವಾಾಸ್ಥ್ಯ ಸೇವೆ, ಸಂಚಾರ ಮಾಧ್ಯಮಗಳಿಲ್ಲದೇ ನರಳುವಂತೆ ಮಾಡಿದರು.

ಕಾಶ್ಮೀರ ಸಮಸ್ಯೆೆ ಇಷ್ಟೊೊಂದು ಸುದೀರ್ಘ ಕಾಲ ಕ್ಲಿಿಷ್ಟ ಸಮಸ್ಯೆೆಯಾಗಿ ಭಾರತದ ಆರ್ಥಿಕ ಪ್ರಗತಿಗೆ ಮಾರಕವಾಗಿ, ಸೇನಾಪಡೆಗಳ ನಿಯೋಜನೆಗಾಗಿ ಕೋಟ್ಯಂತರ ರು. ಖರ್ಚು ಮಾಡಬೇಕಾದ ಸ್ಥಿಿತಿಗಾಗಿ, ಇದೆಲ್ಲದರಕ್ಕಿಿಂತ ಮಿಗಿಲಾಗಿ ಸುದೂರ ಗುಡ್ಡಗಾಡುಗಳಲ್ಲಿ ಪ್ರತ್ಯೇಕ ದ್ವೀಪ ನಿವಾಸಿಗಳಂತೆ ಬಾಕಿ ಪ್ರಪಂಚದ ಗೊಡವೆಯಿಂದ ತನ್ನ ಪಾಡಿಗೆ ತಾನು ತುತ್ತು ಕೂಳಿಗಾಗಿ ಸಂಘರ್ಷಮಯ ಜೀವನ ಕಳೆಯುತಿದ್ದ ಸಾಮಾನ್ಯ ಕಾಶ್ಮೀರಿಯ ಬದುಕಿಗೆ ಕೊಳ್ಳಿಿ ಇಡುತ್ತಾಾ ಬಂದಿರುವ ನಾಯಕರನ್ನು

ದೂಷಿಸದೇ ಇನ್ನಾಾರನ್ನು ದೂಷಿಸಬೇಕು?
ಸಂಪೂರ್ಣ ಜಮ್ಮು ಕಾಶ್ಮೀರ ರಾಜ್ಯ ಸರಕಾರದ ಚುಕ್ಕಾಾಣಿಯನ್ನು ಹಿಡಿಯುತ್ತಿಿದ್ದ ಕಾಶ್ಮೀರಿ ನಾಯಕರು ಕಣಿವೆಗಷ್ಟೇ ಅಲ್ಲದೇ ಜಮ್ಮು ಮತ್ತು ಲಡಾಖ್‌ನ ಏಳಿಗೆಗೆ ಸಹಾ ಕಂಟಕವಾಗಿಯೇ ಮೆರೆದರು. ಯಾವ ವಿಶೇಷ ಸ್ಥಾಾನಮಾನ ಜಮ್ಮು ಕಾಶ್ಮೀರ ರಾಜ್ಯವನ್ನು ಮುಖ್ಯ ಧಾರೆಗೆ ತರುವ ವರವಾಗಬೇಕಿತ್ತೋೋ, ಅದು ರಾಜ್ಯದಲ್ಲಿ ಸುಖ ಸಮೃದ್ಧಿಿ ತರುವ ಸವಲತ್ತಾಾಗುವ ಬದಲು ದಲಿತರ-ಮಹಿಳೆಯರ ಶೋಷಣೆಯ ಕಾರಣವಾಗಿ ಜಮ್ಮು ಮತ್ತು ಲಡಾಖ್ ಪ್ರಾಾಂತಗಳ ನಿರ್ಲಕ್ಷ್ಯಕ್ಕೊೊಳಗಾಗುವ ನಿಯಮವಾಗಿ ಸಂಪೂರ್ಣ ರಾಜ್ಯದ ಕಲ್ಯಾಾಣಕ್ಕೆೆ ಕುತ್ತಾಾದ ಶಾಪವಾಯಿತು ಎನ್ನುವುದು ಸರ್ವವೇದ್ಯ. ಇಷ್ಟಾಾದರೂ ಕಣಿವೆಯ ರಾಜಕಾರಣಿಗಳು ತಮ್ಮ ರಾಜ್ಯ ಭಾರತದ ಬೇರೆ ರಾಜ್ಯಗಳಿಗಿಂತ ಏಕೆ ಹಿಂದುಳಿದಿದೆ ಎಂದು ಕಾರಣ ಹುಡುಕುವ ಬದಲು ವಿಶೇಷ ಸ್ಥಾಾನಮಾನ ರದ್ದು ಯಾರಿಂದಲೂ ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿ ಉದ್ಧಟತನದ ಹೇಳಿಕೆಗಳನ್ನು ನೀಡುತ್ತಾಾ ಬಂದರು.

ಕಾಶ್ಮೀರದ ಪಂಡಿತ ವರ್ಗದ ದುರವಸ್ಥೆೆ ಅಷ್ಟೇ ಅಲ್ಲ, ಅಲ್ಲಿನ ಹಳ್ಳಿಿಗಾಡಿನಲ್ಲಿ ಓಡಾಡಿದ ಯಾರಿಗೇ ಆಗಲಿ ಕಣ್ಣಿಿಗೆ ರಾಚುವ ಸಾಮಾನ್ಯ ಕಾಶ್ಮೀರಿಯ ಕಣ್ಣೀರಿನ ಕಥೆ ನಮ್ಮ ಮಾಧ್ಯಮಗಳ ಕಣ್ಣಿಿಗೆ ಕಾಣಲೇ ಇಲ್ಲ. ಸೆಕ್ಯುಲರ್ ಭೂತ ಸವಾರಿಯಾಗಿರುವ ಎಡಬಿಡಂಗಿ ಬುದ್ಧಿಿಜೀವಿಗಳಿಗೂ ಗೊತ್ತಾಾಗಲಿಲ್ಲ. ಅನನುಕೂಲದ ಹವಾಮಾನ, ಪಾಕಿಸ್ಥಾಾನ, ಉಗ್ರವಾದಿಗಳ ಜತೆಯಲ್ಲಿ ಮತಾಂಧತೆ ಬ್ರೇನ್ ವಾಷ್ ಮಾಡಿಸಿಕೊಂಡ ಪುಂಡ ಯುವಕರ ಹಾವಳಿ ಜತೆ ಭಂಡ ಮಾದ್ಯಮ-ಬುದ್ಧಿಿಜೀವಿಗಳು ಸೇರಿದಂತೆ ಹಲವು ವಿಧದ ಶತ್ರುಗಳನ್ನು ಎದುರಿಸಬೇಕಾದ ಸೈನಿಕರು ವಿಷಕಂಠನಂತೆ ಎಲ್ಲವನ್ನು ಸಹಿಸಿಕೊಳ್ಳಬೇಕಾಯಿತು. ಯೋಧರ ತ್ಯಾಾಗ ಬಲಿದಾನಗಳಿಗೆ ಕಣಿವೆಯ ರಾಜಕಾರಣಿಗಳು ಯಾವತೂ ಕವಡೆ ಕಿಮ್ಮತ್ತೂ ನೀಡಲಿಲ್ಲ. ಬದಲಾಗಿ, ಕೊಂಚ ಸ್ಥಿಿತಿ ಸುಧಾರಿಸಿತೆಂದರೆ ಸೇನೆಯ ಪೋಸ್‌ಟ್‌‌ಗಳನ್ನು ಎತ್ತಂಗಡಿ ಮಾಡಿಸಲು ಅಭಿಯಾನ ಶುರು ಮಾಡುತ್ತಿಿದ್ದರು.

ಮೂರು ದಶಕದ ಉಗ್ರವಾದದಲ್ಲಿ 42,000ಕ್ಕೂ ಹೆಚ್ಚು ಅಮೂಲ್ಯ ಜೀವಗಳು ಬಲಿಯಾದವು. ಚೀನಾದ ಕ್ಸಿಿಯಾಂಗ್ ಆಗಲಿ, ರಷ್ಯಾಾದ ಚೆಚೆನ್ಯಾಾದಲ್ಲಾಗಲೀ ಪ್ರತ್ಯೇಕತೆಯನ್ನು ಉಕ್ಕಿಿನ ಕೈಗಳಿಂದ ಹೊಸಕಿ ಹಾಕಲಾಯಿತು. ಪ್ರಜಾಪ್ರಭುತ್ವ ಇರುವ ಭಾರತ ಇಷ್ಟೊೊಂದು ವರ್ಷಗಳ ಸುದೀರ್ಘ ಹಿಂಸಾಚಾರವನ್ನು ಸಹಿಸುತ್ತಾಾ ಬಂತು. ಕಾಶ್ಮೀರದ ಒಡಲಾಗ್ನಿಿಯಲ್ಲಿ ದೇಶದ ಎಲ್ಲಾ ರಾಜ್ಯಗಳ ಸೈನಿಕರು-ನಾಗರಿಕರು ಬೆಂದರು. ವಿಶೇಷ ಸ್ಥಾಾನಮಾನ ಭಸ್ಮಾಾಸುರನಂತೆ ಭಾರತ ಮಾತೆಯ ಕತ್ತು ಹಿಸುಕುತ್ತಿಿದ್ದರೂ ಅದನ್ನು ಹಿಂದಕ್ಕೆೆ ಪಡೆಯಲು ನಮ್ಮ ರಾಜಕಾರಣಿಗಳು ಸಾಹಸ ಮಾಡಲೇ ಇಲ್ಲ. ಕೊನೆಗೂ ನರೇಂದ್ರ ಮೋದಿಯಂತಹ ಧೀಮಂತ ನಾಯಕರೇ ಬರಬೇಕಾಯಿತು. ಎಂದೋ ಆಗಬೇಕಿದ್ದ ಕೆಲಸ ಇಷ್ಟೊೊಂದು ವಿಳಂಬವಾಗಿಯಾದರೂ ಸರಿ ಆಯಿತಲ್ಲಾ ಎಂದು ಸಂಪೂರ್ಣ ಭಾರತವರ್ಷ ಹರ್ಷಿಸುತ್ತಿಿದ್ದರೂ ರಾಷ್ಟ್ರದ ಮೇಲೆ ಸುದೀರ್ಘ ಕಾಲ ಶಾಸನ ನಡೆಸಿದ ಪಕ್ಷದ ನಾಯಕರು, ನರೇಂದ್ರ ಮೋದಿಯವರನ್ನು ಶಪಿಸುತ್ತಿಿರುವುದು ದುರದೃಷ್ಟಕರ. ಜನರ ನಾಡಿಮಿಡಿತ ಅರಿಯುವಲ್ಲಿ ವಿಫಲವಾದ ರಾಜಕಾರಣಿಗಳು ದೇಶದ ಹಿತರಕ್ಷಣೆ ಹೇಗೆ ಮಾಡಿಯಾರು?

ಇನ್ನಾಾದರೂ ಕಾಶ್ಮೀರಿ ನಾಯಕರು ಭಾರತೀಯತೆಯನ್ನು ಒಪ್ಪಿಿಕೊಂಡು ತಮ್ಮ ಜನರ ಕ್ಷೇಮೋಭಿವೃದ್ಧಿಿಗೆ ಶ್ರಮಿಸಲಿ. ದಿವಾಳಿಯಂಚಿನಲ್ಲಿರುವ ಪಾಕಿಸ್ಥಾಾನದ ಕುಮ್ಮಕ್ಕಿಿಗೆ ಒಳಗಾಗದೇ ಪ್ರಜಾಪ್ರಭುತ್ವ ಭಾರತದ ‘ಸರ್ವ ಜನ ಹಿತಾಯ ಸರ್ವ ಜನ ಸುಖಾಯ’ ಧ್ಯೇಯದ ಸಂವಿಧಾನಕ್ಕೆೆ ಬದ್ಧರಾಗಿರುವ ಪಣ ತೊಟ್ಟು ತಮ್ಮವರ ಬದುಕನ್ನು ಹಸನಾಗಿಸಲಿ. ಬಗಲಲ್ಲಿ ಪಾಕಿಸ್ಥಾಾನ-ಚೀನಾದಂತಹ ಧೂರ್ತರಿರುವಾಗ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮುವ ಅವರ ಕನಸು ಎಂದಿಗೂ ಸಾಧವಿಲ್ಲ. ಶ್ರೀಲಂಕಾ, ನೇಪಾಳ, ಮಾಲ್ಡೀವ್‌ಸ್‌‌ನಂತಹ ಚಿಕ್ಕ ಚಿಕ್ಕ ದೇಶಗಳು ಇಂದು ಶಕ್ತ ರಾಷ್ಟ್ರಗಳ ಒತ್ತಡಕ್ಕೆೆ ಸಿಲುಕಿ ಒದ್ದಾಡುತ್ತಿಿವೆ ಎನ್ನುವುದನ್ನು ತಿಳಿಯಲಿ. ಪ್ರತ್ಯೇಕ ಕಾಶ್ಮೀರ ಮುಗಿದ ಅಧ್ಯಾಾಯ ವೆಂದು ಭಾರತದ ಹೆಮ್ಮೆೆಯ ನಾಗರಿಕರಾಗಿರುವುದರಲ್ಲಿ ತಮ್ಮ ಉಜ್ವಲ ಭವಿಷ್ಯ ಕಂಡುಕೊಳ್ಳುವ ಯಥಾರ್ಥತೆಯನ್ನು ಒಪ್ಪಿಿಕೊಳ್ಳಲಿ. ಭವಿಷ್ಯದಲ್ಲಿ ಕಾಶ್ಮೀರ ಪ್ರವಾಸಿಗರ ಬೇಡಿಕೆಯ ತಾಣವಾಗಲಿ. ಕಾಶ್ಮೀರಿಗಳಲ್ಲಿ ನೆಲೆಸಿರುವ ಬಡತನ, ನಿರಕ್ಷರತೆ ದೂರವಾಗಲಿ. ಸಂಚಾರ ಸಾಧನಗಳ ವಿಕಾಸ, ಶಿಕ್ಷಣ ಪ್ರಸರಣ ಹೆಚ್ಚಿಿ ಕಾಶ್ಮೀರಿ ಜನತೆ ಭವ್ಯ ಭಾರತದ ಮುಕುಟವಾಗಲಿ ಎಂದು ಹಾರೈಸೋಣ. ಇದರೊಂದಿಗೆ ಕಾಶ್ಮೀರ ಕಲಿಸಿದ ದುಬಾರಿ ಪಾಠದಿಂದ ಜಾಗೃತರಾಗಿ, ಅಲ್ಲಲ್ಲಿ ಭಾರತದಿಂದ ಪ್ರತ್ಯೇಕತೆಯ ಮಾತನಾಡುವ ದನಿಗಳನ್ನು ಪ್ರಾಾರಂಭದಲ್ಲೇ ತಡೆಯುವ ಸಂಕಲ್ಪವನ್ನು ನಮ್ಮ ರಾಜಕಾರಣಿಗಳು ಮಾಡಲಿ.

Leave a Reply

Your email address will not be published. Required fields are marked *