Friday, 27th May 2022

ಬಾಂಗ್ಲಾದೇಶಕ್ಕೆ ಐತಿಹಾಸಿಕ ಗೆಲುವು

ಮೌಂಟ್ ಮೌಂಗನ್ಯುಯಿ: ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಪಡೆದಿದೆ.

ಅಂತಿಮ ದಿನದಾಟದಲ್ಲಿ ಎಬಡಾಟ್ ಹುಸೇನ್ ಬೌಲಿಂಗ್ ದಾಳಿಗೆ ನೆಲಕಚ್ಚಿದ ನ್ಯೂಜಿಲೆಂಡ್ ಕೇವಲ 169 ರನ್‌ಗಳಿಗೆ ಆಲೌಟ್‌ ಆಯಿತು.

ಕಿವೀಸ್ ನೀಡಿದ ಅಲ್ಪ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಎರಡು ವಿಕೆಟ್ ನಷ್ಟಕ್ಕೆ 42 ರನ್‌ ಕಲೆ ಹಾಕುವ ಮೂಲಕ 8 ವಿಕೆಟ್‌ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ನ್ಯೂಜಿಲೆಂಡ್ ತಂಡವನ್ನ ಮೊದಲ ಬಾರಿಗೆ ಸೋಲಿಸಿದ ಐತಿಹಾಸಿಕ ಸಾಧನೆ ಮಾಡಿತು. ಈವರೆಗೂ ಕಿವೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಬಾಂಗ್ಲಾ ಯಾವುದೇ ಪಂದ್ಯ ಗೆದ್ದಿರಲಿಲ್ಲ.

ನಾಲ್ಕನೇ ದಿನದಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ 147 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರವಾಗಿ ಡೆವೋನ್ ಕಾನ್ವೆ ಭರ್ಜರಿ ಶತಕ ಹಾಗೂ ಹೆನ್ರಿ ನಿಕೋಲಸ್ ಮತ್ತು ವಿಲ್ ಯಂಗ್ ಅರ್ಧ ಶತಕದ ಹೊರತಾಗಿಯೂ ನ್ಯೂಜಿಲೆಂಡ್ ತಂಡವನ್ನು 328 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಗಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಎಲ್ಲಾ ಆಟಗಾ ರರು ಸಂಘಟಿತ ಆಟ ಪ್ರದರ್ಶಿಸುವಲ್ಲಿ ಯಶಸ್ವಿ ಯಾದರು. ನಾಯಕ ಮಾಮಿನ್ಯುಲ್ ಹಾಗೂ ಲಿಟನ್ ದಾಸ್ ಜೊತೆಯಾಟ 158 ರನ್‌ಗಳ ಭರ್ಜರಿ ಜೊತೆಯಾಟವನ್ನು ಬಾಂಗ್ಲಾ ಮೈಲುಗೈನಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 458 ರನ್‌ಗಳಿಸಿದ ಬಾಂಗ್ಲಾದೇಶ ತಂಡ 130 ರನ್‌ಗಳ ಬೃಹತ್ ಮುನ್ನಡೆ ಸಂಪಾದಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ 169ರನ್‌ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್ ಬಾಂಗ್ಲಾಗೆ ಅಂತಿಮ ದಿನದಾಟದಲ್ಲಿ ಕೇವಲ 40 ರನ್‌ಗಳ ಗುರಿ ನೀಡಿತು. ಬಾಂಗ್ಲಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಬಳಿಸಿದ ಎಬಾಡೋಟ್ ಹುಸೇನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

ವಿದೇಶಿ ನೆಲದಲ್ಲಿ ಆರನೇ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ಬರೆದ ಬಾಂಗ್ಲಾದೇಶ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಬಾಂಗ್ಲಾದೇಶ ತಂಡ ಆರನೇ ಬಾರಿಗೆ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದಂತಾಗಿದೆ.

ಕೆರಿಬಿಯನ್‌ನಲ್ಲಿ (2009) ಎರಡು ಟೆಸ್ಟ್ ಪಂದ್ಯ ಗೆಲುವು, ಜಿಂಬಾಬ್ವೆಯಲ್ಲಿ (2013 ಮತ್ತು 2021) ಮತ್ತು ಶ್ರೀಲಂಕಾದಲ್ಲಿ (2017) ಬಾಂಗ್ಲಾದೇಶ ವಿದೇಶದಲ್ಲಿ ಟೆಸ್ಟ್ ಗೆದ್ದ ಆರನೇ ನಿದರ್ಶನವಾಗಿದೆ.

ನ್ಯೂಜಿಲೆಂಡ್ ವಿರುದ್ಧದ 16 ಪ್ರಯತ್ನಗಳಲ್ಲಿ ಬಾಂಗ್ಲಾದೇಶದ ಮೊದಲ ಜಯ ಇದಾಗಿದೆ.

ಬಾಂಗ್ಲಾದೇಶ ವಿರುದ್ಧ ಈ ಮೊದಲು ಎಲ್ಲಾ ಫಾರ್ಮೆಟ್‌ಗಳಲ್ಲಿ ನ್ಯೂಜಿಲೆಂಡ್ 32 ಪಂದ್ಯಗಳ ಗೆಲುವು ಸಾಧಿಸಿತ್ತು. 15ರಲ್ಲಿ ಒಂಬತ್ತು ಟೆಸ್ಟ್‌ ಗೆಲುವು, 16 ಏಕದಿನ ಪಂದ್ಯಗಳು ಮತ್ತು ಏಳು ಟಿ20ಗಳಲ್ಲಿ ಮುಖಾಮುಖಿಯಾಗಿದ್ದರು, ಇವೆಲ್ಲವೂ ಆತಿಥೇಯ ತಂಡದ ಗೆಲುವಿನಲ್ಲಿ ಕೊನೆಗೊಂಡಿತು.

ನ್ಯೂಜಿಲೆಂಡ್‌ನಲ್ಲಿ ನ್ಯೂಜಿಲೆಂಡ್ ತಂಡವು ಸತತ 17 ಟೆಸ್ಟ್ ಪಂದ್ಯ ಗೆಲುವು ಸಾಧಿಸಿದ್ದು, ಈ ಗೆಲುವಿನ ಓಟವು ಮೌಂಟ್ ಮೌಂಗನುಯಿಯಲ್ಲಿ ಬಾಂಗ್ಲಾದೇಶದ ಗೆಲುವಿನೊಂದಿಗೆ ಕೊನೆಗೊಂಡಿದೆ.