Friday, 27th May 2022

ಜಾನುವಾರು ಕಳ್ಳಸಾಗಣೆ ತಡೆಗೆ ಗುಂಡಿನ ದಾಳಿ: ಬಾಂಗ್ಲಾ ಪ್ರಜೆಗಳ ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್‌ಬೆಹಾರ್‌ ಬಳಿ ಅಂತರರಾಷ್ಟ್ರೀಯ ಗಡಿ ಯಲ್ಲಿ ಜಾನುವಾರು ಕಳ್ಳಸಾಗಣೆ ತಡೆಗೆ ಬಿಎಸ್‌ಎಫ್‌ ಸಿಬ್ಬಂದಿ ಶುಕ್ರವಾರ ಗುಂಡಿನ ದಾಳಿ ನಡೆಸಿದ್ದು, ಬಾಂಗ್ಲಾದೇಶದ ಇಬ್ಬರು ಪ್ರಜೆಗಳು ಮೃತಪಟ್ಟಿದ್ದಾರೆ.

ಗುಂಡಿನ ದಾಳಿ ವೇಳೆ ಭದ್ರತಾ ಪಡೆ ಯೋಧರೊಬ್ಬರಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.

ಭಾರತದ ಗಡಿದಾಟಿ ಜಾನುವಾರುಗಳ ಕಳ್ಳಸಾಗಣೆಗೆ ಕಿಡಿಗೇಡಿಗಳು ಬೆಳಗ್ಗೆ 3 ಗಂಟೆಗೆ ಯತ್ನಿಸಿದ್ದರು. ಭದ್ರತಾ ಪಡೆಗಳ ಎಚ್ಚರಿಕೆಗೆ ಸ್ಪಂದಿಸದೆ ಕಬ್ಬಿಣದ ಸರಳು ಬಳಸಿ ಹಲ್ಲೆಗೆ ಮುಂದಾಗಿದ್ದರು. ಆಗ ಆತ್ಮರಕ್ಷಣೆ ಕ್ರಮವಾಗಿ ಭದ್ರತಾ ಪಡೆ ಸಿಬ್ಬಂದಿಯು ಗುಂಡಿನ ದಾಳಿ ನಡೆಸಿದರು.