Tuesday, 11th August 2020

ಸೆಮಿಗೆ ಬಾಲಾಜಿ-ವಿಷ್ಣುವರ್ಧನ್ ಜೋಡಿ

ಶ್ರೀರಾಮ್ ಬಾಲಾಜಿ ಹಾಗೂ ವಿಷ್ಣು ವರ್ಧನ್ ಭಾರತದ ಜೋಡಿಯು ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದೆ. ಶುಕ್ರವಾರ ನಡೆದ ಎಟಿಪಿ ಚಾಲೆಂಜರ್ ಕ್ವಾರ್ಟರ್ ಫೈನಲ್ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ಜೊಡಿಯು ಸ್ವಿಜರ್‌ಲೆಂಡ್‌ನ ಮಾರ್ಕ್-ಆ್ಯಂಡ್ರಿಯಾ ಹ್ಯೂಸ್ಲರ್ ಮತ್ತು ಚಿಲಿಯ ಹ್ಯಾಾನ್‌ಸ್‌ ಪೊಡ್ಲಿಪ್ನಿಕ್-ಕ್ಯಾಸ್ಟಿಲ್ಲೊ ಜೋಡಿಯ ವಿರುದ್ಧ 6-3, 6-2 ಅಂತರದಲ್ಲಿ ನೇರ ಸೆಟ್‌ಗಳಿಂದ ಗೆದ್ದು ಅಂತಿಮ ಎಂಟರ ಘಟಕ್ಕೆೆ ಲಗ್ಗೆೆ ಇಟ್ಟಿದೆ. ಸ್ಲೊೊವೇನಿಯಾ ಓಪನ್ ಮೂರನೇ ಸುತ್ತಿನ ಪಂದ್ಯದಲ್ಲಿ 16ನೇ ಶ್ರೇಯಾಂಕದ ಭಾರತದ ಸಸಿಕುಮಾರ್ ಮುಕುಂದ್ ಅವರು ಅಗ್ರ ಕ್ರಮಾಂಕದ ಸ್ಥಳೀಯ ಆಟಗಾರ ಅಲ್ಜಾಜ್ ಬೆಡೆನೆ ವಿರುದ್ಧ 6-2, 6-2 ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನೇರ ಸೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರ ನಡೆದರು.

Leave a Reply

Your email address will not be published. Required fields are marked *