Tuesday, 15th October 2019

ನಾಳೆಯಿಂದ ಬಿದಿರು ಉತ್ಸವ

ಏರಿಕೆಯಾಗುತ್ತಿಿರುವ ಜಾಗತಿಕ ತಾಪಮಾನವು ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿಿದೆ. ಬಹುಶೀಘ್ರವಾಗಿ ಬೆಳೆಯುವ ಬಿದಿರು ತಾಪಮಾನ ಏರಿಕೆ ನಿಯಂತ್ರಣದಲ್ಲಿ ತನ್ನದೇ ಆದ ಮಹತ್ತರ ಪಾತ್ರವಹಿಸುತ್ತದೆ.

ತೊಟ್ಟಿಲಿನಿಂದ ಚಟ್ಟದವರೆಗೆ ಹಾಸುಹೊಕ್ಕಾಾಗಿರುವ ಬಿದಿರು, ಇತ್ತೀಚಿನ ದಿನಗಳಲ್ಲಿ ಮಹತ್ವ ಕಳೆದುಕೊಳ್ಳುತ್ತಿಿದೆ. ಬಿದಿರಿನ ನಾಶ ಬರೀ ಪ್ರಕೃತಿ ಮೇಲಷ್ಟೇ ಅಲ್ಲ, ಮನುಕುಲದ ಮೇಲೂ ಪರಿಣಾಮ ಬೀರಬಲ್ಲದು. ಇಂತಹ ಬಿದಿರಿನ ಸಾರವನ್ನು ತಿಳಿಸುವ ಪ್ರಯತ್ನವನ್ನು ’ಬ್ಯಾಾಂಬ್ಯೂ ಸೊಸೈಟಿ ಆಫ್ ಇಂಡಿಯಾ’ ಮಾಡುತ್ತಿಿದೆ.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜನರಿಗೆ ಬಿದಿರು ಕುರಿತು ಅರಿವು, ಜಾಗೃತಿ, ಮಹತ್ವ ಮೂಡಿಸಲು ಸೆ.18 ಮತ್ತು 19 ಎರಡು ದಿನಗಳ ಕಾಲ ಲಾಲ್‌ಬಾಗ್ ಬಟಾನಿಕಲ್ ಗಾರ್ಡನ್‌ನಲ್ಲಿ ’ಬಿದಿರು ಉತ್ಸವ’ವನ್ನು ಬ್ಯಾಾಂಬ್ಯೂ ಸೊಸೈಟಿ ಆಫ್ ಇಂಡಿಯಾ’ ಆಯೋಜಿಸಿದೆ.

ಈ ಬಗ್ಗೆೆ ಮಾತನಾಡಿರುವ ಬ್ಯಾಾಂಬ್ಯೂ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಡಾ.ಕೆ.ಸುಂದರ್ ನಾಯಕ್, ಬಿದಿರು ಪ್ರಾಾಕೃತಿಕ ಸಂಪತ್ತನ್ನು ಉಳಿಸಲು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಅಂತರ್ಜಲ ಹೆಚ್ಚಳ, ಮೇಲ್ಮಣ್ಣು ಕೊಚ್ಚಿಿಹೋಗುವುದನ್ನು ತಡೆಯುವಲ್ಲಿಯೂ ಇದು ಮಹತ್ತರ ಕಾಣಿಕೆ ಸಲ್ಲಿಕೆ ಸಲ್ಲಿಸುತ್ತದೆ. ಜಾಗತಿಕ ಮಟ್ಟದಲ್ಲಿ ನೂರಾರು ತಳಿಯ ಬಿದಿರುಗಳಿದ್ದು, ವಿವಿಧ ಮಣ್ಣಿಿಗೆ ಹೊಂದಿಕೊಂಡು ಇದು ಬೆಳೆಯಬಲ್ಲದು. ಕಾಡಿನಲ್ಲಿ ಮಾತ್ರ ಕಾಣಸಿಗುವ ಬಿದಿರು ನಾಡಿನಲ್ಲಿಯೂ ಬೆಳೆಯಬೇಕು. ಇಂತಹ ಬಿದಿರನ್ನು ನೆಟ್ಟು ಬೆಳೆಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದರು.

ವೈವಿಧ್ಯಮಯ ಬ್ಯಾಾಂಬೂ ಸಸಿಗಳ ವಿತರಣೆ ಮತ್ತು ಮಾರಾಟ, ಬ್ಯಾಾಂಬೂ ಫ್ಯಾಾಷನ್ ಷೋ, ವೈವಿಧ್ಯಮಯ ಬಿದಿರು ಆಹಾರ, ಬಿದಿರು ಬಹುಬಳಕೆ ವಸ್ತುಗಳ ಪ್ರದರ್ಶನ, ಬಿದಿರು ಸಂಗೀತ, ಕಾರ್ಯಾಗಾರ ಈ ಉತ್ಸವದ ವಿಶೇಷತೆಗಳಾಗಿದ್ದು, ಹೆಚ್ಚಿಿನ ಮಾಹಿತಿಗೆ 9731814333/94443 35600 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *