Tuesday, 18th January 2022

ದಾಂಪತ್ಯ ಜೀವನಕ್ಕೆ ಶುಭಾ ಪೂಂಜಾ ಶೀಘ್ರದಲ್ಲೇ ಎಂಟ್ರಿ

ShubhaPoonjamarriage

ಬೆಂಗಳೂರು : ದಾಂಪತ್ಯ ಜೀವನಕ್ಕೆ ನಟಿ ಶುಭಾ ಪೂಂಜಾ ಡಿಸೆಂಬರ್ ನಲ್ಲಿ ಕಾಲಿಡಲಿದ್ದಾರೆ ಎನ್ನ ಲಾಗುತ್ತಿದೆ.

ಸ್ವತಃ ನಟಿಯೇ ಈಗಾಗಲೇ ಮದುವೆ ತಯಾರಿಗಳು ಕೂಡ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಶುಭಾ ಬಿಗ್ ಬಾಸ್ ಸ್ಪರ್ಧೆಗೆ ಹೋಗಬೇಕಾಗಿದ್ದ ಹಿನ್ನೆಲೆ ಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು.

100ಕ್ಕೂ ಹೆಚ್ಚು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಶುಭಾ ಅಲ್ಲಿಂದ ಹೊರಗೆ ಬಂದ ಬಳಿಕ ತಮ್ಮ ಗೆಳೆಯನ ಜೊತೆ ಗೋವಾಕ್ಕೆ ತೆರಳಿದ್ದರು. ಸುಮಂತ್ ಮಹಾದೇವ ಅವರು ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಗ್ಯಾಸ್ ಏಜೆನ್ಸಿ ಕೂಡ ನಡೆಸುತ್ತಿರುವ ಸುಮಂತ್ ಅವರ ಒಂದು ಕಾರ್ಯಕ್ರಮದಲ್ಲಿ ಶುಭಾ ಪೂಂಜಾ ಅತಿಥಿಯಾಗಿ ಹೋಗಿದ್ದರು. ಅಲ್ಲಿ ಶುಭಾ ಮತ್ತು ಸುಮಂತ್ ಪರಿಚಯವಾಗಿದೆ. covid