Friday, 3rd February 2023

ಮಂಗಳ ಮುಖಿಯರಿಗೆ ಮೂಲ ಸೌಲಭ್ಯ ನೀಡಿ: ನೀಲಕಂಠ

ರಾಯಚೂರು : ಮಾನ್ವಿ ದಲಿತ ಸಮರ ಸೇನೆ , ಸ್ಲಮ್ ಜನರ ಕ್ರಿಯಾವೇದಿಕೆ ಕರ್ನಾಟಕದ ರಾಯಚೂರಿನ ಜಿಲ್ಲಾ ಸಮಿತಿಯು ದೇವದುರ್ಗ ತಾಲೂಕಿನ ಮೂಲಸೌಕರ್ಯ ವಂಚಿತ ವಿಶೇಷ ವರ್ಗದವರಾದ ಮಂಗಳ ಮುಖಿಯರ ಸಂವಿಧಾನ ಬದ್ದ ಮೂಲ ಸೌಕರ್ಯಗಳನ್ನು ವಿಶೇಷ ವರ್ಗದಡಿ ಕಲ್ಪಿಸುವಂತೆ ಗ್ರೇಡ್ 2 ತಹಶಿಲ್ದಾರ್ ಶ್ರೀನಿವಾಸ್ ಚಾಪೆಲ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಸರಕಾರದ ಸವಲತ್ತು ಸೌಕರ್ಯಗಳಿರದೆ ಸಮಾಜ ಕುಟುಂಬದಿಂದ ತಿರಸ್ಕೃತಗೊಂಡು ಘನತೆ ಇರದೆ ಸಾಮಾಜಿಕ ಕಳಂಕದಿಂದ ನಿಕೃಷ್ಟ ಬದುಕು ನಡೆಸುತ್ತಿರುವ ಮಂಗಳಮುಖಿಯರಿಗೆ ಕೂಡಲೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ದಲಿತ ಸಮರ ಸೇನೆ,ಸ್ಲಮ್ ಜನರ ಕ್ರಿಯಾವೇದಿಕೆಯ ಜಿಲ್ಲಾಧ್ಯಕ್ಷ ನೀಲಕಂಠ್ ಅನೀಲ್ ಒತ್ತಾಯಿಸಿದರು.

ಯುವಸಾಹಿತಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ದಾನಪ್ಪ ಮಾತನಾಡಿ ಸ್ವಾತಂತ್ರ್ಯ ಬಂದು ಏಳು ದಶಕವಾದರು ಕೆಲವು ಜನವರ್ಗಗಳು ಮೂಲಸೌಕರ್ಯ ಇರದೆ ಪರದಾಡುತಿದ್ದು ,ಏಷ್ಯಾದಲ್ಲಿ ಅತೀ ಹಿಂದುಳಿದ ತಾಲೂಕೆನಿಸಿಕೊಂಡ ದೇವದುರ್ಗ ದಲ್ಲಿ ಮಂಗಳ ಮುಖಿಯರ ಸ್ಥಿತಿ ತುಂಬಾ ಶೋಚನೀಯವಾಗಿದ್ದು ಲಿಂಗತಾರತಮ್ಯದಿಂದ ಕೀಳರಿಮೆಗೊಳಗಾಗಿ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದು ತಕ್ಷಣ ತಾಲೂಕು ಆಡಳಿತ ಅವಕಾಶವಂಚಿತ ಮಂಗಳಮುಖಿಯರಿಗೆ ಭೂಮಿ ಮಂಜೂರು ಮಾಡಿ ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಈ ಸಂಧರ್ಬದಲ್ಲಿ ಆಪ್ತಮಿತ್ರ ಸಂಘಟನೆಯ ಅಧ್ಯಕ್ಷರು ಭೀಮರೆಡ್ಡಿ, ಗೌರೀಶಂಕರ್ ಲೈಂಗಿಕ ಅಲ್ಪಸಂಖ್ಯಾತರಾದ ಚಂದನ್ ಪಂಡೀತ್ ,ಗೌತಮಿ(ವಿರೇಶ್) ನಾಯಕ್ ,ಪೋಮಣ್ಣ ತಮ್ಮ ಸಮಸ್ಯೆಗಳ ಬಗ್ಗೆ ಹಂಚಿಕೊಂಡರು.

ದಲಿತ ಸಮರ ಸೇನೆಯ ಮಾನ್ವಿ ತಾಲೂಕು ಅಧ್ಯಕ್ಷ ಅನೀಲ್ ಕುಮಾರ್ ,ತಾಲೂಕು ಸಂಚಾಲಕ ಕರಿಯಪ್ಪ ಹಾಲುಮತ ,ಸ್ಲಮ್ ಜನರ ಕ್ರಿಯಾವೇದಿಕೆಯ ಮುಖಂಡರಾದ ಶ್ರೀನಿವಾಸ್ ರೆಡ್ಡಿ, ಪ್ರಕಾಶ್ ಶೋಷಿತ ಅಲಕ್ಷಿತ ಸಮುದಾಯವಾದ ಮಂಗಳಮುಖಿ ಯರ ಸವಾಲು ಸಮಸ್ಯೆಗಳ ಬಗ್ಗೆ ಮಾತನಾಡಿ ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಗ್ರೇಡ್ 2 ತಹಶಿಲ್ದಾರರಾದ ಶ್ರೀನಿವಾಸ್ ಚಾಪೆಲ್ ರವರು ಪೂರಕವಾಗಿ ಸ್ಪಂದಿಸಿ ಆದಷ್ಟು ಶೀಘ್ರವಾಗಿ ಭೂಮಿ ಮಂಜೂರು ಮಾಡಲಾಗುವುದೆಂದು ಭರವಸೆ ನೀಡಿದರು.

error: Content is protected !!